ಏಷ್ಯಾದಲ್ಲಿಯೇ ಅತಿ ದೊಡ್ಡ ಸೌರ ಶಕ್ತಿ ಉತ್ಪಾದನಾ ಕೇಂದ್ರಕ್ಕೆ ಭೇಟಿ ನೀಡಿದ G-20 ಸದಸ್ಯ ರಾಷ್ಟ್ರಗಳ ವಿದೇಶಿ ಪ್ರತಿನಿಧಿಗಳು
ಪಾವಗಡ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ತಿರುಮಣಿಯ ಸೋಲಾರ್ ಪಾರ್ಕ್ ಏಷ್ಯಾದಲ್ಲಿಯೇ ಮೊದಲ ಸೋಲಾರ್ ಪಾರ್ಕ್ ಎಂಬ ಹೆಗ್ಗಳಿಕೆ ಹೊಂದಿದ್ದು,
ಪಾವಗಡ ಅತಿ ಹಿಂದುಳಿದ ತಾಲೂಕು ಎಂಬ ಹಣೆ ಪಟ್ಟಿ ಹೊಂದಿದ್ದು, ಸ್ಥಳೀಯರು ಉದ್ಯೋಗಕ್ಕಾಗಿ ಬೆಂಗಳೂರಿನಂತಹ ನಗರಗಳಿಗೆ ವಲಸೆ ಹೋಗುವುದು ಸಾಮಾನ್ಯವಾಗಿತ್ತು, ಆದರೆ ಇಂದು ಸೋಲಾರ್ ಪಾರ್ಕ್ ನಿಂದಾಗಿ ತಾಲೂಕು ಹೆಚ್ಚಿನ ಮನ್ನಣೆ ಪಡೆದಿದೆ.
ಇಂದು ಸೋಲಾರ್ ಪಾರ್ಕ್ ವೀಕ್ಷಣೆ ಮಾಡಲು ಜಿ20 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ತಾಲೂಕಿನ ತಿರುಮಣಿ ಗ್ರಾಮಕ್ಕೆ ಭೇಟಿ ನೀಡಿದರು.
ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ನೇತೃತ್ವದ ತಂಡ ತಿರುಮಣಿಯ ಆಡಳಿತ ಕಚೇರಿ ಬಳಿ ದೇಶದ ಸಂಸ್ಕೃತಿ ಬಿಂಬಿಸುವ ಡೋಲು ಕುಣಿತ, ವೀರಗಾಸೆ, ಇತರೆ ಕಲಾ ತಂಡಗಳೊಂದಿಗೆ ವಿದೇಶಿ ಪ್ರತಿನಿಧಿಗಳನ್ನು ಸ್ವಾಗತಿಸಿದರು.
ತಾಲೂಕಿನಲ್ಲಿ 13,000 ಎಕರೆಯಲ್ಲಿ ಸೋಲಾರ್ ಪಾರ್ಕ್ ನಿರ್ಮಾಣಗೊಂಡು, 2000 ಮೆಗಾ ವಿದ್ಯುತ್ ವ್ಯಾಟ್ ಉತ್ಪಾದನೆ ಮಾಡುತ್ತಿದ್ದು.
ಸ್ಥಳಕ್ಕಾಗಿಮಿಸಿದ ವಿದೇಶರಿಗೆ ಟಿ. ಪಿ. ಟಿ ಮುಖಾಂತರ ಸೋಲಾರ್ ಪಾರ್ಕ್ ನ ಉತ್ಪಾದನೆ ಬಗ್ಗೆ ಮಾಹಿತಿ ತಿಳಿಸಲಾಯಿತು.
ಪ್ರಮುಖ ಶಕ್ತಿ ಕೇಂದ್ರಗಳಾದ ಬಳಸಮುದ್ರ, ತಿರುಮಣಿ, ಕ್ಯಾತಗಾನಚೆರ್ಲು, ವಲ್ಲೂರು ಮತ್ತು ರಾಯಚೆರ್ಲು ಕೇಂದ್ರಗಳಿಗೆ ಭೇಟಿ ನೀಡಿದರು.
ವಿದ್ಯುತ್ ಉತ್ಪಾದನೆ ಬಗ್ಗೆ ವಿದೇಶಿ ಪ್ರತಿನಿಧಿಗಳು ಕುತೂಹಲದಿಂದ ಸಂಪೂರ್ಣ ಮಾಹಿತಿ ಪಡೆದರು.
ವಿದೇಶಿಯರು ಭೇಟಿ ನೀಡುವ ಹಿನ್ನೆಲೆ , ತಾಲೂಕಿನ ರಸ್ತೆಗಳನ್ನು ತರಾತುರಿಯಲ್ಲಿ ತೇಪೆ ಹಚ್ಚುವ ಕೆಲಸವೂ ಸಹ ನಡೆಯಿತು.
ಸೋಲಾರ್ ಪಾರ್ಕಿಗೆ ಜಮೀನಿನಲ್ಲಿ ನಡೆದ ರೈತರಿಗೆ ಸರಿಯಾದ ಉದ್ಯೋಗ ಅವಕಾಶ ಒದಗಿಸಿಲ್ಲ ಎಂಬ ಕೂಗು ತಿರುಮಣಿ ಗ್ರಾಮದ ಜನರಲ್ಲಿ ಕೇಳಿ ಬರುತ್ತಿತ್ತು.
ವಿದೇಶಿ ಪ್ರವಾಸಿಗರನ್ನು ಕರೆತರಲು ಪ್ರವಾಸೋದ್ಯಮ ಇಲಾಖೆಯ ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ರುದ್ರಪ್ಪಯ್ಯ, ಕೆ ಎಸ್ ಪಿ ಡಿ ಸಿ ಎಲ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಕೆ.ಎಸ್ ಅಮರನಾಥ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಷಹಪುರ್ ವಾಡ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕೆ. ವಿದ್ಯಾಕುಮಾರ್, ಉಪ ವಿಭಾಗಾಧಿಕಾರಿ ರಿಷಿ ಆನಂದ್, ತಹಶೀಲ್ದಾರ್ ಡಿ.ಎನ್ ವರದರಾಜು, ಉಪ ತಹಶೀಲ್ದಾರ್ ಎನ್.ಮೂರ್ತಿ, ಕೆ.ಎಸ್.ಪಿ.ಡಿ.ಸಿ.ಎಲ್. ಕಾರ್ಯಪಾಲಕ ಎಂಜಿನಿಯರ್ ಪ್ರಕಾಶ್, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಆರ್. ಮಹೇಶ್, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಶಂಕರಮೂರ್ತಿ ಉಪಸ್ಥಿತರಿದ್ದರು.
ವರದಿ: ಶ್ರೀನಿವಾಸಲು ಎ