IMG 20230703 WA0091

ವಿಧಾನಸಭೆ :ಸಮಾಜದ ಎಲ್ಲ ವರ್ಗಗಳ ಜನರ ಅಭಿವೃದ್ಧಿ ಗೆ ಸರ್ಕಾರ ಬದ್ಧ…!

POLATICAL STATE

ಸಮಾಜದ ಎಲ್ಲ ವರ್ಗಗಳ ಜನರ ಅಭಿವೃದ್ಧಿ ಮತ್ತು ನೆಮ್ಮದಿಯ ಕಡೆಗೆ ಮುನ್ನಡೆಸಲು ಸರ್ಕಾರ ಬದ್ಧ: ರಾಜ್ಯಪಾಲರು

ಬೆಂಗಳೂರು, ಜುಲೈ 03, (ಕರ್ನಾಟಕ ವಾರ್ತೆ) :
 ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವಿಧಾನ ಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದ್ದಾರೆ.
ಬೆಳಿಗ್ಗೆ ವಿಧಾನಸೌಧದ ಮುಖ್ಯ ದ್ವಾರಕ್ಕೆ ಆಗಮಿಸಿದ ರಾಜ್ಯಪಾಲರನ್ನು ಸಭಾಧ್ಯಕ್ಷರಾದ ಯು.ಟಿ ಖಾದರ್, ಸಭಾಪತಿಗಳಾದ ಬಸವರಾಜ್ ಹೊರಟ್ಟಿ. ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಮಾಡಿಕೊಂಡರು.

IMG 20230703 WA0093

ಕರ್ನಾಟಕ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಎಲ್ಲರನ್ನೂ ಸ್ವಾಗತಿಸಿದ ರಾಜ್ಯಪಾಲರು, “ಹೊಸಭರವಸೆ, ಹೊಸಕನಸುಗಳನ್ನು ಹೊತ್ತು ವಿಧಾನಸಭೆಗೆ ಆಗಮಿಸಿರುವ ತಮ್ಮೆಲ್ಲರಿಗೂ ಕರ್ನಾಟಕ ವಿಧಾನಮಂಡಲದ ಈ ಜಂಟಿ ಅಧಿವೇಶನಕ್ಕೆ ಹೃತ್ಪರ್ವಕ ಸ್ವಾಗತಕೋರುತ್ತೇನೆ. ಹೊಸ ಸರ್ಕಾರವೊಂದನ್ನು ಆರಿಸುವಾಗ ಜನರ ನಿರೀಕ್ಷೆಗಳೂ ಹೊಸತಾಗಿರುತ್ತವೆ. ಹಳೆಯದಕ್ಕಿಂತ ಭಿನ್ನವಾದ ಮತ್ತು ತಮ್ಮ ಆಶೋತ್ತರಗಳನ್ನು ಪ್ರತಿಬಿಂಬಿಸುವ ಆಡಳಿತವೊಂದನ್ನು ಅವರು ನಿರೀಕ್ಷಿಸುತ್ತಿರುತ್ತಾರೆ. ಕಳೆದ 34 ವರ್ಷಗಳಲ್ಲಿ ಯಾರಿಗೂ ನೀಡದ ಬಹುಮತದೊಂದಿಗೆ ಈ ಸರ್ಕಾರವನ್ನು ಜನರು ಆಯ್ಕೆಮಾಡಿದ್ದಾರೆ. ಅಂದರೆ ಅವರು ಈ ನಿರ್ಣಾಯಕವಾದ ತೀರ್ಪಿನ ಮೂಲಕ ಮಹತ್ತರವಾದುದನ್ನೆ ನಿರೀಕ್ಷಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಅವರನಿರೀಕ್ಷೆಯನ್ನು ಹುಸಿಗೊಳಿಸದೆ ಇರಲು ಸರ್ಕಾರ ಬಸವಣ್ಣನವರ ದೀಕ್ಷಾ ವಾಕ್ಯವಾದ ‘ನುಡಿದಂತೆ ನಡೆಯಬೇಕು’ ಎಂಬುದನ್ನು ಕರ್ತವ್ಯ ಗೀತೆಯಾಗಿ ಅಳವಡಿಸಿಕೊಂಡಿದೆ ಎಂದರು.

ಜನಪರ ಆಡಳಿತದ ಅನನ್ಯ ಮತ್ತು ಅನುಕರಣೀಯವಾದ ಹಲವು ಮಾದರಿಗಳನ್ನು ಆವಿಷ್ಕರಿಸಿದ ಖ್ಯಾತಿ ಕರ್ನಾಟಕಕ್ಕೆಇದೆ. ಈ ಸರ್ಕಾರವನ್ನು ಅಧಿಕಾರಕ್ಕೆ ತಂದಿರುವ ಜನಾದೇಶದ ಸಂದೇಶವೂ ಅದುವೇ ಆಗಿದೆ. ಜನಪರ ಆಡಳಿತ ನೀತಿಗಳನ್ನು ಆವಿಷ್ಕರಿಸುವ ಮತ್ತು ಅಳವಡಿಸಿಕೊಳ್ಳುವ ಮಹಾಪರಂಪರೆಯ ವಾರಸುದಾರನಾಗಲು ನನ್ನ ಸರ್ಕಾರವು ಪಣತೊಡುತ್ತಿದೆ ಎಂದು ಹೇಳಿದರು.

ಮುಂದಿನ ಐದು ವರ್ಷಗಳಲ್ಲಿ ನನ್ನ ಸರ್ಕಾರವು ಜನಕೇಂದ್ರಿತವಾದ ಆರ್ಥಿಕತೆಗೆ ಒತ್ತು ನೀಡುತ್ತದೆ. ಇದರ ಮೂಲಕ ಸಾಮಾಜಿಕವಾಗಿ ಎಲ್ಲರನ್ನೂ ಒಳಗೊಳ್ಳುವ ಮತ್ತು ಸಾಂಸ್ಕøತಿಕವಾಗಿ ಚೈತನ್ಯರೂಪಿಯಾದ ಆರ್ಥಿಕ ಶಕ್ತಿಯಾಗಿ ಕರ್ನಾಟಕ ಹೊರ ಹೊಮ್ಮುವಂತೆ ಮಾಡುವುದು ನನ್ನ ಸರ್ಕಾರದ ಗುರಿಯಾಗಿದೆ. ಜಾತಿ-ಧರ್ಮಗಳ ಬೇಧದ ವಿರುದ್ಧ ಮೊದಲಿನಿಂದಲೂ ಜೀವಪರ ಸೆಲೆಯನ್ನು ಚಿಮ್ಮುತ್ತಾ ಬಂದಿದ. ಕರ್ನಾಟಕದ ಮೊದಲ ಲಭ್ಯ ಕೃತಿ ಕವಿರಾಜಮಾರ್ಗದಲ್ಲಿ ಕವಿ ಶ್ರೀವಿಜಯ `ಪರ ವಿಚಾರಗಳನ್ನು, ಪರ ಧರ್ಮಗಳನ್ನು, ಪರ ಬದುಕಿನ ನೀತಿಗಳನ್ನು ಗೌರವಿಸುವುದೇ ನಿಜವಾದ ಬಂಗಾರದ ಒಡವೆ; ಎಂದು ಹೇಳಿದ್ದಾರೆ. ಆನಂತರ ಕನ್ನಡದ ಆದಿಕವಿ ಪಂಪ ‘ಮನುಷ ಜಾತಿ ತಾನೊಂದೆ ವಲಂ ಅಂದರೆ ಇಡೀ ಮನುಷ್ಯ ಸಂಕುಲವೇ ಒಂದು’ ಎಂದು ಹೇಳಿದ್ದಾರೆ. ಕರ್ನಾಟಕತ್ವದ ಸಾಂಸ್ಕೃತಿಕ ಚಹರೆಗಳನ್ನು ರೂಪಿಸಿದ ರಾಷ್ಟ್ರಕವಿ ಕುವೆಂಪು ಅವರು ಇದನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ ಎನ್ನುವವರೆಗೆ ಈ ನೆಲವು ಹಾದು ಬಂದ ರೀತಿಯನ್ನು ನಾವಿಲ್ಲಿ ಸ್ಮರಿಸಬೇಕು. ಕರ್ನಾಟಕದ ಜನರು ಈ ಸರ್ಕಾರದಿಂದ ಅದಕ್ಕೆ ಪೂರಕವಾದ ಆಡಳಿತವನ್ನೇ ಬಯಸಿದ್ದಾರೆ ಎಂದು ತಿಳಿಸಿದರು.

ಸಾರ್ವಜನಿಕವಾಗಿ ಸಂವಿಧಾನ ಬದ್ಧವಾದ, ಶಾಂತಿ ಮತ್ತು ಪ್ರೇಮಭಾವದಿಂದ ಇರಲು ಬೇಕಾದ ಮನೋಭಾವವನ್ನು ಎಲ್ಲರಲ್ಲೂ ತರಲು ನಾವು ಪುಯತ್ನಿಸುತ್ತೇವೆ. ಮುಂದಿನ ಐದು ವರ್ಷಗಳಲ್ಲಿ ಬುದ್ಧ, ಬಸವ, ನಾರಾಯಣಗುರು, ಬಾಬಾಸಾಹೇಬ್ ಅಂಬೇಡ್ಕರ್, ಕುವೆಂಪುರವರಂತಹವರು ಕನಸು ಕಂಡಿದ್ದ ಸಮ ಸಮಾಜ ನಿರ್ಮಾಣ ಮಾಡುವುದಕ್ಕೆ ನಾವು ಪ್ರಾಮಾಣಿಕ ಪುಯತ್ನ ಮಾಡುತ್ತೇವೆ ಎಂದರು.

IMG 20230703 WA0058

ಸಂಕುಚಿತವಾದಿ ಮನಸ್ಸುಗಳು ಗಂಡು-ಹೆಣ್ಣುಗಳ ನಡುವೆ ಹಾಗೂ ಸಮಾಜದ ವಿವಿಧ ಸಮುದಾಯಗಳ ನಡುವೆ ತಾರತಮ್ಯ, ಒಡಕುಗಳನ್ನು ಸೃಷ್ಟಿಸಿತ್ತು. ಸಮಾಜದ ವಿವಿಧ ಪದರಗಳಲ್ಲಿ ಈ ರೀತಿಯ ಮನಸ್ಥಿತಿಯ ಅವಶೇಷಗಳು ಇನ್ನೂ ಜೀವಂತವಾಗಿ ಉಳಿದುಕೊಂಡಿವೆ. ಅದಕ್ಕೆ ವಿರುದ್ಧವಾಗಿಯೇ ಬಾಬಾಸಾಹೇಬ್ ಅಂಬೇಡ್ಕರವರ ನೇತೃತ್ವದಲ್ಲಿ ಸಂವಿಧಾನ ರಚನೆಯಾಯಿತು. ಸಂವಿಧಾನವು ತೋರಿಸಿರುವ ದಾರಿಯಲ್ಲಿ ನಡೆದು ಸಮಾಜದ ಎಲ್ಲ ವರ್ಗಗಳ ಜನರನ್ನು ಅಭಿವೃದ್ಧಿ ಮತ್ತು ನೆಮ್ಮದಿಯ ಕಡೆಗೆ ಮುನ್ನಡೆಸಲು ನನ್ನ ಸರ್ಕಾರವು ಬದ್ಧವಾಗಿದೆ. ದ್ವೇಷರಹಿತ, ಪ್ರೀತಿಯುಕ್ತ ಸಮಾಜವನ್ನು ನಿರ್ಮಾಣ ಮಾಡಲು ಈ ಸರ್ಕಾರವು ಹಲವು ಬಗೆಯ ಕ್ರಮಗಳನ್ನು ಕೈಗೊಳ್ಳಲಿದೆ.

ಇಂದು ರಾಜ್ಯಗಳ ವಿತ್ತೀಯ, ಆಡಳಿತಾತ್ಮಕ ಮತ್ತು ಶಾಸನಾತ್ಮಕ ಸ್ವಾಯತ್ತತೆಗಳನ್ನು ಸಮರ್ಥವಾಗಿ ಬಲಪಡಿಸಬೇಕಾಗಿದೆ. ಇವೆಲ್ಲದರ ಪರಿಣಾಮವಾಗಿ ಒಮ್ಮೆ ಇಡೀ ದೇಶದಲ್ಲಿ ತಲೆಯೆತ್ತಿ ನಿಂತಿದ್ದ, ದೇಶದ ಬೊಕ್ಕಸಕ್ಕೆ ಅಪಾರ ಕೊಡುಗೆ ನೀಡುತ್ತಿರುವ ಈ ರಾಜ್ಯವು ಒಂದು ರೀತಿಯ ಸಂಕಟದ ಸ್ಥಿತಿಯಲ್ಲಿ ನಿಂತುಬಿಟ್ಟಿದೆ. ಈ ಆರ್ಥಿಕ ಸ್ಥಿತಿಯಿಂದ ಕರ್ನಾಟಕವನ್ನು ಮೇಲೆತ್ತುವುದು ನನ್ನ ಸರ್ಕಾರದ ಆದ್ಯತೆಯಾಗಲಿದೆ. ರಾಜ್ಯದ ಜನ ಕಲ್ಯಾಣ ಮತ್ತು ಆರ್ಥಿಕ ಸ್ಥಿತಿ ಎರಡನ್ನೂ ಸಮತೂಕದಲ್ಲಿ ನಿಭಾಯಿಸಿ ಕರ್ನಾಟಕದ್ದೇ ಆದ ಹೊಸ ಆಡಳಿತ ಮಾದರಿಯನ್ನು ನನ್ನ ಸರ್ಕಾರ ದೇಶಕ್ಕೆ ಪರಿಚಯಿಸಲಿದೆ ಎಂದು ತಿಳಿಸಿದರು.

ಅನ್ನವನ್ನು ನೀಡುವುದು ನನ್ನಿಯನು ನುಡಿಯುವುದು, ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ ಎಂದು ಕನ್ನಡದ ಕವಿ ಸರ್ವಜ್ಞ ಹೇಳಿದ್ದಾರೆ, ನನ್ನ ಸರ್ಕಾರ ಐದು ಗ್ಯಾರಂಟಿಗಳ ಮೂಲಕ ಸಾಧಿಸಲು ಹೊರಟಿರುವುದೂ ಇದನ್ನೇ. ಅದರ ಅನುμÁ್ಠನವನ್ನು ಶ್ರದ್ಧೆ ಮತ್ತು ನೈಜವಾದ ಕಾಳಜಿಗಳಿಂದ ಪ್ರಾರಂಭಿಸಿದ್ದೇವೆ. ಆಹಾರ ಭದ್ರತೆ ಕಾಯ್ದೆಯ ಅಡಿಯಲ್ಲಿ ಪುಸ್ತುತ 5 ಕೆಜಿ ಅಕ್ಕಿಯನ್ನು ಕೊಡಲಾಗುತ್ತಿದೆ. ಇದರ ಜೊತೆಗೆ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ರಾಜ್ಯದ ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬದ ಪ್ರತಿ ಸದಸ್ಯರಿಗೆ ಹೆಚ್ಚುವರಿಯಾಗಿ 5 ಕೆ.ಜಿ ಅಕ್ಕಿಯನ್ನು ಪ್ರತಿ ತಿಂಗಳು ಉಚಿತವಾಗಿ ಕೊಡಲು ತಕ್ಷಣದಿಂದಲೇ ಪ್ರಾರಂಭಿಸುತ್ತಿದ್ದೇವೆ. ಇದರ ಮೂಲಕ ಪ್ರತಿ ತಿಂಗಳು 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುವ ಮೂಲಕ ಹಸಿವು ಮುಕ್ತ ನಾಡನ್ನು ಕಟ್ಟಲು ನಾವು ಬದ್ಧರಾಗಿದ್ದೇವೆ. ತಕ್ಷಣದಿಂದಲೇ ಈ ಯೋಜನೆಯನ್ನು ಪ್ರಾರಂಭಿಸುತ್ತಿರುವುದರಿಂದ ಅಗತ್ಯವಿರುವ ಹೆಚ್ಚುವರಿ ಅಕ್ಕಿ ದೊರೆಯುವವರೆಗೆ ಪ್ರತಿ ತಿಂಗಳು, ಬಡತನ ರೇಖೆಗಿಂತ ಕೆಳಗೆ ಇರುವ ಪ್ರತಿ ಕುಟುಂಬದ ಪ್ರತಿ ಸದಸ್ಯರಿಗೆ ಪ್ರತಿ ಕೆ.ಜಿ ಅಕ್ಕಿಗೆ ಬದಲಿಯಾಗಿ ರೂ.34 ರಂತೆ ಹಣವನ್ನು ಅವರವರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ [ಡಿಬಿಟಿ]. ಯೋಜನೆಯಡಿಯಲ್ಲಿ ವರ್ಗಾವಣೆ ಮಾಡುತ್ತೇವೆ. ಅದಕ್ಕಾಗಿ ಯಾವುದೇ ತ್ಯಾಗ ಮಾಡಿಯಾದರೂ ಸರಿ ನನ್ನ ಸರ್ಕಾರವು ಈ ಯೋಜನೆಯನ್ನು ಅನುμÁ್ಠನ ಮಾಡುತ್ತದೆ ಎಂದು ಹೇಳಿದರು.

ಹಸಿದವರಿಗೆ ಅನ್ನ ನೀಡದ ಸರ್ಕಾರ ಅತ್ಯಂತ ಜನದ್ರೋಹಿ ಸರ್ಕಾರ ಎಂದು ಕರೆಸಿಕೊಳ್ಳುತ್ತದೆ. ಬಡವರು, ದುಡಿಯುವ ವರ್ಗದ ಜನರು, ವಲಸೆ ಕಾರ್ಮಿಕರು, ನಿರಾಶ್ರಿತರು ಮುಂತಾದವರ ಹಸಿವನ್ನು ತಣಿಸಲು ಹಿಂದೆ ಇಂದಿರಾ ಕ್ಯಾಂಟೀನ್‍ಗಳನ್ನು ಸ್ಥಾಪಿಸಲಾಗಿತ್ತು. ಈ ಕ್ಯಾಂಟೀನ್‍ಗಳು ಲಕ್ಷಾಂತರ ಜನರ ಹಸಿದ ಹೊಟ್ಟೆ ತುಂಬಿಸಿ ತೃಪ್ತಿ ನೀಡಿವೆ. ಇವುಗಳನ್ನು ಇನ್ನೂ ಸಮರ್ಥವಾಗಿ ನಾವು ನಡೆಸುತ್ತೇವ. ಅನ್ನಭಾಗ್ಯ ಯೋಜನೆ ಮತ್ತು ಇಂದಿರಾ ಕ್ಯಾಂಟೀನ್‍ಗಳ ಮೂಲಕ ಸರ್ಕಾರವು ರಾಜ್ಯವನ್ನು ಹಸಿವು ಮುಕ್ತ ಮಾಡಲಿದೆ.

ಯುವನಿಧಿ ಯೋಜನೆಯ ಅಡಿಯಲ್ಲಿ 2022-23 ರಲ್ಲಿ ಉತ್ತೀರ್ಣರಾಗಿ 6 ತಿಂಗಳೊಳಗೆ ಉದ್ಯೋಗ ದೊರಕದ ನಿರುದ್ಯೋಗಿ ಪದವೀಧರ/ ಸ್ನಾತಕೋತ್ತರ ಪದವೀಧರರಿಗೆ ತಿಂಗಳಿಗೆ ರೂ. 3,000/- ಮತ್ತು ನಿರುದ್ಯೋಗಿ ಡಿಪೆÇ್ಲೀಮಾದಾರರಿಗೆ ಪ್ರತಿ ತಿಂಗಳಿಗೆ ರೂ.1,500/- ನೀಡುವ ಯೋಜನೆಯನ್ನು ಸರ್ಕಾರವು ರೂಪಿಸಿದೆ. ಈ ಯೋಜನೆಯಡಿ ಅವರಿಗೆ 24 ತಿಂಗಳುಗಳ ಕಾಲ ಅಥವಾ ಉದ್ಯೋಗ ಸಿಗುವವರೆಗೆ/ಸ್ವ-ಉದ್ಯೋಗ ಪ್ರಾರಂಭಿಸಿ ಸ್ವಾವಲಂಭಿಯಾಗುವವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಭತ್ಯೆಯನ್ನು ನೀಡಲಾಗುವುದು. ಇದರಿಂದಾಗಿ ಯುವಕರು ಮತ್ತು ಅವರ ಕುಟುಂಬಗಳಿಗೆ ಹೆಚ್ಚು ಅಗತ್ಯವಿರುವ ಬೆಂಬಲ ಮತ್ತು ಘನತೆಯನ್ನು ಒದಗಿಸಿದಂತಾಗುವುದು ಎಂದರು.

ಗ್ರಹಜ್ಯೋತಿ ಯೋಜನೆಯಲ್ಲಿ 200 ಯೂನಿಟ್‍ಗಳವರೆಗೆ ಉಚಿತ ವಿದ್ಯುತ್ ನೀಡುವುದರಿಂದ ಸುಮಾರು 2.14 ಕೋಟಿ ಕುಟುಂಬಗಳ ಗ್ರಾಹಕರಿಗೆ ಪ್ರಯೋಜನವಾಗುತ್ತದೆ. ಇದರಿಂದಾಗಿ ರಾಜ್ಯದ ಶೇ.98 ರಷ್ಟು ಕುಟುಂಬಗಳು ಈ ಯೋಜನೆಯ ವ್ಯಾಪ್ತಿಗೆ ಬರುತ್ತವೆ ಎಂಬುದು ಸರ್ಕಾರಕ್ಕೆ ಸಂತೋಷ ನೀಡುವ ಸಂಗತಿಯಾಗಿದೆ.

IMG 20230703 WA0035

ಸರ್ಕಾರವು ಮಹಿಳಾ ಸಬಲೀಕರಣಕ್ಕಾಗಿ ಗೃಹಲಕ್ಷ್ಮಿ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಯೋಜನೆಯಡಿ ಪ್ರತಿ ತಿಂಗಳು ಕುಟುಂಬದ ಮುಖ್ಯಸ್ಥರಾಗಿರುವ ಮಹಿಳೆಯರಿಗೆ  2,000/- ನೀಡುತ್ತೇವೆ. ಬೆಲೆ ಏರಿಕೆಯಿಂದಾಗಿ ತತ್ತರಿಸಿರುವ ಮಹಿಳೆಯರಿಗೆ ಇದರಿಂದಾಗಿ ಆರ್ಥಿಕ ಚೈತನ್ಯ ಲಭಿಸಲಿದೆ ಎಂದು ತಿಳಿಸಿದರು.

ಇಂದು ಜಗತ್ತಿನ ಅನೇಕ ದೇಶಗಳು ಜನಕೇಂದ್ರಿತ ಆರ್ಥಿಕತೆಯನ್ನು ಪ್ರತಿಪಾದಿಸುತ್ತಿವೆ. ಈ ದೇಶಗಳಲ್ಲಿ ಸಾರ್ವತ್ರಿಕ ಮೂಲ ಆದಾಯ (Uಟಿiveಡಿsಚಿಟ ಃಚಿsiಛಿ Iಟಿಛಿome) ಎಂಬ ಪರಿಕಲ್ಪನೆಯು ಪ್ರಬಲಗೊಳ್ಳುತ್ತಿದೆ. ಇದು ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರವನ್ನು ತುಸುವಾದರೂ ಕಡಿಮೆ ಮಾಡಲು ಸಹಕಾರಿಯಾಗುತ್ತಿದೆ. ಮಾನವೀಯತೆ ಮತ್ತು ಅಭಿವೃದ್ಧಿಪರ ಚಿಂತನೆಯೊಂದಿಗೆ ವಿಕಾಸವಾಗುತ್ತಿರುವ ಈ ಆರ್ಥಿಕ ನೀತಿಯು, ಸಂಪತ್ತು ಕೆಲವರ ಕೈಯಲ್ಲೇ ಕೇಂದ್ರೀಕೃತಗೊಳ್ಳುವುದನ್ನು ಇಲ್ಲವಾಗಿಸುತ್ತದೆ. ಒಂದರ್ಥದಲ್ಲಿ ಇದು ಬೆಲೆ ಏರಿಕೆ ಹಾಗೂ ಕಡಿಮೆ ಆದಾಯದಿಂದ ತತ್ತರಿಸಿರುವ ಜನರಿಗೆ ಘನತೆಯನ್ನು ತಂದುಕೊಡುತ್ತದೆ, ಸರ್ಕಾರವು ಈ ಯೋಜನೆಗಳ ಮೂಲಕ ಹೊಸ ಅಭಿವೃದ್ಧಿ ಮಾದರಿಯೊಂದನ್ನು ರೂಪಿಸಿ ಅನುμÁ್ಠನ ಮಾಡುತ್ತಿದೆ. ನಾವು ಜನರಿಗೆ ಅವರಿಂದಲೇ ಸೃಷ್ಟಿಯಾದ ಸಂಪತ್ತಿನಲ್ಲಿ ಒಂದು ಪಾಲನ್ನು ಕೊಡುವ ಕೆಲಸವನ್ನು ಮಾಡುತ್ತಿದ್ದೇವೆ. ಆ ಮೂಲಕ ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳ ಅನುಚ್ಛೇದ 38, 39 (ಚಿ), (b) ಮತ್ತು (ಛಿ) ಗಳ ಪರೋಕ್ಷ ಅನುμÁ್ಠನವನ್ನೂ ಸರ್ಕಾರ ಮಾಡುತ್ತಿದೆ. ಸರ್ಕಾರಗಳು ಆಡಳಿತ ನಡೆಸಬೇಕಾದರೆ, ಕಾನೂನುಗಳನ್ನು ತರಬೇಕಾದರೆ, ಕಡ್ಡಾಯವಾಗಿ ಈ ತತ್ತ್ವಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರಕಾರ ರಾಜ್ಯ ನಿರ್ದೇಶಕ ತತ್ವಗಳು ಜನರ ಹಕ್ಕುಗಳಾದ ದಿನ ಜನರಿಗೆ ಒಂದಿμÁ್ಟದರೂ ನೆಮ್ಮದಿ ಲಭಿಸಲಿದೆ. ಈ ಮಾತುಗಳನ್ನು ದಾರಿ ದೀಪ ಮಾಡಿಕೊಂಡು ಸರ್ಕಾರ ಮುನ್ನಡೆಯಲಿದೆ ಎಂದು ತಿಳಿಸಿದರು.

IMG 20230703 WA0092

ಹಲವು ಕಾರಣಗಳಿಂದ ನಮ್ಮ ವ್ಯವಸ್ಥೆಯೊಳಗೆ ಭ್ರμÁ್ಟಚಾರವು ಸಾಂದ್ರೀಕರಣಗೊಳ್ಳುವ ಮಟ್ಟಕ್ಕೆ ಬೇರು ಬಿಟ್ಟಿದೆ. ಇದನ್ನು ತೊಡೆದು ಹಾಕುವುದು ದೊಡ್ಡ ಸವಾಲು. ಈ ಸವಾಲನ್ನು ಎದುರಿಸಿ, ಭ್ರμÁ್ಟಚಾರವನ್ನು ಮೂಲೋಚ್ಚಾಟನೆ ಮಾಡಲು ನಾನು ನಿಮ್ಮೆಲ್ಲರ ಸಹಕಾರವನ್ನು ಕೋರುತ್ತೇನೆ. ಈ ನಿಟ್ಟಿನಲ್ಲಿ ಅಗತ್ಯವಿರುವ ಆಡಳಿತಾತ್ಮಕ, ಶಾಸನಾತ್ಮಕ ಕ್ರಮಗಳನ್ನು ಈ ಸರ್ಕಾರವು ತೆಗೆದುಕೊಳ್ಳುತ್ತದೆ.
ಸರ್ಕಾರವು ಆಡಳಿತವನ್ನು ಪವಿತ್ರ ಕರ್ತವ್ಯವೆಂದು ಪರಿಗಣಿಸುತ್ತದೆ. ಬಡವರು, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರ ಪರವಾಗಿ ನಿಲ್ಲುತ್ತದೆ ಜೊತೆಗೆ ಎಲ್ಲಾ ಜಾತಿ, ಧರ್ಮ ಮತ್ತು ಪಂಗಡಗಳ ಜನರು ತಮ್ಮ ನ್ಯಾಯಯುತ ಪಾಲನ್ನು ಪಡೆಯುವಂತೆ ಮಾಡುವುದು ಸರ್ಕಾರದ ಗುರಿಯಾಗಿದೆ ಎಂದು ಹೇಳಿದರು.

ಜನಸಂಖ್ಯೆಯ ಬಹುಭಾಗ ಸುಶಿಕ್ಷಿತವಾಗುತ್ತಾ ಬಂದಿದೆ. ಅತ್ಯಾಧುನಿಕ ತಂತ್ರಜ್ಞಾನವು ಇಡೀ ಜಗತ್ತನ್ನೇ ಬೆಸೆಯುತ್ತಿದೆ. ಹಾಗಿರುವಾಗ ಸಮಾಜದ ಸಾಮರಸ್ಯವನ್ನು ಕದಡುವ ಗುಣವುಳ್ಳ ಬೆರಳೆಣಿಕೆಯ ಜನರ ದುಷ್ಪ ಚಿಂತನಗಳು, ಈ ಮಧ್ಯೆ ತಲೆಯೆತ್ತಿವೆ. ಭಿನ್ನ ಸಂಸ್ಕೃತಿಗಳ ಜನರು ಒಂದುಗೂಡಿ ಬದುಕುವುದೇ ಕರ್ನಾಟಕತ್ವದ ನಿಜವಾದ ತತ್ವ ಎಂಬುದನ್ನು ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಈ ನೆಲ ಪೆÇರೆಯುತ್ತಾ ಬಂದಿದೆ. ಕರ್ನಾಟಕದ ಜನತೆ ಈ ಭಾರಿ ಕರ್ನಾಟಕದ ಹೆಮ್ಮೆಯ ಸಂಸ್ಕೃತಿಯಾದ ಪ್ರೇಮತತ್ವ ಹಾಗೂ ಸಹಬಾಳ್ವೆಯ ಪರವಾಗಿ ನಿಂತಿದ್ದಾರೆ.  ಸರ್ಕಾರವು ಜನರ ಈ ಧೀರೋದಾತ್ತವಾದ ಆಶಯವನ್ನು ಈಡೇರಿಸಲು ಬದ್ಧವಾಗಿದೆ. ಅದಕ್ಕೆ ಪೂರಕವಾದ ಒಳ್ಳೆಯ ಚಿಂತನೆಗಳನ್ನು ಅಳವಡಿಸಿಕೊಳ್ಳಲಿದೆ ಮತ್ತು ಜನರನ್ನು ಪರಸ್ಪರ ಬೆಸೆಯುವ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದರು.

ನನ್ನ ಸರ್ಕಾರವು ಕೃಷಿ, ಕೈಗಾರಿಕ ಮತ್ತು ಸೇವಾವಲಯವನ್ನು ಸಮಾನ ದೃಷ್ಟಿಯಲ್ಲಿ ಪರಿಗಣಿಸಿ ಆಧುನಿಕ ಕರ್ನಾಟಕವನ್ನು ನಿರ್ಮಾಣ ಮಾಡಲು ಉದ್ದೇಶಿಸಿದೆ. ಶಾಲಾ ಶಿಕ್ಷಣವು ಸಮಾಜದ ಅಡಿಪಾಯವೆಂದು ಗುರುತಿಸಲ್ಪಟ್ಟಿದೆ. ಪ್ರತಿ ಮಗುವಿನ ಮೂಲಭೂತ ಹಕ್ಕನ್ನು ಸಂರಕ್ಷಿಸಲು ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ನಾವು ವಿಶೇಷವಾದ ಯೋಜನೆಗಳನ್ನು ರೂಪಿಸಿ ಅನುμÁ್ಠನ ಮಾಡುತ್ತೇವೆ. ಪ್ರತಿ ಮಗುವು ಕೂಡ ದೇಶದ ಸಂಪತ್ತು ಎಂಬ ಪ್ರಾಥಮಿಕ ತಿಳುವಳಿಕೆಯ ಮೂಲಕ ಆಡಳಿತ ನಡೆಸಲು ನಾವು ಬದ್ಧರಾಗಿದ್ದೇವೆ. ಶಿಕ್ಷಣದ ಜೊತೆಗೆ ಮಕ್ಕಳ ಅರೋಗ್ಯ ರಕ್ಷಣೆಯೂ ನನ್ನ ಸರ್ಕಾರದ ಜವಾಬ್ದಾರಿಯಾಗಿದೆ. ಈ ಜವಾಬ್ದಾರಿಯನ್ನು ನನ್ನ ಸರ್ಕಾರವು ಸಮರ್ಥವಾಗಿ ನಿಭಾಯಿಸುತ್ತದೆ ಎಂದು ಹೇಳಿದರು.