IMG 20250928 WA0007

ಪಾವಗಡ : ರಾಷ್ಟ್ರೀಯ ಪೋಷಣ್‌ ಮಾಸಾಚರಣೆಗೆ ಚಾಲನೆ….!.

DISTRICT NEWS ತುಮಕೂರು

ರಾಷ್ಟ್ರೀಯ ಪೋಷಣ್‌ ಮಾಸಾಚರಣೆಗೆ ಚಾಲನೆ.

ಪಾವಗಡ: ತಾಲ್ಲೂಕಿನ ರಾಯಚೆರ್ಲು ಗ್ರಾಮದ ಅಂಗನವಾಡಿ ಕೇಂದ್ರದ ಆವರಣದಲ್ಲಿ ರಾಷ್ಟ್ರೀಯ ಪೋಷಣ್‌ ಮಾಸಾಚರಣೆ ಯನ್ನು ಹಮ್ಮಿಕೊಳ್ಳ ಲಾಯಿತು.

ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುನಿತಾ ಡಿ.ಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮ ಉದ್ದೇಶಿಸಿ ಸಿ.ಡಿ. ಪಿ. ಓ ಸುನಿತಾ ಮಾತನಾಡಿ. ಮಾಸಾಚರಣೆಯ ಮುಖ್ಯ ಉದ್ದೇಶ ಸಮುದಾಯಗಳಲ್ಲಿ ಪೌಷ್ಟಿಕಾಂಶದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಆರೋಗ್ಯಕರ ಆಹಾರ ಪದ್ಧತಿಗಳನ್ನು ಉತ್ತೇಜಿಸುವುದಾಗಿದೆ ಎಂದರು.

ರಕ್ತಹೀನತೆ ತಡೆಗಟ್ಟುವಿಕೆ, ಮಕ್ಕಳು ಮತ್ತು ಗರ್ಭಿಣಿಯರಿಗೆ ಪೌಷ್ಟಿಕಾಂಶದ ಪೂರೈಕೆ, ಹಾಗೂ ಸಮಾಜದಲ್ಲಿ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವಂತಹ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು.IMG 20250928 WA0008

ಮೊಳಕೆ, ಕಾಳುಗಳು, ತರಕಾರಿಗಳು, ಮತ್ತು ಇತರ ಪೌಷ್ಟಿಕಾಂಶಯುಕ್ತ ಆಹಾರಗಳ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ ಏರ್ಪಡಿಸಲಾಗಿದ್ದು. ತಿರುಮಣಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ತಿರುಪತಯ್ಯ , ಉಪಾಧ್ಯಕ್ಷರಾದ ಚಂದನ ಮುರಳೀಧರ, ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕೇಂದ್ರದ 105 ಮಕ್ಕಳಿಗೆ ಸಮವಸ್ತ್ರ ವಿತರಿಸಿದರು .
ಅಖಿಲ ಮಧುಸೂದನ್, ರಾಯಚರ್ಲು ಗ್ರಾಮದ 35 ಅಂಗನವಾಡಿ ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ವಾಟರ್ ಬಾಟಲ್ ವಿತರಿಸಿದರು ..
ವೃತ್ತದ ಮೇಲ್ವಿಚಾರಕಿ ಮಮತಾ ಹಾಗೂ ಪಂಚಾಯಿತಿಯ ಅಂಗನವಾಡಿ ಕಾರ್ಯಕರ್ತೆಯರಾದ ಸರಸ್ವತಮ್ಮ , ನಾಗಮಣಿ ,ಆಶಾ ಜ್ಯೋತಿ , ಜಯಮ್ಮ ,ಮಮತಾ ,ಶ್ರಾವಣಿ , ಜ್ಯೋತಿ ರವರು ಸನ್ಮಾನ ಕಾರ್ಯಕ್ರಮವನ್ನು ನಡೆಸಿದರು..

ಈ ಸಂದರ್ಭದಲ್ಲಿ ಯೋಜನೆಯ ಮೇಲ್ವಿಚಾರಕರಾದ ಶ್ರೀಮತಿ ಜಯಲಕ್ಷ್ಮಿ , ಭಾಗ್ಯಲಕ್ಷ್ಮಿ , ವಿಜಯಲಕ್ಷ್ಮಿ , ಪ್ರ.ದ.ಸ ಶ್ರೀಮತಿ ಹನುಮಕ್ಕ , ಪೋಷನ ಸಂಯೋಜಕರು ಮಂಜುಳಾ , ಕಚೇರಿ ಸಿಬ್ಬಂದಿ ನೂರ್ ನವಾಬ್ , ನಂದೀಶ್ , ಹಾಗೂ ವೃತ್ತದ ಎಲ್ಲಾ ಕಾರ್ಯಕರ್ತೆ ಸಹಾಯಕಿಯರು ,ಆರೋಗ್ಯ ಸಿಬ್ಬಂದಿ , ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ : ಶ್ರೀನಿವಾಸಲು ಎ