ಮಾತೃಭಾಷೆ ಕನ್ನಡವಾಗಿರಲಿ
ವೈ.ಎನ್.ಹೊಸಕೋಟೆ : ವಿದ್ಯಾರ್ಥಿಗಳು ಕಲಿಯುವ ಮಾಧ್ಯಮ ಯಾವುದಾದರೂ ಮಾತೃಭಾಷೆ ಕನ್ನಡವಾಗಿರಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯಪರಿಷತ್ತು ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದರು
ರಂಗಸಮುದ್ರ ಗ್ರಾಮದಲ್ಲಿ ಶನಿವಾರದಂದು ಹಮ್ಮಿಕೊಂಡಿದ್ದ ವೈ.ಎನ್.ಹೊಸಕೋಟೆ ಹೋಬಳಿ 2ನೇ ಕನ್ನಡಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದಲ್ಲಿ ಕಲಿತರೆ ಜೀವನ ರೂಪಿಸಿಕೊಳ್ಳಬಹುದು ಎಂಬ ಭರವಸೆ ಮೂಡಿದರೆ ಕನ್ನಡ ಗಟ್ಟಿಗೊಂಡು ಮುಂದಿನ ತಲೆಮಾರಿಗೂ ಉಳಿಯಲು ಸಾಧ್ಯ. ಉದ್ಯೋಗವಕಾಶಗಳ ಭ್ರಮೆಯಲ್ಲಿ ಪೆÇೀಷಕರು ಇಂಗ್ಲೀಷ್ ಮಾಧ್ಯಮದ ಶಿಕ್ಷಣಕ್ಕೆ ಮೊರೆ ಹೋಗುತ್ತಿದ್ದಾರೆ. ಭಾಷಾ ವಿಧೇಯಕಗಳು, ವರದಿಗಳು ಕನ್ನಡಕ್ಕೆ ಉದ್ಯೋಗ ನೀಡುವ ಶಕ್ತಿ ಇದೆ ಎಂಬುದನ್ನು ಸಾಬೀತು ಮಾಡುವುದು ಪ್ರಸ್ತುತದ ಅಗತ್ಯತೆ ಆಗಿದೆÉ. ಈ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದ್ದು, ಜ್ಞಾನ ಸಂಸ್ಕೃತಿ ಪರಂಪರೆಯ ಶ್ರೀಮಂತ ಭಾಷೆ. ಅದರ ವಾರಸುದಾರರಾದ ನಮಗೆ ಮುಂದಿನ ತಲೆಮಾರಿಗೂ ಕನ್ನಡತನವನ್ನು ಕೊಂಡೊಯ್ಯುವ ಜವಾಬ್ದಾರಿ ಇದೆ ಎಂದರು.
ಸಮ್ಮೇಳನಾಧ್ಯಕ್ಷರ ಪುರಮೆರವಣಿಗೆಯನ್ನು ಉಧ್ಘಾಟಿಸಿ ಮಾತನಾಡಿದ ಮಾಜಿ ಸಚಿವ ವೆಂಕಟರಮಣಪ್ಪ, ಸರ್ಕಾರಿ ನೌಕರರು ಮತ್ತು ಕನ್ನಡವನ್ನು ಕಟ್ಟಲು ಹೊರಟಿರುವವರು ತಮ್ಮ ಮಕ್ಕಳನ್ನು ಕನ್ನಡ ಶಾಲೆಯಲ್ಲಿ ಓದಿಸುವಲ್ಲಿ ಯೋಚನೆ ಮಾಡಬೇಕಾಗಿದೆ. ಕನ್ನಡಕ್ಕಾಗಿ ಕೇವಲ ಮಾತುಗಾರಿಕೆ ಸಾಲದು ಅದು ಕಾರ್ಯರೂಪದಲ್ಲಿ ಇರಬೇಕು ಎಂದು ತಿಳಿಸಿದರು.
ಸಮ್ಮೇಳನಾಧ್ಯಕ್ಷರಾದ ಅಂತರಗಂಗೆ ಶಂಕರಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ಕನ್ನಡ ಕಟ್ಟುವ ಕೆಲಸ ಹಲವು ದಶಕಗಳಿಂದಲೇ ಮಾಡುತ್ತಾ ಬಂದಿದ್ದೇವೆ. ತೆಲುಗುಮಯವಾಗಿದ್ದ ಈ ತಾಲ್ಲೂಕು ಪ್ರಸ್ತುತ ಕನ್ನಡ ಕಂಪನ್ನು ಬೀರುತ್ತಿದೆ. ಇಲ್ಲಿನ ಕಲೆ ಮತ್ತು ಸಾಹಿತ್ಯ ಸ್ಥಳೀಯ ಸಾಂಸ್ಕೃತಿಕ ಪರಂಪರೆಯನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿವೆ. ಸಮ್ಮೇಳನಾಧ್ಯಕ್ಷನಾಗಿ ಈ ಭಾಗದಲ್ಲಿ ಮತ್ತಷ್ಟು ಕನ್ನಡ ಚಟುವಟಿಕೆಗಳು ನಡೆಯಲು ಸರ್ಕಾರ ಸಹಕರಿಸಬೇಕೆಂದು ಒತ್ತಾಯಿಸುತ್ತೇನೆ ಎಂದರು.
ವಿಚಾರಗೋಷ್ಠಿಯ ಜಲಸಂಪನ್ಮೂಲದ ವಿಷಯ ಪ್ರಸ್ತುತವಾದ ಈ ಪ್ರದೇಶದ ಜಲ ಸಮಸ್ಯೆಯ ಪ್ರತಿಬಿಂಬವಾಗಿದೆ. ಈ ವಿಷಯದ ಬಗ್ಗೆ ಜನಪ್ರತಿನಿಧಿಗಳು ಅರಿತು ನಡೆಯಬೇಕಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಎಂ.ನಾಗೇಂದ್ರಪ್ಪ ತಿಳಿಸಿದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಜಾನಪದ ಸಾಹಿತಿ ಕಂಟಲಕೆರೆ ಸಣ್ಣಹೊನ್ನಯ್ಯ ಮಾತನಾಡಿ ಸ್ಥಳೀಯ ಪ್ರತಿಭೆಗಳಿಗೆ ಹೋಬಳಿ ಸಮ್ಮೇಳನಗಳು ಅವಕಾಶದ ವೇದಿಕೆಗಳಾಗಿವೆ. ಕವಿ ಮನಸ್ಸುಗಳು ಸ್ಥಳೀಯ ಸಮಸ್ಯೆಗಳನ್ನು ಪ್ರತಿಬಿಂಬಿಸುವುದರೊಂದಿಗೆ ಭಾಷಾ ಹಿಡಿತವನ್ನು ಹೊಂದಿರುವಂತೆ ಕವಿತೆಗಳನ್ನು ರಚಿಸಬೇಕು ಎಂದರು.
ಸಮಾರೋಪ ಭಾಷಣ ಮಾಡಿದ ಪ್ರಾಧ್ಯಾಪಕರಾದ ಡಾ.ನಾಗಭೂಷಣ ಬಗ್ಗನಡು, ಸೌಹಾರ್ಧ ಜೀವನ ಭಾರತೀಯತೆಯ ಆತ್ಮವಾಗಿದೆ. ಸರ್ವಾಜನಾಂಗದ ಶಾಂತಿಯ ತೋಟವಾಗಿರುವ ಈ ದೇಶದ ಕನ್ನಡದ ನೆಲದಲ್ಲಿ ಸುಮಾರು ಎರಡು ಸಾವಿರ ವರ್ಷಗಳಿಂದ ಧಾರ್ಮಿಕ, ಭಾಷಿಕ ಮತ್ತು ಸಾಮಾಜಿಕ ಬಿಕ್ಕಟ್ಟು, ಸಮಸ್ಯೆ ಜಗಳಗಳಿರುವಲ್ಲಿ ಸೌಹಾರ್ಧತೆ ಕಂಡುಬರುತ್ತದೆ. ಕನ್ನಡ ಸಾಹಿತ್ಯ ನಿರಂತರವಾಗಿ ಸೌಹಾರ್ಧತೆಗೆ ಸ್ಪಂದಿಸಿದೆ. ನೀರು, ಗಡಿ ಮತ್ತು ಮಾನವ ಸಂಬಂದಗಳ ಸೌಹಾರ್ಧ ಪರಂಪರೆ ನಮ್ಮ ಕನ್ನಡದ್ದಾಗಿದೆ ಎಂದು ತಿಳಿಸಿದರು.
ವಿದ್ವಾನ್ ಎಂ.ಜಿ.ಸಿದ್ದರಾಮಯ್ಯ, ಡಾ.ವಿ.ಅರ್.ಚಲುವರಾಜನ್, ಹ.ರಾಮಚಂದ್ರಪ್ಪ ಮಾತನಾಡಿದರು.ಸಮ್ಮೇಳನದ ಮುಮ್ಮಡಿ ಹೊಟ್ಟಣ್ಣನಾಯಕರ ಮಹಾದ್ವಾರವನ್ನು ವೆಂಕಟರಮಣಪ್ಪ, ಶ್ರೀ ತ್ರಿಯಂಭಕೇಶ್ವರಸ್ವಾಮಿಗಳ ಮಹಾಮಂಟಪವನ್ನು ಶ್ರೀಮತಿ ಪದ್ಮಾವತಿ, ಡಿ.ಎಲ್.ಬಸವರಾಜು ರವರ ವೇದಿಕೆಯನ್ನು ಇತಿಹಾಸಕಾರರಾದ ಡಾ.ವಿ.ಆರ್.ಚಲುವರಾಜನ್ ರವರು ಉದ್ಘಾಟಿಸಿದರು.
ಗ್ರಾಮಪಂಚಾಯಿತಿ ಅಧ್ಯಕ್ಷೆ ಮಾರಕ್ಕ ರಾಷ್ಟ್ರಧ್ವಜವನ್ನು, ತಾಲ್ಲೂಕು ಘಟಕದ ಅಧ್ಯಕ್ಷ ಕಟ್ಟಾನರಸಿಂಹಮೂರ್ತಿ ನಾಡಧ್ವಜವನ್ನು ಹಾಗೂ ಹೋಬಳಿ ಘಟಕದ ಅಧ್ಯಕ್ಷ ಹೊ.ಮ.ನಾಗರಾಜು ಪರಿಷತ್ತಿನ ಧ್ವಜಗಳ ಧ್ವಜಾರೋಹಣ ಮಾಡಿದರು.
ವಿಚಾರಗೋಷ್ಟಿಯಲ್ಲಿ ಡಾ.ಕುಮಾರ್ ಇಂದ್ರಬೆಟ್ಟ ಮತ್ತು ಡಾ.ಹೆಚ್.ಕೆ.ನರಸಿಂಹಮೂರ್ತಿ ವಿಚಾರ ಮಂಡನೆ ಮಾಡಿದರು. ಮೂರ್ಖಣಪ್ಪ ರವರ ಎರಡು ಕೃತಿಗಳನ್ನು ವೇದಿಕೆಯಲ್ಲಿ ಲೋಕಾರ್ಪಣೆ ಮಾಡಲಾಯಿತು.
ಕವಿಗೋಷ್ಠಿಯಲ್ಲಿ ಮಧುಶ್ರೀನಿವಾಸ, ನು.ರೆ.ಹರೀಶ್ ಬಾಬು, ತಿಪ್ಪೇಸ್ವಾಮಿ, ರಾಜುಗಾರೆಮನೆ, ಮೂರ್ಖಣಪ್ಪ, ಕುಮಾರಿ ಪ್ರೀತಿ, ಪಿ.ಎಸ್.ನಾಗಮಣಿ, ಇತರರು ಕವನ ವಾಚನ ಮಾಡಿದರು.
ಕನ್ನಡ ಸಂಘಟನಾಕಾರ ಎ.ಓ.ನಾಗರಾಜು, ಕ್ರೀಡಾಪಟು ಬಿ.ಶ್ರೀನಿವಾಸ, ಕೋಲಾಟ ಕಲಾವಿದ ನಾಗರಾಜು, ಪಾರಂಪರಿಕ ವೈದ್ಯ ತಿಪ್ಪೇರುದ್ರಪ್ಪ ಸ್ವಾತಂತ್ರ್ಯ ಹೋರಾಟಗಾರರಾದ ಚಂದ್ರಮೌಳಪ್ಪ, ರಂಗಭೂಮಿ ಕಲಾವಿದರಾದ ಎಂ.ಜಿ.ನಾರಾಯಣಪ್ಪ, ಲಿಂಗಮೂರ್ತಿ, ರಾಜಶೇಖರ್, ಶಿವಣ್ಣ ಇನ್ನಿತರರನ್ನು ಸನ್ಮಾನಿಸಲಾಯಿತು.
ರಂಗಸಮುದ್ರದ ಶ್ರೀ ವಾಲ್ಮೀಕಿ ಸಾಂಸ್ಕೃತಿಕ ಕಲಾ ಸಂಘ, ಬೆಳ್ಳಿಬಟ್ಟಲಿನ ಎಲ್.ಜಿ.ಹಾವನೂರು ಸಾಂಸ್ಕೃತಿಕ ಕಲಾಸಂಘ, ಸಿದ್ದಾಪುರದ ಸ್ವಾಮಿ ವಿವೇಕಾನಂದ ಕಲಾಸಂಘಗಳ ಕಲಾವಿದರು ಕೋಲಾಟ, ಡ್ರಮ್ಸ್ ವಾದನ, ಚಿಲಿಪಿಲಿಗೊಂಬೆ, ಗಾರುಡಿಗೊಂಬೆ ನೃತ್ಯ ಪ್ರದರ್ಶನ ಮಾಡಿದರು. ಸ್ಥಳೀಯ ಶಾಲೆಯ ವಿದ್ಯಾರ್ಥಿಗಳ ಸಾಂಸ್ಕೃತಿಕ ನೃತ್ಯ ಮತ್ತು ನಾಟಕ ಜನರ ಮೆಚ್ಚುಗೆ ಪಡೆದವು.
ಗ್ರಾಮಪಂಚಾಯಿತಿ ಉಪಾಧ್ಯಕ್ಷರಾದ ಭವಾನಿ, ಸದಸ್ಯರಾದ ನರಸಿಂಹನಾಯಕ, ಮಹಲಿಂಗಪ್ಪ, ಅಕ್ಕಮಹಾದೇವಿ, ಮುಖಂಡರಾದ ಜಿ.ಬಿ.ಸತ್ಯನಾರಾಯಣ, ರುದ್ರಮುನಿ, ಎ.ಮಾರಣ್ಣ, ಸುರೇಶಚಾರ್, ಲೋಕೇಶ್ ಪಾಳೇಗಾರ, ರೇಣುಕಾಪ್ರಸಾದ್, ಎನ್.ಜಿ.ಶ್ರೀನಿವಾಸ್, ಕಂದಾಯ ಅಧಿಕಾರಿ ಕಿರಣ್‍ಕುಮಾರ್, ಆರ್.ಟಿ.ಓ ನಾಗರಾಜು, ಪರಿಷತ್ತಿನ ಐ.ಎ.ನಾರಾಯಣಪ್ಪ, ಕೆ.ಎಂ.ಪ್ರಭಾಕರ್, ಹೆಚ್.ಎಸ್.ಶ್ರೀಶೈಲಮೂರ್ತಿ, ತಿರುಮಲೇಶ, ಚಂದ್ರಶೇಖರ್ ಮುದ್ರಾಡಿ, ರಾಮಲಿಂಗಯ್ಯ, ಫಕೃದ್ದೀನ್, ಶಿಕ್ಷಕರಾದ ರವೀಂದ್ರ, ಲಕ್ಷ್ಮಮ್ಮ, ಮಾಲತಿ, ದೇವಿಕ, ಗಿರಿಜಮ್ಮ, ಇತರರು ಇದ್ದರು.
ವರದಿ : ರಾಮಚಂದ್ರ- ವೈ ಎನ್ ಎಚ್