ಬೆಂಗಳೂರು ಮೇ ೧೨:- ಕರ್ನಾಟಕ ದಲ್ಲಿ ಕೊರೋನಾ ಸೋಂಕಿ ನ ಅಟ್ಟಹಾಸ ಮುಂದುವರೆದಿದೆ. ಇಂದು ಒಂದೇ ದಿನ ೬೩ ಕೊರೋನಾ ಪಾಜಿಟೀವ್ ಕೇಸ್ ಗಳು ದೃಡಪಟ್ಟಿವೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 925 ಗಡಿ ತಲುಪಿದೆ.
ಒಂದೇ ಒಂದು ಪ್ರಕರಣ ವಿಲ್ಲದ ಕೊಲಾರ- 5, ಹಾಸನ- 5, ಯಾದಗಿರಿ- 2 ಪ್ರಕರಣಗಳು ಇಂದು ಪತ್ತೆಯಾಗಿದೆ.
ಕೋಲಾರ
ಕೋಲಾರ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ 5 ಕರೋನವೈರಸ್ ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮ ತಿಳಿಸಿದರು.
ತಮ್ಮ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಕುರಿತು ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕಂಡು ಬಂದಿರುವ 5 ಪ್ರಕರಣಗಳು ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವವರು ಆಗಿರುತ್ತಾರೆ. ಪಿ 906 ಹುಮ್ನಾಬಾದ್ ನಿಂದ, ಪಿ 907 ಬೆಂಗಳೂರಿನ ಜೆಪಿ ನಗರದಿಂದ, ಪಿ 908 ಚೆನ್ನೈನಿಂದ, ಪಿ 909 ಮತ್ತು ಪಿ 910 ಒರಿಸ್ಸಾದಿಂದ ಜಿಲ್ಲೆಗೆ ಆಗಮಿಸುತ್ತಾರೆ. ಇವರನ್ನು ಆರ್ ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇವರಿಗೆ ರೋಗದ ಯಾವುದೇ ಲಕ್ಷಣಗಳು ಇದುವರೆಗೂ ಕಂಡುಬಂದಿಲ್ಲ. ಎಲ್ಲರೂ ಆರೋಗ್ಯವಾಗಿದ್ದಾರೆ. ಇವರಿಗೆ ಚಿಕಿತ್ಸೆ ನೀಡಿ ಗುಣಪಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಇವರುಗಳಲ್ಲಿ ಪಿ 906 ಕ್ಕೆ 7 ಜನ, ಪಿ 907 ಕ್ಕೆ 6 ಜನ, ಪಿ 908 ಕ್ಕೆ 3 ಜನ, ಪಿ909 ಕ್ಕೆ 6 ಜನ ಹಾಗೂ ಪಿ910 ಕ್ಕೆ 3 ಜನ ಸೇರಿದಂತೆ ಒಟ್ಟು 24 ಜನ ಪ್ರಥಮ ಕಾಂಟ್ಯಾಕ್ಟ್ ಗಳು ಇರುತ್ತಾರೆ ಇವರನ್ನು ಸಹ ಆಸ್ಪತ್ರೆಯಲ್ಲಿ ಕ್ವರಂಟೇನ್ ಮಾಡಲಾಗಿದೆ ಎಂದರು.
ಹಾಸನ
ಹಾಸನ ದಲ್ಲಿ ೫ ಮಂದಿಗೆ ಕೊರೋನಾ ಸೋಂಕು ತಗುಲಿದೆ ಇವರೆಲ್ಲಾ ಚನ್ನರಾಯಪಟ್ಟಣ ತಾಲ್ಲೂಕಿನವರು. ಸೋಂಕು ಪತ್ತೆಯಾದ ಐವರಲ್ಲಿ ನಾಲ್ಕುಮಂದಿ ಒಂದೇ ಕುಟುಂಬದವರಾಗಿದ್ದಾರೆ. ಮತ್ತೊಬ್ಬರು ಅವರ ಪರಿಚಿತರಾಗಿದ್ದಾರೆ. ಸೇವಾ ಸಿಂಧು ಪಾಸ್ ಪಡೆದು ಮುಂಬೈನಿಂದ ಮೇ 10 ರಂದು ಬಾಡಿಗೆ ಕಾರಿನಲ್ಲಿ ಬಂದಿದ್ದರು. ಅರಸೀಕೆರೆ ಚೆಕ್ ಪೋಸ್ಟ್ ಬಳಿ ಪರಿಶೀಲಿಸಿದಾಗ ರೋಗಲಕ್ಷಣ ಕಂಡು ಬಂದಿದ್ದರಿಂದ ಅವರನ್ನು ಚನ್ನರಾಯ ಪಟ್ಟಣದ ಗುರುಮಾರನಹಳ್ಳಿಯ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು
ಸೋಂಕಿತ ಐದು ಮಂದಿಯನ್ನು ಹಾಸನ ನಗರದಲ್ಲಿರುವ ಕೋವಿಡ್-೧೯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹಾಸನ ಜಿಲ್ಲಾಧಿಕಾರಿ ಆರ್ ಗಿರೀಶ್ ತಿಳಿಸಿದ್ದಾರೆ.
ಯಾದಗಿರಿ
ಇಲ್ಲಿಯವರೆಗೂ ಕೊರೋನಾ ಸೋಂಕು ಕಾಲಿಡದ ಯಾದಗಿರಿ ಜಿಲ್ಲೆಯಲ್ಲಿ ಮೊದಲಬಾರಿಗೆ ಎರಡು ಕೊರೋನಾ ಪಾಸಿಟೀವ್ ಕೇಸ್ ಗಳು ಪತ್ತೆಯಾಗಿವೆ. ಮಾರ್ಚ ೨೧ ರಂದು ಗುಜರಾತ್ ನ ಅಹ್ಮದ್ ಬಾದ್ ನಗರಕ್ಕೆ ತೆರಳಿದ್ದರು. ಸುರಪುರದ ವಾಸಿಗಳಾದ ಇವರು ಛತ್ರಿ ಮತ್ತು ಸಿಹಿ ತಿಂಡಿ ಮಾಡಿಕೊಂಡಿದ್ದರು. ಲಾಕ್ ಡೌನ್ ಶುರುವಾಗುವದಕ್ಕೂ ಮುಂಚೆ ಮಳೆಗಾಲದಲ್ಲಿ ವ್ಯಾಪಾರ ಮಾಡಲು ಬೇಕಾದ ಛತ್ರಿ ತರಲು ಗುಜರಾತ್ ನ ಅಹಮದಾಬಾದ್ ಗೆ ತೆರಳಿದ್ದರು. ಲಾಕ್ ಡೌನ್ ಹಿನ್ನೆಲೆಯಲ್ಲಿ ಅಲ್ಲಿಯೆ ಲಾಕ್ ಹಾಗಿದ್ದ ಅವರು ಸಡಳಿಕೆಯ ನಂತರ ಮೇ 6 ರಂದು ಮೂರು ದಿನಗಳಕಾಲ ಲಾರಿಯಲ್ಲಿ ಪ್ರಯಾಣ ಬೆಳಸಿ ಹುನಗುಂದ ಹೈವೆ ವರೆಗು ಬಂದು ನಂತರ ಸುರಪುರದಿಂದ ಕಾರ ತರೆಸಿಕೊಂಡು ಯಾದಗಿರಿಗೆ ಬರುವ ಮಾರ್ಗದಲ್ಲಿ ಬಂಡೋಹಳ್ಳಿ ಚೆಕ್ ಪೋಸ್ಟ್ ಬಳಿ ತಪಾಸಣೆ ಮಾಡಿ ಕ್ವಾರಂಟೈನ್ ಮಾಡಿದ್ದರು. ಈಗ ಅವರಿಗೆ ಕೊರೋನಾ ಪಾಸಿಟೀವ್ ಬಂದಿದೆ.