images 43

Karnataka :ಕಾಂಗ್ರೆಸ್ ಅಭ್ಯರ್ಥಿ ಗಳ ಎರಡನೇ ಪಟ್ಟಿ ಪ್ರಕಟ….!

POLATICAL STATE

ಬೆಂಗಳೂರು: ಕಾಂಗ್ರೆಸ್ ನ ಎರಡನೇ ಪಟ್ಟಿ ಪ್ರಕಟವಾಗಿದೆ ಎರಡನೇ ಪಟ್ಟಿ ಯಲ್ಲಿ‌ 42 ಕ್ಷೇತ್ರಗಳ ಅಭ್ಯರ್ಥಿ ಗಳ ಪಟ್ಟಿಯನ್ನು ಬಿಡುಗಡೆಮಾಡಿದೆ.

ಮೊದಲಪಟ್ಟಿಯಲ್ಲಿ 124 ಕ್ಷೇತ್ರದ ಅಭ್ಯರ್ಥಿ ಗಳ ಹೆಸರನ್ನು ಪ್ರಕಟಿಸಿದ್ದ ಕೈ ಪಡೆಯವರು ಈಗ ಎರಡನೇ ಪಟ್ಟಿಯಲ್ಲಿ 42 ಅಭ್ಯರ್ಥಿ ಗಳ ಹೆಸರು ಪ್ರಕಟಿಸುವ ಮೂಲಕ ಒಟ್ಟು 166 ಕ್ಷೇತ್ರ ಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಗಳು‌ ಅಂತಿಮವಾಗಿದೆ.ಬಾಕಿ‌ 58 ಕ್ಷೇತ್ರಗಳಿಗೆ ಅಭ್ಯರ್ಥಿ ಗಳನ್ನು ಪ್ರಕಟಿಸಬೇಕಿದೆ.

.

100 ಸ್ಥಾನಗಳನ್ನು ಒಳಗೊಂಡಿರುವ ಎರಡನೇ ಪಟ್ಟಿಯನ್ನು ಕುರಿತು ಮಂಗಳವಾರ ಮತ್ತು ಬುಧವಾರ ನಡೆದ ಸಭೆಯಲ್ಲಿ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸದಸ್ಯರು ಕೆಲಕಾಲ ಮಾತಿನ ಚಕಮಕಿಗಳು ನಡೆಯಿದ್ದವು. ನಂತರ ಬಹುಪಾಲು ಸ್ಥಾನಕ್ಕೆ ಒಮ್ಮತ ಮೂಡಿಬಂದಿತ್ತು. ಆದರೆ, ಇನ್ನೂ ಕೆಲ ಸ್ಥಾನಗಳ ಬಗ್ಗೆ ಸ್ಪಷ್ಟ ಮಾಹಿತಿಗಳು ತಿಳಿದುಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

ಪಕ್ಷವು ಹೆಚ್ಚಾಗಿ ಹಾಲಿ ಶಾಸಕರು ಅಥವಾ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದರಿಂದ ಮೊದಲ ಪಟ್ಟಿಯನ್ನು ಸುಲಭವಾಗಿ ಸಿದ್ಧಪಡಿಸಲಾಗಿತ್ತು. ಆದರೆ, ಎರಡನೇ ಪಟ್ಟಿಯಲ್ಲಿ ಸಮೀಕ್ಷೆ ವರದಿಗಳು ಹಾಗೂ ಗ್ರೌಂಡ್ ರಿಪೋರ್ಟ್ ಗಳ ಮೇಲೆ ಅವಲಂಬಿತರಾಗಿರುವುದರಿಂದ ಪಟ್ಟಿ ಅಂತಿಮಗೊಳಿಸಲು ಕಾಲಾವಕಾಶ ತೆಗೆದುಕೊಳ್ಳುತ್ತಿದೆ ಎಂದು ತಿಳಿದು ಬಂದಿದೆ.