IMG 20220531 WA0030

ಕೇಂದ್ರದಿಂದ ರಾಜ್ಯಕ್ಕೆ 8633 ಕೋಟಿ ರೂ. ಜಿ ಎಸ್ ಟಿ ಪರಿಹಾರ

BUSINESS

ಕೇಂದ್ರದಿಂದ ರಾಜ್ಯಕ್ಕೆ 8633 ಕೋಟಿ ರೂ. ಜಿ ಎಸ್ ಟಿ ಪರಿಹಾರ

ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಕೃತಜ್ಞತೆ ಅರ್ಪಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು, ಮೇ 31- ಕೇಂದ್ರ ಸರ್ಕಾರವು ರಾಜ್ಯಕ್ಕೆ 2022 ರ ಮೇ 31 ರ ವರೆಗಿನ 8633 ಕೋಟಿ ರೂ ಜಿ ಎಸ್ ಟಿ ಪರಿಹಾರ ಮಂಜೂರು ಮಾಡಿದ್ದು, ಇದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವರಾಗಿ ನಿರ್ಮಲಾ ಸೀತಾರಾಮನ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೃತಜ್ಞತೆ ಸಲ್ಲಿಸಿದ್ದಾರೆ.

ಕೇಂದ್ರವು ರಾಜ್ಯಗಳಿಗೆ ನೀಡಬೇಕಾದ 86912 ಕೋಟಿ ರೂ ಜಿ ಎಸ್ ಟಿ ಪರಿಹಾರ ನೀಡಿದ್ದು, ಸುಭಿಕ್ಷ ಆರ್ಥಿಕತೆಯತ್ತ ಇದೊಂದು ಮಹತ್ವದ ಹೆಜ್ಜೆ ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.