IMG 20241205 WA0012

ಕಾರವಾರ : ಆಂದೋಲನ‌ ಮಾದರಿಯಲ್ಲಿ ಬಗರ್ ಹುಕುಂ ಅರ್ಜಿಗಳ ವಿಲೇವಾರಿ…!

Genaral STATE

*   ಆಂದೋಲನ‌ ಮಾದರಿಯಲ್ಲಿ ಬಗರ್ ಹುಕುಂ ಅರ್ಜಿಗಳ ವಿಲೇವಾರಿ : ಸಚಿವ ಕೃಷ್ಣ ಬೈರೇಗೌಡ*

ಕಾರವಾರ, ಡಿ.4 (ಕರ್ನಾಟಕ ವಾರ್ತೆ)s:- ರಾಜ್ಯದಲ್ಲಿ ಬಗರ್‌ಹುಕುಂ ಅರ್ಜಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಬಂದಿದ್ದು, ಅವುಗಳನ್ನು ಅದನ್ನು ಮುಂದಿನ ಆರು ತಿಂಗಳಲ್ಲಿ ಆಂದೋಲನ ಮಾದರಿಯಲ್ಲಿ ವಿಲೇವಾರಿ ಮಾಡುತ್ತೇವೆ. ಅರ್ಹರಿಗೆ ಎಲ್ಲ ದಾಖಲಾತಿಯನ್ನು ಮಾಡಿಕೊಡುತ್ತೇವೆ, ರಾಜ್ಯದಲ್ಲಿ ಇದೇ ಪ್ರಪ್ರಥಮ ಬಾರಿಗೆ ಬಗರುಹುಕುಂ ಕುರಿತು ಮಂಜೂರಾತಿಯನ್ನು ಪ್ರಾರಂಭದಿಂದ ಕೊನೆಯವರಿಗೆ ಸಂಪೂರ್ಣವಾಗಿ ಆನ್ ಲೈನ್ ಮೂಲಕ ಶಿರಸಿಯಲ್ಲಿ ಮಾಡುವ ಮೂಲಕ ಈ ಅಭಿಯಾನ ಆರಂಭಿಸುತ್ತಿದ್ದೇವೆ ಎಂದು ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಅವರು ಇಂದು ಶಿರಸಿಯ ಅಂಬೇಡ್ಕರ್ ಭವನದಲ್ಲಿ ಬುಧವಾರ, ಫಲಾನುಭವಿಗಳಿಗೆ ಬಗರ್‌ಹುಕುಂ ಸಾಗುವಳಿ ಚೀಟಿ, ಪಹಣಿಪತ್ರಿಕೆ, ಪೋಡಿ ದಾಖಲೆ, ಕಂದಾಯ ಗ್ರಾಮಗಳ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಅರಣ್ಯ ಹೊರತುಪಡಿಸಿ ಸುಮಾರು ವಷÀðಗಳಿಂದ ಸರಕಾರಿ ಹಾಗೂ ಖಾಸಗಿ ಜಮೀನಿನಲ್ಲಿ ಮನೆ ಕಟ್ಟಿಕೊಂಡು ಊರಾಗಿ ಬೆಳೆದು ದಾಖಲೆಯಲ್ಲಿ ಗ್ರಾಮವಾಗದ ತಾಂಡಾ, ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುತ್ತೇವೆ. ತ್ರಿಶಂಕು ಪರಿಸ್ಥಿತಿಯಲ್ಲಿರುವ 3800 ತಾಂಡಾ, ಹಟ್ಟಿ ವಸತಿ ಪ್ರದೇಶಗಳಲ್ಲಿ ವಾಸಿಸುವ 1.5 ಲಕ್ಷ ಕುಟುಂಬಗಳಿಗೆ ಶಾಶ್ವತ ಹಕ್ಕುಪತ್ರ ನೀಡುತ್ತೇವೆ ಎಂದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಅನಧಿಕೃತವಾಗಿ ಸರಕಾರಿ ಜಮೀನು ಸಾಗುವಳಿ ಮಾಡಿಕೊಂಡು ಹಕ್ಕುಪತ್ರ ಪಡೆಯುವುದಕ್ಕೆ ಫಾರ್ಮ್ 57ರಲ್ಲಿ ಬಗರ್ ಹುಕುಂ ಸಮಿತಿಗೆ ಅರ್ಜಿ ಸಲ್ಲಿಸಿದವರಲ್ಲಿ 630 ರೈತರಿಗೆ ಮುಂದಿನ ಒಂದು ತಿಂಗಳೊಳಗೆ ಹಕ್ಕುಪತ್ರ ನೀಡುತ್ತೇವೆ ಎಂದರು.

ಜಿಲ್ಲೆಯಲ್ಲಿ 16 ದಾಖಲೆ ರಹಿತ ಸಹಿತ ಇಂತಹ ಗ್ರಾಮಗಳಿವೆ. ನೂರಾರು ವಷÀðದಿಂದ ಬಡವರು ಅಲ್ಲಿ ಬದುಕುತ್ತಿದ್ದಾರೆ. ಅದರಲ್ಲಿ ಮುಂಡಗೋಡದಲ್ಲಿ 8 ಹಾಗೂ ಹಳಿಯಾಳದಲ್ಲಿ 8ಗ್ರಾಮಗಳಿದ್ದು ಅವುಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುತ್ತಿದ್ದೇವೆ. ಅಲ್ಲಿ ವಾಸಿಸುವ 50 ಕುಟುಂಬಗಳಿಗೆ ಈಗ ಹಕ್ಕುಪತ್ರ ನೀಡುತ್ತಿದ್ದು ವಾರದಲ್ಲಿ 1125 ಕುಟುಂಬಕ್ಕೂ ನೀಡುತ್ತೇವೆ. ಬಾಕಿ 300 ಕುಟುಂಬಗಳು ಕನಿಷ್ಠ ಶುಲ್ಕ ತುಂಬಬೇಕಿದ್ದು ಅದಾದ ನಂತರ ಅವರಿಗೂ ನೀಡುತ್ತೇವೆ ಎಂದರು.

ಅರಣ್ಯ ಹಕ್ಕು ಅರ್ಜಿಗಳು ದೊಡ್ಡ ಸಂಖ್ಯೆಯಲ್ಲಿ ವಿಲೇವಾರಿ ಆಗಬೇಕಾಗಿದೆ. ಜಿಪಂ, ತಾಪಂ ಸದಸ್ಯರು ಇಲ್ಲ ಎಂದು ಅರಣ್ಯ ಹಕ್ಕು ಸಮಿತಿ ಸ್ಥಗಿತವಾಗಬಾರದು ಎಂದು ಸಿಎಂ ಸೂಚನೆ ನೀಡಿದ್ದಾರೆ. ಆದ್ದರಿಂದ ಸ್ಥಳಿಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳಿಲ್ಲದ್ದಿದ್ದರೂ ಆಯಾ ಆಡಳಿತಾಧಿಕಾರಿಗಳೇ ಇದರ ಸದಸ್ಯರನ್ನಾಗಿ ಮಾಡಿಕೊಂಡು ಅರಣ್ಯ ಹಕ್ಕು ಸಮಿತಿ ಕೆಲಸ ಮಾಡಬೇಕು ಎಂದು ಸಚಿವರು ಜಿಲ್ಲಾಧಿಕಾರಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕರಾದ ಭೀಮಣ್ಣ ನಾಯ್ಕ, ಶಿವರಾಮ ಹೆಬ್ಬಾರ, ಜಿಲ್ಲಾಧಿಕಾರಿ ಲಕ್ಷಿಪ್ರಿಯ ಸಹಾಯಕ ಆಯುಕ್ತೆ ಕೆ.ವಿ.ಕಾವ್ಯಾರಾಣಿ ಮುಂತಾದವರು ಇದ್ದರು.

Leave a Reply

Your email address will not be published. Required fields are marked *