ನ್ಯಾಯದಗುಂಟೆ ಪಂಚಾಯಿತಿಯ ಉಪಾಧ್ಯಕ್ಷರಾಗಿ ರಾಧಮ್ಮ ಅವಿರೋಧವಾಗಿ ಆಯ್ಕೆ.
ಪಾವಗಡ : ತಾಲ್ಲೂಕಿನ ನ್ಯಾಯದಗುಂಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ರಾಧಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂದಿನ ಉಪಾಧ್ಯಕ್ಷರಾದ ಪರಮೇಶ್ವರ್ ನವರ
ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆದು ಉಪಾಧ್ಯಕ್ಷ ಸ್ಥಾನಕ್ಕೆ ರಾಧಮ್ಮ ಶಿವಪ್ಪ ಮಾತ್ರ ನಾಮ ಪತ್ರ ಸಲ್ಲಿಸಿದ್ದು, ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ತಹಶೀಲ್ದಾರ್ ವರದರಾಜ ರವರು ರಾಧಮ್ಮ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಈ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 19 ಸದಸ್ಯರು ಇದ್ದು ಇದರಲ್ಲಿ 17 ಸದಸ್ಯರು ಹಾಜರಿದ್ದರು. ಇಬ್ಬರು ಸದಸ್ಯರು ಚುನಾವಣೆ ಪ್ರಕ್ರಿಯೆಯಿಂದ ಹೊರಗೊಳಿದಿದ್ದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಎನ್ ಎ ಈರಣ್ಣ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಂಜಮ್ಮ ರಾಜನಾಯಕ, ಎನ್ ಮಮತಾ, ಆರ್ ಗಿರಿಯಪ್ಪ, ಗಿರಿಯಮ್ಮ, ಎಂ ಹನುಮಂತರಾಯ, ಕವಿತಾ, ಕೆ ದುರ್ಗಪ್ಪ, ಲಕ್ಷ್ಮಿ ದೇವಿ, ಶಶಿಕಾಲ, ಶೋಭಾ, ಶಿವಪ್ಪ, ಸುಮಿತ್ರಮ್ಮ, ಮುಂತಾದವರು ಉಪಸ್ಥಿತರಿದ್ದರು.
ವರದಿ :ಶ್ರೀನಿವಾಸಲು. A