ಗುರು ಜ್ಞಾನದ ಸಂಕೇತ
ವೈ.ಎನ್.ಹೊಸಕೋಟೆ : ವಿಶ್ವದಲ್ಲಿ ಗುರು ಜ್ಞಾನದ ಸಂಕೇತವಾಗಿದ್ದು, ಗುರುವಿನ ಸಂಗಡ ಮನುಷ್ಯನ ಜ್ಞಾನ ಅರಳುತ್ತದೆ ಎಂದು ನಿವೃತ್ತ ಸೈನಿಕ ನಾರಾಯಣರಾವ್ ತಿಳಿಸಿದರು.
ಪೋತಗಾನಹಳ್ಳಿ ಗ್ರಾಮದ ಡಾ.ಬಿ.ಅರ್.ಅಂಬೇಡ್ಕರ್ ಗ್ರಾಮೀಣ ಪ್ರೌಢಶಾಲೆಯಲ್ಲಿ ಮಂಗಳವಾರ ನಿವೃತ್ತರಾದ ಶಿಕ್ಷಕ ತಿಮ್ಮರಾಜುರವರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಸರ್ಕಾರಿ ನಿಯಮದಂತೆ ಪ್ರತಿಯೊಬ್ಬರೂ ಸೇವೆಯಿಂದ ನಿವೃತ್ತರಾಗಲೇ ಬೇಕು. ನಿವೃತ್ತಿ ನಂತರ ಅಧಿಕಾರಿಗಳು ಜನ ಮಾನಸದಲ್ಲಿ ಉಳಿಯುವುದು ಕಷ್ಟ. ಆದರೆ ಶಿಕ್ಷಕರು ನಿವೃತ್ತಿಯ ನಂತರವೂ ವಿದ್ಯಾರ್ಥಿಗಳ ಜೀವನದಲ್ಲಿ ಸದಾ ನೆಲೆಸಿತ್ತಾರೆ ಎಂದರು.
ಮುಖ್ಯಶಿಕ್ಷಕ ರಾಮಾಂಜಿನಪ್ಪ, ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕಿ ಗಿರಿಜಮ್ಮ, ಶಿಕ್ಷಕರಾದ ಶಂಕರನಾಯ್ಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಿಮ್ಮರಾಜು ಶ್ರೀದೇವಿ ದಂಪತಿಗಳನ್ನು ಆತ್ಮೀಯವಾಗಿ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕವೃಂದ ಗೌರವ ಸನ್ಮಾನ ಮಾಡಿದರು.
ಗ್ರಾಮಪಂಚಾಯಿತಿ ಅಧ್ಯಕ್ಷೆ ನಾಗಮ್ಮ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕರಾದ ವೆಂಕಟೇಶ್, ಭೀಮೇಶ, ಅಶೋಕ, ಮುರಳಿ, ಎ.ವಿ.ರಾಜೇಶ್, ಇಂಜಿನಿಯರ್ ಗೌತಮ್‌ರಾಜ್, ತ್ರಿವೇಣಿ ಇದ್ದರು.
ವರದಿ: ಸತೀಶ್