IMG 20230729 WA0024

ಮಧುಗಿರಿ- ಹಿಟ್ ಅಂಡ್ ರನ್ – ದ್ವಿಚಕ್ರ ವಾಹನ ಸವಾರ ಸಾವು…!

DISTRICT NEWS ತುಮಕೂರು

*ಮಧುಗಿರಿ. ಪಾವಗಡ ಮಧುಗಿರಿ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರನಿಗೆ ಅಪರಿಚಿತ ವಾಹನ ಡಿಕ್ಕಿಹೊಡೆದ ಪರಿಣಾಮ ಸ್ಥಳದಲ್ಲಿ ಶಿವಣ್ಣ ಎಂಬುವರು ಸಾವು…….

.
ತಾಲೂಕಿನ ಮಿಡಿಗೇಶಿ ಹೋಬಳಿಯ ಮಧುಗಿರಿ ಪಾವಗಡ ಮುಖ್ಯ ರಸ್ತೆಯಲ್ಲಿ ನೀಲಿ ಹಳ್ಳಿ ಗ್ರಾಮದ ವಾಟರ್ ಟ್ಯಾಂಕ್ ಹತ್ತಿರ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಶಿವಣ್ಣ ಎಂಬವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ನೀಲಿ ಹಳ್ಳಿ ಗ್ರಾಮದ ಶಿವಣ್ಣಸ್ಥಳದಲ್ಲಿಯೇ ಬಿದ್ದಿರುತ್ತಾನೆ. .

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಮಿಡಿಗೇಶಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಂಗನಾಥ್ ರವರು ಹಾಗೂ ಪೋಲಿಸ್ ನವರು ಅಪಘಾತ ಒಳಗಾದ ಶಿವಣ್ಣ ನನ್ನು ಮಧುಗಿರಿಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿದಾಗ.ಮಾರ್ಗ ಮಧ್ಯದಲ್ಲಿ ದ್ವಿಚಕ್ರವಾಹನ ಸವಾರಸಾವನಪ್ಪಿರುತ್ತಾನೆ..

ಈ ಘಟನೆಗೆ ಸಂಬಂಧಿಸಿದಂತೆ ಮಿಡಿಗೇಶಿ ಪೊಲೀಸ್ ಇಲಾಖೆಯವರು ಪ್ರಕರಣ ದಾಖಲಿಸಿಕೊಂಡು. ಕಾನೂನು ರೀತಿ ಕ್ರಮ ಕೈಗೊಳ್ಳುತ್ತಿದ್ದಾರೆ.

ವರದಿ. ಲಕ್ಷ್ಮಿಪತಿ ದೊಡ್ಡ ಯ ಲ್ಕೂರು