P 20200828 152759 vHDR On scaled

ಪಾವಗಡ: ದ್ವಿಚಕ್ರ ವಾಹನಗಳ ಮುಖಾ ಮುಖಿ ಡಿಕ್ಕಿ, ಬೈಕ್ ಸಾವರ ಸಾವು

DISTRICT NEWS ತುಮಕೂರು

   Y N ಹೊಸಕೋಟೆ ಯ ಬೆಸ್ತರಹಳ್ಳಿ ರಸ್ತೆಯಲ್ಲಿ   ದ್ವಿಚಕ್ರ ವಾಹನಗಳ ಮುಖಾ ಮುಖಿ ಡಿಕ್ಕಿ, ಬೈಕ್ ಸಾವರ ಸಾವು

ಪಾವಗಡ:  ಎರಡು ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ನಡೆದಿದೆ.

ಪಾವಗಡ ತಾಲ್ಲೂಕಿನ Y N ಹೊಸಕೋಟೆ ಯಿಂದ ಆಂಧ್ರದ ಬೆಸ್ತರಹಳ್ಳಿ  ರಸ್ತೆಯ ಮಾರಮ್ಮನ ಹಳ್ಳಿ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ.

ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ

ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯನ್ನ  ಬೆಸ್ತರಹಳ್ಳಿ ಗ್ರಾಮದ ಸುಮಾರು ನಲವತ್ತು ವರ್ಷದ ಹರಿಬಾಬು ಎನ್ನಲಾಗಿದೆ.  ಹಾಗು ಮತ್ತೊಬ್ಬ ಬೈಕ್ ಸವಾರ ತೀವ್ರವಾಗಿ ಗಾಯಗೊಂಡಿದ್ದು, ಈತ ನೂ ಬೆಸ್ತರಹಳ್ಳಿ ನಿವಾಸಿಯಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

P 20200828 152802 vHDR On

ಘಟನೆ ವಿವರ

Y N ಹೊಸಕೋಟೆ ಮಾರ್ಗದಿಂದ ವಯಕ್ತಿಕ ಕೆಲಸ ಮುಗಿಸಿ ಹೆಂಡತಿ, ಮಗುವಿನ ಜೊತೆ  ಬೆಸ್ರರಹಳ್ಳಿಗೆ ತೆರಳುತ್ತಿದ್ದ ಹರಿ ಎಂಬ ವ್ಯಕ್ತಿ ಮಾರಮ್ಮನ ಹಳ್ಳಿ ಗೇಟ್ ಬಳಿ ಬೆಸ್ತರ ಹಳ್ಳಿಯಿಂದ ಬರುತ್ತಿದ್ದ ಒಬಳೇಶ ಎಂಬ  ವ್ಯಕ್ತಿಯ. ದ್ವಿಚಕ್ರ ವಾಹನ ಗಳ ನಡುವೆ ಅಪಘಾತ ಸಂಭವಿಸಿದೆ.

ಹರಿಬಾಬು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ, ಹೆಂಡತಿ, ಮಗು ಸಣ್ಣ- ಪುಟ್ಟ ಗಾಯಗಳೊಂದಿಗೆ ಪ್ರಾಣ ಅಪಾಯದಿಂದ  ಪಾರಾಗಿದ್ದಾರೆ,

P 20200828 152732 vHDR On

ಮತ್ತೊಬ್ಬ ಬೈಕ್ ಸವಾರ ಒಬಳೇಶ ನಿಗೆ ತೀವ್ರವಾಗಿ ಗಾಯಗೊಂಡಿದ್ದು ಈತನ ಪರಿಸ್ಥಿತಿಯೂ ಚಿಂತಾಜನಕವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ  ತುಮಕೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ.