images 23

Tumkur :ಸಾರ್ವಜನಿಕರು 10 ರೂ ನಾಣ್ಯಗಳನ್ನು ವ್ಯವಹಾರದಲ್ಲಿ‌ ಸ್ವೀಕರಿಸಬೇಕು….!

DISTRICT NEWS Genaral STATE ತುಮಕೂರು

ಸಾರ್ವಜನಿಕರು 10 ರೂ ನಾಣ್ಯಗಳನ್ನು ವ್ಯವಹಾರದಲ್ಲಿ‌ ಸ್ವೀಕರಿಸಬೇಕು. :- ಜಿಲ್ಲಾಧಿಕಾರಿಗಳ ಸ್ಪಷ್ಟನೆ.

****************
ರಿಸರ್ವ್ ಬ್ಯಾಂಕ್ ಆಫ಼್ ಇಂಡಿಯಾದಿಂದ ಅಧಿಕೃತವಾಗಿ ಮುದ್ರಿಸಿ ಚಲಾವಣೆಗೆ ತಂದಿರುವ ಹತ್ತು ರೂಪಾಯಿ ನಾಣ್ಯಗಳನ್ನು ಸಾರ್ವಜನಿಕರು, ವರ್ತಕರು,  ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ  ಯಾವುದೇ ಅನುಮಾನವಿಲ್ಲದೇ ದಿನನಿತ್ಯದ ವಹಿವಾಟಿನಲ್ಲಿ   ಸ್ವೀಕರಿಸಬೇಕೆಂದು ತುಮಕೂರು ಜಿಲ್ಲಾಧಿಕಾರಿ  ಕೆ. ಶ್ರೀನಿವಾಸ್ ರವರು ಆದೇಶಿಸಿದ್ದಾರೆ.

 ಜಿಲ್ಲಾ ಲೀಡ್ ಬ್ಯಾಂಕ್ ವತಿಯಿಂದ ಜಿಲ್ಲಾಧಿಕಾರಿಗಳ  ಕಚೇರಿಯ ಸಭಾಂಗಣದಲ್ಲಿ  ಆಯೋಜಿಸಿದ್ದ ಸಭೆಯಲ್ಲಿ ಮಾತನಾಡುತ್ತಾ  ಈ ವಿಷಯವನ್ನು ಜಿಲ್ಲಾಧಿಕಾರಿಗಳು  ಸ್ಪಷ್ಟ ಪಡಿಸಿದ್ದಾರೆ.

DSC 0936

ಹತ್ತು ರೂಪಾಯಿಯ ನಾಣ್ಯವನ್ನು  ಎಲ್ಲರೂ  ನಿರಾತಂಕವಾಗಿ ವ್ಯವಹಾರದಲ್ಲಿ ಬಳಸಬಹುದಾಗಿದೆ ಎಂದು ಸ್ಪಷ್ಟವಾಗಿ ತಿಳಿಸಿದರು.

ಹತ್ತು ರೂಪಾಯಿಯ‌ ನಾಣ್ಯಗಳ ಬಳಕೆಯನ್ನು ಆರ್.ಬಿ.ಐ.  ಹಿಂಪಡೆದಿಲ್ಲವಾದ್ದರಿಂದ ಇದರ ಕುರಿತಾದ ಸುಳ್ಳು ಸುದ್ದಿಗಳನ್ನು , ವದಂತಿಗಳನ್ನು  ನಂಬದಿರುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ  ಜಿಲ್ಲಾಧಿಕಾರಿಗಳು ಹತ್ತು ರೂಪಾಯಿಯ ನಾಣ್ಯಗಳ ಬಳಕೆಯಿಂದಾಗಿ  ಸಾಕಷ್ಟು ಚಿಲ್ಲರೆ ಸಮಸ್ಯೆ ನೀಗುವುದರ ಜೊತೆಗೆ  ಬಳಸದೇ ಇರುವ ನಾಣ್ಯಗಳಿಂದಾಗಿ ಸಾಕಷ್ಟು ಮೊತ್ತದ ಹಣ‌ ದಿನನಿತ್ಯದ ವ್ಯವಹಾರಕ್ಕೆ ಚಲಾವಣೆಯಾಗದೇ  ನಿಂತ ನೀರಿನಂತಾಗಿ ಆರ್ಥಿಕ ಅಭಿವೃದ್ಧಿಗೆ ತೊಡಕಾಗುತ್ತದೆಯಾದ್ದರಿಂದ ಈ ಕೂಡಲೇ ‌10 ರೂಪಾಯಿಯ ನಾಣ್ಯಗಳನ್ನು,  ಚಲಾವಣೆಯಲ್ಲಿರುವ ಇತರೆ ಕರೆನ್ಸಿ ಅಥವಾ ನಾಣ್ಯಗಳಂತೆಯೇ  ಪರಿಗಣಿಸಿ ಸ್ವೀಕರಿಸಬೇಕು ಎಂದು  ಆದೇಶಿಸಿದ್ದಾರೆ.

ಇದೇ ಸಂಧರ್ಭದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್‌ ವ್ಯವಸ್ಥಾಪಕ ಪ್ರಕಾಶ್ ಮಾತನಾಡಿ  ಅರ್.ಬಿ.ಐ.  ಹತ್ತು ರೂಪಾಯಿಯ‌ ನಾಣ್ಯಗಳನ್ನು ಚಲಾವಣೆಯಿಂದ‌ ಹಿಂಪಡೆದಿಲ್ಲ, ಅವು ಶಾಸನಬದ್ದವಾಗಿರುವುದರಿಂದ ಎಲ್ಲರೂ ಅದನ್ನು ಬಳಸಬೇಕೆಂದು  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಗಾಗಲೇ ಸಾರ್ವಜನಿಕರಲ್ಲಿ ಸಾಕಷ್ಟು ಬಾರಿ ಜಾಗೃತಿಯನ್ನುಂಟು ಮಾಡಿದ್ದರೂ ಸಹ ಈಗಲೂ ಅವುಗಳನ್ನು ಸ್ವೀಕರಿಸುವ ಬಗ್ಗೆ  ಅನುಮಾನಿಸುತ್ತಿರುವುದು ಸರಿಯಲ್ಲ. ಈ‌ ಬಗ್ಗೆ ಅನಗತ್ಯ ವದಂತಿಗಳಿಗೆ ಕಿವಿಕೊಡದೇ ಆರ್.ಬಿ.ಐ ಹಾಗೂ ಜಿಲ್ಲಾಧಿಕಾರಿಗಳ  ಆದೇಶದ ಮೇರೆಗೆ ಸಾರ್ವಜನಿಕರು  ತಮ್ಮ‌ ವಹಿವಾಟಿನಲ್ಲಿ ಹತ್ತು ರೂಪಾಯಿಯ ನಾಣ್ಯಗಳನ್ನು ಕಾನೂನುಬದ್ದವಾಗಿ ಸ್ವೀಕರಿಸುವುದನ್ನು ಮುಂದುವರೆಸಬೇಕು ಎಂದು  ತಿಳಿಸಿದರು.

ಸಭೆಯಲ್ಲಿ ವಿವಿಧ  ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.