IMG 20230902 WA0002

ಜೆಡಿ ಎಸ್: ಪಾವಗಡ ಬರಪೀಡಿತ ತಾಲ್ಲೂಕನ್ನಾಗಿ ಘೋಷಿಸಲು ಒತ್ತಾಯ…!

DISTRICT NEWS ತುಮಕೂರು

ಜೆಡಿ ಎಸ್ –  ಪಾವಗಡ  ಬರಪೀಡಿತ ತಾಲ್ಲೂಕನ್ನಾಗಿ
ಘೋಷಿಸುವಂತೆ ಒತ್ತಾಯಿಸಿ ಜೆ.ಡಿ.ಎಸ್ ಪ್ರತಿಭಟನೆ.

ಪಾವಗಡ : ತಾಲ್ಲೂಕಿನಲ್ಲಿ ಸಮರ್ಪಕ ಮಳೆ ಇಲ್ಲದೆ, ಸಾಕಷ್ಟು ಕಡೆ ಬಿತ್ತನೆಯಾಗಿಲ್ಲ. ಕೆಲವೆಡೆ ಶೇಂಗಾ ಬಿತ್ತನೆಯಾಗಿದ್ದರೂ ಮಳೆ ಇಲ್ಲದೆ ಬೆಳೆ ಬಾಡುತ್ತಿದೆ
ಎಂದು ಆಗ್ರಹಿಸಿ ತಾಲ್ಲೂಕಿನ ಜೆಡಿಎಸ್ ಘಟಕದ ವತಿಯಿಂದ
ಪಾವಗಡ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಶೀಘ್ರವೇ ಘೋಷಿಸುವಂತೆ ತಹಶೀಲ್ದಾರ್ ಎನ್. ಮೂರ್ತಿಯವರ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

ಪಾವಗಡ ತಾಲ್ಲೂಕು ಭೌಗೋಳಿಕವಾಗಿ ಆಂಧ್ರಪ್ರದೇಶದಿಂದ ಸುತ್ತುವರಿದಿದ್ದು, ಡಾಕ್ಟರ್ ನಂಜುಂಡಪ್ಪ ವರದಿಯ ಪ್ರಕಾರ ಅತಿ ಹಿಂದುಳಿದ ತಾಲ್ಲೂಕಾಗಿದೆ, ತಾಲ್ಲೂಕಿನಲ್ಲಿ ಯಾವುದೇ ಜೀವನದಿಗಳಿಲ್ಲದೆ ಕೃಷಿಗಾಗಿ ರೈತರು ಮಳೆಯ ಮೇಲೆ ಅವಲಂಬಿತರಾಗಿದ್ದಾರೆ.
ಮಳೆಯ ಅಭಾವದಿಂದಾಗಿ ಜಾನುವಾರುಗಳಿಗೆ ಮೇವು ನೀರಿಲ್ಲದೆ ಪರೆದಾಡುವ ಪರಿಸ್ಥಿತಿ ಉಂಟಾಗಿದೆ ಎಂದು.
ಕೂಡಲೆ ಸರ್ಕಾರ ಪಾವಗಡ ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಿ.
ರೈತರಿಗೆ ಬೆಳೆ ನಷ್ಟ ಪರಿಹಾರ, ಜಾನುವಾರಗಳಿಗೆ ಗೋ ಶಾಲೆ ತೆರೆಯುವಂತೆ ಆಗ್ರಹಿಸಿದರು.

ಒಂದು ವೇಳೆ ಸರ್ಕಾರ ಯಾವುದೇ ತಾರತಮ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಹೋರಾಟ ಮಾಡಲಾಗುವುದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಕಾರ್ಯದಕ್ಷರಾದ ಗೋವಿಂದ ಬಾಬು , ಜೆಡಿಎಸ್ ಅಧ್ಯಕ್ಷ ಈರಣ್ಣ, ಗಂಗಾಧರ ನಾಯ್ಡು, ಕಮಲ್ ಬಾಬು, ತಿಮ್ಮಾ ರೆಡ್ಡಿ, ಮನು ಮಹೇಶ್, ಬಲರಾಮ್ ರೆಡ್ಡಿ, ರಾಜ ಶೇಖರ್, ಜಿಯೋ ವೆಂಕಟೇಶ್, ಸಾರ್ವರ್ಟ್ ಪುರ ಬಾಬು, ಸತ್ಯನಾರಾಯಣ, ವಸಂತ್,
ವೆಂಕಟೇಶಪ್ಪ, ಇನ್ನೂ ಮುಂತಾದವರು ಹಾಜರಿದ್ದರು..

ವರದಿ. ಶ್ರೀನಿವಾಸಲು.ಎ