Screenshot 2023 02 26 21 41 27 737 com.google.android.apps .nbu .files

ಬೆಂಗಳೂರು:ಬ್ರಿಲ್ಲಿಕಾ ಐಷಾರಾಮಿ ಲೈಟಿಂಗ್ ಮಳಿಗೆ ಆರಂಭ…!

BUSINESS


ನಮ್ಮ ಬೆಂಗಳೂರಿನಲ್ಲಿ ಬ್ರಿಲ್ಲಿಕಾ ತನ್ನ ಮೊದಲ ಅತ್ಯಂತ ದೊಡ್ಡ ಐಷಾರಾಮಿ ಲೈಟಿಂಗ್ ಮಳಿಗೆ ಪ್ರಾರಂಭ 4600 ಚದರ ಅಡಿ ವಿಸ್ತೀರ್ಣದ ಅತ್ಯಂತ ದೊಡ್ಡ ಮಳಿಗೆ

ಬೆಂಗಳೂರು, ಫೆಬ್ರವರಿ 26, 2023: ದಕ್ಷಿಣ ಭಾರತದ ಅತ್ಯಂತ ದೊಡ್ಡ ಐಷಾರಾಮಿ ಲೈಟಿಂಗ್ ಬ್ರಾಂಡ್‌ಗಳಲ್ಲಿ ಒಂದಾದ ಬ್ರಿಲ್ಲಿಕಾ ನಮ್ಮ ಬೆಂಗಳೂರಿನಲ್ಲಿ ತನ್ನ ಮೊದಲ ಫ್ಲಾಗ್‌ಶಿಪ್ ಶೋರೂಂ ಅನ್ನು ಇಂದು ಪ್ರಾರಂಭಿಸಿದೆ. ಈ ಮಳಿಗೆಯು ಬ್ರಿಲ್ಲಿಕಾ ಲೈಟ್ಸ್, ನೆಲಮಹಡಿ, #೨೧, ಐಟಿಸಿ ಗಾರ್ಡೆನಿಯಾ ಹೋಟೆಲ್ ಎದುರು, ರಿಚ್‌ಮಂಡ್ ಸರ್ಕಲ್, ಬೆಂಗಳೂರು- ೫೬೦೦೨೭ ಇಲ್ಲಿದ್ದು ನಗರದ ಅತ್ಯಂತ ಐಷಾರಾಮಿ ಲೈಟಿಂಗ್ ಮಳಿಗೆಯಾಗಿದ್ದು 4600 ಚದರ ಅಡಿಗೂ ಹೆಚ್ಚು ವಿಸ್ತೀರ್ಣ ಹೊಂದಿದೆ. ಬೆಂಗಳೂರಿನ ಜನರಿಗೆ ಅತ್ಯಂತ ವಿಸ್ತಾರ ಶ್ರೇಣಿಯ ಐಷಾರಾಮಿ ಲೈಟಿಂಗ್ ವಿನ್ಯಾಸಗಳು ಮತ್ತು ಪರಿಹಾರಗಳ ಶ್ರೇಣಿಯ ಅನುಭವ ಪಡೆದುಕೊಳ್ಳಲು ಮತ್ತು ಸಾವಿರಾರು ಸಾಧ್ಯತೆಗಳನ್ನು ಸ್ವತಃ ಕಾಣಲು ಆಹ್ವಾನಿಸಲಾಗುತ್ತಿದೆ.

ಬ್ರಿಲ್ಲಿಕಾದ ಸಿಇಒ ಶ್ರೀ ಮೋಹಿತ್ ಅಗರ್‌ವಾಲ್, “ಹೈದರಾಬಾದ್‌ನಲ್ಲಿ ನಮ್ಮ ಯಶಸ್ವಿ ಬಿಡುಗಡೆಯ ನಂತರ ನಾವು ಬೆಂಗಳೂರಿನಲ್ಲಿ ನಮ್ಮ ವ್ಯಾಪ್ತಿಯನ್ನು ವಿಸ್ತರಿಸಲು ಬಹಳ ವಿಶ್ವಾಸ ಹೊಂದಿದ್ದೇವೆ. ಬ್ರಿಲ್ಲಿಕಾದ ಪರಿಣಿತಿಯ ಪ್ರಮುಖ ವಿಶೇಷತೆಯು ಕೈಗೆಟುಕುವ ವಿನ್ಯಾಸವು ಬೆಂಗಳೂರು ಗ್ರಾಹಕರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸದಲ್ಲಿದ್ದೇವೆ. ಈ ಹೊಸ ಮಳಿಗೆಯು ಕಂಪನಿಯ ಪ್ರಗತಿಯಲ್ಲಿ ಅತ್ಯಂತ ಮುಖ್ಯ ಕೊಡುಗೆಯಾಗಲಿದೆ” ಎಂದರು.

ಬ್ರಿಲ್ಲಿಕಾ ಹಲವು ವರ್ಷಗಳ ಶ್ರೇಷ್ಠತೆಯ ಪರಂಪರೆ ಹೊಂದಿದ್ದು ಹೈದರಾಬಾದ್ ಮತ್ತು ಬೆಂಗಳೂರಿನ ನಮ್ಮ ಐಷಾರಾಮಿ ಲೈಟಿಂಗ್ ಮಳಿಗೆಗಳು ಸರಿಸಾಟಿ ಇರದ ಡಿಸೈನರ್ ಲೈಟಿಂಗ್ ಪರಿಹಾರಗಳನ್ನು ಒದಗಿಸುತ್ತವೆ. ನಾವು ವಿಶೇಷವಾದ ಶಾಂಡೆಲಿಯರ್‌ಗಳು, ದೀಪಗಳು ಮತ್ತಿತರೆ ಸ್ಟೆöÊಲ್ ಮತ್ತು ಕಾರ್ಯಕ್ಷಮತೆ ಸಂಯೋಜಿಸುವ ಲೈಟಿಂಗ್ ಫಿಕ್ಸ್ಚರ್‌ಗಳಿಗೆ ಖ್ಯಾತಿ ಪಡೆದಿದ್ದೇವೆ. ನಾವು ನಮ್ಮ ಗ್ರಾಹಕರ ವಿಶಿಷ್ಟ ಅಗತ್ಯಗಳು ಮತ್ತು ಆದ್ಯತೆಗಳಿಗೆ ಅನುಗುಣವಾಗಿ ವೈಯಕ್ತಿಕಗೊಳಿಸಿದ ಶಾಪಿಂಗ್ ಅನುಭವವನ್ನು ಪೂರೈಸುತ್ತೇವೆ. ಲೈಟಿಂಗ್ ಉದ್ಯಮದಲ್ಲಿ ವಿಶ್ವಾಸಾರ್ಹ ಹೆಸರಾಗಿ ನಮಗೆ ಪ್ರತಿಯೊಂದು ಯೋಜನೆಯಲ್ಲೂ ಗುಣಮಟ್ಟ, ಆವಿಷ್ಕಾರ ಮತ್ತು ಅತ್ಯಾಧುನಿಕತೆ ತರುವ ಪ್ರತಿಷ್ಠೆ ಇದೆ.