ವಿಶ್ವ ತಂಬಾಕು ರಹಿತ ದಿನಾಚರಣೆ -2022
ದಿನಾಂಕ: 31.5.2022 ರಂದು ಕ.ರಾ.ರ.ಸಾ.ನಿಗಮದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ “ವಿಶ್ವ ತಂಬಾಕು ರಹಿತ ದಿನಾಚರಣೆ” ಕಾರ್ಯ ಕ್ರಮವನ್ನು ರಾಜ್ಯ ತಂಬಾಕು ನಿಯಂತ್ರಣ ಮಂಡಳಿ, ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.
ತಂಬಾಕು ಉತ್ವನ್ನಗಳ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ನಿಗಮದ ಎಲ್ಲಾ ವಿಭಾಗಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ -2022ರ ಘೋಷ ವಾಕ್ಯದಂತೆ “ತಂಬಾಕು ಪರಿಸರಕ್ಕೆ ಮಾರಕ “ ಎಂಬ ಅಭಿಯಾನದಡಿಯಲ್ಲಿ ಸಂಸ್ಥೆಯು ಈ ಕಾಯಕ್ರಮವನ್ನು ಆಯೋಜಿಸಿತ್ತು.
• ಚಾಲಕ/ನಿರ್ವಾಹಕ ಹಾಗೂ ಇತರೆ ಸಿಬ್ಬಂದಿಗಳಿಗೆ ತಂಬಾಕು, ಪಾನ್ ಮಸಾಲ, ಸಿಗರೇಟ್ ಸೇವನೆಯಿಂದ ಉಂಟಾಗುವ ದುಷ್ಪರಿಣಾಮ ಹಾಗೂ ನಿಯಂತ್ರಣ ಕಾನೂನುಗಳ ಬಗ್ಗೆ ಅರಿವು ಮೂಡಿಸಲಾಯಿತು.
• ನಿಗಮದ ನೌಕರರಿಗೆ, ಸಾರ್ವಜನಿಕರಿಗೆ ಉಚಿತ ಆರೋಗ್ಯತಪಾಸಣೆ ಕೈಗೊಳ್ಳಲಾಗಿತ್ತು.
• ತಂಬಾಕು, ಪಾನ್ ಮಸಾಲ, ಸಿಗರೇಟ್ ಸೇವನೆಯಿಂದ ಪರಿಸರ ಮತ್ತು ಮಾನವರಲ್ಲಿ ಉಂಟಾಗುವ ದುಷ್ಪರಿಣಾಮವನ್ನು ತಡೆಗಟ್ಟಲು ಅರಿವು ಮೂಡಿಸುವಂತಹ ಛಾಯಾ ಚಿತ್ರಗಳನ್ನು ಪ್ರದರ್ಶಿಸುವುದರ ಜೊತೆಗೆ ವಿಡಿಯೋ ಮತ್ತು ಆಡಿಯೋಗಳ ಮಾಹಿತಿಯನ್ನು ಬಸ್ ನಿಲ್ದಾಣದಲ್ಲಿ ಒದಗಿಸಿರುವ ಮಾನಿಟರ್ಗಳಲ್ಲಿ ಪ್ರದರ್ಶಿಸಲಾಗಿತ್ತು.
• ಬಸ್ ನಿಲ್ದಾಣದಲ್ಲಿರುವ ಧ್ವನಿವರ್ದಕಗಳ ಮೂಲಕ ಸಾರ್ವಜನಿಕ ಪ್ರಯಾಣಿಕರಿಗೆ ಹಾಗೂ ಸಿಬ್ಬಂದಿಗಳಿಗೆ ಅರಿವು ಮೂಡಿಸುವಂತಹ ಮಾಹಿತಿಗಳನ್ನು ನೀಡುವುದರ ಜೊತೆಗೆ ಭಿತ್ತಿಪತ್ರಗಳನ್ನು ಹಂಚಲಾಯಿತು.
• ಸಂಸ್ಥೆಯ ಎಲ್ಲಾ ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ/ ಕಛೇರಿ/ಘಟಕ/ ವಿಭಾಗೀಯ ಹಾಗೂ ಪ್ರಾದೇಶಿಕ ಕಾರ್ಯಾಗಾರ/ತರಬೇತಿ ಕೇಂದ್ರ / ಕ್ಯಾಂಟೀನ್ಗಳ ಆವರಣಗಳಲ್ಲಿ ‘ಧೂಮಪಾನ ನಿಷೇಧಿಸಿದೆ’ಎಂಬ ಫಲಕಗಳನ್ನು ಈಗಾಗಲೇ ಪ್ರದರ್ಶಿಸಲಾಗಿದ್ದು, ಉಲ್ಲಂಘಿಸದ್ದಲ್ಲಿ ರೂ.200/- ದಂಡವನ್ನು ವಿಧಿಸಲಾಗುತ್ತಿದ್ದು, 2021-22ನೇ ಸಾಲಿನಲ್ಲಿನಿಗಮದ ವ್ಯಾಪ್ತಿಯಲ್ಲಿ ರೂ.1,27,560.00/- ದಂಡವನ್ನು ವಸೂಲಿ ಮಾಡಲಾಗಿರುತ್ತದೆ.
ಸದರಿ ಕಾರ್ಯಕ್ರಮದಲ್ಲಿ ಶ್ರೀ, ಅನಿಲ್ ಕುಮಾರ್ ಎಂ,ಉಪ ಮುಖ್ಯ ಯಾಂತ್ರಿಕ ಅಭಿಯಂತರರು ಹಾಗೂ ಶ್ರೀ, ಚಂದ್ರಶೇಖರ್ ಹೆಚ್.ಸಿ, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಂಪೇಗೌಡ ಬಸ್ ನಿಲ್ದಾಣ, ಬೆಂಗಳೂರು ಮತ್ತು ಶ್ರೀ, ಪ್ರಭಾಕರ ಪ್ರಾಜೆಕ್ಟ್ ಮಾನ್ಯೇಜರ್,ರಾಜ್ಯ ತಂಬಾಕು ನಿಯಂತ್ರಣ ಮಂಡಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆರವರು ಹಾಗೂ ಇತರರು ಪಾಲ್ಗೊಂಡಿದ್ದರು.