IMG 20231128 WA0025

Karnataka: ಇಪಿಎಲ್(EPL) ಪಡೆಯ ಟೋಟನ್‌ಹ್ಯಾಮ್ ಹಾಟ್‌ಸ್ಪರ್‌ನೊಂದಿಗೆ ಸಹಭಾಗಿತ್ವಕ್ಕೆ ಸಹಿ ಹಾಕಿದ ಕಿಕ್‌ಸ್ಟಾರ್ಟ್ ಎಫ್‌ಸಿ…!

BUSINESS SPORTS

ಇಪಿಎಲ್(EPL) ಪಡೆಯ ಟೋಟನ್‌ಹ್ಯಾಮ್ ಹಾಟ್‌ಸ್ಪರ್‌ನೊಂದಿಗೆ ಐತಿಹಾಸಿಕ ಸಹಭಾಗಿತ್ವಕ್ಕೆ ಸಹಿ ಹಾಕಿದ ಕಿಕ್‌ಸ್ಟಾರ್ಟ್ ಎಫ್‌ಸಿ(Kickstart FC)


ಇಂಗ್ಲಿಷ್ ಪ್ರೀಮಿ‌ಯರ್‌ ಲೀಗ್ ಕ್ಲಬ್‌ನ ಟೋಟನ್‌ಹ್ಯಾಮ್ ಹಾಟ್‌ಸ್ಪರ್‌ದೊಂದಿಗೆ ಸಹಭಾಗಿತ್ವಕ್ಕೆ ಸಹಿ ಹಾಕಿರುವುದನ್ನು ಘೋಷಿಸುವುದಕ್ಕೆ Kickstart FC ಅತ್ಯಂತ ಹರ್ಷಗೊಂಡಿದೆ


ಈ ಸಹಭಾಗಿತ್ವವು, ಸ್ಥಳೀಯ ಕ್ರೀಡೆಯ ಅಭಿವೃದ್ಧಿಗೆ ನೆರವಾಗಲು ಎಲ್ಲಾ ಫುಟ್‌ಬಾಲ್ ಅಂಶಗಳಾದ್ಯಂತ ಎಳೆಯ ಆಟಗಾರರು ಮತ್ತು ಮಹತ್ವಾಕಾಂಕ್ಷೆಯುಳ್ಳ ಕೋಚ್‌ಗಳನ್ನು ಬೆಳೆಸಲು ನೆರವಾಗಲಿದೆ


ಬೆಂಗಳೂರು, ನವಂಬರ್ 28, 2023: ಭಾರತೀಯ ಫುಟ್‌ಬಾಲ್‌ನ ಚಿತ್ರಣವನ್ನು ಮರುವಿವರಿಸುವ ಪ್ರಯತ್ನದ ನಿಟ್ಟಿನಲ್ಲಿ, ಕರ್ನಾಟಕದ ಪ್ರೀಮಿಯರ್ ಫುಟ್‌ಬಾಲ್ ಕ್ಲಬ್ ಮತ್ತು ಅಕಾಡೆಮಿಯಾದ Kickstart FC, ಸುಪ್ರಸಿದ್ಧವಾದ ಇಂಗ್ಲಿಷ್ ಪ್ರೀಮಿಯಮ್ ಲೀಗ್ ಪಡೆಯಾದ ಟೋಟನ್‌ಹ್ಯಾಮ್ ಹಾಟ್‌ಸ್ಪರ್ ಫುಟ್‌ಬಾಲ್ ಕ್ಲಬ್‌ನೊಂದಿಗೆ(Tottenham Hotspur Football Club)ಪ್ರಮುಖ ಸಹಭಾಗಿತ್ವವನ್ನು ಹೆಮ್ಮೆಯಿಂದ ಘೋಷಿಸಿದೆ. ಟೋಟನ್‌ಹ್ಯಾಮ್‌ನ ರಾಯಭಾರಿಗಳಾದ ಲೆಡ್ಲಿ ಕಿಂಗ್ ಮತ್ತು ಓಸ್ವಾಲ್ಡೊ ಆರ್ಡಿಲ್ಸ್(Ledley King & Osvaldo Ardiles) ಹಾಜರಿದ್ದ ಈ ಐತಿಹಾಸಿಕ ಅನಾವರಣವು ಕರ್ನಾಟಕ ಮತ್ತು ಭಾರತೀಯ ಫುಟ್‌ಬಾಲ್ ಬೆಳವಣಿಗೆಯಲ್ಲಿ ಪ್ರಮುಖ ಕ್ಷಣವಾಗಿದೆ.
ಈ ಸಹಭಾಗಿತ್ವದ ಮೂಲಕ Kickstart FC ಟೋಟನ್‌ಹ್ಯಾಮ್ ಹಾಟ್‌ಸ್ಪರ್‌ನಜಾಗತಿಕ ಫುಟ್ಽಽಬ್ಾಲ್ಕ್ೋಚ್ಿಂ ತಂಡದಿಂದ ತಾಂತ್ರಿಕ ಬೆಂಬಲ ಪಡೆದುಕೊಳ್ಳಲ್ಲಿದ್ದು, ಇವರು ಕ್ಲಬ್‌ನ ತರಬೇತಿ ಪಠ್ಯಕ್ರಮ, ಮತ್ತು ಫುಟ್‌ಬಾಲ್‌ನ ಎಲ್ಲಾ ಅಂಶಗಳಿಗೆ ಆಕಾರ ಒದಗಿಸಲಿದ್ದಾರೆ. ಹೆಚ್ಚುವರಿಯಾಗಿ, ಟೋಟನ್‌ಹ್ಯಾಮ್ ಹಾಟ್‌ಸ್ಪರ್ ತನ್ನ ತಾಂತ್ರಿಕ ಸಿಬ್ಬಂದಿಯನ್ನು ಬೆಂಗಳೂರಿನಲ್ಲೇ ಇರಿಸಿ, Kickstart FC ಇಂಗ್ಲಿಷ್ ಪ್ರಬಲಪಡೆಗೆ ಅನುಗುಣವಾಗಿ ಇರುವಂತೆ ಅದರ ತರಬೇತಿ ವಿಧಾನಗಳನ್ನು ತಯಾರಿಸಲಿದೆ.
ಈಗಾಗಲೇ ಪ್ರಶಂಸನೀಯ ದಾಖಲೆ ಹೊಂದಿರುವ ಕ್ಲಬ್‌ನ ಮಹಿಳಾ ತಂಡವು, ಇತ್ತೀಚೆಗೆ ಸಂಪೂರ್ಣಗೊಂಡ ಭಾರತೀಯ ಮಹಿಳಾ ಲೀಗ್ ಪಂದ್ಯಾವಳಿಯಲ್ಲಿ ರನ್ನರ್ಸ್ ಅಪ್ ಅಗಿದೆ. Kickstart FC, ಯಾವಾಗಲೂ ವಿವಿಧ ವರ್ಗಗಳಾದ್ಯಂತ ಆಟಗಾರ ಬೆಳವಣಿಗೆಗೆ ಒತ್ತು ನೀಡುತ್ತಾ ಬಂದಿದೆ. ಆದ್ದರಿಂದಲೇ ಈ ಸಹಭಾಗಿತ್ವವು ಕರ್ನಾಟಕ ರಾಜ್ಯದಲ್ಲಿ ಕ್ಲಬ್‌ನ ಪ್ರಯತ್ನಗಳನ್ನು ಇನ್ನಷ್ಟು ಬಲಪಡಿಸಿ ಅನುವುಗೊಳಿಸಲಿದೆ.
ಎರಡೂ ಕ್ಲಬ್‌ಗಳಿಗೆ ಪ್ರಯೋಜನಕಾರಿಯಾಗಿರುವ ಈ ಸಹಭಾಗಿತ್ವವು, ಸ್ಪರ್ಧಾತ್ಮಕ ಸ್ಪರ್ಧೆಯ ಮೂಲಕ ಯುವ ತಂಡಗಳನ್ನು ಬಲಪಡಿಸುವತ್ತ ಬಲವಾದ ಪ್ರೇರಣೆ ಒದಗಿಸಲಿದೆ. ಪ್ರತಿಭಾ ಅಭಿವೃದ್ಧಿಗೆ ಸಹಯೋಗಗಳನ್ನು ರಚಿಸುತ್ತಾ, Kickstart FCದ ಯುವತಂಡವು, ಟೋಟನ್‌ಹ್ಯಾಮ್ ಹಾಟ್‌ಸ್ಪರ್‌ನ ಯುವತಂಡಗಳೊಂದಿಗೆ ತರಬೇತಿ ಪಡೆದುಕೊಳ್ಳಲು ಯು.ಕೆ.ಗೆ ಪ್ರಯಾಣ ಬೆಳೆಸುವ ಅವಕಾಶವನ್ನೂ ಪಡೆದುಕೊಳ್ಳಲಿದೆ.
ಟೋಟನ್‌ಹ್ಯಾಮ್ ಹಾಟ್‌ಸ್ಪರ್‌ನೊಂದಿಗಿನ ಸಹಯೋಗವು, Kickstart FCಅನ್ನು ಅಂತರರಾಷ್ಟ್ರೀಯ ರಂಗಕ್ಕೆ ವರ್ಧಿಸಲಿದ್ದು, ಅದಕ್ಕೆ ಸರಿಸಾಟಿಯಿಲ್ಲದ ಅವಕಾಶಗಳು ಮತ್ತು ಗುರುತಿಸುವಿಕೆಯನ್ನು ಒದಗಿಸಲಿದೆ. ಕಿಕ್‌ಶ್ಟಾರ್ಟ್ ಫುಟ್‌ಬಾಲ್‌ ಆಡಳಿತಮಂಡಳಿಯ ದಾರ್ಶನಿಕ ನಾಯಕತ್ವವು ಅಖಿಲ-ಭಾರತ ಮಟ್ಟದಲ್ಲಿ ಫುಟ್‌ಬಾಲ್‍ಅನ್ನು ಪ್ರೋತ್ಸಾಹಿಸುವ ಬದ್ಧತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.
Kickstart FC ದ ಸ್ಥಾಪಕ ಮತ್ತು ಚೇರ್ಮನ್ ಶ್ರೀ ಶೇಖರ್ ರಾಜನ್ ಸಹಭಾಗಿತ್ವದ ಬಗ್ಗೆ ಉತ್ಸಾಹ ವ್ಯಕ್ತಪಡಿಸುತ್ತಾ, ” ವಿಶ್ವ ಫುಟ್‌ಬಾಲ್‌ನಲ್ಲಿ ಅತಿದೊಡ್ಡ ಕ್ಲಬ್‌ಗಳ ಪೈಕಿ ಒಂದಾದ ಟೋಟನ್‌ಹ್ಯಾಮ್ ಹಾಟ್‌ಸ್ಪರ್‌ದೊಂದಿಗೆ ಈ ಸಹಭಾಗಿತ್ವ ಏರ್ಪಡಿಸಿಕೊಳ್ಳುತ್ತಿರುವುದಕ್ಕೆ ನಮಗೆ ಅತ್ಯಂತ ಹರ್ಷವಾಗುತ್ತಿದೆ. ಇದರಿಂದ ಅನೇಕ ಅತ್ಯುತ್ತಮ ಪದ್ಧತಿಗಳನ್ನು ಕಲಿತುಕೊಂಡು ನಮ್ಮ ಯುವಜನ ಅಭಿವೃದ್ಧಿ ಹಾಗೂ ಮಹಿಳೆಯರ ಫುಟ್‌ಬಾಲ್‍ಅನ್ನು ಬಲಪಡಿಸುವ ಉದ್ದೇಶ ನಮಗಿರುವುದರಿಂದ ಈ ಸಹಭಾಗಿತ್ವವು ನಮಗೆ ಮತ್ತು ಎರಡೂ ಕ್ಲಬ್‌ಗಳಿಗೆ ನೆರವಾಗುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಟೋಟನ್‌ಹ್ಯಾಮ್ ಹಾಟ್‌ಸ್ಪರ್‌ನಂತಹ ಕ್ಲಬ್‌ನಿಂದ ಕಲಿಯುವುದು ಬಹಳಷ್ಟಿದೆ ಮತ್ತು ಅವೆಲ್ಲವನ್ನೂ ಅಳವಡಿಸಿಕೊಳ್ಳಲು ನಾವು ಕಾತರರಾಗಿದ್ದೇವೆ.”ಎಂದು ಹೇಳಿದರು.

IMG 20231128 WA0026


Kickstart FC ದ ಸ್ಥಾಪಕ ಮತ್ತು ಸಿಇಒ ಶ್ರೀ ಲಕ್ಷ್ಮಣ್ ಭಟ್ಟರಯ್, ” ಟೋಟನ್‌ಹ್ಯಾಮ್ ಹಾಟ್‌ಸ್ಪರ್‌ನೊಂದಿಗಿನ ಈ ಸಹಯೋಗವು, ಭಾರತದಲ್ಲಿ ಫುಟ್‌ಬಾಲ್ ಅಭಿವೃದ್ಧಿಗೆ ಮಾನದಂಡವನ್ನು ಹೆಚ್ಚಿಸುವ ನಮ್ಮ ಬದ್ಧತೆಗೆ ಪುರಾವೆಯಾಗಿದೆ. ಹಂಚಿಕೊಂಡ ನೈಪುಣ್ಯತೆ ಮತ್ತು ಸಂಪನ್ಮೂಲಗಳು ಕೇವಲ ನಮ್ಮ ಅಕಾಡೆಮಿಗೆ ಪ್ರಯೋಜನಕಾರಿಯಾಗಿರುವುದು ಮಾತ್ರವಲ್ಲದೆ, ಭಾರತೀಯ ಫು‌ಟ್‌ಬಾಲ್‌ನ ಒಟ್ಟಾರೆ ಬೆಳವಣಿಗೆಗೂ ಕೊಡುಗೆ ಸಲ್ಲಿಸುತ್ತದೆ ಎಂಬ ವಿಶ್ವಾಸ ನಮಗಿದೆ. ನಾವು ಅತ್ಯಂತ ಕಾತರಗೊಂಡಿದ್ದೇವೆ ಮತ್ತು ಭಾರತದಲ್ಲಿ ಫುಟ್‌ಬಾಲ್ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇರಿಸಿಕೊಂಡಿದ್ದೇವೆ.”ಎಂದು ಹೇಳಿದರು.
ಟೋಟನ್‌ಹ್ಯಾಮ್ ಹಾಟ್‌ಸ್ಪರ್‌ FCನ ರಾಯಭಾರಿ ಶ್ರೀ ಲೆಡ್ಲಿ ಕಿಂಗ್, “Kickstart FC ದೊಂದಿಗೆ ಸಹಭಾಗಿತ್ವ ಏರ್ಪಡಿಸಿಕೊಂಡಿರುವುದು ನಮಗೆ ಗೌರವದ ವಿಷಯ ಮತ್ತು ಈ ಕ್ರೀಡೆಯ ಜಾಗತಿಕ ಆಕರ್ಷಣೆ ಮತ್ತು ಈ ಸುಂದರ ಆಟವು ಪ್ರೇರಣೆ ನೀಡುವ ಧನಾತ್ಮಕ ಬದಲಾವಣೆಗೆ ಒಂದು ಪುರಾವೆಯಾಗಿದೆ. ನಮ್ಮ ಜಾಗತಿಕ ಫುಟ್‌ಬಾಲ್ ಕೋಚಿಂಗ್ ತಂಡದ ಮೂಲಕ ಈ ಪ್ರದೇಶಕ್ಕೆ ನಾವು ನಿಜವಾದ ಕೋಚಿಂಗ್ ಕಲಿಕಾವಿಧಾನ ತರಲಿದ್ದು, Kickstart FCದೊಂದಿಗೆ ಭಾರತೀಯ ಫುಟ್‌ಬಾಲ್ ಕ್ಷೇತ್ರದ ಮೇಲೆ ಧನಾತ್ಮಕವಾದ ಮತ್ತು ದೀರ್ಘಾವಧಿ ಪ್ರಭಾವ ಬೀರುವ ಗುರಿ ಹೊಂದಿದ್ದೇವೆ. Kickstart FCನಲ್ಲಿರುವ ಯುವ ಆಟಗಾರರಿಗೆ ನಮ್ಮ ಕೋಚ್‌ಗಳು ತರುವ ವಿಶಿಷ್ಟ ಬ್ರ್ಯಾಂಡ್, ವೈಯಕ್ತಿಕವಾಗಿ ಸ್ವತಃ ನಾನೇ ಪ್ರಯೋಜನ ಪಡೆದುಕೊಂಡಿರುವಂತಹುದಾಗಿದೆ. ಈ ಕ್ಲಬ್‌ನ ಅಕಾಡೆಮಿ ಮೂಲಕ ನಾನು ಪ್ರಗತಿ ಸಾಧಿಸಿ ಪ್ರಪ್ರಥಮ ತಂಡ ನಾಯಕನಾಗಿ, ಪ್ರಮುಖ ಪಂದ್ಯಾವಳಿಗಳಲ್ಲಿ ನನ್ನ ದೇಶವನ್ನು ಪ್ರತಿನಿಧಿಸಿದ್ದೇನೆ.”ಎಂದರು.

Kickstart FC ಕುರಿತು:
Kickstart FC, ಕರ್ನಾಟಕದ ಪ್ರೀಮಿಯರ್ ಫುಟ್‌ಬಾಲ್ ಕ್ಲಬ್ ಮತ್ತು ಅಕಾಡೆಮಿಯಾಗಿದ್ದು, ಭಾರತದಲ್ಲಿ ಫುಟ್‌ಬಾಲ್ ಪ್ರತಿಭೆಯ ಅಭಿವೃದ್ಧಿ ಮತ್ತು ಪ್ರೋತ್ಸಾಹಕ್ಕೆ ಬದ್ಧವಾಗಿದೆ. ಸಮಗ್ರವಾದ ಆಟಗಾರ ಬೆಳವಣಿಗೆ ಹಾಗೂ ಅತ್ಯುತ್ಕೃಷ್ಟತೆಯ ಬದ್ಧತೆಯ ಮೇಲೆ ಗಮನ ಕೇಂದ್ರೀಕರಿಸುತ್ತಾ ಭಾರತೀಯ ಫುಟ್‌ಬಾಲ್ ಕ್ಷೇತ್ರದ ಮೇಲೆ ದೀರ್ಘಪ್ರಭಾವ ಬೀರುವುದು Kickstart FCದ ಗುರಿಯಾಗಿದೆ.
Tottenham Hotspur F.C. ಕುರಿತು:
ಟೋಟನ್‌ಹ್ಯಾಮ್ ಹಾಟ್‌ಸ್ಪರ್ ಎಫ್.ಸಿ.(Tottenham Hotspur F.C.) ಲಂಡನ್‌ನಲ್ಲಿರುವ ಜಾಗತಿಕವಾಗಿ ಪ್ರಸಿದ್ಧಿ ಹೊಂದಿರುವ ಫುಟ್‌ಬಾಲ್ ಕ್ಲಬ್ ಆಗಿದ್ದು, ಇಂಗ್ಲಿಷ್ ಪ್ರೀಮಿಯರ್ ಲೀಗ್‌ನಲ್ಲಿ ಸ್ಪರ್ಧಿಸುತ್ತದೆ. ಸಮೃದ್ಧ ಇತಿಹಾಸ ಮತ್ತು ಅತ್ಯುತ್ಕೃಷ್ಟತೆಗೆ ಬದ್ಧತೆ ಹೊಂದಿರುವ ಟೋಟನ್‌ಹ್ಯಾಮ್ ಹಾಟ್‌ಸ್ಪರ್, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟಗಳೆರಡಲ್ಲೂ ಫುಟ್‌ಬಾಲ್ ಕ್ರೀಡೆಗೆ ಸಲ್ಲಿಸಿರುವ ತನ್ನ ಕೊಡುಗೆಗಳಿಗಾಗಿ ಹೆಸರುವಾಸಿಯಾಗಿದೆ.