ಸುಮಾರು 3,300 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಹೊಸ ಸ್ಥಾವರವು 2026 ರಲ್ಲಿ ಪೂರ್ಣಗೊಳ್ಳಲಿದೆ.
ಬಿಡದಿಯಲ್ಲಿ 3ನೇ ಕಾರು ಉತ್ಪಾದನಾ ಘಟಕ ಆರಂಭಿಸಲು ನಿರ್ಧಾರ
ಟೊಯೋಟಾ ಜತೆ ಸರಕಾರದ ಒಡಂಬಡಿಕೆ
ಬೆಂಗಳೂರು: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯು ಬಿಡದಿಯಲ್ಲಿ 3,300 ಕೋಟಿ ರೂ. ವೆಚ್ಚದಲ್ಲಿ ತನ್ನ ಮೂರನೇ ಕಾರು ಉತ್ಪಾದನಾ ಘಟಕವನ್ನು ಆರಂಭಿಸಲಿದ್ದು, ಈ ಸಂಬಂಧ ರಾಜ್ಯ ಸರಕಾರ ಮತ್ತು ಕಂಪನಿ ಮಂಗಳವಾರ ಇಲ್ಲಿ ಒಡಂಬಡಿಕೆಗೆ ಅಂಕಿತ ಹಾಕಿದವು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಉಪಸ್ಥಿತರಿದ್ದರು. ಸರಕಾರದ ಪರವಾಗಿ ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಮತ್ತು ಟೊಯೋಟಾ ಪರವಾಗಿ ಆ ಕಂಪನಿಯ ಉಪಾಧ್ಯಕ್ಷ ಸುದೀಪ್ ದಳವಿ ಅಂಕಿತ ಹಾಕಿ, ಒಡಂಬಡಿಕೆ ಪತ್ರವನ್ನು ವಿನಿಮಯ ಮಾಡಿಕೊಂಡರು,
ಬಳಿಕ ಮಾತನಾಡಿದ ಸಚಿವ ಪಾಟೀಲ, ʻಟೊಯೋಟಾ ರಾಜ್ಯದಲ್ಲಿ ನೆಲೆಯೂರಿ 25 ವರ್ಷಗಳು ತುಂಬಿವೆ. ಈ ಸಂದರ್ಭದಲ್ಲೇ ಕಂಪನಿಯು ನೂತನ ಉತ್ಪಾದನಾ ಘಟಕ ಸ್ಥಾಪನೆಗೆ ಮುಂದಾಗಿರುವುದು ಸ್ವಾಗತಾರ್ಹವಾಗಿದೆ. ಇದರಿಂದ ಸ್ಥಳೀಯ ಮಟ್ಟದಲ್ಲಿ ಉತ್ಪಾದನನಾ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದ್ದು, ನೂತನ ತಂತ್ರಜ್ಞಾನಾಧಾರಿತ ಕಾರುಗಳು ಎಲ್ಲರಿಗೂ ಸುಲಭವಾಗಿ ಲಭ್ಯವಾಗಲಿವೆʼ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಟೊಯೋಟಾ ಕಂಪನಿಯ ಎರಡು ಉತ್ಪಾದನಾ ಘಟಕಗಳು ಈಗಾಗಲೇ ಬಿಡದಿಯಲ್ಲಿ ಸಕ್ರಿಯವಾಗಿವೆ. ಉದ್ದೇಶಿತ ಮೂರನೇ ಘಟಕದಲ್ಲಿ ವರ್ಷಕ್ಕೆ ಹೆಚ್ಚುವರಿಯಾಗಿ 1 ಲಕ್ಷ ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯವಿದ್ದು, ಇದರಿಂದ ಅಂದಾಜು 2 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದರು.
ಸರಕಾರವು ಕೈಗಾರಿಕಾ ರಂಗದ ಬೆಳವಣಿಗೆಗೆ ಆದ್ಯ ಗಮನ ಕೊಟ್ಟಿದ್ದು, ವಿದ್ಯುತ್ ಚಾಲಿತ ವಾಹನಗಳ ವಲಯ ಸೇರಿದಂತೆ ಒಟ್ಟು 9 ವಲಯಗಳಿಗೆ ಅನ್ವಯವಾಗುವಂತೆ ವಿಷನ್ ಗ್ರೂಪ್‌ಗಳನ್ನು ರಚಿಸಿದೆ. ಇವುಗಳಲ್ಲಿ ಗಣ್ಯ ಉದ್ಯಮಿಗಳೇ ಇದ್ದು, ರಾಜ್ಯಕ್ಕೆ ಬಂಡವಾಳ ಹೂಡಿಕೆಯನ್ನು ಆಕರ್ಷಿಲಾಗುವುದು. ಜೊತೆಗೆ ಕರ್ನಾಟಕ ಇನ್ವೆಸ್ಟ್ಮೆಂಟ್ ಫೋರಂ ಮತ್ತು ಸ್ಟ್ರಾಟೆಜಿಕ್ ಇನ್ವೆಸ್ಟ್ಮೆಂಟ್ ಫೋರಂ ಎರಡಕ್ಕೂ ಹೊಸ ರೂಪ ನೀಡಲಾಗಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಟೊಯೋಟಾ ವ್ಯವಸ್ಥಾಪಕ ನಿರ್ದೇಶಕ ಮಸಕಝು ಯೋಶಿಮುರ, ಉಪಾಧ್ಯಕ್ಷರಾದ ಸ್ವಪ್ನೇಶ್ ಮರು, ವಿಕ್ರಂ ಗುಲಾಟಿ, ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಮುಂತಾದವರು ಉಪಸ್ಥಿತರಿದ್ದರು.
ಬಿಡದಿಯ ತನ್ನ ಸ್ಥಾವರದಲ್ಲಿ ಮೂರನೇ ಕಾರು ಉತ್ಪಾದನಾ ಘಟಕ ಆರಂಭಿಸಲಿರುವ ಟೊಯೋಟಾ ಕಂಪನಿ ಮತ್ತು ರಾಜ್ಯ ಸರಕಾರದ ನಡುವೆ ಮಂಗಳವಾರ ಒಡಂಬಡಿಕೆ ಏರ್ಪಟ್ಟಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಂ ಬಿ ಪಾಟೀಲ, ಟೊಯೋಟಾ ವ್ಯವಸ್ಥಾಪಕ ನಿರ್ದೇಶಕ ಮಸಕಝು ಯೋಶಿಮುರ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಮುಂತಾದವರು ಉಪಸ್ಥಿತರಿದ್ದರು. ಇದ್ದರು.
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಹೊಸ ಘಟಕವನ್ನು ಸ್ಥಾಪಿಸಲು ಮುಂದಿನ ಸುತ್ತಿನ ಹೂಡಿಕೆಗಾಗಿ ಕರ್ನಾಟಕ ಸರ್ಕಾರದೊಂದಿಗೆ ತಿಳಿವಳಿಕೆ ಒಪ್ಪಂದ ಮಾಡಿಕೊಂಡಿದೆ
- ಸುಮಾರು 3,300 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಹೊಸ ಸ್ಥಾವರವು 2026 ರಲ್ಲಿ ಪೂರ್ಣಗೊಳ್ಳಲಿದೆ.
- ಹೊಸ ಘಟಕವು ವಾರ್ಷಿಕವಾಗಿ 1,00,000 ಯುನಿಟ್ ಗಳಷ್ಟು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ನಿರೀಕ್ಷೆಯಿದೆ.
- ಸುಮಾರು 2000 ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.
- ಈ ನೂತನ ಹೂಡಿಕೆ ಭಾರತದಲ್ಲಿ ಟಿಕೆಎಂನ 25 ವರ್ಷಗಳ ಗಮನಾರ್ಹ ಪ್ರಯಾಣವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.
ಬೆಂಗಳೂರು, ನವೆಂಬರ್ 21, 2023: “ಮೇಕ್ ಇನ್ ಇಂಡಿಯಾ” ಮತ್ತು “ಎಲ್ಲರಿಗೂ ಸಾಮೂಹಿಕ ಸಂತೋಷ” ನೀಡಲು ಬದ್ಧವಾಗಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಹೊಸ ಹೂಡಿಕೆಗಳ ಮೂಲಕ ದೇಶದಲ್ಲಿ ಅಸ್ತಿತ್ವದಲ್ಲಿರುವ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ಹೆಚ್ಚಿಸಲು ಕರ್ನಾಟಕ ಸರ್ಕಾರದೊಂದಿಗೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದೆ.
ಭಾರತದಲ್ಲಿ ಟಿಕೆಎಂನ 25 ವರ್ಷಗಳ ಕಾರ್ಯಾಚರಣೆಯ ಹೆಗ್ಗುರುತಾಗಿರುವ ಈ ಸಂದರ್ಭದಲ್ಲಿ ಸುಮಾರು 3,300 ಕೋಟಿ ರೂ.ಗಳ ಹೂಡಿಕೆಯು ಹೊಸ ಸ್ಥಾವರವನ್ನು ಸ್ಥಾಪಿಸುವುದು, ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿ ಹೊಂದಿದ್ದು, ಇದರಿಂದ ಸ್ಥಳೀಯ ಉತ್ಪಾದನಾ ಪರಿಸರ ವ್ಯವಸ್ಥೆಗೆ ಗಣನೀಯ ಉತ್ತೇಜನ ದೊರೆಯಲಿದೆ. ಅಲ್ಲದೆ, “ಎಲ್ಲರಿಗೂ ಚಲನಶೀಲತೆಯನ್ನು” ರಚಿಸಲು ಹೊಸ ತಂತ್ರಜ್ಞಾನಗಳನ್ನು ತರಲಿದೆ. ಇದು ಭಾರತದ ಮೂರನೇ ಘಟಕವಾಗಿದ್ದು, ಕರ್ನಾಟಕದ ಬೆಂಗಳೂರು ಬಳಿಯ ಬಿಡದಿಯಲ್ಲಿದೆ. ಈ ಬೆಳವಣಿಗೆಯು ಪೂರೈಕೆದಾರ ಪರಿಸರ ವ್ಯವಸ್ಥೆಯಲ್ಲಿ ನಿರೀಕ್ಷಿತ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಹೂಡಿಕೆಗಳು ಮತ್ತು ಉದ್ಯೋಗ ಸೃಷ್ಟಿಯ ಸಾಮರ್ಥ್ಯವನ್ನು ತರಲಿದೆ.
ಕರ್ನಾಟಕ ಸರ್ಕಾರದೊಂದಿಗಿನ ತಿಳುವಳಿಕಾ ಒಡಂಬಡಿಕೆಗೆ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಮಸಕಾಜು ಯೋಶಿಮುರಾ ಅವರು ಸಹಿ ಮಾಡಿ ವಿನಿಮಯ ಮಾಡಿಕೊಂಡರು. ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್, ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಮುಖ್ಯ ಅನುಸರಣಾ ಅಧಿಕಾರಿ ಸ್ವಪ್ನೇಶ್ ಆರ್.ಮಾರು, ಕಾರ್ಯನಿರ್ವಾಹಕ ಉಪಾಧ್ಯಕ್ಷ ವಿಕ್ರಮ್ ಗುಲಾಟಿ, ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯ ಸಂವಹನ ಅಧಿಕಾರಿ ಸುದೀಪ್ ಸಂತರಾಮ್ ದಾಲ್ವಿ ಮತ್ತು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನ ಇತರ ಉನ್ನತ ಅಧಿಕಾರಿಗಳು ಇದೇ ವೇಳೆ ಉಪಸ್ಥಿತರಿದ್ದರು.
ಈ ಹೂಡಿಕೆಯು ಮುಂದಿನ 25 ವರ್ಷಗಳಲ್ಲಿ ಭಾಗವಹಿಸುವ ಮೂಲಕ ಟಿಕೆಎಂ ತನ್ನ 25 ವರ್ಷಗಳ ಇತಿಹಾಸವನ್ನು ನಿರ್ಮಿಸುವ ನಿರಂತರ ದೀರ್ಘಕಾಲೀನ ಬದ್ಧತೆಯ ಒಂದು ಭಾಗವಾಗಿದೆ. ಇದು ಪ್ರಧಾನ ಮಂತ್ರಿಯವರ “ಅಮೃತ್ ಕಾಲ್” (ಸುವರ್ಣ ಯುಗ) ದೃಷ್ಟಿಕೋನಕ್ಕೆ ಕಾರಣವಾಗುವ “ಮೇಕ್ ಇನ್ ಇಂಡಿಯಾ” ಮತ್ತು “ಆತ್ಮನಿರ್ಭರ ಭಾರತ್” ಅಭಿಯಾನಗಳಿಗೆ ಕಂಪನಿಯ ಹೆಚ್ಚಿನ ಕೊಡುಗೆಯನ್ನು ನೀಡುತ್ತದೆ. ಹೊಸ ಹೂಡಿಕೆಗಳು ಅದರ ಪೂರೈಕೆದಾರರ ನೆಲೆಯ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ, ಹೆಚ್ಚಿನ ಉದ್ಯೋಗ ಸೃಷ್ಟಿ ಮತ್ತು ಕರ್ನಾಟಕ ರಾಜ್ಯದಲ್ಲಿ ಸ್ಥಳೀಯ ಸಮುದಾಯ ಅಭಿವೃದ್ಧಿಗೆ ಬೆಂಬಲ ನೀಡುವ ಮೂಲಕ ಸ್ಥಳೀಯ ಪರಿಸರ ವ್ಯವಸ್ಥೆಯ ವೃದ್ಧಿಗೆ ನೆರವಾಗಲಿದೆ.
ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಶ್ರೀ ಎಂ.ಬಿ. ಪಾಟೀಲ್ ಅವರು ಮಾತನಾಡಿ, “2017 ರ ಇವಿ ನೀತಿಯನ್ನು ಬಿಡುಗಡೆ ಮಾಡುವಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದ್ದು, 2021 ರಲ್ಲಿ ಇದು ನವೀಕರಣಗೊಂಡಿದೆ. ಇಡೀ ಇವಿ ವಾಹನ ಕ್ಷೇತ್ರದಲ್ಲಿ 25,000 ಕೋಟಿ ರೂ.ಗಳ ಹೂಡಿಕೆಯನ್ನು ಆಕರ್ಷಿಸುವಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಸರಿಸುಮಾರು 2 ಲಕ್ಷ ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿದ್ದು, ಹೆಚ್ಚಿನ ಪ್ರಗತಿಯನ್ನು ಸ್ಥಾಪಿಸಲಾಗಿದೆ.
ಅಲ್ಲದೆ ಬ್ಯಾಟರಿ ಮತ್ತು ಸೆಲ್ ಉತ್ಪಾದನೆ, ಬಿಡಿಭಾಗಗಳ ಉತ್ಪಾದನೆ, ಮೂಲ ಉಪಕರಣ ತಯಾರಕರು, ಚಾರ್ಜಿಂಗ್ ಮತ್ತು ಪರೀಕ್ಷಾ ಮೂಲಸೌಕರ್ಯಗಳಿಂದ ಸಂಶೋಧನೆ ಮತ್ತು ಅಭಿವೃದ್ಧಿಯವರೆಗೆ ಸಂಪೂರ್ಣ ಮೌಲ್ಯ ಸರಪಳಿಯನ್ನು ವ್ಯಾಪಿಸಿರುವ ಎಲೆಕ್ಟ್ರಿಕ್ ವಾಹನ (ಇವಿ) ಉತ್ಪಾದನೆಯ ಪ್ರಮುಖ ತಾಣವಾಗಿ ಕರ್ನಾಟಕವನ್ನು ಸ್ಥಾಪಿಸುವ ಗುರಿಯನ್ನು ಹೊಂದಿರುವ ಹೊಸ ಕ್ಲೀನ್ ಮೊಬಿಲಿಟಿ ನೀತಿಯನ್ನು ಸರ್ಕಾರ ತರುತ್ತಿದೆ. ಇದರೊಂದಿಗೆ, ಇಡೀ ಇವಿ ಮೌಲ್ಯ ಸರಪಳಿಯಲ್ಲಿ 50,000 ಕೋಟಿ ರೂ.ಗಳ ಹೂಡಿಕೆಯನ್ನು ಆಕರ್ಷಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇದರಿಂದ ಸುಮಾರು 100,000 ಹೊಸ ಉದ್ಯೋಗ ಸೃಷ್ಟಿಯಾಗಲಿದ್ದು, ರಾಜ್ಯದಲ್ಲಿ ಸಮಗ್ರ ಮತ್ತು ಬೆಂಬಲಿತ ಇವಿ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸುತ್ತದೆ ಎಂದು ತಿಳಿಸಿದರು.
ಭಾರತದ ಕಾರ್ಯತಂತ್ರದ ಪ್ರಾಮುಖ್ಯತೆಯ ಬಗ್ಗೆ ಪ್ರತಿಕ್ರಿಯಿಸಿದ ಏಷ್ಯಾ ವಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಮಸಾಹಿಕೊ ಮೈಡಾ, “ಭಾರತೀಯ ಮಾರುಕಟ್ಟೆ ಯಾವಾಗಲೂ ನಮಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಭಾರತದಲ್ಲಿನ ಹೊಸ ಹೂಡಿಕೆಗಳೊಂದಿಗೆ, ವಿಶ್ವಾದ್ಯಂತ ಜನರ ಜೀವನವನ್ನು ಶ್ರೀಮಂತಗೊಳಿಸುವ ಸುಸ್ಥಿರ ಚಲನಶೀಲತೆ ಪರಿಹಾರಗಳನ್ನು ರಚಿಸುವ ಮೂಲಕ ಹೆಚ್ಚು ಭರವಸೆ ಇದೆ. ಭವಿಷ್ಯಕ್ಕಾಗಿ ನಮ್ಮ ಜಾಗತಿಕ ದೃಷ್ಟಿಕೋನದಲ್ಲಿ ಟಿಕೆಎಂನ ಪಾತ್ರವನ್ನು ನಾವು ಮತ್ತಷ್ಟು ಹೆಚ್ಚಿಸುತ್ತೇವೆ ಎಂದು ನಮಗೆ ವಿಶ್ವಾಸವಿದೆ ಎಂದರು.
ಕಾರ್ಬನ್ ನಿಜವಾದ ಶತ್ರು. ಜಾಗತಿಕವಾಗಿ, ಇಂಗಾಲದ ತಟಸ್ಥತೆಯ ಅಂತಿಮ ಗುರಿಯೊಂದಿಗೆ ‘ವೈವಿಧ್ಯತೆ, ಬುದ್ಧಿಮತ್ತೆ ಮತ್ತು ವಿದ್ಯುದ್ದೀಕರಣ’ದ ಮೇಲೆ ಕೇಂದ್ರೀಕರಿಸಿ ಚಲನಶೀಲತೆಯನ್ನು ಪರಿವರ್ತಿಸುವ ವಿಧಾನದಲ್ಲಿ ನಾವು ಮುಂದುವರೆಯುತ್ತೇವೆ. ದೇಶದ ಇಂಧನ ಮಿಶ್ರಣ, ಮೂಲಸೌಕರ್ಯ ಸಿದ್ಧತೆ, ಅನನ್ಯ ಗ್ರಾಹಕರ ಪ್ರೊಫೈಲ್ ಮತ್ತು ಅಗತ್ಯಗಳಂತಹ ವಿವಿಧ ಅಂಶಗಳನ್ನು ಪರಿಗಣಿಸಿ ಶುದ್ಧ ತಂತ್ರಜ್ಞಾನಗಳನ್ನು ಪರಿಚಯಿಸುವ ಮತ್ತು ಬೆಂಬಲಿಸುವ ಮೂಲಕ ನಾವು ಪ್ರತಿ ಪ್ರದೇಶದ ಚಲನಶೀಲತೆಯ ಗುರಿಗಳ ಮೇಲೆ ಹೆಚ್ಚಿನ ಗಮನ ಹರಿಸುವುದನ್ನು ಮುಂದುವರಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಸಕಾಜು ಯೋಶಿಮುರಾ, “ಭವಿಷ್ಯದ ಸಿದ್ಧ ಮೊಬಿಲಿಟಿ ಕಂಪನಿಯಾಗಿ ಹೊಸ ಸ್ಥಾವರಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರದೊಂದಿಗೆ ಇಂದಿನ ಮಹತ್ವದ ತಿಳಿವಳಿಕೆ ಒಪ್ಪಂದವು ಉದ್ಯೋಗ ಸೃಷ್ಟಿಯ ಮೂಲಕ ಸಕಾರಾತ್ಮಕವಾಗಿ ಕೊಡುಗೆ ನೀಡುತ್ತದೆ. ಸುಧಾರಿತ ಶುದ್ಧ ತಂತ್ರಜ್ಞಾನಗಳ ಅಳವಡಿಕೆಯನ್ನು ವಿಸ್ತರಿಸುತ್ತದೆ ಎಂದು ನಮಗೆ ಖಾತ್ರಿಯಿದೆ. ಇಂಧನ ಭದ್ರತೆಯನ್ನು ಸುಧಾರಿಸುವುದು, ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು ಮತ್ತು ಇಂಗಾಲದ ತಟಸ್ಥತೆಯನ್ನು ಸಾಧಿಸುವತ್ತ ಗಮನ ಹರಿಸುವ ಮೂಲಕ ಭಾರತಕ್ಕೆ ಉತ್ತಮ ಪರಿಹಾರಗಳನ್ನು ಉತ್ತೇಜಿಸುವ ವಿಶ್ವದರ್ಜೆಯ ಸ್ಥಳೀಯ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ನಾವು ಸರ್ಕಾರದೊಂದಿಗೆ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದರು.
ಟೊಯೊಟಾ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಸಕಾರಾತ್ಮಕವಾಗಿ ಮುಂದುವರೆದಿದೆ. ಭಾರತವನ್ನು ಉತ್ಪಾದನೆಯ ಜಾಗತಿಕ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ನಾವು ನಮ್ಮ ವ್ಯಾಪಾರ ಮತ್ತು ಪೂರೈಕೆ ಸರಪಳಿಯನ್ನು ಸ್ಥಿರವಾಗಿ ಬೆಳೆಸಿದ್ದೇವೆ. ಒಂದು ದಶಕದಿಂದ ಟಿಕೆಎಂ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಕೌಶಲ್ಯ ಪ್ರಯತ್ನಗಳನ್ನು ಮುನ್ನಡೆಸುತ್ತಿದೆ. ವಿಶ್ವ ದರ್ಜೆಯ ನುರಿತ ತಂತ್ರಜ್ಞರನ್ನು ರಚಿಸಲು ಮತ್ತು ಉದ್ಯೋಗವನ್ನು ಹೆಚ್ಚಿಸಲು ಇದರಿಂದ ಸಾಧ್ಯವಾಗಿದ್ದು, ಸುತ್ತಮುತ್ತಲಿನ ಸಮುದಾಯದಲ್ಲಿ ಧನಾತ್ಮಕ ಬದಲಾವಣೆ ತಿಂದಿದೆ. ಯೊಟಾ ತಾಂತ್ರಿಕ ತರಬೇತಿ ಸಂಸ್ಥೆ (ಟಿಟಿಟಿಐ) ಮತ್ತು ಟೊಯೊಟಾ ತಾಂತ್ರಿಕ ಶಿಕ್ಷಣ ಕಾರ್ಯಕ್ರಮ (ಟಿಟಿಇಪಿ) ಕಾರ್ಯಕ್ರಮಗಳ ಮೂಲಕ ‘ಸ್ಕಿಲ್ ಇಂಡಿಯಾ’ ಗೆ ಕೊಡುಗೆ ನೀಡುತ್ತದೆ. ಪ್ರಸ್ತುತ ಟಿಟಿಟಿಐ ಕರ್ನಾಟಕದ ಸುಮಾರು 1,000 ವಿದ್ಯಾರ್ಥಿಗಳಿಗೆ ತರಬೇತಿ ನೀಡಿದೆ. ಟಿಟಿಇಪಿ ಮೂಲಕ ಭಾರತದ 26 ರಾಜ್ಯಗಳ 63 ಸಂಸ್ಥೆಗಳಿಂದ 12,000 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ಮುಂದೆ ನಾವು ವಿಶ್ವದರ್ಜೆಯ ಕೌಶಲ್ಯ ತರಬೇತಿಯನ್ನು ಒದಗಿಸುವ ಮತ್ತು ನುರಿತ ವೃತ್ತಿಪರರ ಅಭಿವೃದ್ಧಿಯನ್ನು ಉತ್ತೇಜಿಸುವ ಧ್ಯೇಯಕ್ಕೆ ಬದ್ಧರಾಗಿದ್ದೇವೆ, ಆ ಮೂಲಕ ‘ಎಲ್ಲರಿಗೂ ಸಾಮೂಹಿಕ ಸಂತೋಷವನ್ನು’ ತರುತ್ತೇವೆ.
“ಮೇಕ್ ಇನ್ ಇಂಡಿಯಾ”ಕ್ಕೆ ಕಂಪನಿಯ ಕೊಡುಗೆಗೆ ಮತ್ತಷ್ಟು ಉತ್ತೇಜನವಾಗಿ ಹೊಸ ಹೂಡಿಕೆಗಳು ಟಿಕೆಎಂ ಉತ್ಪಾದನಾ ಸಾಮರ್ಥ್ಯವನ್ನು 1,00,000 ಯುನಿಟ್ ಗಳಷ್ಟು ಹೆಚ್ಚಿಸುತ್ತವೆ. ಸುಮಾರು 2,000 ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಹೊಸ ಅಭಿವೃದ್ಧಿಯು ಪೂರೈಕೆದಾರ ಪರಿಸರ ವ್ಯವಸ್ಥೆಯಲ್ಲಿ ಮತ್ತಷ್ಟು ಬೆಳವಣಿಗೆಯ ಸಾಮರ್ಥ್ಯವನ್ನು ತರುತ್ತದೆ. ನಾವು ಭಾರತದಲ್ಲಿ ಟಿಕೆಎಂನ 25 ವರ್ಷಗಳನ್ನು ಆಚರಿಸುತ್ತಿರುವಾಗ ಈ ಪ್ರಯಾಣವು ನಮ್ಮ ಟೊಯೊಟಾ ತಂಡ ಮತ್ತು ವಿವಿಧ ಮಧ್ಯಸ್ಥಗಾರರ ಉತ್ಸಾಹ, ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ. ಯಾರೂ ಹಿಂದೆ ಉಳಿಯದೆ ಎಲ್ಲರಿಗೂ ಸುಸ್ಥಿರ ಭವಿಷ್ಯವನ್ನು ಸೃಷ್ಟಿಸುವಲ್ಲಿ ಅವರ ಅಮೂಲ್ಯ ಕೊಡುಗೆಗಾಗಿ ನಾನು ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ” ಎಂದು ಹೇಳಿದರು.
ಕಳೆದ ವರ್ಷ, ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಮತ್ತು ಟೊಯೊಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ (ಟಿಕೆಎಪಿ) ಒಳಗೊಂಡ ಟೊಯೊಟಾ ಗ್ರೂಪ್ ಆಫ್ ಕಂಪನಿಗಳು ಕರ್ನಾಟಕ ಸರ್ಕಾರದೊಂದಿಗೆ 4,100 ಕೋಟಿ ರೂ.ಗಳ ಹೂಡಿಕೆ ಮಾಡಲು ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದವು. ಭಾರತಕ್ಕೆ ಮಾತ್ರವಲ್ಲದೆ ರಫ್ತಿಗೂ ಉತ್ಪಾದಿಸುವ ಮೂಲಕ ಸಾಮೂಹಿಕ ವಿದ್ಯುದ್ದೀಕರಣಕ್ಕಾಗಿ ನಿರಂತರ ಬದ್ಧತೆಯ ಮೂಲಕ ಕಾರ್ಯತಂತ್ರದ ಪ್ರಾಮುಖ್ಯತೆಯ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಭಾರತ ಹೊರಹೊಮ್ಮಲು ಟಿಕೆಎಪಿ ಅತ್ಯುತ್ತಮ ಉದಾಹರಣೆಯಾಗಿದೆ.
ಕಳೆದ 25 ವರ್ಷಗಳ ಪ್ರಯಾಣವು ಭಾರತ ಮತ್ತು ಕರ್ನಾಟಕ ರಾಜ್ಯಕ್ಕೆ ಟಿಕೆಎಂನ ಕೊಡುಗೆ
ಕಳೆದ 25 ವರ್ಷಗಳಲ್ಲಿ ಟೊಯೊಟಾ ಕರ್ನಾಟಕ ರಾಜ್ಯದಲ್ಲಿ ಉತ್ಪಾದನೆಯಲ್ಲಿ ಸುಸ್ಥಿರತೆ ಮತ್ತು ನಾವೀನ್ಯತೆಗೆ ಅಡಿಪಾಯವಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ. ಟೊಯೊಟಾ ಕಿರ್ಲೋಸ್ಕರ್ ಮೋಟಾರ್, ಟೊಯೊಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಮತ್ತು ಟೊಯೊಟಾ ಇಂಡಸ್ಟ್ರೀಸ್ ಎಂಜಿನ್ ಇಂಡಿಯಾ ಸೇರಿದಂತೆ ಟೊಯೋಟಾ ಗ್ರೂಪ್ ಆಫ್ ಕಂಪನಿಗಳು 16,000 ಕೋಟಿ ರೂ.ಗಿಂತ ಹೆಚ್ಚು ಹೂಡಿಕೆ ಮಾಡಿವೆ ಮತ್ತು ಪೂರೈಕೆದಾರರು ಮತ್ತು ಡೀಲರ್ ಪಾಲುದಾರರು ಸೇರಿದಂತೆ ಇಡೀ ಮೌಲ್ಯ ಸರಪಳಿಯಲ್ಲಿ ಸುಮಾರು 88,000 ಉದ್ಯೋಗಗಳನ್ನು ಸೃಷ್ಟಿಸಿವೆ. ಭಾರತಕ್ಕೆ ಮಾತ್ರವಲ್ಲದೆ ವಿಶ್ವಕ್ಕೆ ಮೇಕ್ ಇನ್ ಇಂಡಿಯಾದ ತತ್ವವನ್ನು ಒತ್ತಿಹೇಳುತ್ತಾ, ಟೊಯೊಟಾದ ಸಂಚಿತ ರಫ್ತು ಕೊಡುಗೆಗಳು ಸುಮಾರು 30,000 ಕೋಟಿ ರೂ.
ಇದಲ್ಲದೆ, ಟಿಕೆಎಂ ಮಾತ್ರ ಈಗಾಗಲೇ ದೇಶದಲ್ಲಿ ತನ್ನ ಕಾರ್ಯತಂತ್ರದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಮಧ್ಯಸ್ಥಿಕೆಗಳ ಮೂಲಕ ಸುಮಾರು 2.2 ಮಿಲಿಯನ್ ಜನವರನ್ನು ತಲುಪಿದೆ.
ಭಾರತದಲ್ಲಿ ಟಿಕೆಎಂ ಪ್ರಬಲವಾಗುತ್ತಿದೆ:
ವಿಶ್ವಾಸಾರ್ಹ ಮೊಬಿಲಿಟಿ ಪಾಲುದಾರರಾಗಿ ಟಿಕೆಎಂ ತನ್ನ ಬಲವಾದ ಮತ್ತು ಬಹುಮುಖ ಉತ್ಪನ್ನ ಶ್ರೇಣಿಯೊಂದಿಗೆ ಭಾರತದಲ್ಲಿ 2.3 ಮಿಲಿಯನ್ ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಈ ಪ್ರಯಾಣವು ಐಕಾನಿಕ್ ಕ್ವಾಲಿಸ್ ನೊಂದಿಗೆ ಪ್ರಾರಂಭವಾಯಿತು, ಅದರ ಇತ್ತೀಚಿನ ಕೊಡುಗೆಗಳಾದ ನ್ಯೂ ರುಮಿಯಾನ್, ನ್ಯೂ ವೆಲ್ಫೈರ್. ಫಾರ್ಚೂನರ್, ಲೆಜೆಂಡರ್ ಮತ್ತು ಹೊಸ ಇನ್ನೋವಾ ಕ್ರಿಸ್ಟಾ ಸೆಗ್ ಮೆಂಟಿನಲ್ಲಿ ಐಕಾನಿಕ್ ಹಿಲಕ್ಸ್, ಕ್ಯಾಮ್ರಿ ಹೈಬ್ರಿಡ್ ಮತ್ತು ಗ್ಲಾಂಝಾ, ಇನ್ನೋವಾ ಹೈಕ್ರಾಸ್ ಮತ್ತು ಅರ್ಬನ್ ಕ್ರೂಸರ್ ಹೈರೈಡರ್ ಅನ್ನು ಉತ್ಪಾದಿಸಲಾಗಿದೆ.
ಭವಿಷ್ಯದ ಗಮನ – ಭಾರತಕ್ಕೆ ಶುದ್ಧ ಮತ್ತು ಹಸಿರು ತಂತ್ರಜ್ಞಾನದತ್ತ ಟಿಕೆಎಂನ ನಿರಂತರ ಬದ್ಧತೆ
ಟೊಯೊಟಾ ಪರಿಸರ ಸವಾಲು ಮತ್ತು 2050 ರ ಇಂಗಾಲದ ತಟಸ್ಥತೆಯ ಗುರಿಗಳನ್ನು ಸಾಧಿಸುವ ಗುರಿಯೊಂದಿಗೆ ಟೊಯೊಟಾ ವಾಹನ ಲೈಫ್ ಸೈಕಲ್ ನಲ್ಲಿ CO2 ಕಡಿತ ಪ್ರಯತ್ನವನ್ನು ಸಂಯೋಜಿಸಿದೆ. ಪರ್ಯಾಯ ನವೀಕರಿಸಬಹುದಾದ ಇಂಧನ (ಆರ್ ಇ) ಮೂಲಗಳನ್ನು ಅಳವಡಿಸಿಕೊಳ್ಳುವುದು ಇಂಧನ ನಿರ್ವಹಣೆಯ ಕಡೆಗೆ ಅಂತಹ ಒಂದು ಮಹತ್ವದ ಹೆಜ್ಜೆಯಾಗಿದೆ. ಕಂಪನಿಯು ಜೂನ್ 2021 ರಿಂದ ಗ್ರಿಡ್ ವಿದ್ಯುತ್ ನಲ್ಲಿ ಶೇ.100% ಆರ್ ಇ ಸಾಧಿಸಿದೆ. ಮುಂದೆ ನೋಡುವುದಾದರೆ, ಟೊಯೊಟಾ ಇನ್ನೂ ಉತ್ತಮ ಮತ್ತು ಹಸಿರು ಕಾರುಗಳನ್ನು ನಿರ್ಮಿಸುವತ್ತ ಗಮನ ಹರಿಸುವುದನ್ನು ಮುಂದುವರಿಸಿದೆ. ಇದರಿಂದಾಗಿ ಪಳೆಯುಳಿಕೆ ಇಂಧನದಿಂದ ಶಕ್ತಿಯ ವರ್ಗಾವಣೆಯನ್ನು ಸಕ್ರಿಯಗೊಳಿಸಲು ಮತ್ತು ಕಾರ್ಬನ್ ಡೈಆಕ್ಸೈಡ್ ತಗ್ಗಿಸುವಿಕೆಯನ್ನು ಸಾಧ್ಯವಾದಷ್ಟು ವೇಗವಾಗಿ ಮುನ್ನಡೆಯಲಾಗುತ್ತಿದೆ. ವಿಕಸನಗೊಳ್ಳುತ್ತಿರುವ ಗ್ರಾಹಕರ ಅಗತ್ಯಗಳನ್ನು ಪೂರೈಸಲು ‘ಎಲ್ಲರಿಗೂ ಸಾಮೂಹಿಕ ಸಂತೋಷ’ವನ್ನು ಟಿಕೆಎಂ ತಲುಪಿಸುತ್ತದೆ.