IMG 20220620 WA0031

ಆನೇಕಲ್ : ಓದು ಕನ್ನಡಿಗ ಕಾರ್ಯಕ್ರಮ….!

DISTRICT NEWS ಬೆಂಗಳೂರು

ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ಆಸ್ಪತ್ರೆಯಲ್ಲಿ ಪುಸ್ತಕ ಓದು ಕನ್ನಡಿಗ ಕಾರ್ಯಕ್ರಮವನ್ನು ಆನೇಕಲ್ ಪಟ್ಟಣದ ವಿಜಯ ನರ್ಸಿಂಗ್ ಹೋಂ ನಲ್ಲಿ ಏರ್ಪಡಿಸಲಾಗಿತ್ತು ಕಾರ್ಯಕ್ರಮದ ಉದ್ಘಾಟನೆಯನ್ನು ಡಾ ಸಿ ಬಿ ಮೋಹನ್ ನೆರವೇರಿಸಿದರು ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ಬಿ ಪಿ ರಮೇಶ್ ವಕೀಲರಾದ ಎಚ್ ಶ್ರೀನಿವಾಸ್ ಬಿ ಪಿ ಮರಿಯಪ್ಪ ಪರಿಷತ್ತಿನ ಅಧ್ಯಕ್ಷರಾದ ಆದೂರು ಪ್ರಕಾಶ್ ಇದ್ದರು

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ ಸಿ ಬಿ ಮೋಹನ್ ಗುರುವಿನ ಗುಲಾಮನಾಗದ ಹೊರತು ದೊರೆಯದಣ್ಣ ಮುಕುತಿ ಎನ್ನುವ ವಾಕ್ಯವನ್ನು ನಾವು ಬದಲಾಯಿಸಿಕೊಂಡು ಪುಸ್ತಕಗಳನ್ನು ಓದದೆ ಬದುಕಿಗೆ ಅರ್ಥ ದೊರೆಯುವುದಿಲ್ಲ ಎಂದು ಹೇಳಿದರು ಇಂದಿನ ಯುವ ಪೀಳಿಗೆಗೆ ಕನ್ನಡದ ಅಕ್ಷರಗಳು ಎಷ್ಟು ಎಂಬ ಗೊಂದಲ ಮೂಡಿದೆ ಸರಿಯಾದ ವ್ಯಾಕರಣ ಯಾವುದು ಅಲ್ಪಪ್ರಾಣ-ಮಹಾಪ್ರಾಣವೆಂದು ಗುರುತಿಸಲು ವಿಫಲ ರಾಗುತ್ತಿದ್ದಾರೆ ಎಂದು ನೋವನ್ನು ವ್ಯಕ್ತಪಡಿಸಿದರು

ಖ್ಯಾತ ವಕೀಲರಾದ ಎಚ್ ಶ್ರೀನಿವಾಸ್ ಅವರು ತಮ್ಮ ಆಶಯ ಭಾಷಣವನ್ನು ಮಾತನಾಡುತ್ತಾ ಪುಸ್ತಕವಿಲ್ಲದೇ ಜೀವನವಿಲ್ಲ ತಂತ್ರಜ್ಞಾನ ಎಷ್ಟೇ ಬೆಳೆದರು ಪುಸ್ತಕಕ್ಕೆ ಸಮಾನಾಗಲಾರದು ಎಂದು ಹೇಳಿದರು

ಗೂಗಲ್ನಲ್ಲಿ ಹುಡುಕಿದಾಗ ತಪ್ಪು ಸಂದೇಶವನ್ನು ನೀಡುತ್ತದೆ ಆದರೆ ಪುಸ್ತಕ ಸುಳ್ಳನ್ನು ಹೇಳುವುದಿಲ್ಲ ಅನ್ನವನ್ನು ಭೂಮಿಯಿಂದಲೇ ಬೆಳೆಯಬೇಕೆ ಹೊರತು ಕಂಪ್ಯೂಟರ್ನಿಂದ ಬೆಳೆಯೋದಕ್ಕೆ ಸಾಧ್ಯವಿಲ್ಲ ಹೀಗಾಗಿ ಜಗತ್ತಿನ ಪರಿಚಯಿಸುವ ಪುಸ್ತಕಗಳು ಬದುಕಿನಲ್ಲಿ ಶ್ರೇಷ್ಠವಾದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು

ಹಿರಿಯ ಕಾಂಗ್ರೆಸ್ ಮುಖಂಡರಾದ ಬಿ ಪಿ ರಮೇಶ್ ಮಾತನಾಡಿ ಕನ್ನಡ ನಾಡಿನ ಗಡಿಗಳಲ್ಲಿ ಪ್ರಕ್ಷುಬ್ಧ ವಾತಾವರಣವಿದ್ದರೂ ನಾಡಿನ ಒಳಗಡೆ ವಿಭಿನ್ನವಾದ ಕಾರ್ಯಕ್ರಮಗಳನ್ನು ಪರಿಷತ್ತು ಆಯೋಜನೆ ಮಾಡಿ ಕನ್ನಡದ ಕಂಪನ್ನು ಬೀರುತ್ತಿರುವುದು ಬಹಳ ಆಶಾದಾಯಕವಾದ ಬೆಳವಣಿಗೆ ಇದಕ್ಕೆ ಕನ್ನಡಿಗರೆಲ್ಲರೂ ಒಕ್ಕೊರಲಿನಿಂದ ಕೆಲಸ ಮಾಡಬೇಕಾಗಿದೆ ನಾವು ತನು ಮನ ಧನವನ್ನು ಸಮರ್ಪಿಸಿ ಕನ್ನಡದ ಬೆಳವಣಿಗೆಗೆ ಮುಂದೆ ಬರುತ್ತೇವೆ ಎಂದು ಬೆಂಬಲವನ್ನು ವ್ಯಕ್ತಪಡಿಸಿದರು
ಪಟ್ಟಣದ ಬಡಜನರ ವೈದ್ಯರಿಂದ ಖ್ಯಾತಿ ಪಡೆದಿರುವ ಡಾ ವೈಲಾಯ ಮಾತನಾಡಿ ಪುಸ್ತಕಗಳಿಗೆ ಅನಾದಿಕಾಲದಿಂದಲೂ ಹಿರಿಯರು ಗೌರವ ಸಲ್ಲಿಸಿಕೊಂಡೆ ಬರುತ್ತಿದ್ದಾರೆ ಇದರ ಗೂಡಾರ್ಥವನ್ನು ನಾವು ಅರ್ಥ ಮಾಡಿಕೊಂಡು ಪುಸ್ತಕ ಪ್ರಪಂಚದ ಒಳಗಡೆ ಪ್ರವೇಶಿಸಿದಾಗ ನಮ್ಮ ಬದುಕು ಸಾರ್ಥಕವಾಗುತ್ತದೆ ಟಿವಿ ಧಾರಾವಾಹಿಗಳ ಪರಿಣಾಮವಾಗಿ ಸಂಸ್ಕೃ ತಿ ನಾಶವಾಗಿದೆ ಇಂಗ್ಲಿಷ್ನ ಕೆಲವು ಪದಗಳಿಗೆ ಅರ್ಥವೇ ಇಲ್ಲದ ಹಾಗೆ ಗೋಚರಿಸುತ್ತದೆ ಆದರೆ ಕನ್ನಡ ಭಾಷೆಗೆ ಗೊಂದಲಗಳಿಲ್ಲದೆ ಸ್ಪಷ್ಟವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು

ಸನ್ಮಾನಿತರಾಗಿ ಡಾ ವೈಲಾಯ
ಸದಸ್ಯರಾದ ಮುನಾವರ್ ರಾಜಕುಮಾರ ಸಂಘದ ಅಧ್ಯಕ್ಷರಾದ ಟಿವಿ ಪ್ರಸಾದ್ ಪುರಸಭೆ ಮಾಜಿ ಉಪಾಧ್ಯಕ್ಷರಾದ ಡಿ ವೆಂಕಟೇಶ್ ಚಿತ್ರಮಂದಿರ ಮಾಲೀಕರಾದ ನಂದಕುಮಾರ್ ಅವರುಗಳು ಭಾಜನರಾದರು

ಕಾರ್ಯಕ್ರಮದಲ್ಲಿ ಹೇಮಾ ಮೂರ್ತಿ ಮೇಘನಾ ಬಹದ್ದೂರ್ ಪುರ ರವಿ ಯಲ್ಲಪ್ಪ ಸೇನೆ ಕನಮನಹಳ್ಳಿ ಕುಮಾರ್ ಇಲಿಯಾಸ್ ಮಹದೇವಪ್ಪಶೆಟ್ಟಿ ಮಹದೇವಯ್ಯ ವೆಂಕಟೇಶ್ ರಾಮಚಂದ್ರ ಸಂಪಂಗಿ ಬಾಬು ಫಯಾಜ್ ಗೋಪಿ ಅರೇಹಳ್ಳಿ ಜಯಣ್ಣ

ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಆದೂರು ಪ್ರಕಾಶ್ ಪದಾಧಿಕಾರಿಗಳಾದ ಎಂ ಗೋವಿಂದರಾಜು ಮಿಲಿಟರಿ ಕುಮಾರ್ ಚುಟುಕು ಶಂಕರ್ ಡಾ ನಾಗರಾಜ್ ಎಸ್ ಪಿ ನಾಗರತ್ನ ಹಾಜರಿದ್ದರು

ವರದಿ: ಹರೀಶ್