ಪರಿಣಾಮಕಾರಿ ಅಧ್ಯಯನದೊಂದಿಗೆ, ಅಪೊಲೊ ಭಾರತೀಯ ಪುರುಷರಿಗಾಗಿ ಪ್ರಾಸ್ಟೇಟ್ ಕ್ಯಾನ್ಸರ್ ಸ್ಕ್ರೀನಿಂಗ್ ಅನ್ನು ಕ್ರಾಂತಿಗೊಳಿಸಿದೆ
- ಅಪೋಲೋ ಆಸ್ಪತ್ರೆಯು ತನ್ನ ಪ್ರವರ್ತಕ ಸಂಶೋಧನೆಯ ಮೂಲಕ ಭಾರತೀಯ ಪುರುಷರಿಗಾಗಿ ಪ್ರಾಸ್ಟೇಟ್ ಕ್ಯಾನ್ಸರ್ ಸ್ಕ್ರೀನಿಂಗ್ ಮಾನದಂಡಗಳ ಬಗ್ಗೆ ಮರು ವ್ಯಾಖ್ಯಾನಿಸುತ್ತದೆ
- ಪೂರ್ವಭಾವಿಯಾಗಿ ರೋಗದ ಯಾವುದೇ ಸೂಚನೆಗಳನ್ನು ಹೊಂದಿಲ್ಲದ ಸುಮಾರು 1 ಲಕ್ಷ ಪುರುಷರಲ್ಲಿ ನಡೆಸಿದ ಅದರ ಅತಿದೊಡ್ಡ ಅಧ್ಯಯನದಲ್ಲಿ ಹೊಸ ಉಲ್ಲೇಖ ಮೌಲ್ಯಗಳನ್ನು ಅನಾವರಣಗೊಳಿಸುತ್ತಿದೆ.
ನ್ಯಾಷನಲ್, 12 ಜನವರಿ 2024: ಭಾರತದಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಆರೈಕೆಯನ್ನು ಮುನ್ನಡೆಸುವ ನಿಟ್ಟಿನಲ್ಲಿ ಅದ್ಭುತ ದಾಪುಗಾಲನ್ನಿಟ್ಟು, ವಿಶ್ವದ ಅತಿದೊಡ್ಡ ಸಮಗ್ರ ಆರೋಗ್ಯ ಪೂರೈಕೆದಾರರಾದ ಅಪೋಲೋ ಹಾಸ್ಪಿಟಲ್ಸ್ ಅವರು ತಮ್ಮ ಇತ್ತೀಚಿನ ಅಧ್ಯಯನದಲ್ಲಿ ಅದ್ಭುತ ಸಂಶೋಧನೆಗಳನ್ನು ಅನಾವರಣಗೊಳಿಸಿದ್ದಾರೆ, ‘ಆರೋಗ್ಯಕರ ಭಾರತೀಯ ಪುರುಷರಿಗಾಗಿ ವಯಸ್ಸು-ನಿರ್ದಿಷ್ಟ ಪ್ರಾಸ್ಟೇಟ್-ನಿರ್ದಿಷ್ಟ ಪ್ರತಿಜನಕವನ್ನು ನಿರ್ಧರಿಸುವುದು. ಇದನ್ನು ಪ್ರತಿಷ್ಠಿತ ಇಂಡಿಯನ್ ಜರ್ನಲ್ ಆಫ್ ಯುರಾಲಜಿ ಪ್ರಕಟಿಸಿದೆ. ಅಪೊಲೊ ಚೆನ್ನೈ ಹಾಗೂ ಅಪೊಲೊ ಹೈದರಾಬಾದ್‌ನ ಡಾ. ಎನ್ ರಾಘವನ್ ಮತ್ತು ಡಾ. ಸಂಜಯ್ ಅಡ್ಲಾ ಅವರುಗಳ ನೇತೃತ್ವದಲ್ಲಿ ಕೈಗೊಂಡ ಅಧ್ಯಯನವು, ಭಾರತದಲ್ಲಿ ವಿವಿಧ ವಯೋಮಾನಗಳು ಹಾಗೂ ಬೇರೆ ಬೇರೆ ಪ್ರದೇಶಗಳಲ್ಲಿನ ಸುಮಾರು 100,000 ಆರೋಗ್ಯವಂತ ಪುರುಷರನ್ನು ಒಳಗೊಂಡಿತ್ತು, ಭಾರತೀಯ ಜನಸಂಖ್ಯಾಶಾಸ್ತ್ರಕ್ಕೆ ನಿರ್ದಿಷ್ಟವಾಗಿರುವ ಪ್ರಾಸ್ಟೇಟ್-ನಿರ್ದಿಷ್ಟ ಪ್ರತಿಜನಕಕ್ಕೆ (ಪಿಎಸ್‌ಎ) ಹೊಸ ಉಲ್ಲೇಖ ಮೌಲ್ಯಗಳನ್ನು ಸ್ಥಾಪಿಸಿತು.
ಪಿಎಸ್‌ಎ ಎನ್ನುವುದು, ಪ್ರಾಸ್ಟೇಟ್ ಕ್ಯಾನ್ಸರ್‌ನ ಆರಂಭಿಕ ರೋಗನಿರ್ಣಯ ಮತ್ತು ಚಿಕಿತ್ಸೆಯ ಮೇಲ್ವಿಚಾರಣೆಗಾಗಿ ಸ್ಥಾಪಿತವಾದ ರಕ್ತ ಮಾರ್ಕರ್ ಆಗಿದೆ. 1993 ರಿಂದ, ಸಾಮಾನ್ಯ ಪಿಎಸ್‌ಏ ಮೌಲ್ಯಗಳಿಗಾಗಿ ಇರುವ ಅಂತರಾಷ್ಟ್ರೀಯ ಮಾನದಂಡಗಳು ಯೂಎಸ್‌ಏ ಯ ಅಧ್ಯಯನವನ್ನು ಆಧರಿಸಿರುತ್ತಿದ್ದವು ಹಾಗೂ ಭಾರತದಲ್ಲಿ ಅದೇ ರೀತಿಯಲ್ಲಿಯೇ ಅಳವಡಿಸಿಕೊಳ್ಳಲಾಗುತ್ತಿತ್ತು. ಸಾದಾರಣವಾಗಿ ಪಾಶ್ಚಿಮಾತ್ಯ ಮಾನದಂಡಗಳು ಭಾರತೀಯ ಜನಸಂಖ್ಯೆಯ ವೈವಿಧ್ಯಮಯ ಆನುವಂಶಿಕ ಗಡಿರೇಖೆಗಳಿಗೆ ಸೂಕ್ತವಲ್ಲ ಎನ್ನುವುದು ಕಂಡುಬಂದಿದೆ. ಇತ್ತೀಚೆಗೆ ಕೈಗೊಂಡ ಈ ಅದ್ಭುತವಾದ ಅಪೊಲೊ ಅಧ್ಯಯನವು ಭಾರತದಲ್ಲಿ ಪಿಎಸ್‌ಏ ಮೌಲ್ಯಗಳು ಭಿನ್ನವಾಗಿರುತ್ತವೆ ಎನ್ನುವುದನ್ನು ತಿಳಿಸುತ್ತದೆ, ಇದು ಹೊಸ ಹಾಗೂ ಸೂಕ್ತವಾದ ಮಾನದಂಡಗಳನ್ನು ಸ್ಥಾಪಿಸಲು ಪ್ರೇರೇಪಿಸುತ್ತದೆ. ಪ್ರಮುಖ ಸಂಶೋಧನೆಗಳ ಪ್ರಕಾರ ವಯಸ್ಸು-ನಿರ್ದಿಷ್ಟ ಪಿಎಸ್‌ಏ ಮಾನದಂಡಗಳು, ವಯಸ್ಸು ಹೆಚ್ಚಾದಂತೆ ಪಿಎಸ್‌ಏ ಮಟ್ಟಗಳಲ್ಲಿ ಕಾಣಬರುವ ಪ್ರಗತಿಪರ ಹೆಚ್ಚಳ ಹಾಗೂ ಯುವ ಪುರುಷರಲ್ಲಿ ಮೊದಲೇ ಪತ್ತೆಹಚ್ಚಲು ಅನುಕೂಲವಾಗುವಂತೆ ಭಾರತೀಯ-ನಿರ್ದಿಷ್ಟ ಪಿಎಸ್‌ಏ ಮೌಲ್ಯಗಳನ್ನು ಸೇರಿಸಿಕೊಂಡಿವೆ.
ಇದರ ಮೂಲಕವಾಗಿ, ಅಪೊಲೊ ಆಸ್ಪತ್ರೆಗಳು, ಕ್ಲಿನಿಕ್‌ಗಳು ಮತ್ತು ಡಯಾಗ್ನೋಸ್ಟಿಕ್ಸ್ ನೆಟ್‌ವರ್ಕ್ ಪ್ರಾಸ್ಟೇಟ್ ಸ್ಕ್ರೀನಿಂಗ್‌ಗಾಗಿ ಈ ಹೊಸ ಪಿಎಸ್‌ಎ ಮಾನದಂಡಗಳನ್ನು ಅಳವಡಿಸಿಕೊಳ್ಳುವತ್ತ ಸಾಗಿದೆ.
ಅಪೋಲೋ ಹಾಸ್ಪಿಟಲ್ಸ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕಿಯಾದ ಡಾ.ಸಂಗೀತಾ ರೆಡ್ಡಿ ಅವರು ತಿಳಿಸಿದರು, “ಈ ಹೆಗ್ಗುರುತು ಅಧ್ಯಯನವು ಭಾರತದ ಪ್ರಾಸ್ಟೇಟ್ ಕ್ಯಾನ್ಸರ್ ಕೇರ್ ಲ್ಯಾಂಡ್‌ಸ್ಕೇಪ್‌ನಲ್ಲಿ ಪರಿವರ್ತನೆಯ ಕ್ಷಣವನ್ನು ನೀಡಿದೆ, ಇದು ಕ್ಯಾನ್ಸರ್ ಅನ್ನು ಜಯಿಸುವ ನಮ್ಮ ಧ್ಯೇಯವನ್ನು ಪ್ರತಿ ಟಚ್‌ಪಾಯಿಂಟ್‌ನಲ್ಲಿ ಪ್ರತಿಧ್ವನಿಸುತ್ತದೆ. ಹೆಗ್ಗುರುತು ಅಧ್ಯಯನದಲ್ಲಿ ವಯಸ್ಕ ಭಾರತೀಯ ಪುರುಷರಿಗಾಗಿ ಹೊಸ ಪ್ರಾಸ್ಟೇಟ್ ಕ್ಯಾನ್ಸರ್ ಸ್ಕ್ರೀನಿಂಗ್ ಮಾನದಂಡಗಳನ್ನು ಸ್ಥಾಪಿಸುವುದು ಕ್ಯಾನ್ಸರ್ ಆರೈಕೆಯನ್ನು ಮರುವ್ಯಾಖ್ಯಾನಿಸುವ ಪ್ರವರ್ತಕ ಪ್ರಗತಿಗಳಿಗೆ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ವಿವಿಧ ವಯೋಮಾನದವರಿಗೆ ಇರುವ ವಿಭಿನ್ನ ಪಿಎಸ್‌ಏ ಮಾನದಂಡಗಳು, ವಯಸ್ಸು ಹೆಚ್ಚಾದಂತೆ ಪ್ರಗತಿಪರ ಹೆಚ್ಚಳ ಹಾಗೂ ಭಾರತೀಯ-ನಿರ್ದಿಷ್ಟ ಮೌಲ್ಯಗಳೊಂದಿಗೆ, ನಾವು ಪ್ರಾಸ್ಟೇಟ್ ಕ್ಯಾನ್ಸರ್ ಆರೈಕೆಯ ಭೂದೃಶ್ಯವನ್ನು ಪರಿವರ್ತಿಸುತ್ತಿದ್ದೇವೆ. ಈ ಅದ್ಬುತ ಬದಲಾವಣೆಯು ಕಿರಿಯ ವಯಸ್ಸಿನ ಪುರುಷರಲ್ಲಿ ರೋಗವನ್ನು ಮುಂಚೆಯೇ ಪತ್ತೆ ಮಾಡುವುದನ್ನು ಸುಗಮಗೊಳಿಸುತ್ತದೆ ಹಾಗೆಯೇ ವಯಸ್ಸಾಗಿರುವ ವ್ಯಕ್ತಿಗಳಲ್ಲಿ ಕೈಗೊಳ್ಳುತ್ತಿರುವ ಅನಗತ್ಯ ತನಿಖೆಗಳನ್ನು ತಡೆಯುತ್ತದೆ. ಈ ಅನುಗುಣವಾದ ಮಾನದಂಡಗಳನ್ನು ಅಳವಡಿಸಿಕೊಳ್ಳುವ ಮೂಲಕ, ಅಪೊಲೊ ಆಸ್ಪತ್ರೆಗಳು ರೋಗಿ-ಕೇಂದ್ರಿತ ಆರೈಕೆಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಹಾಗೂ ಆರೋಗ್ಯ ಆವಿಷ್ಕಾರದಲ್ಲಿ ಹೊಸ ಮಾದರಿಗೆ ವೇದಿಕೆಯನ್ನು ಹೊಂದಿಸುತ್ತದೆ.”
ಪ್ರೊ.ಸಂಜಯ್ ಅಡ್ಲಾ, ಕನ್ಸಲ್ಟೆಂಟ್ ಯುರೋ-ಆನ್ಕೊಲೊಜಿಸ್ಟ್, ಅಪೊಲೊ ಹಾಸ್ಪಿಟಲ್ಸ್, ಜುಬಿಲಿ ಹಿಲ್ಸ್, ಹೈದರಾಬಾದ್ ತಿಳಿಸಿದರು: “ನಮ್ಮ ಅಧ್ಯಯನವು ಭಾರತದಲ್ಲಿ ಮಾಡಿರುವ ಅಧ್ಯಯನಗಳಲ್ಲಿ ಅತಿ ದೊಡ್ಡದಾಗಿದೆ, ಇದು ಭಾರತೀಯ ಜನಸಂಖ್ಯೆಗೆ ಅನುಗುಣವಾಗಿ ವಯಸ್ಸಿನ-ನಿರ್ದಿಷ್ಟ ಪಿಎಸ್‌ಏ ಉಲ್ಲೇಖ ಶ್ರೇಣಿಗಳನ್ನು ಮರು ಮೌಲ್ಯಮಾಪನ ಮಾಡುತ್ತದೆ. 1 ಲಕ್ಷ ಆರೋಗ್ಯವಂತ ಪುರುಷರಿಂದ ಮಾಹಿತಿಯನ್ನು ಪಡೆದಿದ್ದು, ಭಾರತೀಯ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ಪತ್ತೆಹಚ್ಚುವಲ್ಲಿ ಸೀರಮ್ ಪಿಎಸ್ಎ ಪರೀಕ್ಷೆಯ ಅಂತರವನ್ನು ಕಡಿಮೆ ಮಾಡಲು ಹಾಗೂ ನಿಖರತೆಯನ್ನು ಹೆಚ್ಚಿಸುವ ಬಗ್ಗೆ ನಾವು ವಿಶ್ವಾಸ ಹೊಂದಿದ್ದೇವೆ, ಅದು ರೋಗನಿರ್ಣಯದ ಮಾರ್ಕರ್ ಆಗಿ ಅದರ ಪರಿಣಾಮಕಾರಿತ್ವವನ್ನು ಸುಧಾರಿಸುತ್ತದೆ ಹಾಗೂ ಮುಂದುವರಿದ ಹಂತದಲ್ಲಿರುವವರಿಗೂ ಚಿಕಿತ್ಸೆಯ ಭರವಸೆಯನ್ನು ನೀಡುತ್ತದೆ. ಭಾರತದಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್‌ನ ಸಂಭವವು ಹೆಚ್ಚಾಗುತ್ತಿದ್ದಂತೆ, ನಮ್ಮ ಅಧ್ಯಯನವು ನಮ್ಮ ಜನಸಂಖ್ಯೆಯಲ್ಲಿ ವಯಸ್ಸಿನ-ನಿರ್ದಿಷ್ಟ ಪಿಎಸ್‌ಏ ಮಟ್ಟಗಳ ಮೇಲಿನ ಪ್ರಸ್ತುತದಲ್ಲಿ ಲಭ್ಯವಿರುವ ಸೀಮಿತ ಮಾಹಿತಿಯನ್ನು ಪರಿಹರಿಸಲು ಪ್ರಯತ್ನಿಸಿದೆ. ಭಾರತೀಯ ಪುರುಷರಲ್ಲಿ ಸೀರಮ್ ಪಿಎಸ್ಎ ಮಟ್ಟಗಳು ಹಾಗೂ ವಯಸ್ಸಿನ ನಡುವಿನ ಸಂಬಂಧವು ಕಾಕೇಶಿಯನ್ ಪುರುಷರ ಸ್ಥಾಪಿತ ಮಾನದಂಡಗಳಿಗಿಂತ ಭಿನ್ನವಾಗಿದೆ. ಈ ಅಧ್ಯಯನವು ಭಾರತೀಯ ಪುರುಷರಿಗೆ ವಯಸ್ಸಿನ-ನಿರ್ದಿಷ್ಟ ಪಿಎಸ್‌ಏ ಉಲ್ಲೇಖ ಶ್ರೇಣಿಗಳನ್ನು ಮರುವ್ಯಾಖ್ಯಾನಿಸಲು ಮಹತ್ವದ ಅವಕಾಶವನ್ನು ನೀಡುತ್ತದೆ, ಹೆಚ್ಚು ನಿಖರವಾದ ಕ್ಲಿನಿಕಲ್ ನಿರ್ಧಾರ-ಮಾಡುವಿಕೆಯನ್ನು ಸಕ್ರಿಯಗೊಳಿಸುತ್ತದೆ ಹಾಗೂ ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ಪರಿಣಾಮಕಾರಿಯಾಗಿ ಎದುರಿಸುವ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.”
ಭಾರತೀಯ ಜನಸಂಖ್ಯೆಯ ಮಾನದಂಡಗಳಿಗಾಗಿ ಅಪೊಲೊ ಆಸ್ಪತ್ರೆಗಳಿಗೆ (2011-2018ರ ಅವಧಿಯಲ್ಲಿ) ಭೇಟಿ ನೀಡಿದ 100,000 ಆರೋಗ್ಯವಂತ ಪುರುಷರಲ್ಲಿ ಪಿಎಸ್ಎ ಮೌಲ್ಯಗಳ ಕುರಿತು ಇಂಡಿಯನ್ ಜರ್ನಲ್ ಆಫ್ ಯುರಾಲಜಿಯಲ್ಲಿ ಪ್ರಕಟವಾದ ಅಪೊಲೊ ಅಧ್ಯಯನದ ಪ್ರಮುಖ ಸಂಶೋಧನೆಗಳು:
- ಹಿಂದಿನ ಜಾಗತಿಕ ಮಾನದಂಡಗಳಿಗೆ ವ್ಯತಿರಿಕ್ತವಾಗಿ ವಿಭಿನ್ನ ವಯೋಮಾನದವರಿಗೆ ವಿಭಿನ್ನ ಪಿಎಸ್‌ಏ ಮಾನದಂಡಗಳನ್ನು ಸ್ಥಾಪಿಸಲಾಗಿದೆ.
- ಪಿಎಸ್‌ಏ ಮಟ್ಟಗಳಲ್ಲಿ ವಯಸ್ಸಿನೊಂದಿಗೆ ಆಗಬಹುದಾದ ಪ್ರಗತಿಶೀಲ ಹೆಚ್ಚಳವನ್ನು ಬಹಿರಂಗಪಡಿಸಲಾಗಿದೆ: <1.4 ng/mL (<40) ರಿಂದ 11.3 ng/mL (>80).
- ಹೊಸ ಭಾರತೀಯ-ನಿರ್ದಿಷ್ಟ ಪಿಎಸ್‌ಏ ಮೌಲ್ಯಗಳು ಕಡಿಮೆ ಪಿಎಸ್‌ಏ ಮಟ್ಟವನ್ನು ಹೊಂದಿರುವ ಯುವ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ಮೊದಲೇ ಪತ್ತೆಹಚ್ಚಲು ಸಹಾಯ ಮಾಡುತ್ತದೆ.
- ವಯಸ್ಕರಾದ ಪುರುಷರಲ್ಲಿ ಕೈಗೊಳ್ಳುವ ಅನಗತ್ಯ ತನಿಖೆಗಳನ್ನು ತಡೆಯುತ್ತದೆ; 70 ರಿಂದ 80 ವರ್ಷದ ಒಳಗಿನ ರೋಗಿಗಳಿಗೆ ಹೊಸ ಉಲ್ಲೇಖ ಶ್ರೇಣಿಯು ಗಮನಾರ್ಹವಾಗಿ ಹೆಚ್ಚಾಗಿದೆ.
- ಪಿಎಸ್ಎ ಮೌಲ್ಯಗಳನ್ನು ಆಧರಿಸಿ ಭಾರತೀಯ ಪುರುಷರಲ್ಲಿ ಸೂಕ್ತವಾದ ತನಿಖೆ ಹಾಗೂ ಚಿಕಿತ್ಸೆಗೆ ಅಡಿಪಾಯವನ್ನು ನೀಡುತ್ತದೆ
ವಯಸ್ಸು | ಹಳೆಯ ಉಲ್ಲೇಖ ಮೌಲ್ಯ ng/ml (95 ನೇ ಸೆಂಟೈಲ್ ಮಿತಿ) | ಹೊಸ ಉಲ್ಲೇಖ ಮೌಲ್ಯ ng/ml (95 ನೇ ಸೆಂಟೈಲ್ ಮಿತಿ) |
≤40 years | NA | <1.4 |
41-50 years | <2.5 | <1.7 |
51-60 years | <3.5 | <3.1 |
61-70 years | <4.5 | <5.8 |
71-80 years | <6.5 | <8.82 |
>80 years | NA | <11.3 |
ರೋಗಿ-ಕೇಂದ್ರಿತ ನಾವೀನ್ಯತೆಗಳಿಗೆ ಬದ್ಧವಾಗಿದ್ದು, ಅಪೊಲೊ ಇತ್ತೀಚಿನ bk5000 ಅಲ್ಟ್ರಾಸೌಂಡ್ ಸಿಸ್ಟಮ್ ಅನ್ನು ಪಡೆದುಕೊಂಡಿದೆ. ಇದು ಟ್ರಾನ್ಸ್-ಪೆರಿನಿಯಲ್ ರಿಯಲ್ ಟೈಮ್ ಫ್ಯೂಷನ್ (TP RTF) ಪ್ರಾಸ್ಟೇಟ್ ಬಯಾಪ್ಸಿ ಎಂದು ಕರೆಯಲ್ಪಡುವ ಇತ್ತೀಚಿನ ವಿಧಾನವನ್ನು ಕಾರ್ಯಗತಗೊಳಿಸುವ ಪ್ರಾಸ್ಟೇಟ್ ಕ್ಯಾನ್ಸರ್ ಪತ್ತೆಗಾಗಿ ಸಮಗ್ರ ಅತ್ಯಾಧುನಿಕ ರೋಗನಿರ್ಣಯವನ್ನು ನೀಡಲು ನಮಗೆ ಅನುಮತಿಸುತ್ತದೆ. ಈ ವಿಧಾನವು ಕಲುಷಿತ ಟ್ರಾನ್ಸ್‌ರೆಕ್ಟಲ್ (ಬ್ಯಾಕ್ ಪ್ಯಾಸೇಜ್) ಮಾರ್ಗವನ್ನು ತಪ್ಪಿಸುತ್ತದೆ, ಆಸ್ಪತ್ರೆಯ ದಾಖಲಾತಿಗಳ ಅಗತ್ಯತೆಯನ್ನು ಕಡಿಮೆ ಮಾಡುತ್ತದೆ, ಸೋಂಕು ಮತ್ತು ಸೆಪ್ಸಿಸ್ ಅಪಾಯವನ್ನು ಬಹುತೇಕ ಶೂನ್ಯದ ಮಟ್ಟಕ್ಕೆ ತರುತ್ತದೆ, ಹಾಗೂ ಅಪೊಲೊ ರೋಗಿಗಳಿಗೆ ಸುರಕ್ಷಿತ ಮತ್ತು ಹೆಚ್ಚು ಸುವ್ಯವಸ್ಥಿತ ಬಯಾಪ್ಸಿ ಅನುಭವವನ್ನು ನೀಡುವುದನ್ನು ಖಚಿತಪಡಿಸುತ್ತದೆ.
ಹೈದರಾಬಾದ್‌ನಲ್ಲಿರುವ ಅಪೊಲೊ ಆಸ್ಪತ್ರೆಗಳು ಹೊಸದಾಗಿ ಪ್ರಕಟಿಸಿದ ಮಾಹಿತಿಗೆ ಅನುಗುಣವಾಗಿ ಉಲ್ಲೇಖ ಮೌಲ್ಯಗಳನ್ನು ಈಗಾಗಲೇ ಬದಲಾಯಿಸಿಕೊಂಡಿದೆ. ಮುಂದಿನ ತ್ರೈಮಾಸಿಕದಲ್ಲಿ ನಾವು ದಕ್ಷಿಣ ಪ್ರದೇಶದ ಅಪೊಲೊ ಆಸ್ಪತ್ರೆಗಳಾದ್ಯಂತ ಹಂತ ಹಂತದಲ್ಲಿ ಈ ಹೊಸ ಮಾನದಂಡಗಳ ಅಳವಡಿಕೆಯನ್ನು ನೋಡುತ್ತೇವೆ, ನಂತರ ಅಪೊಲೊ ಪರಿಸರ ವ್ಯವಸ್ಥೆಯಲ್ಲಿ ಉಳಿದ ಆಸ್ಪತ್ರೆಗಳು, ಚಿಕಿತ್ಸಾಲಯಗಳು ಮತ್ತು ರೋಗನಿರ್ಣಯ ಕೇಂದ್ರಗಳು ಮುಂತಾದವುಗಳಲ್ಲಿ ಕೂಡ.
ಮುಂದುವರೆದು, ಸೊಸೈಟಿ ಆಫ್ ಜೆನಿಟೊಯೂರಿನರಿ ಆಂಕೊಲಾಜಿಸ್ಟ್‌ಗಳ ಸಹಯೋಗದೊಂದಿಗೆ (SOGO) ಅಪೊಲೊ, ಆರೋಗ್ಯಕರ ಭಾರತೀಯ ಪುರುಷರಿಗಾಗಿ ಹೊಸ ಉಲ್ಲೇಖ ಪಿಎಸ್‌ಏ ಮೌಲ್ಯಗಳನ್ನು ಹೈಲೈಟ್ ಮಾಡಲು ಸ್ಥಾನೀಯ ಕಾಗದವನ್ನು ಪ್ರಕಟಿಸುವ ಕೆಲಸವನ್ನು ಮಾಡುತ್ತಿದೆ; ಈ ಭಾರತೀಯ ಮಾನದಂಡಗಳನ್ನು ಅಳವಡಿಸಿಕೊಳ್ಳಲು ಇತರ ಆರೋಗ್ಯ ಪೂರೈಕೆದಾರರಿಗೆ ಇದನ್ನು ಉದ್ಯಮದ ಮೌಲ್ಯೀಕರಣವನ್ನಾಗಿ ಮಾಡುತ್ತದೆ.