IMG 20231128 WA0064 scaled

Karnataka: ಎಲ್ಲಾ ನಾಗರೀಕರಿಗೂ ಮೂಲ ಸೌಕರ್ಯ ಕಲ್ಪಿಸುವುದು ಸರ್ಕಾರದ ಆದ್ಯತೆ….!

Genaral STATE

ಎಲ್ಲಾ ನಾಗರೀಕರಿಗೂ ಮೂಲ ಸೌಕರ್ಯ ಕಲ್ಪಿಸುವುದು ಸರ್ಕಾರದ ಆದ್ಯತೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ನವೆಂಬರ್ 28 (ಕರ್ನಾಟಕ ವಾರ್ತೆ):

ಜನರಿಗೆ ಶುದ್ಧ ಕುಡಿಯುವ ನೀರು, ಸಾರಿಗೆ, ಸ್ವಚ್ಛತೆ, ವಿದ್ಯುಚ್ಚಕ್ತಿ, ಚರಂಡಿ ಹಾಗೂ ಮಾರುಕಟ್ಟೆ ವ್ಯವಸ್ಥೆ ಒದಗಿಸುವುದು ಎಲ್ಲಾ ಸರ್ಕಾರಗಳ ಆದ್ಯ ಕರ್ತವ್ಯವಾಗಿದ್ದು, ಜನಪ್ರತಿನಿಧಿಗಳು ಎಲ್ಲಾ ಸ್ಥರಗಳಲ್ಲಿ ಶ್ರಮಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಹಮ್ಮಿಕೊಳ್ಳಲಾದ 3 ದಿನಗಳ ಮುನಿಸಿಪಾಲಿಕ – 2023, 17ನೇ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

IMG 20231128 WA0052


.  ರಾಜ್ಯದಲ್ಲಿ 316 ನಗರ ಪ್ರದೇಶಗಳಿದ್ದು, ಇದಕ್ಕೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ನವೆಂಬರ್ 28 ರಿಂದ 30 ರವರೆಗೆ ಈ ಸಮ್ಮೇಳನ ಆಯೋಜಿಸಲಾಗಿದ್ದು,  2000ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಅಲ್ಲದೇ 10 ಆಸ್ಟ್ರೇಲಿಯನ್ ಸಂಸ್ಥೆಗಳ ನಿಯೋಗ ಸಹ ಪಾಲ್ಗೊಳ್ಳುತ್ತಿವೆ ಎಂದರು.

ಕರ್ನಾಟಕದಲ್ಲಿ ಶೇ. 60ರಷ್ಟು ಜನ ಈಗಲೂ ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ಕರ್ನಾಟಕದ 7 ಕೋಟಿ ಜನಸಂಖ್ಯೆಯಲ್ಲಿ ಒಂದೂವರೆ ಕೋಟಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಸರ್ಕಾರವು ರಾಜ್ಯದ 280 ಪಟ್ಟಣ ಪಂಚಾಯಿತಿಗಳಿಗೆ ಕುಡಿಯುವ ನೀರಿಗೆ 9000 ಕೋಟಿ ಅನುದಾನ ಒದಗಿಸಿದೆ. ಹಾಗೆಯೇ 53 ಪಟ್ಟಣಗಳಿಗೆ ಚರಂಡಿ ವ್ಯವಸ್ಥೆಗೆ 1900 ಕೋಟಿ ಅನುದಾನ ನೀಡಲಾಗಿದೆ ಎಂದರು.

ಎಲ್ಲರಿಗೂ ಉತ್ತಮ ನಾಗರಿಕ ಸವಲತ್ತು ಒದಗಿಸುವುದು ಬಹಳ ಮುಖ್ಯ. ಸರ್ಕಾರ ಇಂದಿರಾ ಕ್ಯಾಂಟೀನ್‍ನಲ್ಲಿ ಕಡಿಮೆ ಬೆಲೆಯಲ್ಲಿ ಜನರಿಗೆ ಆಹಾರ ನೀಡುತ್ತದೆ. ಈಗಾಗಲೇ ಬೆಂಗಳೂರಿನಲ್ಲಿ 197 ಇಂದಿರಾ ಕ್ಯಾಂಟೀನ್‍ಗಳಿದ್ದು, ಇನ್ನೂ 188 ಹೊಸ ಕ್ಯಾಂಟೀನ್ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಅಲ್ಲದೇ ಬ್ರಾಂಡ್ ಬೆಂಗಳೂರಿಗೆ ಆದ್ಯತೆ ನೀಡಿ, 176 ಕಿಲೋಮೀಟರ್‍ವರೆಗೆ ಮೆಟ್ರೋ ರೈಲು ವಿಸ್ತರಣೆ ಆಗುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರನ್ನು ಗುರುತಿಸುವುದು ನಮ್ಮ ಗುರಿ ಎಂದರು.

IMG 20231128 WA0061

 ಕಾರ್ಯಕ್ರಮದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಹಣವನ್ನು ಸೂಕ್ತ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಖರ್ಚು ಮಾಡಿದರೆ ಏಳಿಗೆ ಸಾಧ್ಯ. ಕುಡಿಯುವ ನೀರು ಪೂರೈಕೆ ಕಸ ವಿಲೇವಾರಿ, ಮಳೆ ನೀರು ಕೊಯ್ಲು ಮುಂತಾದವುಗಳಿಗೆ ಆದ್ಯತೆ ನೀಡಬೇಕು. ಹಳ್ಳಿ, ನಗರ ಹಾಗೂ ಶಾಲೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಟ್ರಾಫಿಕ್ ಸಮಸ್ಯೆಗೆ ಸಹ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಸುರೇಶ್ ಬಿ.ಎಸ್., ಪೌರಾಡಳಿತ ಸಚಿವರಾದ ರಹೀಮ್ ಖಾನ್, ಆಸ್ಟ್ರೇಲಿಯನ್ ಹೈ ಕಮೀಷನ್ ವಾಣಿಜ್ಯ ಸಚಿವೆ ಕ್ಯಾಥರೀನ್ ಗಲ್ಲಾಘರ್, ವಿಧಾನಪರಿಷತ್ ಸದಸ್ಯರಾದ ರವಿ, ವಿಧಾನಸಭೆಯ ಸದಸ್ಯರಾದ ತಮ್ಮಯ್ಯ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಾದ ಡಾ.ಎಂ.ಎನ್.ಅಜಯ್ ನಾಗಭೂಷಣ್, ಬಿ.ಬಿ.ಎಂ.ಪಿ ಆಯುಕ್ತರಾದ ತುಷಾರ್ ಗಿರಿನಾಥ್, ಗುಡ್ ಗೌವರ್ನೆನ್ಸ್ – ಇಂಡಿಯಾ ಫೌಂಡೇಶÀನ್ ಅಧ್ಯಕ್ಷರಾದ ಸುರೇಶ್ ಉಪಸ್ಥಿತರಿದ್ದರು.