IMG 20231121 WA0034

ನೆಸ್ಟಾಸಿಯಾ ನೂತನ‌ ಮಳಿಗೆ ಆರಂಭ….!

BUSINESS

ವಿಸ್ತರಣೆ ಯೋಜನೆಗಳ ಎರಡನೇ ಹಂತದ ಭಾಗವಾಗಿ, ಬೆಂಗಳೂರಿನಲ್ಲಿ ಮೊದಲ ಆಫ್‌ಲೈನ್ ಮಳಿಗೆಯನ್ನು ಪ್ರಾರಂಭಿಸಿದ ನೆಸ್ಟಾಸಿಯಾ

ಬೆಂಗಳೂರು, ಕರ್ನಾಟಕ – 21, 2023- ಪ್ರಮುಖ ಸಮಕಾಲೀನ ಗೃಹಾಲಂಕಾರ ಬ್ರಾಂಡ್ ಆದ ನೆಸ್ಟಾಸಿಯಾ ಬೆಂಗಳೂರಿನಲ್ಲಿನ ತನ್ನ ಮೊದಲ ಮಳಿಗೆಯ ಅದ್ಧೂರಿ ಆರಂಭವನ್ನು ಇಂದು ಘೋಷಿಸಿದೆ. ಬೆಂಗಳೂರಿನ ಬೆಳ್ಳಂದೂರಿನಲ್ಲಿ 680 ಚದರ ಅಡಿ ವಿಸ್ತೀರ್ಣದ ಔಟ್‌ಲೆಟ್ ಮೂಲಕ ಈ ಬ್ರ್ಯಾಂಡ್‌ ಚಿಲ್ಲರೆ ವ್ಯವಹಾರ ವಿಸ್ತರಣೆಯಲ್ಲಿ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದೆ. ಇದು ನೆಸ್ಟಾಸಿಯಾಗೆ ದೇಶದ ಎರಡನೇ ಆಫ್‌ಲೈನ್ ಮಳಿಗೆ ಆಗಿದೆ.

ಮಳಿಗೆಯ ವಿನ್ಯಾಸವು ನೆಸ್ಟಾಸಿಯಾದ ಸಂಸ್ಥಾಪಕರು ಮತ್ತು ಸೃಜನಶೀಲ ನಿರ್ದೇಶಕರಿಂದ ರೂಪಿಸಲ್ಪಟ್ಟ ಜಾಗತಿಕ ಸಮಕಾಲೀನ ಕಲಾತ್ಮಕ ವಿನ್ಯಾಸದ ಸ್ಫೂರ್ತಿ ಪಡೆದು ರಚಿಸಲಾಗಿದೆ.
ನಿಖರತೆಯೊಂದಿಗೆ ರೂಪಿಸಲಾದ ಈ ಮಳಿಗೆಯು ಬಂಗಾರ ಬಣ್ಣದ ಛಾಯೆಗಳೊಂದಿಗೆ ಬಿಳಿ ಬಣ್ಣದ ಪ್ಯಾಲೆಟ್ ಅನ್ನು ಹೊಂದಿದೆ, ಈ ವಿನ್ಯಾಸವು ಉತ್ಪನ್ನಗಳಿಗೆ ಹಿತವಾದ ಹಿನ್ನೆಲೆ ಮತ್ತು ಗ್ರಾಹಕರಿಗೆ ಪ್ರಶಾಂತ ವಾತಾವರಣವನ್ನು ಉಂಟು ಮಾಡುತ್ತದೆ. ಮಧ್ಯಮ ಸೂಕ್ಷ್ಮತೆಯೊಂದಿಗೆ ಸೊಬಗನ್ನು ಸೊಗಸಾಗಿ ಮಿಶ್ರಣ ಮಾಡಿ ರಚಿಸಲಾಗಿರುವುದರಿಂದ ಕನಿಷ್ಠ ಮಹಡಿ ಯೋಜನೆ, ಶಿಲ್ಪಕಲಾ ಪ್ರದರ್ಶನ ಘಟಕಗಳು ಮತ್ತು ಕಮಾನು-ವಿನ್ಯಾಸದ ಗೊಂಡೊಲಾಗಳು ಉತ್ಪನ್ನಗಳನ್ನು ಕೇಂದ್ರ ವೇದಿಕೆಯಲ್ಲಿ ಕಾಣಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಈ ಸ್ಥಳದ ಚೆಂದಕ್ಕೆ ಮತ್ತಷ್ಟು ಪೂರಕವಾಗಿರುವುದು ಬಿಳಿ ಮತ್ತು ಬಂಗಾರ ಬಣ್ಣಕ್ಕೆ ಹೊಂದಿಕೊಂಡಿರುವಂತಹ ಓಕ್ವುಡ್ ಟೇಬಲ್‌ಗಳು. ನೆಸ್ಟಾಸಿಯಾದ ಮೂರು ಅವಿಭಾಜ್ಯ ಅಂಗಗಳಾದ ಕ್ವಾಲಿಟಿ, ಯುಟಿಲಿಟಿ ಮತ್ತು ಬ್ಯೂಟಿ ಅಂದರೆ ಗುಣಮಟ್ಟ, ಉಪಯುಕ್ತತೆ ಮತ್ತು ಸೌಂದರ್ಯದ ಹದವಾದ ಮಿಶ್ರಣದಿಂದ ನಿಖರವಾಗಿ ವಿನ್ಯಾಸಗೊಳಿಸಲಾಗಿರುವ ಉತ್ಪನ್ನಗಳನ್ನು ಹೊಂದಿರುವ ಈ ಮಳಿಗೆಯು ಚಂದ ಮತ್ತು ಕ್ರಿಯಾಶೀಲತೆಯ ಸಂಭ್ರಮದಂತೆ ಕಾಣಿಸುತ್ತದೆ.

IMG 20231121 WA0036

ನೆಸ್ಟಾಸಿಯಾದ ಪ್ರಯಾಣವನ್ನು ನೆನೆಯುತ್ತಾ ಮಾತನಾಡಿದ ನೆಸ್ಟಾಸಿಯಾದ ಸಹ-ಸಂಸ್ಥಾಪಕಿ ಅದಿತಿ ಮುರಾರ್ಕಾ, ‘ನೆಸ್ಟಾಸಿಯಾದಲ್ಲಿ ನಾವು ಮನೆಯನ್ನು ವಿಶೇಷವಾಗಿಸಲು ಹಂಬಲಿಸುತ್ತೇವೆ. ಆಹ್ಲಾದಕರ ವಾತಾವರಣ ಉಂಟು ಮಾಡುವ ಟ್ರೆಂಡಿಂಗ್ ಮತ್ತು ಮಹತ್ವದ ವಿನ್ಯಾಸಗಳನ್ನು ಜೀವನಕ್ಕೆ ತರುವುದು ನಮ್ಮ ಗುರಿಯಾಗಿದೆ. ಮನೆಯಲ್ಲಿರುವ ಪ್ರತೀ ಸುಂದರವಾದ ಉತ್ಪನ್ನಗಳು ಸಹ ಒಂದು ಉದ್ದೇಶವನ್ನು ಪೂರೈಸಬೇಕು ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ನಾವು ಚಂದ ಮತ್ತು ಕ್ರಿಯಾಶೀಲತೆಯಲ್ಲಿ ಸಮತೋಲನವನ್ನು ಸಾಧಿಸಿದ್ದೇವೆ. ಬಹು-ವಾಹಕ ವಿಧಾನದೊಂದಿಗೆ ಬೆಂಗಳೂರಿನಲ್ಲಿ ನಾವು ನಮ್ಮ ಬಾಗಿಲು ತೆರೆದಿದ್ದೇವೆ. ಮನೆಯನ್ನು ವಿಶೇಷವಾಗಿಸುವ ಮತ್ತು ಮನೆಯ ಸುಧಾರಣೆಗಾಗಿ ಬೇಕಾಗುವ ಗೃಹಾಲಂಕಾರ, ಟೇಬಲ್‌ವೇರ್ ಮತ್ತು ಎಲ್ಲದರ ಸಂಭ್ರಮಾಚರಣೆ ಇಲ್ಲಿ ನಡೆಯಲಿದೆ. ನಮ್ಮ ಗ್ರಾಹಕರನ್ನು ಪ್ರೇರೇಪಿಸಲು ಮತ್ತು ಹತ್ತಿರಗೊಳಿಸಲು ಬೇಕಾಗುವ ವಿನ್ಯಾಸ ಮಹತ್ವವನ್ನು ನಾವು ನಂಬುತ್ತೇವೆ ಮತ್ತು ಈ ದೃಷ್ಟಿಯಿಂದ ನೋಡಿದಾಗ ಈ ಮಳಿಗೆಯ ಮೂಲಕ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದೇವೆ’ ಎಂದರು.

ಆಫ್ ಲೈನ್ ಚಿಲ್ಲರೆ ವ್ಯವಹಾರದಲ್ಲಿ ಬ್ರಾಂಡ್ ನ ವಿಸ್ತರಣೆಯ ಮೇಲೆ ಬೆಳಕು ಚೆಲ್ಲುತ್ತಾ ಅವರು, ‘ಆಫ್‌ಲೈನ್ ವಿಭಾಗದಲ್ಲಿನ ಆರಂಭಿಕ ಟ್ರೆಂಡ್‌ಗಳು ಆಶಾದಾಯಕವಾಗಿವೆ. ನೆಸ್ಟಾಸಿಯಾ ವಾಕ್-ಇನ್ ಗ್ರಾಹಕರ 80%ಗಿಂತ ಹೆಚ್ಚು ಮಂದಿ ಗ್ರಾಹಕರಾಗಿ ಪರಿವರ್ತನೆ ಹೊಂದಿರುವುದನ್ನು ಕಂಡಿದೆ ಮತ್ತು ಆಫ್‌ಲೈನ್ ನ ಸರಾಸರಿ ಆರ್ಡರ್ ಮೌಲ್ಯವು ಆನ್‌ಲೈನ್ ಆರ್ಡರ್‌ಗಳಲ್ಲಿ ಕಂಡುಬರುವ ಇದೇ ರೀತಿಯ ಮಾರಾಟಕ್ಕಿಂತ 30% ಹೆಚ್ಚಾಗಿದೆ. ಆಫ್‌ಲೈನ್ ಮಳಿಗೆಗಳು ಆಧುನಿಕ ಸಮಕಾಲೀನ ಮತ್ತು ಕನಿಷ್ಠ ವಿನ್ಯಾಸವನ್ನು ಹೊಂದಿದ್ದು, ಇದು ಉತ್ಪನ್ನಗಳನ್ನು ಅಸಾಧಾರಣ ವೈಶಿಷ್ಟ್ಯವಾಗಿ ಪ್ರದರ್ಶಿಸಲು ಅನುವು ಮಾಡಿಕೊಡುತ್ತದೆ. ಪ್ರಸ್ತುತ ಮಳಿಗೆಗಳು ಕಾರ್ಪೆಟ್ ಪ್ರದೇಶದ 600-1000 ಚದರ ಅಡಿಗಳ ಮಧ್ಯೆ ಇದ್ದರೂ, ಬ್ರ್ಯಾಂಡ್ ಭವಿಷ್ಯದಲ್ಲಿ ದೊಡ್ಡ ಸ್ವರೂಪದ ಮಳಿಗೆಗಳನ್ನು ಸ್ಥಾಪಿಸುವತ್ತ ಎದುರು ನೋಡುತ್ತಿದೆ. 2024ರ ಅಂತ್ಯದ ವೇಳೆಗೆ, ಆಫ್‌ಲೈನ್ ಸ್ಟೋರ್‌ಗಳಿಂದ 20% ಆದಾಯವನ್ನು ಪಡೆಯುವ ಗುರಿ ಕಂಪನಿಗಿದೆ. ನೆಸ್ಟಾಸಿಯಾ ಆರ್ಥಿಕ ವರ್ಷ 22 ಅನ್ನು 21.8 ಕೋಟಿ ರೂಪಾಯಿಗಳ ನಿವ್ವಳ ಆದಾಯದೊಂದಿಗೆ ಕೊನೆಗೊಳಿಸಿದೆ ಮತ್ತು ಆರ್ಥಿಕ ವರ್ಷ 24ರಲ್ಲಿ EBITDA(ಇಬಿಐಟಿಡಿಎ) ಧನಾತ್ಮಕವಾಗಿ’ ಇದೆ ಎನ್ನುತ್ತಾರೆ.

ರಜೆಯ ಸಂಭ್ರಮವನ್ನು ಸ್ವಾಗತಿಸಲು ಬೆಂಗಳೂರು ಮಳಿಗೆಯ ಆರಂಭ ಮಾಡುವ ಮೂಲಕ ಬ್ರಾಂಡ್ ತನ್ನ ಕ್ರಿಸ್ಮಸ್ ಸಂಗ್ರಹಣೆಯ ವಿಶೇಷ ಮುನ್ನೋಟವನ್ನು ಬೆಂಗಳೂರು ಮಳಿಗೆಯಲ್ಲಿ ನೀಡಲು ಸಿದ್ಧವಾಗಿದೆ. ರಜಾದಿನದ ಉತ್ಸಾಹದ ಜೊತೆಗೆ ಹೊಂದಿಕೊಂಡಂತೆ ಸಿದ್ಧವಾಗಿರುವ ಸಂಗ್ರಹಣೆಯು, ರಜಾ ದಿನಗಳಿಗೆ ಅಗತ್ಯವಿರುವ ಥೀಮ್ ಮಗ್‌ಗಳು, ಫೋಟೋ ಫ್ರೇಮ್‌ಗಳು, ಅಲಂಕಾರಿಕ ವಸ್ತುಗಳು, ಕ್ರಿಸ್‌ಮಸ್ ಸರಗಳು, ಅನನ್ಯ ಕ್ರಿಸ್ಮಸ್ ಆಭರಣಗಳು, ವರ್ಣರಂಜಿತ ರಜಾದಿನದ ಕುಶನ್ ಕವರ್‌ಗಳು, ವಿಶಿಷ್ಟ ಕಂಬಳಿಗಳು ಮತ್ತು ಇತರ ರಜಾದಿನದ ಸಾಮಾಗ್ರಿಗಳನ್ನು ಒಳಗೊಂಡಿದೆ.

ಕಳೆದ ಹಲವು ವರ್ಷಗಳಲ್ಲಿ ಮತ್ತು ಮುಂದಿನ ಹಾದಿಯಲ್ಲಿ, ನೆಸ್ಟಾಸಿಯಾ ಪ್ರತಿ ಮನೆಯು ವೈಯಕ್ತಿಕ ಅಭಿವ್ಯಕ್ತಿಗೆ ಅವಕಾಶವುಳ್ಳ ಮತ್ತು ಹೆಮ್ಮೆ ತುಂಬಿರುವ ಸ್ಥಳವಾಗಿರಬೇಕು ಎಂದೇ ಬಯಸುತ್ತದೆ, ಆ ಬದ್ಧತೆಗೆ ಈ ಹೊಸ ಮಳಿಗೆಯು ಪೂರಕವಾಗಿ ಕಾರ್ಯನಿರ್ವಹಿಸಲಿದೆ.

ನೆಸ್ಟಾಸಿಯಾ ಕುರಿತು:
ಉದ್ಯಮಿ ದಂಪತಿಗಳಾದ ಅದಿತಿ ಮುರಾರ್ಕಾ ಮತ್ತು ಅನುರಾಗ್ ಅಗರವಾಲ್ ಅವರ ಕನಸಿನ ಕೂಸು ನೆಸ್ಟಾಸಿಯಾ. ಇದು ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಗೃಹ ಅಲಂಕಾರ ಮತ್ತು ಜೀವನಶೈಲಿ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಆಧುನಿಕ ಮತ್ತು ಸಾಂಪ್ರದಾಯಿಕ ಮನೆಗಳ ಅಗತ್ಯತೆಗಳನ್ನು ಪೂರೈಸುವ ವೈವಿಧ್ಯಮಯ ಉತ್ಪನ್ನಗಳೊಂದಿಗೆ ವಿನ್ಯಾಸ-ನೇತೃತ್ವದಲ್ಲಿ ಮುಂದುವರೆಯುವ ಬ್ರ್ಯಾಂಡ್ ಆಗುವ ಗುರಿಯನ್ನು ನೆಸ್ಟಾಸಿಯಾ ಹೊಂದಿದೆ. ಪ್ರಸ್ತುತ, ಬ್ರ್ಯಾಂಡ್ ಎಂಟು ಪ್ರಮುಖ ಉತ್ಪನ್ನ ವಿಭಾಗಗಳಲ್ಲಿ 7000ಕ್ಕೂ ಹೆಚ್ಚು ಉತ್ಪನ್ನಗಳನ್ನು ಹೊಂದಿದೆ. ಪ್ರತಿ ಹದಿನೈದು ದಿನಗಳಿಗೊಮ್ಮೆ ಹೊಸ ಉತ್ಪನ್ನಗಳು ಬಿಡುಗಡೆಯಾಗುತ್ತವೆ.
ಡೈನಿಂಗ್, ಅಡುಗೆಮನೆ, ಅಲಂಕಾರ, ಬ್ಯಾಗ್‌ಗಳು ಮತ್ತು ಪರಿಕರಗಳು, ಸ್ಟೇಷನರಿ, ಸ್ನಾನದ ಮನೆ, ಮೃದುವಾದ ಪೀಠೋಪಕರಣಗಳು ಮತ್ತು ಐಷಾರಾಮಿ ಉತ್ಪನ್ನಗಳು ಪ್ರಮುಖ ವಿಭಾಗಗಳಾಗಿವೆ. ಈ ಉತ್ಪನ್ನಗಳಲ್ಲಿ ಬ್ರ್ಯಾಂಡ್ ಜಾಗತಿಕ ಸಮಕಾಲೀನ ಕಲಾತ್ಮಕತೆಯನ್ನು ಒದಗಿಸುತ್ತದೆ. ನೆಸ್ಟಾಸಿಯಾವು ಗುಣಮಟ್ಟ, ಉಪಯುಕ್ತತೆ ಮತ್ತು ಸೌಂದರ್ಯ ಈ ಮೂರು ಪ್ರಮುಖ ಮೌಲ್ಯಗಳಿಂದ ನಡೆಸಲ್ಪಡುತ್ತದೆ. ಅದು ಬ್ರ್ಯಾಂಡ್ ಅನ್ನು ನಿರಂತರವಾಗಿ ಪರಿಷ್ಕರಿಸಲು ಮತ್ತು ಅವರ ಗ್ರಾಹಕರಿಗೆ ತಡೆರಹಿತ ಅನುಭವವನ್ನು ನೀಡಲು ಪ್ರೇರೇಪಿಸುತ್ತದೆ. ಬ್ರಾಂಡ್ ಕಾಲಕ್ಕೆ ತಕ್ಕ ಉತ್ಪನ್ನ ಶ್ರೇಣಿಗಳನ್ನು ಒದಗಿಸುವ ಮೂಲಕ ಮನೆಯ ಕಲಾತ್ಮಕ ಆಕರ್ಷಣೆಯನ್ನು ಹೊಸತು ಮಾಡುವುದರ ಜೊತೆಗೆ ಇತ್ತೀಚಿನ ಟ್ರೆಂಡ್‌ಗಳು ಮತ್ತು ಸ್ಟೈಲ್‌ಗಳನ್ನು ಗೃಹಾಲಂಕಾರದಲ್ಲಿ ಇರಿಸುತ್ತದೆ. ನೆಸ್ಟಾಸಿಯಾದ ಧ್ಯೇಯವಾಕ್ಯ, ಮೇಕ್ ಹೋಮ್ ಸ್ಪೆಷಲ್ ಎಂಬುದು, ಅವರ ಸೃಜನಶೀಲತೆಯ ಕುರಿತಾದ ಮೆಚ್ಚುಗೆಯನ್ನು ಮತ್ತು ಕ್ರಿಯಾತ್ಮಕ ಮತ್ತು ವಿಶಿಷ್ಟ ಉತ್ಪನ್ನಗಳ ಮೂಲಕ ಪ್ರತಿ ಕೋಣೆಗೆ ಸೊಬಗಿನ ಸ್ಪರ್ಶವನ್ನು ಸೇರಿಸಿ ಮನೆಗಳನ್ನು ನವೀಕರಿಸುವ ಮೂಲಕ ಹೆಮ್ಮೆಪಡುವಂತೆ ಮನೆಮಾಲೀಕರನ್ನು ಪ್ರೇರೇಪಿಸುವ ಬಯಕೆಯನ್ನು ಪ್ರತಿಬಿಂಬಿಸುತ್ತದೆ.