IMG 20240305 WA0009

Karnataka : ತೋಟಗಾರಿಕಾ ಮೇಳ- ಹೊಸ ತಾಂತ್ರಿಕತೆ ಗಳ ಅನಾವರಣ….!

BUSINESS Genaral STATE

ಭಾರತದ ಅತಿ ದೊಡ್ಡ ತೋಟಗಾರಿಕಾ ಮೇಳ ರಾಷ್ಟ್ರೀಯ ತೋಟಗಾರಿಕಾ ಮೇಳ 2024 ಬೆಂಗಳೂರಿನ ಹೆಸರುಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಉದ್ಘಾಟನೆ
ಬೆಂಗಳೂರು, ದಿನಾಂಕ: 5ನೇ ಮಾರ್ಚ್ 2024
ಇಂದು ಬೆಂಗಳೂರಿನ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ 2024 ವಿಜೃಂಭಣೆಯಿಂದ ಉದ್ಘಾಟಿಸಲಾಯಿತು.
ಬೆಂಗಳೂರಿನ ಭಾರತ ಎಲೆಕ್ಟ್ರಾನಿಕ್ ಲಿಮಿಟೆಡ್ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀ ಭಾನುಪ್ರಕಾಶ್ ಶ್ರೀ ವಾತ್ಸವ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಉದ್ಘಾಟನಾ ಭಾಷಣದಲ್ಲಿ, ಶ್ರೀ ಭಾನು ಪ್ರಕಾಶ್ ಶ್ರೀವಾಸ್ತವ ಅವರು ರಾಷ್ಟ್ರೀಯ ತೋಟಗಾರಿಕೆ ಮೇಳ ಮತ್ತು ಹಲವಾರು ಸಾಮಥ್ರ್ಯ ನಿರ್ಮಾಣ ಕಾರ್ಯಕ್ರಮಗಳಂತಹ ಪ್ರದರ್ಶನಗಳ ಮೂಲಕ ರೈತರು, ಉದ್ಯಮಿಗಳು ಮತ್ತು ವಿದ್ಯಾರ್ಥಿಗಳ ಅಗತ್ಯಗಳನ್ನು ಪೂರೈಸುವಲ್ಲಿ ಐ.ಐ.ಹೆಚ್.ಆರ್ ನ ಪ್ರಯತ್ನಗಳನ್ನು ಶ್ಲಾಘಿಸಿದರು. ಶ್ರೀ ಶ್ರೀವಾಸ್ತವ ಅವರು ತೋಟಗಾರಿಕೆಯಲ್ಲಿನ ವಿವಿಧ ಬಳಕೆದಾರರ ಅನುಕೂಲಕ್ಕಾಗಿ ಸಹಭಾಗಿತ್ವದ ಕಾರ್ಯಕ್ರಮಗಳಿಗೆ ಒತ್ತು ನೀಡಿದರು.
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾಕ್ಟರ್ ಪ್ರಕಾಶ್ ಪಾಟೀ¯ ಸ್ವಾಗತ ಭಾಷಣ ಮಾಡಿ ಸಂಸ್ಥೆಯು ದೇಶದಲ್ಲಿ ಮಾತ್ರವಲ್ಲದೆ ಆಗ್ನೇಯ ಏμÁ್ಯ ಪ್ರದೇಶದಲ್ಲೂ ಉನ್ನತ ಮಟ್ಟದಲ್ಲಿದೆ ಎಂದು ತಿಳಿಸಿ ಸಂಸ್ಥೆಯ ವಿಜ್ಞಾನಿಗಳ ಪ್ರಯತ್ನಗಳನ್ನು ಶ್ಲಾಗಿಸಿದರು.

IMG 20240305 WA0005
ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ತೋಟಗಾರಿಕೆ ವಿಭಾಗದ ಉಪಮಹಾ ನಿರ್ದೇಶಕರಾದ ಪೆÇ್ರಫೆಸರ್ ಸಂಜಯ್ ಕುಮಾರ್ ಸಿಂಗ್ ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣದಲ್ಲಿ ಭಾರತದ ಆರ್ಥಿಕತೆಯಲ್ಲಿ ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕದ ನಂತರ ಕೃಷಿ ಉದ್ಯಮಶೀಲತೆ ಮತ್ತು ಉದ್ಯೋಗ ಸೃಷ್ಟಿಯ ಮೂಲಕ ಆದಾಯ ಹೆಚ್ಚಿಸುವಲ್ಲಿ ತೋಟಗಾರಿಕಾ ಕ್ಷೇತ್ರದ ಪ್ರಸ್ತುತತೆಯನ್ನು ಪುನರುಚ್ಚರಿಸಿದರು. ಉದಯೋನ್ಮುಖ ವಲಯವಾದ ತೋಟಗಾರಿಕೆ ಕ್ಷೇತ್ರದಲ್ಲಿನ ನವೀನ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಅಳವಡಿಕೆಗೆ ಒತ್ತು ನೀಡಿ ರಾಷ್ಟ್ರೀಯ ತೋಟಗಾರಿಕಾ ಮೇಳದ ಯಶಸ್ಸಿಗೆ ಶುಭ ಹಾರೈಸಿದರು.

IMG 20240305 WA0007
ಬೆಂಗಳೂರಿನ ಕೃಷಿ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಸುಬ್ರಹ್ಮಣ್ಯಂ ರವರು ತೋಟಗಾರಿಕಾ ಕ್ಷೇತ್ರದಲ್ಲಿನ ಪ್ರಗತಿಪರ ರೈತರು ರೈತ ಉತ್ಪಾದಕ ಸಂಸ್ಥೆಗಳು ನವೋದ್ಯಮಗಳು ಹಾಗೂ ಉದ್ಯಮಿಗಳನ್ನು ಗುರುತಿಸಿ ಸನ್ಮಾನಿಸುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ತಂತ್ರಜ್ಞಾನಗಳು ತೋಟಗಾರಿಕೆ ಕ್ಷೇತ್ರಕ್ಕೆ ವಿಶೇಷವಾಗಿ ಲಕ್ಷದ್ವೀಪಗಳು ಸೇರಿದಂತೆ ದೇಶದ ದೂರದ ಪ್ರದೇಶಗಳಲ್ಲಿ ರೈತರ ಆದಾಯವನ್ನು ಹೆಚ್ಚಿಸುವಲ್ಲಿ ಮತ್ತು ಮಹಿಳಾ ಉದ್ಯೋಗಿಗಳನ್ನು ಸೃಷ್ಟಿಸುವಲ್ಲಿ ಅಪಾರ ಕೊಡುಗೆ ನೀಡುತ್ತಿದೆ ಎಂದು ಶ್ಲಾಘಿಸಿದರು.

ಮೇಳದ ಚಟುವಟಿಕೆಗಳ ಬಗೆಗೆ ಮಾಹಿತಿ ನೀಡಿದ ಆಯೋಜನ ಕಾರ್ಯದರ್ಶಿ ಡಾಕ್ಟರ್ ಎಂ ವಿ ಧನಂಜಯ್ ಅವರು ಮೂರು ದಿನಗಳ ಈ ಮೇಳದಲ್ಲಿ ದೇಶದ 20 ರಾಜ್ಯಗಳ ರೈತರು ಭಾಗವಹಿಸುತ್ತಿದ್ದಾರೆ ಎಂದು ಖಚಿತಪಡಿಸಿದರು ಮೇಳದಲ್ಲಿ ಸಂಸ್ಥೆಯ 238 ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ ಮತ್ತು 50ಕ್ಕೂ ಹೆಚ್ಚು ಐಸಿಆರ್ ಸಂಸ್ಥೆಗಳು ಕೆವಿಕೆಗಳು ಭಾಗವಹಿಸುತ್ತಿವೆ ಹಾಗೂ ಇತರ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ತಮ್ಮ ಆವಿμÁ್ಕರ ಮತ್ತು ತಂತ್ರಜ್ಞಾನಗಳನ್ನು 250ಕ್ಕೂ ಹೆಚ್ಚು ಮಳಿಗೆಗಳಲ್ಲಿ ಪ್ರದರ್ಶಿಸುತ್ತಿವೆ ಎಂದು ತಿಳಿಸಿದರು. ಎನ್ಎಚ್ಎಫ್ 2024 ರ ಪ್ರಸಾರ ಮತ್ತು ವ್ಯಾಪಕ ಪ್ರಚಾರಕ್ಕಾಗಿ ಪತ್ರಿಕಾ ಮತ್ತು ಮಾಧ್ಯಮಗಳ (~ 49 ಸಂಖ್ಯೆಗಳು) ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಯ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಇತರ ರೈತರಿಗೆ ಮಾದರಿ ಎನಿಸಿದ 12 ಪ್ರಗತಿಪರ ರೈತರು, ತೋಟಗಾರಿಕಾ ಕ್ಷೇತ್ರದಲ್ಲಿ ಕೊಡುಗೆಗಾಗಿ ನಾಲ್ಕು ಉದ್ಯಮಿಗಳು, 5 ರೈತ ಉತ್ಪಾದಕ ಸಂಸ್ಥೆಗಳು ಹಾಗೂ ಐದು ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.

ಇದಲ್ಲದೆ, ಎನ್ಎಚ್ಎಫ್ 2024 ಸ್ಮರಣಿಕೆ, ತೋಟಗಾರಿಕೆ ಬೆಳೆಗಳಿಗೆ ಸಸ್ಯ ಅಂಗಾಂಶ ವಿಶ್ಲೇಷಣೆ ಮತ್ತು ವ್ಯಾಖ್ಯಾನ ಮತ್ತು ಕೊಯ್ಲಿನ ನಂತರದ ತಂತ್ರಜ್ಞಾನ ಮತ್ತು ಕೃಷಿ ಎಂಜಿನಿಯರಿಂಗ್, ಕೃಷಿ-ವ್ಯವಹಾರ ಇನ್ಕ್ಯುಬೇಷನ್ ಕೇಂದ್ರದ ಸ್ಥಿತಿ: ನವೋದ್ಯಮಗಳಿಗೆ ದಾರಿ, ‘ಔಷಧೀಯ ಗಿಡಮೂಲಿಕೆಗಳ ಮಣ್ಣುರಹಿತ ಕೃಷಿಗೆ ಮಾರ್ಗದರ್ಶಿ’ ಎಂಬ ವಿಸ್ತರಣಾ ಫೆÇೀಲ್ಡರ್ ಮತ್ತು ಐಐಎಚ್ಆರ್ ತಂತ್ರಜ್ಞಾನಗಳ ರಿಯಾಲಿಟಿ ಪೆÇೀಸ್ಟ್ ಕಾಡ್ರ್ಗಳಂತಹ ಪ್ರಕಟಣೆಗಳನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಇದಲ್ಲದೆ, ತುಮಕೂರಿನ ಐಸಿಎಆರ್-ಕೆವಿಕೆಗೆ ‘ಅರ್ಕಾ ಫೆÇ್ಲೀರಲ್ ಅಗರಬತ್ತಿ ಮತ್ತು ಧೂಪ್’ ಮತ್ತು ಕೊಡಗಿನ ಶ್ರೀ ರಮೇಶ್ ಎಸ್.ಪೆÇನ್ನತ್ಮೊಟ್ಟೆ ಅವರಿಗೆ ‘ಅರ್ಕಾ ಸುಪ್ರೀಂ ಆವಕಾಡೊ ವೆರೈಟಿ’ ಎಂಬ ಎರಡು ತಂತ್ರಜ್ಞಾನಗಳಿಗಾಗಿ ತಿಳಿವಳಿಕೆ ಒಪ್ಪಂದಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.