ಅಪೋಲೋ ಫರ್ಟಿಲಿಟಿ’ಯಿಂದ ‘ಐವಿಎಫ್ ಬೇಬಿ ಗೆಸ್’, ರಾಷ್ಟ್ರವ್ಯಾಪಿ ಜಾಗೃತಿ ಅಭಿಯಾನ ಪ್ರಾರಂಭ
ಬೆಂಗಳೂರು: ಫಲವತ್ತತೆ ಮತ್ತು ನೆರವಿನೊಂದಿಗೆ ಸಂತಾನೋತ್ಪತ್ತಿ… ಈ ವಿಷಯಗಳ ಬಗ್ಗೆ ಮಾತನಾಡುವುದು ಸಹಜವಾಗಬೇಕು ಎಂಬ ದೃಷ್ಟಿಯಿಂದ ಅಪೋಲೋ ಫರ್ಟಿಲಿಟಿ ‘ಗೆಸ್ ದಿ ಐವಿಎಫ್ ಬೇಬಿ’ ಎಂಬ ಹೊಸ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನ ಚಿಂತನೆಗೆ ಹಚ್ಚುವ ಸರಳ ಸವಾಲನ್ನು ಒಡ್ಡುವ ಮೂಲಕ ಐವಿಎಫ್ ಸುತ್ತಲಿನ ದೀರ್ಘಕಾಲದ ಊಹಾಪೋಹಗಳನ್ನು ಹೋಗಲಾಡಿಸುವ ಗುರಿಯನ್ನು ಹೊಂದಿದೆ: ಈ ಸರಳವಾದ ಪ್ರಶ್ನೆ ಏನೆಂದರೆ: ಐವಿಎಫ್ ಮಗು ಯಾರು ಎಂದು ನೀವು ಸರಿಯಾಗಿ ಹೇಳಬಲ್ಲಿರಾ?ನಿಷೇಧಗಳನ್ನು ಮುರಿಯುವುದು, ಸಕಾಲಿಕ ಹಸ್ತಕ್ಷೇಪವನ್ನು ಪ್ರೋತ್ಸಾಹಿಸುವುದು ಮತ್ತು ವೈಜ್ಞಾನಿಕ ಸಂತಾನೋತ್ಪತ್ತಿ ಆಯ್ಕೆಗಳನ್ನು ದಂಪತಿಗಳಿಗೆ ನೀಡುವುದು…
ಈ ಎಲ್ಲ ಗುರಿಗಳನ್ನು ಇಟ್ಟುಕೊಂಡು ವಿಶ್ವ ಐವಿಎಫ್ ದಿನದ ಅಂಗವಾಗಿ ಅಪೋಲೋ ಫರ್ಟಿಲಿಟಿ, ಈ ಅಭಿಯಾನವನ್ನು ಆಯೋಜಿಸಿದೆ. ಅಪೋಲೋ ಫರ್ಟಿಲಿಟಿ ಈ ವಿಷಯಗಳ ಬಗ್ಗೆ ಜನಜಾಗೃತಿ ಮೂಡಿಸಲು ಬದ್ಧವಾಗಿದೆ. ಐವಿಎಫ್ ಚಿಕಿತ್ಸೆಗೆ ಸಂಬಂಧಿಸಿದಂತೆ ಅನೇಕ ಊಹಾಪೋಹಗಳು, ಕಥೆಗಳು ಮತ್ತು ತಪ್ಪು ಮಾಹಿತಿ ಇವೆ. ಇವುಗಳನ್ನು ಹೋಗಲಾಡಿಸುವ ಅಗತ್ಯವನ್ನು ಮನಗಂಡ ಅಪೋಲೋ ಫರ್ಟಿಲಿಟಿ, ಈ ಅಭಿಯಾನದ ಮೂಲಕ ಪೋಷಕರು ಮತ್ತು ಕುಟುಂಬ ಸದಸ್ಯರು ಸೇರಿದಂತೆ ಎಲ್ಲರನ್ನೂ ತಲುಪಲು ಉದ್ದೇಶಿಸಿದೆ. ಈ ಅಭಿಯಾನ, 12 ವಿಭಿನ್ನ ನಗರಗಳಲ್ಲಿ ಸ್ಥಳದಲ್ಲಿಯೇ ಮತ್ತು ಅಂತರ್ಜಾಲದಲ್ಲಿ ನಡೆಯುತ್ತದೆ.
ಅರ್ಥಪೂರ್ಣ ಬದಲಾವಣೆಯನ್ನು ತರುವಲ್ಲಿ ಅಪೊಲೊ ಫರ್ಟಿಲಿಟಿ ಈಗಾಗಲೆ ತನ್ನ ಸಾಮರ್ಥ್ಯವನ್ನು ಸಾಬೀತುಗೊಳಿಸಿದೆ. ಯುವ ದಂಪತಿಗಳಲ್ಲಿ ಆರಂಭಿಕ ಫಲವತ್ತತೆ ತಪಾಸಣೆಯನ್ನು ಉತ್ತೇಜಿಸುವ “ಸ್ಕೋರ್ ಓವರ್ ಇನ್ಫರ್ಟಿಲಿಟಿ” ಮತ್ತು ಬಂಜೆತನವು ಪುರುಷರು ಮತ್ತು ಮಹಿಳೆಯರಿಬ್ಬರ ಮೇಲೂ ಸಮಾನವಾಗಿ ಪರಿಣಾಮ ಬೀರುತ್ತದೆ ಎಂಬುದನ್ನು ಎತ್ತಿ ತೋರಿಸುವ ಮೂಲಕ ಲಿಂಗ ರೂಢೀಗತ ಪ್ರಶ್ನೆಗಳನ್ನು ಪ್ರಶ್ನಿಸುವ “ಸಮಾನತೆಯ ಆಲೋಚನೆ ” ನಂತಹ ಯಶಸ್ವಿ ಅಭಿಯಾನಗಳನ್ನು ಪ್ರಾರಂಭಿಸಿದೆ. ಸ್ಕೋರ್ ಓವರ್ ಇನ್ಫರ್ಟಿಲಿಟಿ(ಅಫಲತ್ತತೆ ವಿರುದ್ಧ ಗೆಲ್ಲಿರಿ) ಮೂಲಕ, ಅಪೊಲೊ ಫರ್ಟಿಲಿಟಿ 4,000+ ದಂಪತಿಗಳಿಗೆ ಆರಂಭಿಕ ರೋಗನಿರ್ಣಯ ಮತ್ತು ಸಮಾಲೋಚನೆಯೊಂದಿಗೆ ಸಹಾಯ ಮಾಡಿದೆ, ಇದು ತಾಯ್ತಂದೆಯರಾಗಬೇಕೆನ್ನುವವರು ತಿಳುವಳಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.
ಸಂಸ್ಥೆಯು ಭಾರತದಾದ್ಯಂತ ಇರುವ ತನ್ನ ಎಲ್ಲ 22 ಕೇಂದ್ರಗಳ ಮೂಲಕ ಜಾಗೃತಿ ಅಭಿಯಾನವನ್ನು ನಡೆಸಲಿದೆ. ಈ ಬಹೂಪಯೋಗಿ ಅಭಿಯಾನ ವ್ಯಕ್ತಿಗಳು ಮತ್ತು ದಂಪತಿಗಳಿಗೆ ಅಂಡಾಣು ಘನೀಕರಣ, ಪಿಸಿಒಡಿ, ಆರಂಭಿಕ ತಪಾಸಣೆಯ ಪ್ರಾಮುಖ್ಯತೆ ಇತ್ಯಾದಿಗಳಿಗೆ ಸಂಬಂಧಿಸಿರುವ ವಿವಿಧ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡುವುದರ ಬಗ್ಗೆ ಗಮನವನ್ನು ಕೇಂದ್ರೀಕರಿಸುತ್ತದೆ ಮತ್ತು ಆ ಮೂಲಕ ಜನರು ತಿಳುವಳಿಕೆಯುಕ್ತ ನಿರ್ಧಾರ ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಸಾಮೂಹಿಕವಾಗಿ ಪ್ರೇಕ್ಷಕರನ್ನು ತಲುಪಲು ಜಾಹೀರಾತು ಅಭಿಯಾನಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸಂಪರ್ಕ ಸರಣಿಯನ್ನು ಯೋಜಿಸಲಾಗಿದೆ.
ಶ್ರೀ. ನಿಶಾಂತ್ ಮಿಶ್ರಾ, ಮುಖ್ಯ ಮಾರ್ಕೆಟಿಂಗ್ ಅಧಿಕಾರಿ, ಅಪೊಲೊ ಹೆಲ್ತ್ ಮತ್ತು ಜೀವನಶೈಲಿ ಲಿಮಿಟೆಡ್: ” ಸಂತಾನೋತ್ಪತ್ತಿ ಆರೋಗ್ಯದ ವಿಕಸನಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಅಪೊಲೊ ಫರ್ಟಿಲಿಟಿಯ ಬದ್ಧತೆ ವೈದ್ಯಕೀಯ ಪರಿಹಾರಗಳನ್ನು ಒದಗಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ; ಮಾಹಿತಿಯುಕ್ತ ಆಯ್ಕೆಗಳ ಮೂಲಕ ಜೀವನವನ್ನು ಸಬಲೀಕರಿಸುವುದಕ್ಕೂ ವ್ಯಾಪಿಸುತ್ತದೆ.
#GuessTheIVFBaby ಅಭಿಯಾನ ಕೇವಲ ಒಂದು ಉಪಕ್ರಮವಲ್ಲ; ಫಲವತ್ತತೆ ಚಿಕಿತ್ಸೆಗಳ ಬಗ್ಗೆ ನಿಖರವಾದ ಮಾಹಿತಿ ಮತ್ತು ಸಹಾನುಭೂತಿಯ ಅಗತ್ಯತೆಗಳನ್ನು ಜನರಿಗೆ ಮನದಟ್ಟುಮಾಡಿಕೊಡುತ್ತದೆ. ಊಹಾಪೋಹಗಳನ್ನು ಹೋಗಲಾಡಿಸುವ ಮೂಲಕ ಮತ್ತು ಮುಕ್ತವಾಗಿ ಮಾತನಾದುವ ಮೂಲಕ ವ್ಯಕ್ತಿಗಳು ಮತ್ತು ದಂಪತಿಗಳು ಆತ್ಮವಿಶ್ವಾಸ ಮತ್ತು ಭರವಸೆಯೊಂದಿಗೆ ತಾಯ್ತಂದೆಯರಾಗಲು ನಾವು ಸಹಾಯ ಮಾಡಬಹುದು ಎಂಬುದು ನಮ್ಮ ನಂಬಿಕೆ. ಈ ಅಭಿಯಾನವು ಫಲವತ್ತತೆ ವಿಜ್ಞಾನದ ಮುನ್ನಡೆಗೆ ನೆರವಾಗುವುದಲ್ಲದೆ ತಾಯ್ತಂದೆಯರಾಗುವ ಹಾದಿಯಲ್ಲಿರುವ ಪ್ರತಿಯೊಬ್ಬರಿಗೂ ಇನ್ನಷ್ಟು ಬೆಂಬಲ ನೀಡುವ ಮತ್ತು ಅರ್ಥಮಾಡಿಕೊಳ್ಳುವ ಸಮುದಾಯವನ್ನು ನಿರ್ಮಿಸುವ ನಮ್ಮ ಸಮರ್ಪಣೆಗೂ ಸಾಕ್ಷಿಯಾಗಿದೆ
ಅಪೋಲೋ ಹೆಲ್ತ್ ಅಂಡ್ ಲೈಫ್‌ಸ್ಟೈಲ್ ಲಿಮಿಟೆಡ್‌ನ ವೈದ್ಯಕೀಯ ಸೇವೆಗಳ ನಿರ್ದೇಶಕ ಡಾ. ವಿಜಯ್ ಅಗರ್ವಾಲ್: ” ಅಪೋಲೋ ಫರ್ಟಿಲಿಟಿಯಲ್ಲಿ, ಮಗುವಿನ ಮೂಲಭೂತ ಆರೋಗ್ಯ ಮತ್ತು ಬೆಳವಣಿಗೆ ಗರ್ಭಧಾರಣೆಯ ವಿಧಾನವನ್ನು ಅವಲಂಬಿಸಿಲ್ಲ ಎಂಬುದು ನಮ್ಮ ದೃಢವಾದ ನಂಬಿಕೆ. ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜೀಸ್ (ಎ.ಆರ್.ಟಿ.), ವಿಶೇಷವಾಗಿ ಇನ್ ವಿಟ್ರೊ ಫರ್ಟಿಲೈಸೇಶನ್ (ಐವಿಎಫ್) ಬಗ್ಗೆ ಸಾರ್ವಜನಿಕರಲ್ಲಿ ಸರಿಯಾದ ತಿಳುವಳಿಕೆ ಇಲ್ಲ. ಇದು ನಿಜಕ್ಕೂ ದುರದೃಷ್ಟಕರ. ಇದು ಸಾಮಾನ್ಯವಾಗಿ ಫಲವತ್ತತೆ ಚಿಕಿತ್ಸೆಗಳನ್ನು ಅನುಸರಿಸುವ ವ್ಯಕ್ತಿಗಳು ಮತ್ತು ದಂಪತಿಗಳಿಗೆ ಕಳಂಕ ಮತ್ತು ಅನಗತ್ಯ ಆತಂಕ ಸೇರಿದಂತೆ ಗಮನಾರ್ಹ ಮಾನಸಿಕ ಹೊರೆಯನ್ನು ಸೃಷ್ಟಿಸುತ್ತದೆ. ಈ ಅಭಿಯಾನ: ಐವಿಎಫ್ ನ ವೈಜ್ಞಾನಿಕತೆಯ ಬಗ್ಗೆ ಬೆಳಕು ಚೆಲ್ಲುವ ಮತ್ತು ಐವಿಎಫ್ ಮೂಲಕ ಗರ್ಭಧರಿಸಿದ ಮಗು ಕೂಡ ಆರೋಗ್ಯಕರವಾಗಿ ನೈಸರ್ಗಿಕವಾಗಿ ಇರುತ್ತದೆ ಎಂಬುದನ್ನು ಜನರಿಗೆ ತೋರಿಸುವ ಗುರಿಯನ್ನು ಹೊಂದಿದೆ.”
ಇತ್ತೀಚಿನ ವಿಶ್ವಸಂಸ್ಥೆಯ ವರದಿಯ ಪ್ರಕಾರ: ಭಾರತದ ಒಟ್ಟು ಫಲವತ್ತತೆ ದರ (ಟಿ.ಎಫ್.ಆರ್.) 1.9 ಕ್ಕೆ ಇಳಿದಿದೆ. ಇದು ಪ್ರತಿ ಮಹಿಳೆಗೆ 2.1 ಜನನಗಳ ರೀಪ್ಲೇಸ್ಮೆಂಟ್ ಮಟ್ಟ ಫಲವತ್ತತೆಗಿಂತ ಕಡಿಮೆಯಿದೆ. ಮತ್ತೊಂದು ವರದಿಯ ಪ್ರಕಾರ ದೇಶದ ದಕ್ಷಿಣ ರಾಜ್ಯಗಳಲ್ಲಿ ಫಲವತ್ತತೆ ದರಗಳಲ್ಲಿ ಈ ಕುಸಿತ ಗಮನಾರ್ಹವಾಗಿದೆ. ಫಲವತ್ತತೆ ದರಗಳು ಕುಸಿಯುತ್ತಿದೆ ಮತ್ತು ಐವಿಎಫ್ ಚಿಕಿತ್ಸೆಗಳಿಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ಹರಡುತ್ತಿದೆ. ಆದ್ದರಿಂದಲೇ ಅಪೋಲೋ ಫರ್ಟಿಲಿಟಿ ಫಲವತ್ತತೆ ಚಿಕಿತ್ಸೆಗಳ ಬಗ್ಗೆ ಜಾಗೃತಿ ಮೂಡಿಸಲು ಈ ಅಭಿಯಾನವನ್ನು ಪ್ರಾರಂಭಿಸಲು ನಿರ್ಧರಿಸಿದೆ.
.”
