ಬೆಂಗಳೂರಿಗೆ ಬೆಂಕಿ: ಗಲಭೆಗೆ ಕಾರಣರಾದ 110 ಜನರ ಬಂಧನ.ಮೂವರು ಬಲಿ, 144 ಸೆಕ್ಷನ್ ಜಾರಿ
ATM- ಅಂಗಡಿ ಧ್ವಂಸ: ಪಕ್ಕಾ ಪ್ಲಾನ್ ಮಾಡಿ ದಾಳಿ
ಪೈಗಂಬರ್ ಅವಹೇಳನ ಆರೋಪ: ಡಿಜೆಹಳ್ಳಿ, ಕೆಜೆಹಳ್ಳಿ ಗಲಭೆ ಪೂರ್ವ ನಿಯೋಜಿತ ಕೃತ್ಯ?
ಬೆಂಗಳೂರು : ಮಂಗಳವಾರ ರಾತ್ರಿ ಬೆಂಗಳೂರು ನಗರದ ಡಿ ಜೆ ಹಳ್ಳಿ, ಕೆ ಜಿ ಹಳ್ಳಿ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಗಲಭೆ ನಡೆದಿದೆ.
ರಾಜ್ಯ ದಲ್ಲಿ ಒಂದೆಡೆ ಕೊರೋನಾ ದಿಂದ ತತ್ರರ ಜೊತೆಗೆ ಮತ್ತೊಂದೆಡೆ ವರುಣನ ಅವಕೃಪೆಗೆ ಒಳಗಾಗಿ ಜನ ಸಂಕಷ್ಟ ದಲ್ಲಿ ರುವ ಇಂತಹ ಸಂಧರ್ಭದಲ್ಲಿ ಬೆಂಗಳೂರಿನಲ್ಲಿ ನೆಡೆದಿರುವ ಘಟನೆ ನಿಜಕ್ಕೂ ನಾಚಿಕೆಯ ಈಡಾಗುವ ಸಂಗತಿ.
ಶಾಸಕ ಅಖಂಡ ಶ್ರೀನಿವಾಸ್ ಅವರ ಸಂಬಂಧಿ ನವೀನ್ ಸಾಮಾಜಿಕ ತಾಣ ದಲ್ಲಿ ಮಹಮದ್ ಪೈಗಂಬರ್ ಬಗ್ಗೆ ಅವಹೇನಕಾರಿ ಪೋಸ್ಟ್ ಮಾಡಿದ್ದರಿಂದ ಈ ಘಟನೆ ಗೆ ಕಾರಣ ಎನ್ನಲಾಗುತ್ತಿದೆ.
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆ, ಕಛೇರಿ ಗಳ ಜೊತೆಗೆ ಅವರ ಅಕ್ಕ ಜಯಂತಿ ಅವರ ಮನೆಯ ಮೇಲು ಗಲಭೆ ಕೋರರು ದಾಳಿ ಮಾಡಿದ್ದಾರೆ.
ಸಾಕ್ಷಿನಾಶ: ಪಕ್ಕಾ ಪ್ಲಾನ್ ಮಾಡಿ ಗಲಭೆ ಮಾಡಿರುವ ದುಷ್ಕರ್ಮಿಗಳು
ಕೆ ಜೆ ಹಳ್ಳಿ, ಡಿ ಜೆ ಹಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಗಲಭೆ ಮಾಡಿರುವ ದುಷ್ಕರ್ಮಿಗಳು, ಗಲಭೆಯಲ್ಲಿ ಭಾಗಿಯಾದವರು ಪಕ್ಕಾ ಪ್ಲಾನ್ ಮಾಡಿ ಬೀದಿ ದೀಪ, ರಸ್ತೆ, ಮತ್ತು ಅಂಗಡಿಗಳ ,ಮನೆಗಳ ಮುಂದೆ ಇದ್ದ ಹಲವು ಸಿಸಿ ಟಿವಿಗಳನ್ನು ಧ್ವಂಸ ಗೋಳಿಸಿದ್ದಾರೆ. ಸಾಕ್ಷಿ ನಾಶ ಮಾಡಿ ಗಲಭೆ ಮಾಡಿದ್ದಾರೆ.
ATM- ಅಂಗಡಿ ಧ್ವಂಸ:
ಪೋಲಿಸ್ ಠಾಣೆಯ ಮೇಲು ದಾಳಿ ಮಾಡಿರುವ , ದಾಳಿ ಕೊರರು ಒಂದು ಕೋಮಿಗೆ ಸೇರಿದ ಅಂಗಡಿಗಳ ಮೇಲೆ ದಾಳಿ ಮಾಡಿರುವುದರ ಜೊತೆಗೆ ಬಾಟಲ್, ಕಲ್ಲು, ಬೆಂಕಿ ಹಚ್ಚಲು ಪೂರ್ವ ತಯಾರಿಯೊಂದಿಗೆ ಬಂದಿದ್ದು. ಹಲವು ಅನುಮಾನಗಳಿಗೆ ಕಾರಣವಾಗಿದೆ.
ಗಲಭೆ ಪ್ರಚೋದನೆ ನೀಡಿರುವ ಆರೋಪದ ಮೇಲೆ SDPI ಲೋಕಲ್ ನಾಯಕ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ನವೀನ್ ರನ್ನು ಪೋಲಿಸರು ಬಂಧಿಸಿದ್ದಾರೆ.
ಪೋಲೀಸ್ ಠಾಣೆ, ಶಾಸಕರ ಮೇಲೆ ದಾಳಿಯ ಹಿಂದೆ ಯಾರೊ ಪ್ರುಮುಖ ವ್ಯಕ್ತಿ, ಸಂಘಟನೆ ಪ್ರೇರಣೆ ಇಲ್ಲದೆ ನೆಡೆಯಲು ಸಾಧ್ಯವಿಲ್ಲ ಎನ್ನುವ ಅನುಮಾನ ಪೋಲಿಸ್ ವಲಯ ಕೇಳಿಬರುತ್ತಿದ್ದು ಪತ್ತೆ ಅಚ್ಚುವ ಕೆಲಸದಲ್ಲಿ ನಿರತರಾಗಿದ್ದಾರೆ ಆರಕ್ಷಕರು.
ಮುಖ್ಯಮಂತ್ರಿ ಗಳ ಟ್ವೀಟ್
ಡಿ.ಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಿಡಿಗೇಡಿಗಳು ಶಾಸಕ ಅಖಂಡ ಶ್ರೀನಿವಾಸ ಅವರ ಮನೆ ಹಾಗು ಪೋಲೀಸ್ ಠಾಣೆ ಮೇಲೆ ದಾಳಿ, ಗಲಭೆ ನಡೆಸಿರುವುದು ಖಂಡನೀಯ. ಈಗಾಗಲೇ ದುಷ್ಕರ್ಮಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದ್ದು ಸರ್ಕಾರ ದಾಂಧಲೆ ಹತ್ತಿಕ್ಕಲು ಎಲ್ಲ ರೀತಿಯ ಕ್ರಮ ಕೈಗೊಂಡಿದೆ. (1/2)
ನಿನ್ನೆ ರಾತ್ರಿ ನಡೆದ ಗಲಭೆಯಲ್ಲಿ ಪತ್ರಕರ್ತರು, ಪೋಲೀಸರು, ಸಾರ್ವಜನಿಕರ ಮೇಲೆ ಹಲ್ಲೆ ಮಾಡಿರುವುದು ಅಕ್ಷಮ್ಯ. ಇಂತಹ ಪ್ರಚೋದನೆ, ಪುಂಡಾಟಗಳನ್ನು ಸರ್ಕಾರ ಕಿಂಚಿತ್ತೂ ಸಹಿಸುವುದಿಲ್ಲ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ನಿಶ್ಚಿತ. ಜನರು ಈ ಸಂದರ್ಭದಲ್ಲಿ ಆವೇಶಕ್ಕೆ ಒಳಗಾಗದೆ ಸಂಯಮದಿಂದ ವರ್ತಿಸಬೇಕೆಂದು ಮನವಿ ಮಾಡುತ್ತೇನೆ. (2/2)
ಬೆಂಗಳೂರು ಪೋಲಿಸ್ ಆಯುಕ್ತರ ಟ್ವೀಟ್
ಡಿ.ಜೆ ಹಳ್ಳಿ ಘಟನೆಗೆ ಸಂಬಂಧಿಸಿದಂತೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪಿ ನವೀನ್ ನನ್ನು ದಸ್ತಗಿರಿ ಮಾಡಲಾಗಿದೆ. ಜೊತೆಗೆ ಬೆಂಕಿ ಹಚ್ಚಿದ, ಕಲ್ಲು ತೂರಾಟ ನಡೆಸಿದ, ಪೊಲೀಸರ ಮೇಲೆ ಹಲ್ಲೆ ನಡೆಸಿದ ಇತರೆ 110 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ನಗರದಲ್ಲಿ ಶಾಂತಿ ಕಾಪಾಡಲು ಎಲ್ಲರೂ ಪೊಲೀಸರೊಂದಿಗೆ ಸಹಕರಿಸಬೇಕಾಗಿ ವಿನಂತಿ.