EXpzH74XsAAuvNv

ದಿಕ್ಕೆಟ್ಟ ನಾಡಿನಲ್ಲಿ ಸರ್ಕಾರ ಕಾರ್ಮಿಕರ ಪರವೋ, ಮಾಲೀಕರ ಪರವೋ…?

STATE

ಬೆಂಗಳೂರು ಮೇ ೧೨ :- ರಾಜ್ಯಸರ್ಕಾರ ಕೊರೋನಾ ಸಂಕಷ್ಟ ಸಮಯದಲ್ಲಿ ಕಾರ್ಮಿಕರ ಹಿತ ಕಾಪಾಡಲು ಹೊಗಲಿದೆಯೆ..? ಇಲ್ಲವೆ ಕೈಗಾರಿಕೆಗಳ ಮಾಲಿಕರ  ಹಿತಾಸಕ್ತಿ ಕಾಪಾಡಲು ಮುಂದಾಗಿದೆಯಾ ಎಂಬ ಅನುಮಾನ ಸಾರ್ವಜನಿಕರಲ್ಲಿ ಕಾಡುತ್ತಿದೆ.

ಅದರಲ್ಲೂ ನಿಷ್ಟಾವಂತ ಖಡಕ್‌ ಅಧಿಕಾರಿ ಎಂಬ ಹೆಸರು ಮಾಡಿದ್ದ ಐಎಎಸ್‌ ಅಧಿಕಾರಿ ಕ್ಯಾಪ್ಟನ್‌ ಮಣಿಮಣ್ಣನ್‌ ಅವರನ್ನು ಏಕಾ ಏಕಿ ಕಾರ್ಮಿಕ ಇಲಾಖೆಯಿಂದ  ವರ್ಗಾವಣೆ ಮಾಡಿದ್ದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.                      

images 4

ಕ್ಯಾಪ್ಟನ್‌ ಮಣಿಮಣ್ಣನ್‌ ಯಾವುದು ಹುದ್ದೆ ತೋರಿಸದೆ ಒಂದು ರೀತಿ ಅಪಮಾನ ಮಾಡಿದ್ದ ಸರ್ಕಾರ ಇಂದು ಅವರನ್ನು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿಯ ಹುದ್ದೆ ತೊರಿಸಿದೆ.

9debc50f d0f9 4063 b8f4 d3a6a6977740

ಮಣಿಮಣ್ಣನ್‌ ಹಠಾತ್‌ ವರ್ಗಾವಣೆ, ಅವರಿಗೆ ನೀಡಿರುವ ಹಿಂಬಡ್ತಿಯನ್ನು ನೋಡಿದರೆ, ಗಮನಿಸಿದರೆ,ಸರ್ಕಾರದ ಕಾಣದ ಕೈಗಳ ಒತ್ತಡಕ್ಕೆ ಮಣಿದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದರಲ್ಲಿ ಆಡಳಿತ ಪಕ್ಷದ ಅನೇಕ ಶಾಸಕರು ಮತ್ತು  ಅನಧೀಕೃತ ಸೂಪರ್‌ ಸಿಎಂ ಅವರ ಪಾತ್ರವು  ದಟ್ಟವಾಗಿದೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ.

ಹೌದು, ಶಾಸಕರು , ಅನಧೀಕೃತ ಸೂಪರ್‌ ಸಿಎಂ ಎನಸಿಕೊಂಡವರು ಏಕೆ ಇಂತಹ ಪ್ರಾಮಾಣಿಕ ಅಧಿಕಾರಿಯ ಮೇಲೆ  ಏಕಾ ಏಕಿ ಮುಗಿ ಬಿದ್ದಿದ್ದಾರೆ.? ಅವರನ್ನು ಅವಮಾನಕರ ರೀತಿಯಲ್ಲಿ ನಡೆಸಿಕೊಂಡರು, ಅಳೆದು-ತೂಗಿ ಹುದ್ದೆ ತೊರಿಸಿರುವುದನ್ನು ನೋಡಿದರೆ ಅವರ ಮೇಲೆ ಸರ್ಕಾರಕ್ಕೆ ಬಹುತೇಕ ಆಡಳಿತ ಪಕ್ಷ ಶಾಸಕರಿಗೆ ಎಷ್ಟು ಸಿಟ್ಟು ಇತ್ತು ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಸರ್ಕಾರ ತರಾತುರಿಯಲ್ಲಿ ಕಾರ್ಮಿಕ ಕಾಯ್ದೆಯಲ್ಲಿ ಬದಲಾವಣೆಯನ್ನು ತರಲು ಮುಂದಾಗಿದ್ದು ಆದರೆ ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧ ವಾಗಿದ್ದ ತಿದ್ದುಪಡಿಗೆ ಮಣಿಮಣ್ಣನ್ ಅಡ್ಡ ಗೊಡೆಯಾಗಿದ್ದರು ಇದು ಕೂಡ ಅವರನ್ನು ಹಠಾತ್‌ ವರ್ಗಾವಣೆ ಮಾಡಲು  ಪ್ರಬಲ ಕಾರಣ.

ಬಿಜೆಪಿ ರಾಜ್ಯಗಳಾದ ಉತ್ತರ ಪ್ರದೇಶ,ಮದ್ಯಪ್ರದೇಶಗಳಲ್ಲಿ  ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದಿರುವ ರೀತಿ ರಾಜ್ಯದಲ್ಲೂ ಜಾರಿಗೆ ತರಲು ಹೊರಟಿದ್ದಕ್ಕೆ ಮಣಿಮಣ್ಣನ್‌ ಅಸಹಾಕಾರ ಕಾರಣ ಎನ್ನಲಾಗಿದೆ

ಖಾಸಗಿ ಕಂಪನಿಗಳು ಮತ್ತು ಶಾಸಕರಿಗೆ ಏಕೆ ಕೋಪ…?

*    ಖಡಕ್‌ ಅಧಿಕಾರಿಯಾಗಿರುವ ಮಣಿಮಣ್ಣನ್‌ ಕಾರ್ಮಿಕರಿಗೆ ಲಾಕ್‌ ಡೌನ್‌ ಅವಧಿ ಸಂಬಳ ಕೊಡದೆ ಕಾರ್ಮಿಕರಿಗೆ ಶೋಷಣೆ ಮಾಡುತ್ತಿದ್ದ ಕೈಗಾರಿಕಾ ಮಾಲಿಕರಿಗೆ ನೋಟೀಸ್‌ ಜಾರಿ ಮಾಡುತ್ತಿದ್ದರು

*  ಕಾರ್ಮಿಕ ಖಾತೆಯ ನಿಧಿಯಲ್ಲಿನ ಹಣವನ್ನು ಪುಡ್‌ ಕಿಟ್‌ ಬಳಕೆಗೆ ವಿನಿಯೋಗ ಮಾಡಲು ಎಷ್ಟು ಒತ್ತಡ ಬಂದರು ಅವಕಾಶ ಕೊಟ್ಟಿರಲಿಲ್ಲ.

ಮಣಿಮಣ್ಣನ್‌ ಅವರು ಕೋವಿಡ್ 19  ಸಂಭಂದ  ಕಾರ್ಮಿಕ ಸಮಸ್ಯೆಗಳನ್ನು ತಳಿದುಕೊಳ್ಳಲು, ತಮ್ಮ ಇಲಾಖೆ ವೆಬ್‌ ಸೈಟ್‌ ನಲ್ಲಿ        ʻ Covid – 19 labour complaint Registration ‘ ಮುಕಾಂತರ ಕಾರ್ಮಿಕ ಕುಂದುಕೊರತೆಗಳನ್ನು ತಿಳಿದು ಕೊಳ್ಳುತ್ತಿದ್ದರು, ಖಾಸಗಿ ಕಂಪನಿಗಳು ಕೆಲಸಗಾರರಿಗೆ ಸಂಬಳ ನೀಡದಿರುವುದು, ಕೆಲಸದಿಂದ ತೆಗೆದು ಹಾಕಿರುವುದು, ಸಂಬಳ ಕಡಿತ ಸೇರಿದಂತೆ ಕಾರ್ಮಿಕರ ಸಮಸ್ಯೆಗಳು ಮಣಿಮಣ್ಣನ್‌ ಅವರ ಗಮನಕ್ಕೆ ಬರುತ್ತಿದ್ದವು ಅವರು ಕೂಡಲೆ ಸಂಭಂದಿಸಿದ ಖಾಸಗಿ ಕಂಪನಿಗಳಿಗೆ ನೋಟಿಸ್‌ ನೀಡಿ ಕಾರ್ಮಿಕರ ಧ್ವನಿಯಾಗುತ್ತಿದ್ದರು. ಇದು ಸಹ ಮಣಿಮಣ್ಣನ್‌ ಎತ್ತಂಗಡಿಗೆ ಪ್ರಬಲ ಕಾರಣಗಳಲ್ಲಿ ಒಂದಾಗಿದೆ.

1d66ba27 b499 4034 b9bf 5b1e5891a2e3
ದೂರು ನೊಂದಾವಣೆ ಮಾಡುವ ಲಿಂಕ್

ಕ್ಯಾಪ್ಟನ್‌ ಮಣಿಮಣ್ಣನ್‌ ವರ್ಗಾವಣೆ ನಂತರ  ಕಾರ್ಮಿಕ ಇಲಾಖೆಯ ವೆಬ್‌ ಸೈಟ್‌ ನಲ್ಲಿʻ Covid – 19 labour complant Registrationʼ ಪೇಜ್‌  ಓಪನ್‌  ಆಗುವುದಿಲ್ಲ. ಈಗ ಕಾರ್ಮಿಕರ ಗೋಳು ಕೇಳಿಸದಂತಾಗಿದೆ

bcaaa8c1 72dd 45b8 8fba d993b28f4fc5
ದೂರು ನೊಂದಾವಣೆ ಮಾಡಲು ಹೋದರೆ ಈ ರೀತಿ ಬರುತ್ತೆ, ದೂರು ನೊಂದಾವಣೆ ಮಾಡಲು ಆಗುವುದಿಲ್ಲ.

ಕೈಗಾರಿಕೋದ್ಯಮಿಗಳು  ಅನಧೀಕೃತ ಸೂಪರ್‌ ಸಿಎಂ ಆಗಿ ಕಾರ್ಯನಿರ್ವಹಿಸುತ್ತಿರುವವರನ್ನು ಭೇಟಿಮಾಡಿ  ಮಣಿಮಣ್ಣನ್‌ ಅವರಿಂದ ನಮಗೆ ತೊಂದರೆ ಯಾಗುತ್ತಿದೆ ಅಲ್ಲಿಂದ ಅವರನ್ನು ಕೂಡಲೆ ಎತ್ತಂಗಡಿ ಮಾಡಿ ಎಂದು ದೂರು ಕೊಟ್ಟಿದ್ದರು ಎನ್ನಲಾಗಿದೆ.

ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸರ್ಕಾರ ಎತ್ತಂಗಡಿ ಮಾಡಿ ಕೊನೆಗೆ ಇಂದು ಹುದ್ದೆ ತೋರಿಸಿದೆ. ಕಳೆದ ಎರಡು ದಿನದಿಂದಲು ಸಾರ್ವಜನಿಕ ವಲಯದಲ್ಲಿ ವ್ಯಾಪಕ  ಆಕ್ರೋಶ ಕೇಳಿಬರುತ್ತಿತ್ತು ಇದನ್ನು ಮನಗಂಡ ಸರ್ಕಾರ ಕೂಡಲೆ ಹುದ್ದೆ ತೋರಿಸಿದೆ ಹೋದರೆ ಸಾರ್ವಜನಿಕ ಕೋಪ ತಾಪವನ್ನು ಮೈ ಮೇಲೆ ಎಳೆದು ಕೊಳ್ಳಬೇಕಾಗುತ್ತದೆ ಎಂದು ಇಷ್ಟು ಇರಲಿ,ಇಲ್ಲದೆ ಇರಲಿ ಇಂದು ಅವರನ್ನು  ಪಶು ಸಂಗೋಪನೆ  ಮೀನುಗಾರಿಕೆ ಇಲಾಖೆ ಹುದ್ದೆ  ತೋರಿಸಲಾಗಿದೆ.

ಮಣಿಮಣ್ಣನ್‌ ಅವರನ್ನು ಹೀನಾಯವಾಗಿ ನಡೆಸಿಕೋಡಿದ್ದರ ಬಗ್ಗೆ ವಿರೋಧ ಪಕ್ಷ ನಾಯಕರು ಕಟುವಾಗಿ ಟೀಕಿಸಿದ್ದಾರೆ. ಮಾಜಿ ಮುಖ್ಯಮಂತ್ರಿ  ಹೆಚ್‌ ಡಿ ಕುಮಾರಸ್ವಾಮಿ ಪ್ರಾಮಾಣಿಕ ಅಧಿಕಾರಿಗಳಿಗೆ ಕೆಲಸ ಮಾಡಲು ಅಧಿಕಾರ ನೀಡದೆ ಬಲಿಪಶು ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

0abd0588 1511 4fbe 840d 2a1230257a13

ಕೊರೋನಾ ಸೊಂಕು ನಿಯಂತ್ರಣ ಮಾಡುತ್ತಿರುವ ಮುಖ್ಯಮಂತ್ರಿಗಳ ಬಗ್ಗೆ ಖಾಸಗಿ ಸಂಸ್ಥೆ ನಡೆಸಿದ ಅಧ್ಯಯನ ದ ಪ್ರಕಾರ ದೆಹಲಿ ಮುಖ್ಯಮಂತ್ರಿಗೆ ಮೊದಲ ಸ್ಥಾನ, ರಾಜ್ಯದ ಮುಖ್ಯಮಂತ್ರಿಗೆ 2 ನೇ ಸ್ಥಾನ ಕೊಟ್ಟಿದೆ. ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಭಾವನೆ ಬಂದಿತ್ತು ಮಣಿಮಣ್ಣನ್‌ ಅವರಂತ ದಕ್ಷ, ಪ್ರಾಮಾಣಿಕ ಜನಪರ ಅಧಿಕಾರಿ ಹಿಂಬಡ್ತಿ ನೀಡಿ ಅಪಮಾನ ಮಾಡಿರುವುದನ್ನು ನೋಡಿದರೆ ಸರ್ಕಾರದ ಪ್ರಾಮಾಣಿಕತೆ, ಜನಪರಕಾಳಜಿಯ ಬಗ್ಗೆ ಸಂಶಯ ಮೂಡುತ್ತದೆ.