ಅಪೊಲೊ ಆಸ್ಪತ್ರೆಗಳು ದಕ್ಷಿಣ ಏಷ್ಯಾದಲ್ಲಿ ಮೊದಲನೇ ಬಾರಿಗೆ ZAP-X ಅನ್ನು ಅನಾವರಣಗೊಳಿಸುತ್ತವೆ, ಬ್ರೈನ್ ಟ್ಯೂಮರ್ ಕೇರ್ ಚಿಕಿತ್ಸೆಯನ್ನು ಕ್ರಾಂತಿಗೊಳಿಸುತ್ತವೆ
• ಆಕ್ರಮಣಶೀಲವಲ್ಲದ, 30-ನಿಮಿಷದ ಅವಧಿಯ ಕ್ರಿಯೆಯನ್ನು ಹೊಂದಿದ್ದು ವೇಗವಾಗಿ ಚೇತರಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಹಾಗೂ ರೋಗಿಗಳಿಗೆ ಸುಧಾರಿತ ಸಾಂತ್ವನವನ್ನು ನೀಡುತ್ತದೆ.
• ರೋಗಿಯ ಫಲಿತಾಂಶಗಳನ್ನು ಪರಿವರ್ತಿಸಲು Zap- X ನಿಖರವಾದ ಗುರಿಯನ್ನು ಹೊಂದಿರುತ್ತದೆ ಹಾಗೂ ಸುರಕ್ಷತೆಯನ್ನು ತರುತ್ತದೆ.
ನ್ಯಾಷನಲ್ : ಅಪೋಲೋ ಹಾಸ್ಪಿಟಲ್ಸ್ ಗ್ರೂಪ್, ಭಾರತದ ಅತಿದೊಡ್ಡ ಸಮಗ್ರ ಆರೋಗ್ಯ ಪೂರೈಕೆದಾರರಾಗಿದ್ದು, ಇಂದು ZAP-X ಗೈರೊಸ್ಕೋಪಿಕ್ ರೇಡಿಯೊಸರ್ಜರಿ ಪ್ಲಾಟ್‌ಫಾರ್ಮ್ ಅನ್ನು ಅನಾವರಣಗೊಳಿಸಿದೆ, ಇದು ಬ್ರೈನ್ ಟ್ಯೂಮರ್ (ಮೆದುಳಿನ ಗೆಡ್ಡೆಯ) ಚಿಕಿತ್ಸೆಯಲ್ಲಿ ಒಂದು ಕ್ರಾಂತಿಕಾರಿ ಪ್ರಗತಿಯಾಗಿದೆ. ಈ ಅತ್ಯಂತ ಮಹತ್ವಕಾರಿಯಾದ ತಂತ್ರಜ್ಞಾನವನ್ನು ದಕ್ಷಿಣ ಏಷ್ಯಾದಲ್ಲಿ ಪರಿಚಯಿಸಿದ ಮೊದಲನೆಯವರು ಎನ್ನುವ ಮೈಲಿಗಲ್ಲನ್ನು ಸಾಧಿಸಿದೆ. ZAP-X ನೊಂದಿಗೆ, ಅಪೊಲೊ ಹಾಸ್ಪಿಟಲ್ಸ್ ತನ್ನ ನಾವೀನ್ಯತೆ ಮತ್ತು ಬದ್ಧತೆಯ ಪರಂಪರೆಯನ್ನು ಭಾರತದಲ್ಲಿ ಹಾಗೂ ಪ್ರಪಂಚದಾದ್ಯಂತ ಇರುವ ರೋಗಿಗಳಿಗೆ ವಿಶ್ವ ದರ್ಜೆಯ ಆರೋಗ್ಯ ಪರಿಹಾರಗಳನ್ನು ಒದಗಿಸುವುದನ್ನು ಮುಂದುವರೆಸಿದೆ.
ZAP-X, ಬ್ರೈನ್ ಟ್ಯೂಮರ್ (ಮೆದುಳಿನ ಗೆಡ್ಡೆಯ) ಚಿಕಿತ್ಸೆಯಲ್ಲಿ ಹೊಸ ಯುಗವನ್ನು ಪರಿಚಯಿಸುತ್ತದೆ, ರೋಗಿಗಳಿಗೆ ಕೇವಲ 30 ನಿಮಿಷಗಳ ಅವಧಿಯಲ್ಲಿ ಆಕ್ರಮಣಶೀಲವಲ್ಲದ, ನೋವು-ಮುಕ್ತ ಪರ್ಯಾಯವನ್ನು ನೀಡುತ್ತದೆ. ಈ ಪರಿವರ್ತಕ ತಂತ್ರಜ್ಞಾನವು ಕನಿಷ್ಟ ವಿಕಿರಣದ ಮಾನ್ಯತೆಯೊಂದಿಗೆ ನಿಖರತೆಯನ್ನು ಮರುವ್ಯಾಖ್ಯಾನಿಸುತ್ತದೆ ಹಾಗೂ ಪರಿಣಾಮಕಾರಿತ್ವ ಮತ್ತು ರೋಗಿಗಳ ಸೌಕರ್ಯದಲ್ಲಿ ಹೊಸ ಮಾನದಂಡಗಳನ್ನು ಸಕ್ರಿಯಗೊಳಿಸುತ್ತದೆ. ಪ್ರಸ್ತುತ ಇರುವ ಸಾಂಪ್ರದಾಯಿಕ ವಿಧಾನಗಳಿಗಿಂತ ಭಿನ್ನವಾಗಿ, ZAP-X ಸ್ವಯಂ-ರಕ್ಷಾಕವಚದ, ಗೈರೊಸ್ಕೋಪಿಕ್ ಲೀನಿಯರ್ ವೇಗವರ್ಧಕ ವಿನ್ಯಾಸವನ್ನು ಬಳಸುತ್ತದೆ. ಸಾವಿರಾರು ಸಂಭಾವ್ಯ ಕೋನಗಳಿಂದ ರೇಡಿಯೊಸರ್ಜಿಕಲ್ ಕಿರಣಗಳನ್ನು ನಿರ್ದೇಶಿಸಲು, ಉದ್ದೇಶಿತ ಟ್ಯೂಮರ್ (ಗೆಡ್ಡೆ) ಅಥವಾ ಅನ್ವಯಿಸುವ ಗುರಿಯ ಮೇಲೆ ವಿಕಿರಣವನ್ನು ನಿಖರವಾಗಿ ಕೇಂದ್ರೀಕರಿಸುತ್ತದೆ. ಈ ನವೀನ ವಿಧಾನವು ಮೆದುಳಿನ ಕಾಂಡ, ಕಣ್ಣುಗಳು ಮತ್ತು ಆಪ್ಟಿಕ್ ನರಗಳಂತಹ ನಿರ್ಣಾಯಕ ರಚನೆಗಳಿಗೆ ತೊಂದರೆ ಉಂಟಾಗುವುದನ್ನು ತಪ್ಪಿಸುವ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ರೋಗಿಯ ಫಲಿತಾಂಶಗಳನ್ನು ಸುಧಾರಿಸುತ್ತದೆ. ಹಾಗೆಯೇ ರೋಗಿಯ ಅರಿವಿನ ಕಾರ್ಯವನ್ನು ರಕ್ಷಿಸಲು ಆರೋಗ್ಯಕರ ಮೆದುಳಿನ ಅಂಗಾಂಶಕ್ಕೆ ಒಡ್ಡಿಕೊಳ್ಳುವುದನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ.
ZAP-X ನ ಸಾಬೀತಾದ ಕ್ಲಿನಿಕಲ್ ಸಾಮರ್ಥ್ಯಗಳು, ಪ್ರಾಥಮಿಕ ಮತ್ತು ಮೆಟಾಸ್ಟಾಟಿಕ್ ಬ್ರೈನ್ ಟ್ಯೂಮರ್ (ಮೆದುಳಿನ ಗೆಡ್ಡೆಗಳು), ಅಪಧಮನಿಯ ವಿರೂಪಗಳು (AVMs), ಟ್ರೈಜಿಮಿನಲ್ ನರಶೂಲೆಗಳು, ಚಲನೆಯ ಅಸ್ವಸ್ಥತೆಗಳಾದ ಪಾರ್ಕಿನ್ಸನ್ ಕಾಯಿಲೆ, ಎಪಿಲೆಪ್ಸಿ ಮತ್ತು ಇತರ ಮಾಸ್ಟ್ರಾಕ್ರೇನಿಯಸ್ ಹಾಗೂ ಅಡೆನೊಮಾಸ್ ಇತ್ಯಾದಿಗಳಲ್ಲಿ ನರವಿಜ್ಞಾನಿಗಳು ಮತ್ತು ನರಶಸ್ತ್ರಚಿಕಿತ್ಸಕರಿಗೆ ಉತ್ತಮ ನಿಖರತೆ ಹಾಗೂ ರೋಗಿಗಳಿಗೆ ಕಡಿಮೆ ಅಡ್ಡ ಪರಿಣಾಮಗಳೊಂದಿಗೆ ಚಿಕಿತ್ಸೆ ನೀಡಲು ಅನುವು ಮಾಡಿಕೊಡುತ್ತದೆ.
ಅಪೊಲೊ ಹಾಸ್ಪಿಟಲ್ಸ್ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷರಾದ ಡಾ.ಪ್ರತಾಪ್ ಚಂದ್ರ ರೆಡ್ಡಿ ಅವರು ಬಿಡುಗಡೆ ಸಮಾರಂಭದಲ್ಲಿ ಹೀಗೆ ತಿಳಿಸಿದರು: “ನಾಲ್ಕು ದಶಕಗಳಿಗೂ ಹೆಚ್ಚು ಕಾಲ, ಅಪೊಲೊ ಆಸ್ಪತ್ರೆಗಳು ಅಸಾಧಾರಣ ಆರೈಕೆಯನ್ನು ಒದಗಿಸಲು ನಿರಂತರವಾಗಿ ಮಿತಿಗಳಿಗೆ ಸವಾಲು ಹಾಕುತ್ತಾ, ಆರೋಗ್ಯ ರಕ್ಷಣೆಯನ್ನು ನೀಡುವುದರಲ್ಲಿ ಮುಂಚೂಣಿಯಲ್ಲಿವೆ. ಈ ಸಂಪ್ರದಾಯವನ್ನು ಎತ್ತಿಹಿಡಿದು, ನಾವು ಬ್ರೈನ್ ಟ್ಯೂಮರ್ (ಮೆದುಳಿನ ಗೆಡ್ಡೆಗಳ) ಚಿಕಿತ್ಸೆಗಾಗಿ ವಿನ್ಯಾಸಗೊಳಿಸಲಾದ ನವೀನ ತಂತ್ರಜ್ಞಾನವನ್ನು ಹೊಂದಿದ ZAP-X ಅನ್ನು ಅನಾವರಣಗೊಳಿಸಿದ್ದೇವೆ. ಈ ಹೊಸ ವಿಧಾನವು ಆಕ್ರಮಣಶೀಲವಲ್ಲದ, ನೋವು-ಮುಕ್ತ ಅವಧಿಗಳನ್ನು 30 ನಿಮಿಷಗಳವರೆಗೆ ಅನುಮತಿಸುತ್ತದೆ. ವಿಕಿರಣಕ್ಕೆ ಕನಿಷ್ಠ ಒಡ್ಡಿಕೊಳ್ಳುವಿಕೆಯೊಂದಿಗೆ. ZAP-X ಸುಧಾರಿತ ಸುರಕ್ಷತಾ ಪ್ರೋಟೋಕಾಲ್‌ಗಳೊಂದಿಗೆ ಬರುತ್ತದೆ. ತ್ವರಿತ ದೋಷ ಪತ್ತೆ ಮತ್ತು ಕಡಿಮೆಯಾದ ವಿಕಿರಣ ಸೋರಿಕೆ ಸೇರಿದಂತೆ, ರೋಗಿಯ ಯೋಗಕ್ಷೇಮ ಹಾಗೂ ಚಿಕಿತ್ಸೆಯ ನಂತರದ ಜೀವನದ ಗುಣಮಟ್ಟವನ್ನು ಖಚಿತಪಡಿಸುತ್ತದೆ. ಇದಲ್ಲದೆ, ಹೊರರೋಗಿಯ ವಿಧಾನವಾಗಿ ಇದು ರೋಗಿಗಳಿಗೆ ಹೆಚ್ಚಿನ ಅನುಕೂಲತೆ ಮತ್ತು ಪ್ರವೇಶವನ್ನು ಅನುಮತಿಸುತ್ತದೆ. ಈ ತಂತ್ರಜ್ಞಾನವು ನಮ್ಮ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಹಾಗೂ ಭೌಗೋಳಿಕತೆಯಾದ್ಯಂತ ಜನರಿಗೆ ಲಭ್ಯವಾಗುವಂತೆ ಮಾಡುವುದಕ್ಕೆ ನಾವು ಬದ್ಧರಾಗಿದ್ದೇವೆ, ಏಕೆಂದರೆ ಬ್ರೈನ್ ಟ್ಯೂಮರ್ (ಮೆದುಳಿನ ಗೆಡ್ಡೆ) ಗಳ ಬಗ್ಗೆ ಯಾವ ರೀತಿಯಲ್ಲಿ ಮುಂದುವರೆಯಬೇಕು ಹಾಗೂ ಚಿಕಿತ್ಸೆ ನೀಡಬೇಕು ಎನ್ನುವುದು ತಿಳಿದಿರುವುದರಿಂದ ಜನರಿಗೆ ವರದಾನವಾಗಿದೆ. ನಾನ್-ಕಮ್ಯುನಿಕಬಲ್ ಡಿಸೀಸ್ (NCD ಗಳು) ಹೆಚ್ಚುತ್ತಿರುವ ಪ್ರಕರಣಗಳೊಂದಿಗೆ, ಅದರಲ್ಲೂ ಅವುಗಳಲ್ಲಿ ಕ್ಯಾನ್ಸರ್ ಒಂದು ಗಮನಾರ್ಹ ಭಾಗವಾಗಿದ್ದು, NCD ಗಳ ವಿರುದ್ಧದ ನಮ್ಮ ಹೋರಾಟದಲ್ಲಿ ZAP-X ಹೊಸ ಸೇರ್ಪಡೆಯಾಗಲಿದೆ.”
ZAP-X ತಂತ್ರಜ್ಞಾನವು ಆಕ್ರಮಣಕಾರಿಯಲ್ಲದ ಪ್ರಮುಖ ಪ್ರಯೋಜನಗಳೊಂದಿಗೆ ಬರುತ್ತದೆ, ಇದರಿಂದಾಗಿ ಕೆಲವು ಬ್ರೈನ್ ಟ್ಯೂಮರ್ (ಮೆದುಳಿನ ಗೆಡ್ಡೆ) ಗಳಿಗೆ ಶಸ್ತ್ರಚಿಕಿತ್ಸಾ ಹಸ್ತಕ್ಷೇಪದ ಅಗತ್ಯವಿರುವುದಿಲ್ಲ, ನೋವು-ಮುಕ್ತವಾಗಿರುತ್ತದೆ ಹಾಗೂ ಕಡಿಮೆ ಚಿಕಿತ್ಸೆಯ ಅವಧಿಗಳು ಮತ್ತು ವರ್ಧಿತ ರೋಗಿಗಳ ಸುರಕ್ಷತೆಗಾಗಿ ಫ್ರೇಮ್‌ಲೆಸ್, ನಿಖರತೆ ಮತ್ತು ನೈಜ-ಸಮಯದ ಚಿತ್ರ ಮಾರ್ಗದರ್ಶನವನ್ನು ನೀಡುತ್ತದೆ. ZAP-X ಹೆಚ್ಚಿನ ಯಶಸ್ಸನ್ನು ಪ್ರದರ್ಶಿಸುತ್ತದೆ ಹಾಗೂ ಕಡಿಮೆ ಅಡ್ಡ ಪರಿಣಾಮಗಳೊಂದಿಗೆ ವಿವಿಧ ಪರಿಸ್ಥಿತಿಗಳಿಗೆ ಪರಿಣಾಮಕಾರಿ ನಿಯಂತ್ರಣ ಮತ್ತು ಪರಿಹಾರವನ್ನು ಖಾತರಿಪಡಿಸುತ್ತದೆ. ಇದು ಮುಖಕ್ಕೆ ಕನಿಷ್ಟ ರೀತಿಯಲ್ಲಿ ಅಥವಾ ಟ್ರೈಜಿಮಿನಲ್ ಅಡ್ಡ ಪರಿಣಾಮಗಳೊಂದಿಗೆ 10 ವರ್ಷಗಳಲ್ಲಿ 95% ಕ್ಕಿಂತ ಹೆಚ್ಚು ನಿಯಂತ್ರಣ ದರವನ್ನು ಸಾಧಿಸಿದೆ. ZAP-X ಸಣ್ಣ, ವ್ಯಾಖ್ಯಾನಿಸಲಾದ ಟ್ಯೂಮರ್ (ಗೆಡ್ಡೆ) ಗಳಿಗೆ 5 ವರ್ಷಗಳಲ್ಲಿ ಅಸಾಧಾರಣ 99.4% ನಿಯಂತ್ರಣ ದರವನ್ನು ತೋರಿಸುತ್ತದೆ.
ಪ್ರೊ. ಜಾನ್ ಆರ್. ಆಡ್ಲರ್, ಸಂಸ್ಥಾಪಕ ಮತ್ತು CEO, Zap ಸರ್ಜಿಕಲ್ ಮತ್ತು ನರಶಸ್ತ್ರಚಿಕಿತ್ಸೆಯ ಪ್ರೊಫೆಸರ್, ಸ್ಟ್ಯಾನ್‌ಫೋರ್ಡ್ ಸ್ಕೂಲ್ ಆಫ್ ಮೆಡಿಸಿನ್ ತಿಳಿಸಿದರು, “ಕಳೆದ ಶತಮಾನದ ಪ್ರಮುಖ ವೈದ್ಯಕೀಯ ಪ್ರಗತಿಗಳಲ್ಲಿ ಸ್ಟೀರಿಯೊಟಾಕ್ಟಿಕ್ ರೇಡಿಯೊಸರ್ಜರಿ ಒಂದಾಗಿದೆ. ಅರ್ಹ ರೋಗಿಗಳು ಇನ್ನು ಮುಂದೆ ದುರ್ಬಲಗೊಳಿಸುವ ಶಸ್ತ್ರಚಿಕಿತ್ಸಾ ಛೇದನವನ್ನು ಅನುಭವಿಸಬಾರದು ಅಥವಾ ಸಂಪೂರ್ಣ-ಮೆದುಳಿನ ರೇಡಿಯೊಥೆರಪಿಗೆ ಒಳಗಾಗುವ ಮೂಲಕ ಅರಿವಿನ ಸಾಮರ್ಥ್ಯವನ್ನು ಕಳೆದುಕೊಳ್ಳಬಾರದು. ಬದಲಿಗೆ, ZAP-X ರೇಡಿಯೊಸರ್ಜರಿಯೊಂದಿಗೆ, ರೋಗಿಗಳಿಗೆ ಈಗ ಹೊರರೋಗಿಗಳ ವ್ಯವಸ್ಥೆಯಲ್ಲಿಯೇ ತ್ವರಿತವಾಗಿ ಚಿಕಿತ್ಸೆ ನೀಡಬಹುದು ಹಾಗೂ ಯಾವುದೇ ಛೇದನಗಳಿಲ್ಲದೆ ಮತ್ತು ನೋವು ಇಲ್ಲದೆ ಅದೇ ದಿನ ಅವರುಗಳು ಸಾಮಾನ್ಯ ಚಟುವಟಿಕೆಗಳಿಗೆ ಮರಳಬಹುದು.”
ಸಾಂಪ್ರದಾಯಿಕ ಮಿದುಳಿನ ಶಸ್ತ್ರಚಿಕಿತ್ಸೆಗಳು 3-4 ಗಂಟೆಗಳವರೆಗೆ ತೆಗೆದುಕೊಳ್ಳುತ್ತದೆ, ZAP-X 30 ನಿಮಿಷಗಳಿಗಿಂತ ಹೆಚ್ಚಿನದಲ್ಲದ ಒಂದು ಅವಧಿಯೊಳಗೆ ಚಿಕಿತ್ಸೆಯನ್ನು ಪೂರ್ಣಗೊಳಿಸುತ್ತದೆ. ZAP-X ಒಂದು ದಿನದ ಆರೈಕೆಯ ಕಾರ್ಯವಿಧಾನವನ್ನು ಅನುಮತಿಸುತ್ತದೆ, ರೋಗಿಗಳಿಗೆ ಚಿಕಿತ್ಸೆಯ ನಂತರ ಮನೆಗೆ ಮರಳಲು ಅನುವು ಮಾಡಿಕೊಡುತ್ತದೆ, ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಳು ತೆಗೆದುಕೊಳ್ಳುವ 4-7 ದಿನಗಳು ಅಥವಾ ಹೆಚ್ಚಿನ ಆಸ್ಪತ್ರೆಗೆ ದಾಖಲಾಗುವ ಹಾಗೂ ಅರವಳಿಕೆಯ ಅಗತ್ಯವಿಲ್ಲದೇ.
ಅಪೊಲೊ ಇನ್‌ಸ್ಟಿಟ್ಯೂಟ್ ಆಫ್ ನ್ಯೂರೋಸೈನ್ಸ್, ಭಾರತ ಮತ್ತು ಪ್ರದೇಶದಾದ್ಯಂತ ನರವೈಜ್ಞಾನಿಕ ಆರೈಕೆಯನ್ನು ಕ್ರಾಂತಿಗೊಳಿಸುವಲ್ಲಿ ಪ್ರವರ್ತಕ ಶಕ್ತಿಯಾಗಿ ನಿಂತಿದೆ. ತುರ್ತು ಸೇವೆಗಳು, ನ್ಯೂರೋ-ಐಸಿಯುಗಳು ಮತ್ತು ಪುನರ್ವಸತಿ ಕೇಂದ್ರಗಳು ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ, ಅಪೊಲೊ 180,000 ಯಶಸ್ವಿ ನರಶಸ್ತ್ರಚಿಕಿತ್ಸೆಗಳ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದೆ. ಅತ್ಯಾಧುನಿಕ AI ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು, ಇನ್‌ಸ್ಟಿಟ್ಯೂಟ್ ಸ್ಟ್ರೋಕ್ ಪ್ರೋಟೋಕಾಲ್‌ಗಳನ್ನು ಮರುವ್ಯಾಖ್ಯಾನಿಸಿದೆ. ವೇಗವಾಗಿ, ಹೆಚ್ಚು ನಿಖರವಾದ ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಸಕ್ರಿಯಗೊಳಿಸುತ್ತದೆ. 300 ಕ್ಕೂ ಹೆಚ್ಚು ನರಶಸ್ತ್ರಚಿಕಿತ್ಸಕರು ಮತ್ತು ನರವಿಜ್ಞಾನಿಗಳ ಅಸಾಧಾರಣ ತಂಡದ ಬೆಂಬಲದೊಂದಿಗೆ, ಅಪೊಲೊ ವಾರ್ಷಿಕವಾಗಿ 25,000 ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡುತ್ತದೆ, ಸುಮಾರು 6,000 ಮೆದುಳು ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗಳನ್ನು ನಿರ್ವಹಿಸಿದೆ. ಮೇಲೆ ತಿಳಿಸಿದ ಅಸಾಧಾರಣ ಪರಿಮಾಣವು ಅಪರೂಪದ ಹಾಗೂ ಅತ್ಯಂತ ಸಂಕೀರ್ಣವಾದ ನರವೈಜ್ಞಾನಿಕ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಅಪೊಲೊ ಪಡೆದಿರುವ ಪರಿಣತಿಯನ್ನು ಗಟ್ಟಿಗೊಳಿಸುತ್ತದೆ. ಪ್ರಪಂಚದಾದ್ಯಂತದ ರೋಗಿಗಳಿಗೆ ಸಾಟಿಯಿಲ್ಲದ ಆರೈಕೆ ನೀಡುವುದನ್ನು ಬಯಸುತ್ತದೆ. ZAP-X ಪ್ಲಾಟ್‌ಫಾರ್ಮ್‌ನ ಅನಾವರಣವು ಜೀವನವನ್ನು ಪರಿವರ್ತಿಸುವ ಆವಿಷ್ಕಾರಗಳನ್ನು ಮುನ್ನಡೆಸಲು ಅಪೊಲೊ ಹೊಂದಿರುವ ಬದ್ಧತೆಯನ್ನು ಪುನರುಚ್ಚರಿಸುತ್ತದೆ.
ಅಪೊಲೊ ಬಗ್ಗೆ:
ಡಾ. ಪ್ರತಾಪ್ ರೆಡ್ಡಿ ಅವರು 1983 ರಲ್ಲಿ ಚೆನ್ನೈನಲ್ಲಿ ಮೊದಲ ಆಸ್ಪತ್ರೆಯನ್ನು ತೆರೆದಾಗ ಅಪೊಲೊ ಆರೋಗ್ಯ ರಕ್ಷಣೆಯಲ್ಲಿ ಕ್ರಾಂತಿಯನ್ನುಂಟುಮಾಡಿತು. ಇಂದು ಅಪೊಲೊ ವಿಶ್ವದ ಅತಿದೊಡ್ಡ ಸಮಗ್ರ ಆರೋಗ್ಯ ವೇದಿಕೆಯಾಗಿದ್ದು, 71 ಆಸ್ಪತ್ರೆಗಳು, ಸುಮಾರು 6000 ಔಷಧಾಲಯಗಳು ಮತ್ತು 200 ಕ್ಕೂ ಹೆಚ್ಚು ಕ್ಲಿನಿಕ್‌ಗಳು ಮತ್ತು ಡಯಾಗ್ನೋಸ್ಟಿಕ್ ಸೆಂಟರ್‌ಗಳು ಮತ್ತು 150 ಟೆಲಿಮೆಡ್ ಕೇಂದ್ರಗಳಲ್ಲಿ 10,000 ಹಾಸಿಗೆಗಳನ್ನು ಹೊಂದಿದೆ. ಆಪೋಲೋ, 3,00,000 ಆಂಜಿಯೋಪ್ಲ್ಯಾಸ್ಟಿಗಳು ಮತ್ತು 2,00,000 ಶಸ್ತ್ರಚಿಕಿತ್ಸೆಗಳನ್ನು ನಡೆಸುವುದರೊಂದಿಗೆ ವಿಶ್ವದ ಪ್ರಮುಖ ಹೃದಯ ಕೇಂದ್ರಗಳಲ್ಲಿ ಒಂದಾಗಿದೆ. ರೋಗಿಗಳಿಗೆ ವಿಶ್ವದಲ್ಲಿಯೇ ಲಭ್ಯವಿರುವ ಅತ್ಯುತ್ತಮ ಆರೈಕೆಯನ್ನು ಖಚಿತಪಡಿಸಿಕೊಳ್ಳಲು, ಅಪೊಲೊ ಅತ್ಯಂತ ಅತ್ಯಾಧುನಿಕ ತಂತ್ರಜ್ಞಾನಗಳು, ಉಪಕರಣಗಳು ಮತ್ತು ಚಿಕಿತ್ಸಾ ಪ್ರೋಟೋಕಾಲ್‌ಗಳನ್ನು ತರುವ ಸಲುವಾಗಿ ಸಂಶೋಧನೆಯಲ್ಲಿ ಹೂಡಿಕೆ ಮಾಡುವುದನ್ನು ಮುಂದುವರೆಸಿದೆ. ಅಪೊಲೊದ 100,000 ಕುಟುಂಬ ಸದಸ್ಯರು ನಿಮಗೆ ಉತ್ತಮ ಕಾಳಜಿಯನ್ನು ನೀಡಲು ಹಾಗೂ ನಾವು ಕಂಡುಕೊಂಡಿದ್ದಕ್ಕಿಂತ ಉತ್ತಮವಾಗಿರುವ ಜಗತ್ತನ್ನು ನಿರ್ಮಾಣ ಮಾಡಲು ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.