ಮಕ್ಕಳ ಸುಪ್ತ ಪ್ರತಿಭೆ ಅರಳಲು ಉತ್ತಮವಾದ ವೇದಿಕೆ ಪ್ರತಿಭಾ ಕಾರಂಜಿ. ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಮ್ಮ.
ಪಾವಗಡ: ಪ್ರತಿಯೊಂದು ಮಗುವಿನಲ್ಲಿಯೂ ತನ್ನದೇ ಆದ ಸುಪ್ತ ಪ್ರತಿಭೆಗಳಿದ್ದು ಅವುಗಳನ್ನು ಹೊರತರುವ ಒಂದು ಸೂಕ್ತ ವೇದಿಕೆಯೇ
ಪ್ರತಿಭಾ ಕಾರಂಜಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಮ್ಮ ತಿಳಿಸಿದರು.
ಪಟ್ಟಣದ ಪಿಎಂ ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಪಾಠಶಾಲೆ ಯಲ್ಲಿ ಬುಧವಾರ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಕ್ಕಳ ಪ್ರತಿಭೆಗಳನ್ನು ಪ್ರದರ್ಶಿಸಲು ಏರ್ಪಡಿಸಿರುವ ವಿನೂತನ ಕಾರ್ಯಕ್ರಮ ಪ್ರತಿಭಾ ಕಾರಂಜಿಯಾಗಿದ್ದು. ತೀರ್ಪುಗಾರರು ಯಾವುದೇ ಪೂರ್ವಗ್ರಹ ಪೀಡಿತರಾಗದೆ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ತಾಲೂಕಿನ ಪರವಾಗಿ ಜಿಲ್ಲಾ ಹಂತಕ್ಕೆ ಕಳುಹಿಸಿ ಕೊಡುವ ಜವಾಬ್ದಾರಿ ನಿಮ್ಮೆಲ್ಲರದಾಗಿರುತ್ತದೆ ಎಂದರು
ಕಾರ್ಯಕ್ರಮ ಉದ್ದೇಶಿಸಿ ಬಿ ಆರ್ ಸಿ ಜಿ ವೆಂಕಟೇಶ್ ಮಾತನಾಡಿ.ಪ್ರತಿಯೊಂದು ಮಗುವಿನಲ್ಲಿಯೂ ತನ್ನದೇ ಆದ ಸಾಮರ್ಥ್ಯವಿದ್ದು. ಮಗುವಿನಲ್ಲಿರುವ ಕಲೆಯನ್ನು ಹೊರ ತರಲು ಇದೊಂದು ವೇದಿಕೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳು ವಿಭಿನ್ನವಾದ ವೇಷಗಳನ್ನು ಹಾಕಿದ್ದು, ಹೊಸ ಆವಿಷ್ಕಾರಗಳು, ನವೀನ ಮಾದರಿ ಗಳು ವಿದ್ಯಾರ್ಥಿಗಳಲ್ಲಿ ಕುತೂಹಲ ಉಂಟುಮಾಡುತ್ತದೆ ಎಂದರು.
ವಿದ್ಯಾರ್ಥಿ ಜೀವನದಲ್ಲಿಪಠ್ಯ ಚಟುವಟಿಕೆ ಜತೆಗೆ ಪಠ್ಯೇತರ ಚಟುವಟಿಕೆಗಳು ತುಂಬ ಮಹತ್ವದ ಪಾತ್ರ ವಹಿಸುತ್ತವೆ. ಮಕ್ಕಳ ಪ್ರತಿಭೆ ಹೊರತರಲು ಮಕ್ಕಳಿಗೆ ನಿರಂತರ ಮಾರ್ಗ ದರ್ಶನ ಅವಶ್ಯಕ ವೆಂದರು.
ಇಂತಹ ಕಾರ್ಯಕ್ರಮದಲ್ಲಿ ಯಾವುದೇ ರೀತಿಯಲ್ಲಿ ಪಕ್ಷಪಾತವಿಲ್ಲದೆ ಪ್ರತಿಭೆಗಳನ್ನು ಗುರುತಿಸಿ ಉತ್ತೇಜಿಸಿ ಎಂದು ತೀರ್ಪುಗಾರರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಶಂಕರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ತಾಲೂಕು ಸಂಘದ ಅಧ್ಯಕ್ಷ ಶ್ರೀನಿವಾಸಲು. ಎ ಸಾವಿತ್ರಿಬಾಯಿ ಪುಲೆ ಸಂಘದ ತಾಲೂಕು ಅಧ್ಯಕ್ಷರಾದ ದುರ್ಗಮ್ಮ.ಶಿಕ್ಷಣ ಸಂಯೋಜಕರಾದ ವೇಣುಗೋಪಾಲ್, ಚಂದ್ರಶೇಖರ್, ಖಾಜಾ ಹುಸೇನ್, ಸಾವಿತ್ರಿ,
ಸಿ ಆರ್ ಪಿ ನರೇಂದ್ರ ನಾಯ್ಕ್ ಮುಂತಾದವರು ಹಾಜರಿದ್ದರು.
ವರದಿ: ಶ್ರೀನಿವಾಸಲು ಎ
