7 9 20 Hospital service 1

ಪಾವಗಡ: ನಿರಂತರ ಬಡವರ ಸೇವೆಯಲ್ಲಿ ಸ್ವಾಮಿ ವಿವೇಕಾನಂದ ಸಂಸ್ಥೆ…!

DISTRICT NEWS ತುಮಕೂರು

ಭಯಾನಕ ಕೋವಿಡ್19 ಸೋಂಕಿನ ಆರ್ಭಟದ ಮಧ್ಯದಲ್ಲಿಯೂ ನಿರಂತರ ಸೇವಾ ಯಜ್ಞದಲ್ಲಿ ತೊಡಗಿದೆ ಈ ಸಂಸ್ಥೆ

ಕಳೆದ ಆರು ತಿಂಗಳಿಗೂ ಮಿಗಿಲಾಗಿ ಕೋವಿಡ್19 ಕಾರಣದಿಂದಾಗಿ ಇತರೆ ಖಾಯಿಲೆಗಳಾದ ಕ್ಷಯ, ಕುಷ್ಠ ಇತ್ಯಾದಿಗಳಿಗೆ ಹೆಚ್ಚಿನ ಗಮನ ನೀಡಲು ಆಗುತ್ತಿಲ್ಲ. ಆದರೆ ಪಾವಗಡದ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಯಾವುದೇ ರೀತಿಯ ಅಡೆತಡೆ ಇಲ್ಲದೆ ಕ್ಷಯರೋಗ, ಕುಷ್ಠರೋಗ, ಕಣ್ಣು, ಕಿವಿ, ಗಂಟಲು, ಮೂಗು, ಚರ್ಮ ಮತ್ತು ಇತರ ಖಾಯಿಲೆಗಳಿಗೆ ಸಂಬಂಧಪಟ್ಟ ನ್ಯೂನತೆಗಳಿಗೆ ಸೇವೆ ಸದಾ ದೊರೆಯುತ್ತಿರುವುದು ನಿಜಕ್ಕೂ ಆಶ್ಚರ್ಯಕರವಾದ ವಿಚಾರವೇ ಸರಿ.ಎಲ್ಲಿ ನೋಡಿದರೂ ಕೋವಿಡ್19ನ ಭರಾಟೆಯಲ್ಲಿ ಇತರ ಸಾಮಾನ್ಯ ಖಾಯಿಲೆಗಳಿಗೆ ಗಮನ ಹೆಚ್ಚು ಕೊಡಲಾಗುತ್ತಿಲ್ಲ ಬೇರೆ ಆರೋಗ್ಯ ಕೇಂದ್ರಗಳಲ್ಲಿ. ಆದರೆ ಪಾವಗಡದ ಈ ಆಸ್ಪತ್ರೆಯಲ್ಲಿ ಯಥಾಪ್ರಕಾರ ಈ ತೆರನಾದ ಖಾಯಿಲೆಗಳಿಗೆ ಸರ್ವ ರೀತಿಯಲ್ಲಿ ಯಾವುದೇ ರೀತಿಯ ಗುಣಮಟ್ಟವನ್ನು ಕಡಿಮೆ ಮಾಡದೆ ಯಥಾಪ್ರಕಾರವಾಗಿ ಸೇವೆ ಸಲ್ಲಿಸಲಾಗುತ್ತಿದೆ. ಇದು ನಿಜಕ್ಕೂ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ನಡೆಯುತ್ತಿರುವ ಈ ಸಂಸ್ಥೆಗೆ ಒಂದು ಮಹತ್ತರವಾದ ಅಂಶವೇ ಸರಿ. ಇದಕ್ಕೆ ಮೂಲ ಕಾರಣ ಸಂಪೂರ್ಣ ತಮ್ಮನ್ನೇ ತಾವು ತೊಡಗಿಸಿಕೊಂಡು ಸೇವಾ ತತ್ಪರತೆಯಲ್ಲಿ ಕಿಂಚಿತ್ತೂ ಲೋಪವಿಲ್ಲದೆ ಸೇವೆ ಸಲ್ಲಿಸುತ್ತಿರುವ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಚಂದ್ರಕಲಾ, MBBS DLO DNB (ENT) ಕಿವಿ, ಮೂಗು ಮತ್ತು ಗಂಟಲು, ಅಲರ್ಜಿ ಮತ್ತು ಆಸ್ತಮಾ ತಜ್ಞರು ಹಾಗೂ  ಶಸ್ತ್ರ ಚಿಕಿತ್ಸಕರು, ಡಾ.ಅಭಿಷೇಕ್ ಡಿ. MBBS MS Fellowship in Cornea (Aravind Eye Hospital, Madurai),  ಮತ್ತು ಡಾ.ಕೀರ್ತಿ ಅಭಿಷೇಕ್ MBBS (Gold Medalist) MS Ophthalmology (Bangalore Medical College, Minto Ophthalmic Hospital & Regional Institute of Ophthalmology) 8th Rank in RGUHS ರವರ ಸೇವಾ ತತ್ಪರತೆ ಹಾಗೂ ಇಡೀ ಸಂಸ್ಥೆಯ ಸಿಬ್ಬಂದಿಗಳ ತ್ಯಾಗ ಮತ್ತು ಸೇವೆಯ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆಗಿದ್ದಾಗ್ಯೂ ಮತ್ತು ಎಲ್ಲ ರೀತಿಯ ಕಷ್ಟ ಸಂಕಷ್ಟಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಈ ಸಂಸ್ಥೆ ನಿಜಕ್ಕೂ ಒಂದು ಮಾದರಿಯಾದ ಸಂಸ್ಥೆಯಾಗಿ ಗೋಚರಿಸುತ್ತಿದೆ. ಯಾವುದೇ ಕಷ್ಟಗಳು ಬಂದಾಗ್ಯೂ ಪ್ರತಿನಿತ್ಯ ನೈರ್ಮಲ್ಯೀಕರಣ ಹಾಗೂ ಔಷಧಿ ಸಿಂಪಡಣೆ ಮತ್ತೆಲ್ಲದಕ್ಕಿಂತ ಮಿಗಿಲಾಗಿ ಪ್ರತಿಯೊಬ್ಬ ರೋಗಿಯೂ ನೈರ್ಮಲ್ಯೀಕರಣದ ಯಂತ್ರದಿಂದ ಶುಚಿಗೊಳಿಸಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸುತ್ತಿರುವುದು ಇಡೀ ಜಿಲ್ಲೆಯಲ್ಲಿಯೇ ಪ್ರಪ್ರಥಮ ಎಂದು ಹೇಳಲಾಗಿದೆ. ಈ ಕಾರಣದಿಂದಲೋ ಎಂಬಂತೆ ದಿನನಿತ್ಯ ದೂರದೂರದ ಗ್ರಾಮಗಳಿಂದ ಸಾರ್ವಜನಿಕರು ಬರುತ್ತಿರುವುದನ್ನು ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ಶುಚಿತ್ವಕ್ಕೆ ಹಾಗೂ ನೈರ್ಮಲ್ಯೀಕರಣಕ್ಕೆ ಮತ್ತೆಲ್ಲದಕ್ಕಿಂತ ಮಿಗಿಲಾಗಿ ಪ್ರತಿಯೊಬ್ಬ ರೋಗಿಗೆ ಸ್ಯಾನಿಟೈಸರ್ ದ್ರಾವಣವನ್ನು ನೀಡಿ ಶುಚಿಗೊಳಿಸಿ ಬಂದಿರುವ ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತಿರುವ ಈ ಸೇವಾಲಯ ನಿಜಕ್ಕೂ ಸ್ವಾಮಿ ವಿವೇಕಾನಂದರು ಬಯಸಿದ ಸೇವೆ ಸಲ್ಲಿಸುವ ದೇವಾಲಯವಾಗಿ ಗೋಚರಿಸುತ್ತದೆ. ಕೋವಿಡ್19 ಭಯಾನಕ ಸ್ಥಿತಿಯಲ್ಲಿಯೂ ಎದೆಗುಂದದೆ ಧೈರ್ಯದಿಂದ ಹಾಗೂ ಶ್ರದ್ಧೆಯಿಂದ ಸೇವೆಗೆ ಯಾವುದೇ ರೀತಿಯ ಲೋಪ ಬರದಂತೆ ಅಹರ್ನಿಷಿ ದುಡಿಯುತ್ತಿರುವ ವಿವೇಕ-ಬ್ರಿಗೇಡ್ ಸದಸ್ಯರಿಗೆ ಹಾಗೂ ಅವರುಗಳಿಗೆ ಮಾರ್ಗದರ್ಶನ ನೀಡುತ್ತಿರುವ ಮುಖ್ಯ ವೈದ್ಯಾಧಿಕಾರಿಗಳವರಿಗೆ ಹಾಗೂ ಆಸ್ಪತ್ರೆಯ ಆಡಳಿತ ವರ್ಗದವರಿಗೆ ಭಗವಂತನ ಕೃಪೆ ಸದಾ ದೊರೆಯಲಿ ಎಂಬುದೇ ನಮ್ಮ ಹೃದಯಾಂತರಾಳದ ಪ್ರಾರ್ಥನೆ ಎಂದು ಈ ಯೋಜನೆಗಳ ರೂವಾರಿ ಪರಮ ಪೂಜ್ಯ ಸ್ವಾಮಿ ಜಪಾನಂದಜಿ ರವರ ಅಂತರಾಳದ ನುಡಿ. ಪೂಜ್ಯ ಸ್ವಾಮಿ ಜಪಾನಂದಜಿ ರವರೂ ಸಹ ಕಳೆದ ಏಳು ತಿಂಗಳುಗಳಿಂದ ಏಕಪ್ರಕಾರವಾಗಿ ನಾನಾ ರೀತಿಯ ಕಾರ್ಯಯೋಜನೆಗಳನ್ನು ಕೈಗೆತ್ತಿಕೊಂಡು ಸರಿಸುಮಾರು 20000ಕ್ಕೂ ಮಿಗಿಲಾದ ಕುಟುಂಬಗಳಿಗೆ ಸಹಾಯಹಸ್ತವನ್ನು ಚಾಚುತ್ತಾ ನೊಂದವರಿಗೆ ಸಾಂತ್ವನ ನೀಡುತ್ತಾ ಮೂರು ತಾಲ್ಲೂಕುಗಳಲ್ಲಿ ಅಂದರೆ ಪಾವಗಡ, ಮಧುಗಿರಿ ಮತ್ತು ಕೊರಟಗೆರೆಗಳಲ್ಲಿ ಸುತ್ತಾಡುತ್ತಾ ಸೇವೆಯ ಯಜ್ಞವನ್ನು ನಿರಂತರವಾಗಿ ನಡೆಸುತ್ತಾ ಬಂದಿರುವ ಈ ಸಂಸ್ಥೆಗೆ ಸರ್ವರೀತಿಯ ಸಹಾಯಹಸ್ತವನ್ನು ನೀಡುತ್ತಿರುವ ಕರುನಾಡ ತಾಯಿ ಶ್ರೀಮತಿ ಸುಧಾಮೂರ್ತಿ ಹಾಗೂ ಇನ್ಫೋಸಿಸ್ ಫೌಂಡೇಷನ್ನಿನ ಸಹಕಾರ ಎಂದಿಗೂ ಮರೆಯಲಾಗದು. ಈ ಸೇವಾ ಯಜ್ಞ ಇನ್ನೂ ಮುಂದುವರೆಯಲಿ ಎಂಬುದೇ ಸಾರ್ವಜನಿಕರ