IMG 20200713 WA0051

ಖಾಸಗಿ ಆಸ್ಪತ್ರೆಗಳ ಮೇಲೆ ಕ್ರಿಮಿನಲ್ ಕೇಸ್; ಲೈಸೆನ್ಸ್ ರದ್ದು…!

Genaral STATE

*ಕೋವಿಡ್ ಗೆ ಸಜ್ಜಾಗದ ಖಾಸಗಿ ಆಸ್ಪತ್ರೆಗಳ ಮೇಲೆ ಕ್ರಿಮಿನಲ್ ಕೇಸ್; ಲೈಸೆನ್ಸ್ ರದ್ದು: ನಾಳೆಯಿಂದಲೇ ಜಾರಿ – ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್*

*ಬೂತ್ ಮಟ್ಟದ ಕೋವಿಡ್ ಕಾರ್ಯಪಡೆಗಳಿಗೆ ಮಾರ್ಗಸೂಚಿ ಬಿಡುಗಡೆ, ರಿವರ್ಸ್ ಐಸೋಲೇಶನ್‌ಗೆ ಒತ್ತು: ಕೊರೋನ ನಿಯಂತ್ರಣಕ್ಕೆ ಸರ್ಕಾರದ ಸ್ಪಷ್ಟ ಸಂದೇಶ*

*ಬೆಂಗಳೂರು – ಜುಲೈ 13, 2020*: 4 ತಿಂಗಳ ಹಿಂದೆಯೇ ಸ್ಪಷ್ಟ ಅದೇಶಗಳನ್ನು ನೀಡಿದ್ದರೂ ಇದುವರೆಗೆ ಕೋವಿಡ್ ಎದುರಿಸಲು ಸಜ್ಜಾಗದ ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಅನುಮತಿ ರದ್ದು ಪಡಿಸಲು ಸರ್ಕಾರ ನಿರ್ಧರಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಸಿದ್ದಾರೆ. ಬೆಂಗಳೂರಿನಲ್ಲಿಂದು ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇದುವರೆಗೆ ಕೋವಿಡ್ ಲ್ಯಾಬ್ ಸ್ಥಾಪಿಸದ, ಹಾಸಿಗೆಗಳನ್ನು ಮೀಸಲಿಡದ, ಚಿಕಿತ್ಸೆ ನಿರಾಕರಿಸುತ್ತಿರುವ ಮತ್ತು ಅಗತ್ಯ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸದ ಖಾಸಗಿ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮುಖ್ಯಮಂತ್ರಿಗ ಬಿ.ಎಸ್.ಯಡಿಯೂರಪ್ಪನವರು ಆದೇಶಿಸಿದ್ದಾರೆ ಎಂದು ತಿಳಿಸಿದರು. ಸಾರ್ವಜನಿಕರ ರಕ್ಷಣೆಯ ವಿಚಾರದಲ್ಲಿ ಇಂತಹ ವೈಫಲ್ಯಗಳನ್ನು ಸಹಿಸಲಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಸಾರ್ವಜನಿಕ ಆರೋಗ್ಯ ತಜ್ಞ ಡಾ.ಎಂ.ಕೆ.ಸುದರ್ಶನ್ ಮತ್ತು ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಅವರು ಉಪಸ್ಥಿತರಿದ್ದರು.

ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇಂದು ಮುಖ್ಯಮಂತ್ರಿಗಳು ನಡೆಸಿದ ಸುದೀರ್ಘವಾದ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿದ ಸಚಿವ ಸುಧಾಕರ್ ಸಭೆಯ ಮುಖ್ಯಾಂಶಗಳನ್ನು ಮಾಧ್ಯಮಗಳಿಗೆ ತಿಳಿಸಿದರು. 1 ವಾರ ಸಂಪೂರ್ಣ ಲಾಕ್‍ಡೌನ್ ಇರಲಿದ್ದು ಅಗತ್ಯ ಸೇವೆಗಳಿಗೆ ಮಾತ್ರ ಬೆಳಗ್ಗೆ 6 ಗಂಟೆಯಿಂದ ಮದ್ಯಾಹ್ನ 12 ಗಂಟೆಯವರೆಗೆ ರಿಯಾಯಿತಿ ಇರಲಿದೆ ಎಂದು ಹೇಳಿದರು. ಈ ಕುರಿತಾದ ವಿವರವಾದ ಮಾರ್ಗಸೂಚಿ ಇಂದು ರಾತ್ರಿ ಬಿಡುಗಡೆಯಾಗಲಿದೆ, ಇದು ಬೆಂಗಳೂರಿನ ಜನರ ಜೀವ ರಕ್ಷಣೆಗಾಗಿ ತೆಗೆದುಕೊಂಡಿರುವ ಸ್ಪಷ್ಟ ನಿರ್ಧಾರ ಎಂದು ಸಚಿವರು ಹೇಳಿದರು.

*ಬೂತ್ ಮಟ್ಟದ ಕಾರ್ಯಪಡೆಗಳಿಗೆ ಮಾರ್ಗಸೂಚಿ*

ಬೂತ್ ಮಟ್ಟದ ಕಾರ್ಯಪಡೆಗಳಿಗೆ ನೀಡಬೇಕಾಗಿರುವ ಮಾರ್ಗಸೂಚಿಗಳ ಕುರಿತು ವಿವರಿಸಿದ ಸಚಿವರು, ಕಾರ್ಯಪಡೆಯ ಸದಸ್ಯರು ಪ್ರತಿ ಮನೆಗಳಿಗೂ ಭೇಟಿ ನೀಡಲಿದ್ದು ರಿವರ್ಸ್ ಐಸೊಲೇಶನ್ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಇದರಿಂದ ಸೋಂಕು ಇಲ್ಲದವರನ್ನು ರಕ್ಷಿಸಲು ಸಾಧ್ಯವಾಗುವುದಲ್ಲದೆ, ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರ ಪತ್ತೆ ಹಚ್ಚಲು ನೆರವಾಗಿವುದು. ಅಲ್ಲದೆ ಐ‌ಎಲ್‌ಐ ಮತ್ತು ಎಸ್‌ಎ‌ಆರ್‌ಐ ಲಕ್ಷಣ ಇರುವ ವ್ಯಕ್ತಿಗಳನ್ನು ಪತ್ತೆಹಚ್ಚಿ ಪರೀಕ್ಷೆ ಮಾಡಿಸುವುದು ಮತ್ತು ಕ್ವಾರಂಟೈನ್ ಮಾಡಿಸುವ ನಿಟ್ಟಿನಲ್ಲಿ ನೆರವಾಗಲಿದ್ದಾರೆ. ಸೋಂಕಿನ ಲಕ್ಷಣ ಇರುವವರಿಗೆ ಆಂಬುಲೆನ್ಸ್, ಆಸ್ಪತ್ರೆಗೆ ದಾಖಲು ಮಾಡುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕಾರ್ಯಪಡೆ ನಿರ್ವಹಿಸಲಿದೆ ಎಂದು ಸಚಿವರು ತಿಳಿಸಿದರು.

*ಮಹಾಭಾರತ ಯುದ್ಧದಲ್ಲಿ ಸೇನೆಗಿಂತ ಕೃಷ್ಣನ ಬಲವೇ ಹೆಚ್ಚು; ಕೊರೋನ ಯುದ್ಧದಲ್ಲಿ ಅಂಕಿ ಸಂಖ್ಯೆಗಳಿಗಿಂತ ಧೈರ್ಯ, ಆತ್ಮವಿಶ್ವಾಸಗಳೇ ಗೆಲ್ಲುವ ಉಪಾಯಗಳು*

ಮಹಾಭಾರತ ಯುದ್ಧದಲ್ಲಿ ಕೌರವರು ಕೃಷ್ಣನ ಅಕ್ಷೋಹಿಣಿ ಸೈನ್ಯ ಪಡಿದ್ದರೂ ಸೋತರು. ಧರ್ಮ, ಸಾಹಸ, ವಿವೇಕದ ಪ್ರತೀಕವಾದ ಶಸ್ತ್ರ ಹಿಡಿಯದ ಕೃಷ್ಣನ ಜೊತೆಗಿದ್ದ ಪಾಂಡವರು ಗೆಲ್ಲುತ್ತಾರೆ. ಹಾಗೆಯೇ ಕೊರೋನ ವಿರುದ್ಧದ ಹೋರಾಟದಲ್ಲಿ ಆಸ್ಪತ್ರೆ, ಅಂಬುಲೆನ್ಸ್, ಬೆಡ್, ವೆಂಟಿಲೇಟರ್ ಮುಂತಾದ ಅಂಕಿ ಸಂಖ್ಯೆಗಳ ಬಗ್ಗೆ ಯೋಚಿಸಿದರಿ. ಅದರ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತದೆ. ನೀವು ಧೈರ್ಯದಿಂದ, ಆತ್ಮವಿಶ್ವಾಸದಿಂದ ಕೊರೋನ ಎದುರಿಸಿ. ಸರ್ಕಾರದ ಮೇಲೆ ವಿಶ್ವಾಸವಿಡಿ. ಜನ ಆತಂಕಕ್ಕೊಳಗಾಗದೆ ಧೈರ್ಯದಿಂದ ಇದ್ದರೆ ಈ ಯುದ್ಧದಲ್ಲಿ ಕೊರೋನಾ ಮಣಿಸಬಹುದು, ಎಂದು ಸಚಿವ ಸುಧಾಕರ್ ತಿಳಿಸಿದರು.

 

*ಮುಖ್ಯಮಂತ್ರಿಗಳು ನಡೆಸಿದ ಸಭೆಯ IMG 20200713 WA0050ಮುಖ್ಯಾಂಶಗಳು*

1. ಕೋವಿಡ್ ಚಿಕಿತ್ಸೆಗೆ ಸಜ್ಜಾಗಿರದ ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ.

2. ಕೋವಿಡ್ ಅಲ್ಲದ ರೋಗಗಳಿಗೆ ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ಮೇಲೂ ಕಠಿಣ ಕಾನೂನು ಕ್ರ್ರಮ.

3. ಬೂತ್ ಮಟ್ಟದ ಕಾರ್ಯಪಡೆಗೆ ಮಾರ್ಗಸೂಚಿ ಬಿಡುಗಡೆ, ರಿವರ್ಸ್ ಐಸೊಲೇಶನ್ ಗೆ ಒತ್ತು.

4. ಲಾಕ್‌ಡೌನ್ ಕುರಿತಾದ ವಿವರವಾದ ಮಾರ್ಗಸೂಚಿ ಇಂದು ರಾತ್ರಿ ಬಿಡುಗಡೆ.

IMG 20200713 151120

5. ಸೀಲ್ ಡೌನ್ ಪ್ರದೇಶಗಳನ್ನು ಇನ್ನಷ್ಟು ಗಂಭೀರವಾಗಿ ಪರಿಗಣನೆ, ಹೆಚ್ಚು ಟೆಸ್ಟ್ ಮಾಡಲು ಆಧ್ಯತೆ.

6. ಧಾರ್ಮಿಕ ಸ್ಥಳಗಳಲ್ಲಿ ಸಾರ್ವಜನಿಕವಾಗಿ ಗುಂಪುಗೂಡುವುದಕ್ಕೆ ನಿರ್ಬಂಧ.

7. ಕೋವಿಡ್ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಗ್ರೂಪ್ ಡಿ ನೌಕರರ ವೇತನ ದುಪ್ಪಟ್ಟು.

8. ಗುತ್ತಿಗೆ ಆಧಾರದಲ್ಲಿ ಅಗತ್ಯ ಆರೋಗ್ಯ ಸಿಬ್ಬಂದಿ ನೇಮಕಕ್ಕೆ ಸೂಚನೆ.

9. ಬೆಂಗಳೂರಿಗೆ ಇನ್ನೂ 200 ಹೆಚ್ಚುವರಿ ಆಂಬುಲೆನ್ಸ್

10. ಡಿಜಿಟಲ್ ಎಕ್ಸ್-ರೇ ಯಂತ್ರ ಖರೀದಿಸಲು ತೀರ್ಮಾನ. ತ್ವರಿತ ಸೋಂಕು ಪತ್ತೆಗೆ ಸಹಕಾರಿ.

11. ರಾಜ್ಯದಲ್ಲಿ ಅತೀವೃಷ್ಟಿ ಕುರಿತು ಮುನ್ನೆಚ್ಚರಿಕೆ ವಹಿಸಲು ಸಿಎಂ ಕರೆ. ಕೋಲಾರ ಚಿಕ್ಕಬಳ್ಳಾಪುರಗಳಲ್ಲಿ ಬೋರ್ ವೆಲ್ ಮೂಲಕ ಕುಡಿಯುವ ನೀರು ಪೂರೈಕೆಗೆ ಸಿಎಂ ಸೂಚನೆ.