ಸಂಚಾರ ದಟ್ಟಣೆ ನಿಯಂತ್ರಿಸುವಂತೆ ಮನವಿ.
ಪಾವಗಡ : ಪಟ್ಟಣದಲ್ಲಿ ವಾಹನ ಸಂಚಾರಿ ವ್ಯವಸ್ಥೆ ಹೆಚ್ಚಾಗಿದ್ದು, ಜನರು ಹೆಚ್ಚಿದ ವಾಹನ ಸಂಚಾರಿ ವ್ಯವಸ್ಥೆಯಿಂದ ಕಿರಿಕಿರಿ ಅನುಭವಿಸುತ್ತಿದ್ದು, ಅಂತಹ ರಸ್ತೆಗಳನ್ನು ಗುರುತಿಸಿ ಏಕಮುಖ ಸಂಚಾರ ಹಾಗೂ ಸರಿ ಬೆಸ ಸಂಖ್ಯೆಯ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವಂತೆ ಸೋಮವಾರ ಪಾವಗಡ ಪೊಲೀಸ್ ಠಾಣೆ ಸಿ. ಪಿ. ಐ ಅಜಯ್ ಸಾರಥಿ ರವರಿಗೆ ಹೆಲ್ಪ್ ಸೊಸೈಟಿ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.
ಪಾವಗಡ ಪಟ್ಟಣದ ಹಳೆ ಎಲ್ ಐ ಸಿ ಆಫೀಸ್ ಪಕ್ಕದ ಹೊಸ ಬಸ್ ನಿಲ್ದಾಣದಕ್ಕೆ ಹೋಗುವ ಒಳ ಹಾಗೂ ಹೊರ ಬರುವ ವಾಹನಗಳಿಂದ ರಸ್ತೆ ದಟ್ಟನೆ, ಪ್ರತಿ ಸೋಮವಾರ ನಾಗರಕಟ್ಟೆಯಿಂದ ಸರ್ಕಲ್ ರವರಗೆ ಟ್ರಾಫಿಕ್ ಸಮಸ್ಯೆ, ಹೊಸ ಬಸ್ ನಿಲ್ದಾಣದಲ್ಲಿ ಪೊಲೀಸ್ ಚೌಕಿ,ಶಾಲಾ ಕಾಲೇಜುಗಳ ಬಳಿ ಪುಂಡ ಪೋಕರಿಗಳ ಹಾವಳಿ, ಕಾಲೇಜು ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಹಬಾಗಿತ್ವದಲ್ಲಿ ಕಾನೂನು ಅರಿವು ಕಾರ್ಯಾಗಾರ,ಚಾಲನ ಪರವಾನಗಿ ಶಿಬಿರ ಹಾಗೂ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಿ ಸಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಈ ಮೂಲಕ ಹೆಲ್ಪ್ ಸೊಸೈಟಿ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಪತ್ರ ಸ್ವೀಕರಿಸಿ ಪ್ರತಿಕ್ರಿಯಿಸಿದ ಸಿ ಪಿ ಐ ಅಜಯ್ ಸಾರಥಿ ಯವರು ಏಕ ಮುಖ ಸಂಚಾರಕ್ಕೆ ಜಿಲ್ಲಾ ಮಟ್ಟದಲ್ಲಿ ಅನುಮೋದನೆ ಪಡೆದು ಕಾರ್ಯಗತ ಗೊಳಿಸುವುದಾಗಿ ಇನ್ನುಳಿದ ಸಮಸ್ಯೆಗಳ ಬಗ್ಗೆ ಕೂಡಲೇ ಕಾರ್ಯ ಪವೃತ್ತಿಯಾಗಿ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು,
ಈ ಸಂದರ್ಭದಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್, ಶ್ರೀರಾಮ ಸೇನೆ ಅಧ್ಯಕ್ಷ ಕಾವಳಗೇರಿ ರಾಮಾಂಜಿ,ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ್, ಆಂಬುಲೆನ್ಸ್ ತೇಜ, ರಾಕೇಶ್, ವೆಂಕಟೇಶ್ ನಾಯ್ಕ್,ಮಾನವ ಹಕ್ಕುಗಳ ಸಮಿತಿ ಕೋನಪ್ಪ, ಶ್ರೀಕಾಂತ್,ಅಭಿ ಉಪಸ್ಥಿತರಿದ್ದರು
ವರದಿ: ಶ್ರೀನಿವಾಸಲು ಎ