IMG 20230220 WA0048

ಮಧುಗಿರಿ: ಎರಡು ಸಾವಿರ ಕೋಟಿಯಷ್ಟು ಸಾಲಮನ್ನಾದ ಹಣ ಸರ್ಕಾರದಿಂದ ಡಿಸಿಸಿ ಬ್ಯಾಂಕಿಗೆ ಬಾಕಿ….!

DISTRICT NEWS ತುಮಕೂರು

ಮಧುಗಿರಿ : 2 ಸಾವಿರ ಕೋಟಿಯಷ್ಟು ಸಾಲಮನ್ನಾದ ಹಣ
ಸರ್ಕಾರದಿಂದ ಡಿಸಿಸಿ ಬ್ಯಾಂಕಿಗೆ ಇನ್ನೂ ಬರಬೇಕಿದೆ ಎಂದು ಮಾಜಿ
ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ
ಯಾಕಾರ್ಲಹಳ್ಳಿಯಲ್ಲಿ ಗ್ರಾಮದಲ್ಲಿ ಸ್ನೇಹ ಜೀವಿ ಬಳಗದ
ವತಿಯಿಂದ ಆಯೋಜಿಸಿದ್ದ ಜೆಡಿಎಸ್ ನಿಂದಕಾಂಗ್ರೆಸ್‍ಗೆ ಸೇರ್ಪಡೆ
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ. ಅವರು
ಜಿಲ್ಲೆಯ ರೈತರಿಗೆ ಮನ್ನಾವಾದ 53 ಕೋಟಿ ರೂಗಳು ಸಾಲ
ಮನ್ನಾದ ಹಣ ಬರಬೇಕಿದೆ. ಕೊಟ್ಟ ಸಾಲ ಸರ್ಕಾರ ನೀಡಿಲ್ಲ. ಅದು
ರೈತರ ಠೇವಣಿ ಹಣದಿಂದ ನೀಡಿದ್ದೇವೆ.
ಕಳೆದ ಅವಧಿಯಲ್ಲಿ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗೆ
ಸಾಕಷ್ಟು ಅನುದಾನ ತಂದಿದ್ದು ನನ್ನ ಅವಧಿ ಹಾಗೂ ಈಗಿನ
ಅವಧಿಯ ಅಭಿವೃದ್ಧಿಯ ಬಗ್ಗೆ ಜನತೆ ಪರಾಮರ್ಶೆ
ಮಾಡಿಕೊಂಡು ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ
ಮತ ಚಲಾಯಿಸಲಿ. ನನ್ನ ಅವಧಿಯಲ್ಲಿ ಕೊಡಿಗೇನಹಳ್ಳಿ
ಹೋಬಳಿಯ ಸರ್ವತೋಮುಖ ಅಭಿವೃದ್ಧಿ ಕಂಡಿತ್ತು. ಆದರೆ
ಇಲ್ಲಿಯವರೆವಿಗೂ ನಾನು ಮಾಡಿಸಿದ ರಸ್ತೆಗಳಲ್ಲಿನ
ಗುಂಡಿಗಳನ್ನು ಮುಚ್ಚಿಸಲು ಸಾಧ್ಯವಾಗುತ್ತಿಲ್ಲ.
ನೆರೆಯಿಂದ ಹಾನಿಗೊಳಗಾದವರಿಗೆ ಸರಕಾರದಿಂದ
ದೊರೆಯಬೇಕಾದ ಸೂಕ್ತ ಪರಿಹಾರ ದೊರಕಿಲ್ಲ. ಈ
ಗ್ರಾಮಕ್ಕೆ ನಾನು ರಸ್ತೆ ಮಾಡಿಸಿದ್ದು.ಕೋಟ್ಯಾಂತರ ಹಣ
ಸಾಲಸೌಲಭ್ಯ ನೀಡಿದ್ದೆ. ಆದರೆ 2018 ರಲ್ಲಿ ಜೆಡಿಎಸ್‍ಗೆ ಹೆಚ್ಚಿನ
ಬಹುಮತಗಳಿಸಿತ್ತು. ಈ ಬಾರಿ ಯಾವುದೇ ಆಮಿಷಗಳಿಗೆ
ಒಳಗಾಗಬೇಡಿ ಎಂದರ.
16ಸಾವಿರ ಕ್ಕೂ ಹೆಚ್ಚು ಮನೆಗಳನ್ನು ನಾನು ತಂದಿದ್ದೆ.
ಆದರೆ ಈ ಬಾರಿ 5 ಮನೆ ಬಂದಿಲ್ಲ. ನನ್ನನ್ನು ನಂಬಿ ಪಕ್ಷಕ್ಕೆ
ಬಂದಿರುವ ಗ್ರಾಮದ ಸ್ನೇಹಜೀವಿ ಗೆಳೆಯರ ಬಳಗದ
ನೂರಾರು ಯುವಕರ ಆಶಯದಂತೆ ಗ್ರಾಮದ

ಸರ್ವತೋಮುಖ ಅಭಿವೃದ್ಧಿಗೆ ಬದ್ಧನಾಗಿರುತ್ತೇನೆ .
ಮುಂದೆ ಶಾಸಕನಾದರೆ ಜಿಲ್ಲಾ ಕೇಂದ್ರ, ಕೆರೆಗಳಿಗೆ
ನೀರು, ಕ್ಷೇತ್ರದಲ್ಲೇ ಉದ್ಯೋಗ, ಬೆಟ್ಟವನ್ನು ಪ್ರವಾಸಿ
ತಾಣವಾಗಿಸುವುದರ ಜೊತೆಗೆ ಕ್ಷೇತ್ರವನ್ನು
ಮತ್ತೊಮ್ಮೆ ಸಮಗ್ರ ಅಭಿವೃದಿ ಗೊಳಿಸಲಾಗುವುದು.
ನುಡಿದಂತೆ ನಡೆಯುವ ಪಕ್ಷ ನಮ್ಮ ಕಾಂಗ್ರೆಸ್‍ಪಕ್ಷ . ನಮಗೆ ಅಧಿಕಾರ ನೀಡಿದ ಜನರಿಗೆ ನೀಡಿದ ಮಾತಿನಂತೆ
ನಡೆದುಕೊಳ್ಳುವುದು ಜನಪ್ರತಿನಿಧಿಯ ಕರ್ತವ್ಯ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಾಯಣರೆಡ್ಡಿ ಮಾತನಾಡಿ ಈ
ಗ್ರಾಮದ ಯುವಕರು ಹಿಂದಿನ ಚುನಾವಣೆಯಲ್ಲಿ ಜೆಡಿಎಸ್
ಪರವಾಗಿದ್ದು 250 ಹೆಚ್ಚು ಬಹುಮತ ನೀಡಿದ್ದರು. ಆದರೆ
ಅವರ ಭಾವನೆಗಳಿಗೆ ಶಾಸಕರು ಸ್ಪಂದಿಸದ ಕಾರಣ
ಮನನೊಂದು ಇಂದು ಕೆ.ಎನ್‍.ಆರ್ ಸಮ್ಮುಖದಲ್ಲಿಕಾಂಗ್ರೆಸ್‍ಗೆ
ಸೇರಿದ್ದಾರೆ. ಮುಂದೆ ಗ್ರಾಮಕ್ಕೆ ಒಳ್ಳೆಯ ಭವಿಷ್ಯವಿದ್ದು
ರಾಜಣ್ಣನವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸಮೂರ್ತಿ,
ಗ್ರಾ.ಪಂ.ಸದಸ್ಯ ನರಸೇಗೌಡ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ನರಸಿಂಹಮೂರ್ತಿ , ತಿಮ್ಮಾರೆಡ್ಡಿ , ನಂಜುಂಡರಾಜು , ಭಾಸ್ಕರ್ , ಶ್ರೀಧರ್ , ಸಿದ್ದಗಂಗಪ್ಪ,ಮೋಹನ್‍ರೆಡ್ಡಿ , ಜಯರಾಮರೆಡ್ಡಿ , ಸುರೇಶ್ , ಲಕ್ಷ್ಮೀನರಸೇಗೌಡ , ನವೀನ್ , ಲಕ್ಷ್ಮೀನಾರಾಯಣ್ , ವಿನೋದ್ , ರಾಮಚಂದ್ರಯ್ಯ , ಸೇರಿದಂತೆ ನೂರಾರು
ಗ್ರಾಮಸ್ಥರು ಜೆಡಿಎಸ್ ತೊರೆದು ಕಾಂಗ್ರೆಸ್‍ಗೆ
ಸೇರ್ಪಡೆಯಾದರು.

ವರದಿ. ಲಕ್ಷ್ಮಿಪತಿ ದೊಡ್ಡ ಯ ಲ್ಕೂರು