ಗುಜರಾತಿನ ಚುನಾವಣಾ ಫಲಿತಾಂಶ-
ಕರ್ನಾಟಕದ ಮೇಲೆ ಸಕಾರಾತ್ಮಕ ಪರಿಣಾಮ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು, ಡಿಸೆಂಬರ್ 8 :
ಗುಜರಾತಿನ ಚುನಾವಣಾ ಫಲಿತಾಂಶ ಕರ್ನಾಟಕದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದ್ದು, ಬಿಜೆಪಿ ಪುನ: ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಗುಜರಾತ್ ಮತ್ತು ಕರ್ನಾಟಕ ಗಾತ್ರದಲ್ಲಿ, ಜನಸಂಖ್ಯೆಯಲ್ಲಿ, ಕೈಗಾರಿಕೋದ್ಯಮ, ಶಿಕ್ಷಣ, ಸಂಸ್ಕøತಿಯಲ್ಲಿ ಸಮಾನವಾಗಿದೆ. ಎರಡೂ ಕಡೆ ಅನೇಕ ಸಾಮ್ಯಗಳಿದ್ದು, ಸಾಮಾಜಿಕ ರಚನೆ ಒಂದೇ ರೀತಿ ಇದೆ ಎಂದರು.
ಗುಜರಾತ್ ನಲ್ಲಿ ಭಾಜಪ ಸತತ ಏಳು ಬಾರಿ ಗೆಲುವು :
ಇತರೆ ಪಕ್ಷಗಳಲ್ಲಿ ಆಡಳಿತದ ಬಗ್ಗೆ ವಿರೋಧವಿದೆ. ಆದರೆ ಬಿಜೆಪಿಯಲ್ಲಿ ಆಡಳಿತದ ಪರವಾದ ಟ್ರೆಂಡ್ ಸೃಷ್ಟಿಸಲಾಗಿದೆ. ಉತ್ತಮ ಆಡಳಿತ ಪುನ: ಅದೇ ಸರ್ಕಾರವನ್ನು ಆಯ್ಕೆ ಮಾಡುತ್ತದೆ ಎಂದು ನಿರೂಪಿತವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಗಳೂ ಹಾಗೂ ಗುಜರಾತ್ ಸರ್ಕಾರ ಮತ್ತು ಸಂಘಟನೆಗಳ ಬಲ ಗುಜರಾತ್ ನಲ್ಲಿ ಏಳು ಬಾರಿ ಸತತವಾಗಿ ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದರು.
ಹಿಮಾಚಲ್ ಪ್ರದೇಶದಲ್ಲಿ ಸಾಕಷ್ಟು ಕಾರ್ಯಕ್ರಮಗಳು, ಸಂಪರ್ಕ ಸಾಧಿಸುವುದು ಸವಾಲು. ಅಲ್ಲಿ ಯಾವಾಗಲೂ ಪರ್ಯಾಯವಾಗಿ ಪಕ್ಷಗಳನ್ನು ಆಯ್ಕೆ ಮಾಡುವ ಟ್ರೆಂಡ್ ಇದೆ. ಈ ಬಾರಿಯೂ ಅದು ಮುಂದುವರೆದಿದೆ. ಆದರೂ ನಮ್ಮ ಪಕ್ಷದವರು ಸಾಕಷ್ಟು ಪ್ರಯತ್ನ ಮಾಡಿ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಅಲ್ಪ ಮಟ್ಟದಲ್ಲಿ ಶೇಕಡವಾರು ವ್ಯತ್ಯಾಸವಾಗಿದೆ ಎಂದು ತಿಳಿಸಿದರು.