ಬೆಂಗಳೂರಿನಲ್ಲಿ ಐಸಿಐಸಿಐ ಲೊಂಬಾರ್ಡ್ ವಿಮಾ ಕಂಪೆನಿಯಿಂದ ರಸ್ತೆ ಸುರಕ್ಷತೆ ರ್ಯಾಲಿ, ರಸ್ತೆ ಸುರಕ್ಷತಾ ಕ್ರಮಗಳ ಅರಿವು ಮೂಡಿಸುವ ಗುರಿ
- ಮಕ್ಕಳು, ಪೋಷಕರು ಮತ್ತು ಟ್ರಾಫಿಕ್ ಪೊಲೀಸರಿಗೆ 300ಕ್ಕೂ ಹೆಚ್ಚು ಹೆಲ್ಮೆಟ್‌ಗಳ ವಿತರಣೆ
ಬೆಂಗಳೂರು, ಫೆಬ್ರುವರಿ 24- ಖಾಸಗಿ ವಿಮಾ ಕ್ಷೇತ್ರದ ಐಸಿಐಸಿಐ ಲೊಂಬಾರ್ಡ್ ತನ್ನ ಔದ್ಯಮಿಕ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್) ಇಂದು ರಸ್ತೆ ಸುರಕ್ಷತೆಯ ಮಹತ್ವ ಸಾರಲು ರ್ಯಾಲಿಯನ್ನು ಆಯೋಜಿಸಿತು.
ಮಾಕಳಿಯ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ನೆಲಮಂಗಲ ಡಿವೈಎಸ್‌ಪಿ ಕೆ.ಸಿ. ಗೌತಮ್ ಅವರು ರ್ಯಾಲಿಗೆ ಚಾಲನೆ ನೀಡಿದರು. ಐಸಿಐಸಿಐ ಲೊಂಬಾರ್ಡ್‌ನ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಕ್ಕಳಿಗೆ ಹೆಲ್ಮೆಟ್ ಹಾಕದೆಯೇ ದ್ವಿಚಕ್ರ ವಾಹನಗಳ ಹಿಂದೆ ಕೂರಿಸಿಕೊಂಡು ಹೋಗುವುದರಿಂದಾಗುವ ಅಪಾಯದ ಬಗ್ಗೆ ತಿಳಿವಳಿಕೆ ನೀಡುವುದು ರ್ಯಾಲಿಯ ಉದ್ಧೇಶವಾಗಿತ್ತು. ಸುತ್ತಮುತ್ತಲಿನ ಶಾಲೆಗಳ ಸುಮಾರು 300 ಮಂದಿ ಮಕ್ಕಳು ತಮ್ಮ ಪೋಷಕರೊಂದಿಗೆ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಎಲ್ಲರಿಗೂ ಗುಣಮಟ್ಟದ ಹೆಲ್ಮೆಟ್ ಕೊಡುಗೆಯಾಗಿ ನೀಡಿ ಹಿಂದಿನ ಸವಾರರು ಮಕ್ಕಳಾಗಿದ್ದರೂ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕೆಂದು ತಿಳಿಹೇಳಲಾಯಿತು. ಪೋಷಕರಲ್ಲಿ ಈ ಕುರಿತು ಅರಿವು ಮೂಡಿಸಲು ಐಸಿಐಸಿಐ ಲೊಂಬಾರ್ಡ್ ನೇರವಾಗಿ ಅವರನ್ನು ಸಂಪರ್ಕಿಸುವ ಮತ್ತು ಹೆಲ್ಮೆಟ್ ಕೊಡುಗೆಯಾಗಿ ನೀಡುವ ಮೂಲಕ ಅವರ ನಡವಳಿಕೆಗಳಲ್ಲಿ ಬದಲಾವಣೆ ತರುವ ಉದ್ದೇಶ ಹೊಂದಿದೆ.
ಐಸಿಐಸಿಐ ಲೊಂಬಾರ್ಡ್ 2015ರ ಸೆಪ್ಟೆಂಬರ್‌ನಲ್ಲಿ ರಸ್ತೆ ಸುರಕ್ಷತೆಯ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದು ಇದುವರೆಗೆ 2,75,000 ಮಂದಿಯನ್ನು ತಲುಪಿದೆ. ಇದುವರೆಗೆ ಕಂಪೆನಿ 1,68,000 ಹೆಲ್ಮೆಟ್‌ಗಳನ್ನು ಉಚಿತವಾಗಿ ವಿತರಿಸಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹೆಲ್ಮೆಟ್‌ಗಳನ್ನು ವಿತರಿಸುವ ಗುರಿ ಹೊಂದಿದೆ.
ಐಆರ್‌ಡಿಎ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಐಸಿಐಸಿಐ ಲೊಂಬಾರ್ಡ್ ತನ್ನ ಸಿಎಸ್‌ಆರ್ ಚಟುವಟಿಕೆಗಳ ಮೂಲಕ ವಿಮೆಯ ಅಗತ್ಯತೆಯ ಅರಿವು ಮೂಡಿಸಲು ಬದ್ಧವಾಗಿದ್ದು, ತನ್ನ ʼನಿಭಾಯೇ ವಾದೆʼ ವಾಗ್ದಾನವನ್ನು ನೆರವೇರಿಸಲು ಮುಂದಾಗಿದೆ.