ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಪ್ರೌಢಶಾಲೆ ಪದವಿ ಪೂರ್ವ ಕಾಲೇಜು ಸಂಘಗಳಸಹಯೋಗದೊಂದಿಗೆ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಇಂಡಿಯಾದಿಂದ ಭಾರತ ದೆಡೆಗೆ ಉಪನ್ಯಾಸ ಕಾರ್ಯಕ್ರಮ
ಇಂದು ಮಧುಗಿರಿ ತಾಲೂಕಿನ ಎಂಜಿಎಂ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ ತಾಲೂಕನ್ನಡ ಸಾಹಿತ್ಯ ಪರಿಷತ್ ಹಾಗೂ ಪ್ರೌಢಶಾಲಾ ಪದವಿ ಪೂರ್ವ ಕಾಲೇಜು ಸಂಘಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ 75ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಇಂಡಿಯಾದಿಂದ ಭಾರತದೆಡೆಗೆ ಉಪನ್ಯಾಸ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡಿದ ವಿಧಾನ ಪರಿಷತ್ತಿನ ಸದಸ್ಯರಾದ ಆರ್ ರಾಜೇಂದ್ರ ಅವರು ಮಾತನಾಡಿ. ಹೆಣ್ಣು ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು ಯಾರೂ ಕೂಡ ಶಾಲೆಯನ್ನು ತೊರೆದು ಅರ್ಧದಲ್ಲೇ ನಿಲ್ಲಿಸಿ ಮುಟುಕುಗೊಳಿಸಬಾರದು ಅವರಿಗೆ ಏನೇ ತೊಂದರೆ ಆದರೂ ಕೂಡ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವುದನ್ನು ಮುಂದುವರಿಸಬೇಕು ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಇಂತಹ ಅನೇಕ ಕಾರ್ಯಕ್ರಮಗಳು ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿತಾಲ್ಲೂಕು ಕ.ಸಾ.ಪ. ಅಧ್ಯಕ್ಷರಾದ ಶ್ರೀಮತಿ ಸಹನಾ ನಾಗೇಶ್,ಉಪನ್ಯಾಸಕ ಮಹಾಲಿಂಗೇಶ್, ಪೋಲಿಸ್ ಇಲಾಖೆಯ ಉಪಾಧೀಕ್ಷಕರಾದ ಶ್ರೀ ಕೆ.ಎನ್.ವೆಂಕಟೇಶ್ ನಾಯ್ಡು,ಬಿ.ಇ.ಒ ಎನ್.ನಂಜುಂಡಯ್ಯ, ಹೊಸಕೆರೆ ಸ.ಪ.ಪೂ ಕಾಲೇಜು ಪ್ರಾಂಶುಪಾಲರಾದ ಶ್ರೀ ರಂಗಪ್ಪ,ಪ್ರಾ.ಶಾ.ಮು.ಶಿ.ಸಂಘದ ಅಧ್ಯಕ್ಷ ಶ್ರೀ ಚೆನ್ನಿಗರಾಮಯ್ಯ, ಪ್ರಾ.ಶಾ.ಸ.ಶಿ.ಸಂಘದ ಅಧ್ಯಕ್ಷ ರಂಗಧಾಮಯ್ಯ ಗೌರವ ಕಾರ್ಯದರ್ಶಿ ಎಂ.ಎಸ್.ಶಂಕರ್ ನಾರಾಯಣ್,ರಂಗಧಾಮಯ್ಯ,ಕ.ಸಾ.ಪ ಉಪಾಧ್ಯಕ್ಷರಾದ ಶ್ರೀ ರಾಮಚಂದ್ರಪ್ಪ ಮ.ಲ.ನ.ಮೂರ್ತಿ,ಮೂಡ್ಲಗಿರೀಶ್, ಶಾಲಾ ಆಡಳಿತ ಮಂಡಳಿ ಸದಸ್ಯರು ಸಿಬ್ಬಂದಿ ವಿಧ್ಯಾರ್ಥಿಗಳು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ವರದಿ. ಲಕ್ಷ್ಮಿಪತಿ ದೊಡ್ಡ ಎಲ್ಕೂರು