ಬೆಂಗಳೂರು: ಅಡಿಡಾಸ್ ಬೃಹತ್ ಮಳಿಗೆ ಅನಾವರಣ
ಬೆಂಗಳೂರು, 28 ಜೂನ್ 2022: ಕ್ರೀಡಾ ಉಡುಪುಗಳ ಕ್ಷೇತ್ರದ ದೈತ್ಯ ಸಂಸ್ಥೆಯಾಗಿರುವ ಅಡಿಡಾಸ್ ಬೆಂಗಳೂರಿನಲ್ಲಿ ತನ್ನ ಅತಿ ದೊಡ್ಡ ಮಳಿಗೆಯನ್ನು ನಗರದ ಹೃದಯ ಭಾಗವಾಗಿರುವ ಬ್ರಿಗೇಡ್ ರಸ್ತೆಯಲ್ಲಿ ಅನಾವರಣಗೊಳಿಸಿದೆ. ಈ ಮಳಿಗೆಯು ಹಲವು ಡಿಜಿಟಲ್ ಟಚ್ ಪಾಯಿಂಟ್‍ಗಳ ಮಿಶ್ರಣವಾಗಿದೆ ಮತ್ತು ಗ್ರಾಹಕರಿಗೆ ರೀಟೇಲ್ ಅನುಭವದ ಭವಿಷ್ಯವನ್ನು ಸಾಕಾರಗೊಳಿಸುತ್ತದೆ.
ನಾಲ್ಕು ಮಹಡಿಗಳಲ್ಲಿ 6500 ಚದರ ಅಡಿ ರೀಟೇಲ್ ಪ್ರದೇಶದಲ್ಲಿ ಹರಡಿರುವ ಈ ಮಳಿಗೆಯು ಅನುಭವ, ಸುಸ್ಥಿರತೆ, ಮತ್ತು ವಿಶ್ವಾಸಾರ್ಹತೆ- ಈ 3 ಪ್ರಮುಖ ಸ್ತಂಭಗಳ ಮೇಲೆ ಕೇಂದ್ರೀಕರಿಸುತ್ತದೆ.
ಈ ಮಳಿಗೆಯು ಗ್ರಾಹಕರಿಗೆ ಅಡಿಡಾಸ್ ಪ್ರಪಂಚದ ನೋಟವನ್ನು ಒದಗಿಸುತ್ತದೆ, ಓಟ, ತರಬೇತಿ, ಕ್ರೀಡಾ ಉಡುಪು, ಫುಟ್ಬಾಲ್, ಬ್ಯಾಸ್ಕೆಟ್ಬಾಲ್, ಗಾಲ್ಫ್, ಟೆನಿಸ್ ಮತ್ತು ಹೊರಾಂಗಣ ಕ್ರೀಡೆಗಳಿಗೆ ಸಂಬಂಧಿಸಿ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗಾಗಿ ವಿವಿಧ ರೀತಿಯ ಉತ್ಪನ್ನಗಳನ್ನು ನೀಡುತ್ತಿದೆ. ಮಳಿಗೆಯು ವಿಸ್ತೃತ ಟೆರೇಸ್ ಆಟಗಳಿಗೆ ಮೀಸಲಾಗಿದೆ. ವಿಶೇಷವಾದ ಫುಟ್ಬಾಲ್ ಅಂಕಣ, ಆಂಕ್ಸ್-ಬಾಕ್ಸ್ ಮತ್ತು ಲಾಂಜ್ ಹಾಗೂ ಮಕ್ಕಳ ಚಟುವಟಿಕೆಯ ಪ್ರದೇಶವು ಕ್ರೀಡೆಯ ಉನ್ನತ ಅನುಭವವನ್ನು ನೀಡುತ್ತದೆ. ಇಮ್ಮರ್ಸಿವ್ ಸ್ಕ್ರೀನ್‍ಗಳು, ಡಿಜಿಟಲ್ ಪ್ಲಿಂತ್‍ಗಳಂತಹ ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಹಕರಿಗೆ ಉತ್ತಮ ಡಿಜಿಟಲ್ ಶಾಪಿಂಗ್ ಅನುಭವವನ್ನು ನೀಡುವಂತೆ ಮಳಿಗೆಯನ್ನು ವರ್ಧಿಸಲಾಗಿದೆ.
ಅಡಿಡಾಸ್‍ನ ದೀರ್ಘಾವಧಿಯ ದೃಷ್ಟಿ ಮತ್ತು ಸುಸ್ಥಿರತೆಯತ್ತ ತೋರುತ್ತಿರುವ ಬದ್ಧತೆಗೆ ಅನುಗುಣವಾಗಿ, ಮಳಿಗೆಯು ಮೀಸಲಾದ ‘ಸಸ್ಟೈನಬಿಲಿಟಿ ವಾಲ್’ ಅನ್ನು ಹೊಂದಿದೆ, ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ಬಳಸಿ ಇದನ್ನು ವಿನ್ಯಾಸಗೊಳಿಸಲಾಗಿದೆ, ಪ್ಲಾಸ್ಟಿಕ್ ತ್ಯಾಜ್ಯ ಕೊನೆಗೊಳಿಸಿ (ಇಟಿಜ Pಟಚಿsಣiಛಿ Wಚಿsಣe) ಎನ್ನುವ ಲೋಗೋವನ್ನು ಪ್ರದರ್ಶಿಸುತ್ತದೆ. ಅಲ್ಲದೆ, ಮರುಬಳಕೆಯ ಬಾಟಲಿಗಳು ಮತ್ತು ಪ್ಲಾಸ್ಟಿಕ್ ಡಬ್ಬಗಳನ್ನು ಮಾತ್ರ ಬಳಸಿಕೊಂಡು ಸ್ಥಳೀಯ ಕಲಾವಿದರ ಸಹಯೋಗದಲ್ಲಿ ಈ ಮಳಿಗೆಯಲ್ಲಿ ಕೇಂದ್ರ ಹೃತ್ಕರ್ಣವನ್ನು ರಚಿಸಿ, ಸ್ಥಾಪಿಸಲಾಗಿದೆ.
ಮಳಿಗೆ ಉದ್ಘಾಟನೆ ಕುರಿತು ಪ್ರತಿಕ್ರಿಯಿಸಿದ ಬ್ರಾಂಡ್ ಅಡಿಡಾಸ್‍ನ ಹಿರಿಯ ನಿರ್ದೇಶಕ ಸುನೀಲ್ ಗುಪ್ತಾ, “ಬೆಂಗಳೂರಿನ ಹೃದಯಭಾಗದಲ್ಲಿ ಮತ್ತೊಂದು ಅದ್ಭುತ ಮಳಿಗೆಯನ್ನು ಆರಂಭಿಸಿದ್ದರಿಂದ ನಮಗೆ ರೋಮಾಂಚನವಾಗಿದೆ. ಈ ಮಳಿಗೆಯು ನಮ್ಮ ಗ್ರಾಹಕರಿಗೆ ಜಾಗತಿಕ ಶಾಪಿಂಗ್ ಅನುಭವವನ್ನು ಒದಗಿಸುವುದಲ್ಲದೆ, ಅಡಿಡಾಸ್ ಜತೆಗಿನ ಸಾಧ್ಯತೆಗಳ ಜಗತ್ತನ್ನು ಅವರಿಗೆ ಪರಿಚಯಿಸುತ್ತದೆ. ಅದು ನಮ್ಮ ಅನುಭವ ವಲಯಗಳು, ಡಿಜಿಟಲ್ ಟಚ್ ಪಾಯಿಂಟ್‍ಗಳು ಅಥವಾ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಮಾಡಿರುವ ಅನುಸ್ಥಾಪನೆ ಸುಸ್ಥಿರತೆಗೆ ನಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತದೆ. ನಾವೀನ್ಯ, ಸೃಜನಶೀಲತೆ ಮತ್ತು ವಿನ್ಯಾಸದ ಮೂಲಕ ನಮ್ಮ ಗ್ರಾಹಕರಿಗೆ ಮಳಿಗೆಯ ರೋಮಾಂಚಕಾರಿ ಅನುಭವವನ್ನು ನಿರಂತರವಾಗಿ ಹೆಚ್ಚಿಸಲು ನಾವು ಬಯಸುತ್ತೇವೆ” ಎಂದರು.
ವಿಶ್ವ ಬಾಕ್ಸಿಂಗ್ ಚಾಂಪಿಯನ್ ಹಾಗೂ ಅಡಿಡಾಸ್ ಅಥ್ಲೀಟ್ ನಿಖತ್ ಜರೀನ್ ಮಳಿಗೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಜರೀನ್, “ಸುಂದರವಾದ ಅಡಿಡಾಸ್ ಮಳಿಗೆಯನ್ನು ಉದ್ಘಾಟಿಸಲು ನನಗೆ ಸಂತೋಷವಾಗಿದೆ. ಮೊದಲ ಬಾರಿಗೆ ಅಡಿಡಾಸ್ ಮಳಿಗೆಗೆ ಭೇಟಿ ನೀಡಿ, ಬೂಟುಗಳನ್ನು ಧರಿಸಿ ನಡೆದಾಡಿದ್ದನ್ನು ಈ ಸಂದರ್ಭವು ನನಗೆ ನೆನಪಿಸಿದೆ. ಇದು ನನಗೆ ಸ್ಮರಣೀಯ ಕ್ಷಣವಾಗಿದೆ. ಆ ಜೋಡಿ ಬೂಟುಗಳು ನನಗೆ ಶಕ್ತಿ ನೀಡಿದ್ದು, ಇಂದಿಗೂ ಅದನ್ನು ಆನಂದಿಸುತ್ತಿದ್ದೇನೆ. ಅಡಿಡಾಸ್ ಜಗತ್ತಿಗೆ ಅಂದು ನಾನು ಪ್ರವೇಶಿಸಿದಲ್ಲಿಂದ ನನ್ನ ಸಾಧ್ಯತೆಗಳು ಅನಂತವಾಗಿವೆ. ಈ ಮೂರು ಪಟ್ಟಿಗಳನ್ನು ನಾನು ತುಂಬ ಹೆಮ್ಮೆಯಿಂದ ಧರಿಸುತ್ತೇನೆ ಮತ್ತು ಮುಂಬರುವ ವರ್ಷಗಳಲ್ಲಿ ಯುವ ಕ್ರೀಡಾಪಟುಗಳಿಗೆ ಈ ಮಳಿಗೆಯು ಇನ್ನೂ ಅನೇಕ ಸ್ಮರಣೀಯ ಪ್ರಯಾಣಗಳತ್ತ ಮೊದಲ ಹೆಜ್ಜೆಯಾಗಲಿದೆ ಎಂದು ನನಗೆ ಖಾತ್ರಿಯಿದೆ” ಎಂದು ಬಣ್ಣಿಸಿದರು.
videi- ಇಲ್ಲಿ ಕ್ಲಿಕ್ ಮಾಡಿ