20251214 184152

BJP : ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ  ಬಿಹಾರ ದ  ಸಚಿವ ನಿತಿನ್ ನಬಿನ್ ನೇಮಕ

National - ಕನ್ನಡ

ಬಿಜೆಪಿ  ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ  ಬಿಹಾರ ದ  ಸಚಿನಿತಿನ್ ನಬಿನ್ ನೇಮಕ

ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಬಿಹಾರ ಸಚಿವ ನಿತಿನ್ ನಬಿನ್ ನೇಮಕ, ಪ್ರಧಾನಿ ಮೋದಿ ಅಭಿನಂದನೆ

 ಅತ್ಯಂತ ಕಿರಿಯ, ಯುವ ನಾಯಕನಿಗೆ ಮಣೆಹಾಕಲಾಗಿದೆ.

ನವದೆಹಲಿ :  “ಭಾರತೀಯ ಜನತಾ ಪಕ್ಷದ ಸಂಸದೀಯ ಮಂಡಳಿಯು ಬಿಹಾರ ಸರ್ಕಾರದಲ್ಲಿ ಸಚಿವರಾಗಿರುವ ನಿತಿನ್ ನಬಿನ್ ಅವರನ್ನು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಧ್ಯಕ್ಷರಾಗಿ  ತಕ್ಷಣದಿಂದ ಜಾರಿಗೆ ಬರುವಂತೆ ನೇಮಿಸಿದೆ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ

ಘೋಷಣೆಯ ನಂತರ, ಪ್ರಧಾನಿ ಮೋದಿ ಅವರು ಬಿಜೆಪಿ ನಾಯಕನನ್ನು ಅಭಿನಂದಿಸಿದರು, ಅವರ ಶಕ್ತಿ ಮತ್ತು ಸಮರ್ಪಣೆ ಪಕ್ಷವನ್ನು ಬಲಪಡಿಸುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ

20251214 175442

ಶ್ರೀ ನಿತಿನ್ ನಬಿನ್ ಜಿ ಅವರು ಕಠಿಣ ಪರಿಶ್ರಮಿ ಕಾರ್ಯಕರ್ತ ಎಂದು ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅವರು ಯುವ ಮತ್ತು ಶ್ರಮಶೀಲ ನಾಯಕರಾಗಿದ್ದು,  ಸಂಘಟನಾ ಅನುಭವ ಹೊಂದಿದ್ದಾರೆ ಮತ್ತು ಬಿಹಾರದಲ್ಲಿ ಶಾಸಕರಾಗಿ ಮತ್ತು ಸಚಿವರಾಗಿ ಹಲವು ಅವಧಿಗಳಿಗೆ ಪ್ರಭಾವಶಾಲಿ ಯಾಗಿ ಕೆಲಸ ಮಾಡಿದ್ದಾರೆ

ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪಾಟ್ನಾ ಜಿಲ್ಲೆಯ ಬಂಕಿಪುರ ವಿಧಾನಸಭಾ ಕ್ಷೇತ್ರವನ್ನು ನಿತಿನ್ ನಬಿನ್ ಉಳಿಸಿಕೊಂಡಿದ್ದರು, ಆರ್‌ಜೆಡಿಯ ರೇಖಾ ಕುಮಾರಿ ಅವರನ್ನು 51,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು. ಪ್ರಸ್ತುತ ನಿತೀಶ್ ಕುಮಾರ್ ಸಂಪುಟದಲ್ಲಿ ರಸ್ತೆ ನಿರ್ಮಾಣ ಮತ್ತು ನಗರಾಭಿವೃದ್ಧಿ ಮತ್ತು ವಸತಿ ಖಾತೆಗಳನ್ನು ಹೊಂದಿದ್ದಾರೆ.