*1 ಲೀಟರ್ ಎಣ್ಣೆ ಪ್ಯಾಕೆಟ್ 910 ಗ್ರಾಂ ತೂಕವಿದೆಯೇ? ಪರಿಶೀಲಿಸಲು ‘ಪ್ಯಾಕ್ ರಿವ್ಯೂ ಸಿಸ್ಟಮ್’ ಅಳವಡಿಸಿಕೊಳ್ಳಿ: ರಾಹುಲ್ ದ್ರಾವಿಡ್ ಕರೆ*
ಬೆಂಗಳೂರು, ಡಿಸೆಂಬರ್ 11, 2025: ಗ್ರಾಹಕರು ತಾವು ಖರೀದಿಸುವ ಖಾದ್ಯ ತೈಲದ ಪ್ಯಾಕೆಟ್‌ಗಳಲ್ಲಿ ನಿಗದಿತ ಪ್ರಮಾಣದ ಎಣ್ಣೆ ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಕರೆ ನೀಡಿದ್ದಾರೆ. ಭಾರತದ ಪ್ರಮುಖ ಖಾದ್ಯ ತೈಲ ಬ್ರಾಂಡ್ ಆಗಿರುವ ‘ಫ್ರೀಡಂ ಸನ್‌ಫ್ಲವರ್ ಆಯಿಲ್’ ಹಮ್ಮಿಕೊಂಡಿದ್ದ ಬೃಹತ್ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳ ಸಚಿವಾಲಯದ ಮಾನದಂಡಗಳ ಪ್ರಕಾರ, 1 ಲೀಟರ್ ಪೌಚ್‌ನಲ್ಲಿ ಕನಿಷ್ಠ 910 ಗ್ರಾಂ ಖಾದ್ಯ ತೈಲ ಇರಲೇಬೇಕು. ಆದರೆ ಮಾರುಕಟ್ಟೆಯಲ್ಲಿ ಕೆಲವು ಉತ್ಪಾದಕರು 1 ಲೀಟರ್ ಪ್ಯಾಕೆಟ್‌ನಂತೆ ಕಾಣುವ ಪ್ಯಾಕ್‌ಗಳಲ್ಲಿ ಕಡಿಮೆ ಪ್ರಮಾಣದ ಎಣ್ಣೆಯನ್ನು ತುಂಬಿ ಮಾರಾಟ ಮಾಡುತ್ತಿರುವ ಅಸ್ಪಷ್ಟ ಪದ್ಧತಿಗಳತ್ತ ಬೆಳಕು ಚೆಲ್ಲುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ಕೆಲವು ಬ್ರಾಂಡ್ಗಳು ಗ್ರಾಹಕರ ಕಣ್ಣಿಗೆ 1 ಲೀಟರ್ ಪ್ಯಾಕೆಟ್‌ನಂತೆಯೇ ಕಾಣುವಂತೆ ಪ್ಯಾಕಿಂಗ್ ಮಾಡುತ್ತವೆ, ಆದರೆ ಅದರಲ್ಲಿನ ಎಣ್ಣೆಯ ಪ್ರಮಾಣ ಕಡಿಮೆಯಿರುತ್ತದೆ. ಈ ವಿದ್ಯಮಾನವನ್ನು ವಿವರಿಸಲು ಫ್ರೀಡಂ ಸನ್‌ಫ್ಲವರ್ ಆಯಿಲ್‌ನ ತಯಾರಕರಾದ ಜಿಇಎಫ್ ಇಂಡಿಯಾ, ರಾಹುಲ್ ದ್ರಾವಿಡ್ ಅವರೊಂದಿಗೆ ಸೇರಿ ವಿಶೇಷ ಪ್ರಾತ್ಯಕ್ಷಿಕೆ ನಡೆಸಿತು.
ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಬ್ರಾಂಡ್‌ಗಳ ಎಣ್ಣೆ ಪ್ಯಾಕೆಟ್‌ಗಳನ್ನು ತೂಕದ ಯಂತ್ರದ ಮೇಲಿಟ್ಟು ಪರಿಶೀಲಿಸಲಾಯಿತು. ಈ ಮೌಲ್ಯಮಾಪನದಲ್ಲಿ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದ್ದು, ಕೆಲವು ಪ್ಯಾಕ್‌ಗಳು ನಿಗದಿತ 910 ಗ್ರಾಂಗಿಂತ ಕಡಿಮೆ ತೂಕವನ್ನು ಹೊಂದಿದ್ದವು. ಇದೇ ವೇಳೆ ಫ್ರೀಡಂ ಸನ್‌ಫ್ಲವರ್ ಆಯಿಲ್ ಪೌಚ್‌ಗಳು ಪ್ರತಿ ಬಾರಿಯೂ ನಿಖರವಾದ ತೂಕ ಹೊಂದಿರುವುದು ದೃಢಪಟ್ಟಿತು. ಈ ಹಿನ್ನೆಲೆಯಲ್ಲಿ, ಗ್ರಾಹಕರು ಪ್ರತಿ ಬಾರಿ ಎಣ್ಣೆ ಖರೀದಿಸುವಾಗಲೂ ‘ಪ್ಯಾಕ್ ರಿವ್ಯೂ ಸಿಸ್ಟಮ್’ (PRS) ಅಂದರೆ ಎಣ್ಣೆಯ ತೂಕವನ್ನು ಪರೀಕ್ಷಿಸುವ ಅಭ್ಯಾಸವನ್ನು ಅಳವಡಿಸಿಕೊಳ್ಳುವಂತೆ ಈ ಅಭಿಯಾನ ಒತ್ತಿಹೇಳಿದೆ.
ಗ್ರಾಹಕರೇ ‘ಥರ್ಡ್ ಅಂಪೈರ್’ ಆಗಬೇಕು: ರಾಹುಲ್ ದ್ರಾವಿಡ್ ಈ ಕುರಿತು ಮಾತನಾಡಿದ ರಾಹುಲ್ ದ್ರಾವಿಡ್, “ಗ್ರಾಹಕರಿಗೆ ಶಿಕ್ಷಣ ನೀಡುವ ಮತ್ತು ಅವರನ್ನು ಸಬಲೀಕರಣಗೊಳಿಸುವ ‘ಪ್ಯಾಕ್ ರಿವ್ಯೂ ಸಿಸ್ಟಮ್’ ಪರಿಕಲ್ಪನೆಯನ್ನು ಪರಿಚಯಿಸಿದ್ದಕ್ಕಾಗಿ ನಾನು ಜಿಇಎಫ್ ಇಂಡಿಯಾವನ್ನು ಅಭಿನಂದಿಸುತ್ತೇನೆ. ಗ್ರಾಹಕರು ದಾರಿ ತಪ್ಪುವುದನ್ನು ತಡೆಯಲು ಅವರೇ ಇಲ್ಲಿ ‘ಥರ್ಡ್ ಅಂಪೈರ್’ ಆಗಿ ಕಾರ್ಯನಿರ್ವಹಿಸಬೇಕು. ‘ಆಹಾರದಲ್ಲಿ ಎಣ್ಣೆಯ ಬಳಕೆ ಕಡಿಮೆ ಇರಲಿ, ಆದರೆ ಪ್ಯಾಕೆಟ್‌ನಲ್ಲಿ ಎಣ್ಣೆ ಕಡಿಮೆ ಇರಬಾರದು’ ಎಂಬ ಮಾತು ಅತ್ಯಂತ ಸೂಕ್ತವಾಗಿದೆ. ಪಿಆರ್ಎಸ್ ಅಳವಡಿಸಿಕೊಳ್ಳುವ ಮೂಲಕ ಒಬ್ಬ ಜಾಗೃತ ಗ್ರಾಹಕ ಮಾತ್ರ ಇದನ್ನು ಸಾಧಿಸಲು ಸಾಧ್ಯ,” ಎಂದು ಅಭಿಪ್ರಾಯಪಟ್ಟರು.
ಲೇಬಲ್‌ಗಳನ್ನು ಎಚ್ಚರಿಕೆಯಿಂದ ಓದುವುದು, ಬೆಲೆಯೊಂದಿಗೆ ನಿವ್ವಳ ಪ್ರಮಾಣವನ್ನು ಹೋಲಿಸುವುದು ಮತ್ತು ಉತ್ಪನ್ನವನ್ನು ಪರಿಶೀಲಿಸುವುದು ಕುಟುಂಬಗಳು ಮೋಸ ಹೋಗುವುದನ್ನು ತಡೆಯಬಲ್ಲ ಸರಳ ಆದರೆ ಪರಿಣಾಮಕಾರಿ ಅಭ್ಯಾಸಗಳಾಗಿವೆ ಎಂದು ಅವರು ತಿಳಿಸಿದರು.
ಜೆಮಿನಿ ಎಡಿಬಲ್ಸ್ ಆ್ಯಂಡ್ ಫ್ಯಾಟ್ಸ್ ಇಂಡಿಯಾ ಲಿಮಿಟೆಡ್‌ನ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದ ಹಿರಿಯ ಉಪಾಧ್ಯಕ್ಷರಾದ ಪಿ. ಚಂದ್ರಶೇಖರ ರೆಡ್ಡಿ ಮಾತನಾಡಿ, “ಪ್ರತಿ ಕುಟುಂಬವು ತಾವು ನೀಡುವ ಹಣಕ್ಕೆ ತಕ್ಕ ಮೌಲ್ಯದ ಉತ್ಪನ್ನವನ್ನೇ ಪಡೆಯುತ್ತಿದ್ದೇವೆ ಎಂಬ ವಿಶ್ವಾಸ ಮೂಡಿಸುವುದು ನಮ್ಮ ಗುರಿ. ಲೇಬಲ್ ಓದುವ ಮೂಲಕ ಮತ್ತು ತೂಕವನ್ನು ಪರಿಶೀಲಿಸುವ ಮೂಲಕ ಗ್ರಾಹಕರು ತಮ್ಮ ಖರೀದಿಯನ್ನು ರಕ್ಷಿಸಿಕೊಳ್ಳಬಹುದು. ಇಂತಹ ಸರಳ ಅಭ್ಯಾಸಗಳು ಮಾರುಕಟ್ಟೆಯಲ್ಲಿ ಪ್ರಾಮಾಣಿಕತೆಯನ್ನು ಉತ್ತೇಜಿಸುತ್ತವೆ,” ಎಂದರು.
ಫ್ರೀಡಂ ಹೆಲ್ದಿ ಕುಕಿಂಗ್ ಆಯಿಲ್ಸ್‌ನ ಮಾರ್ಕೆಟಿಂಗ್ ಮುಖ್ಯಸ್ಥ ಚೇತನ್ ಪಿಂಪಲ್ಕುಟೆ ಮಾತನಾಡಿ, “ಮಾಹಿತಿಯುಳ್ಳ ಗ್ರಾಹಕನೇ ಸುರಕ್ಷಿತ ಗ್ರಾಹಕ ಎಂದು ನಾವು ನಂಬಿದ್ದೇವೆ. ಡಿಜಿಟಲ್ ಮಾಧ್ಯಮ, ಸಾಂಪ್ರದಾಯಿಕ ಜಾಹೀರಾತುಗಳು ಮತ್ತು ಮೈದಾನದ ಚಟುವಟಿಕೆಗಳ ಮೂಲಕ ಈ ಜಾಗೃತಿ ಮೂಡಿಸಲಿದ್ದೇವೆ. ಭಾರತದ ಪ್ರತಿಯೊಂದು ಕುಟುಂಬವು ಎಣ್ಣೆ ಪ್ಯಾಕೆಟ್‌ನ ತೂಕ ಪರೀಕ್ಷಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂಬುದೇ ನಮ್ಮ ಉದ್ದೇಶ,” ಎಂದು ತಿಳಿಸಿದರು.
