IMG 20260120 WA0003

Karnataka : ಹೈಪೋಥೈರಾಯ್ಡಿಸಮ್‌ನಿಂದ ಬಳಲುತ್ತಿರುವವರಿಗೆ ಹೋಮಿಯೋಪತಿ ಚಿಕಿತ್ಸೆ….!

BUSINESS

 

ಹೋಮಿಯೋಪಥಿ ಚಿಕಿತ್ಸೆಯಿಂದ TSH ಹಂತದಲ್ಲೇ ಅರ್ಧಾಂಶ ಹೈಪೋಥೈರಾಯ್ಡ್ ರೋಗಿಗಳ ಆರೋಗ್ಯ ಸುಧಾರಣೆ: ಡಾ ಕಲ್ಯಾಣ್ ಬ್ಯಾನರ್ಜಿ ಅವರ ಕ್ಲಿನಿಕ್

ಬೆಂಗಳೂರು / 20 ಜನವರಿ, 2026: ಹೈಪೋಥೈರಾಯ್ಡಿಸಮ್‌ನಿಂದ ಬಳಲುತ್ತಿರುವ 50% ಕ್ಕಿಂತ ಹೆಚ್ಚು ರೋಗಿಗಳು ಹೋಮಿಯೋಪತಿ ಚಿಕಿತ್ಸೆಯನ್ನು ಪ್ರಾರಂಭಿಸಿದ ಬಳಿಕ ತಮ್ಮ ಥೈರಾಯ್ಡ್ ಪರೀಕ್ಷಾ ಫಲಿತಾಂಶಗಳಲ್ಲಿ ಗಣನೀಯ ಸುಧಾರಣೆಯನ್ನು ಪ್ರದರ್ಶಿಸಿದ್ದಾರೆ ಎಂದು ಡಾ, ಕಲ್ಯಾಣ್ ಬ್ಯಾನರ್ಜಿ ಅವರ ಕ್ಲಿನಿಕ್ ಹಂಚಿಕೊಂಡಿರುವ ರೋಗಿಗಳ ಡೇಟಾದ ವಿಶ್ಲೇಷಣೆಯು ತಿಳಿಸಿದೆ. ಈ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದ 1,200 ಕ್ಕೂ ಹೆಚ್ಚು ಥೈರಾಯ್ಡ್ ರೋಗಿಗಳ ಮಾದರಿಯ ಚಿಕಿತ್ಸಾ ಫಲಿತಾಂಶಗಳನ್ನು ಈ ಸಂಶೋಧನೆಗಳು ಆಧರಿಸಿವೆ.

ಕ್ಲಿನಿಕ್‌ನ ಹಿರಿಯ ಹೋಮಿಯೋಪಥಿ ವೈದ್ಯ ಡಾ. ಕುಶಲ್ ಬ್ಯಾನರ್ಜಿ ಅವರು ಈ ಸಂಶೋಧನೆಗಳ ಕುರಿತು ಮಾತನಾಡಿ, “ರೋಗಿಗಳ ದಾಖಲೆಗಳನ್ನು ನಾವು ವಿಮರ್ಶೆಗೆ ಒಳಪಡಿಸಿದಾಗ, ಅವರ ಮೊದಲ ಅನುಸರಣೆಯಲ್ಲಿ 52% ರೋಗಿಗಳಲ್ಲಿ TSH (ಥೈರಾಯ್ಡ್ ಉತ್ತೇಜಿಸುವ ಹಾರ್ಮೋನ್) ಮಟ್ಟ ಕಡಿಮೆಯಾಗಿತ್ತು ಎಂದು ತೋರಿಸುತ್ತದೆ. ಹೈಪೋಥೈರಾಯ್ಡಿಸಮ್ ಅನ್ನು ನಿರ್ವಹಿಸಲು, ವಿಶೇಷವಾಗಿ ಚಿಕಿತ್ಸೆಯನ್ನು ಆರಂಭಿಕ ಹಂತದಲ್ಲೇ ಪ್ರಾರಂಭಿಸಿದಾಗ, ಹೋಮಿಯೋಪತಿಯು ಸಹಾಯ ಮಾಡುತ್ತದೆ ಎಂದು ಇದು ಸೂಚಿಸುತ್ತದೆ” ಎಂದು ತಿಳಿಸಿದರು.

ವಿಶೇಷವಾಗಿ, ನಗರ ಪ್ರದೇಶಗಳಲ್ಲಿ, ಅನೇಕ ರೋಗಿಗಳಿಗೆ ಥೈರಾಯ್ಡ್ ಸಮಸ್ಯೆಗಳಿರುವುದು ಆರಂಭಿಕ ಹಂತದಲ್ಲೇ ಪತ್ತೆಯಾಗುತ್ತದೆ ಎಂದು ಅವರು ವಿವರಿಸಿದರು. “ಆಗ, ರೋಗಿಗಳು ಥೈರಾಯ್ಡ್ ಹಾರ್ಮೋನ್ ಔಷಧಿಗಳ ಸೇವನೆಯನ್ನು ಪೂರ್ಣವಾಗಿ ಪ್ರಾರಂಭಿಸುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಥೈರಾಯ್ಡ್ ಹಾರ್ಮೋನ್ ಬದಲಿ ಮಾತ್ರೆಗಳನ್ನು ಈಗಾಗಲೇ ಸೇವಿಸುತ್ತಿರುವವರಿಗೆ, ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಅವುಗಳ ಪ್ರಮಾಣವನ್ನು (ಡೋಸೇಜ್) ಕಡಿಮೆ ಮಾಡಬಹುದು ಅಥವಾ ಕ್ರಮೇಣ ನಿಲ್ಲಿಸಬಹುದು” ಎಂದು ಡಾ. ಬ್ಯಾನರ್ಜಿ ಹೇಳಿದರು.

ಕ್ಲಿನಿಕ್‌ನಲ್ಲಿರುವ ವೈದ್ಯರ ಪ್ರಕಾರ, ಥೈರಾಯ್ಡ್ ಪರೀಕ್ಷೆಯ ರೀಡಿಂಗ್ ಬದಲಾಗುತ್ತಲೇ ಇರುವ ಕಾರಣ ಔಷಧಿಯ ಪ್ರಮಾಣದಲ್ಲಿ ಪುನರಾವರ್ತಿತವಾಗಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ, ಇದರಿಂದಾಗಿ ರೋಗಿಗಳು ಹೆಚ್ಚಿನ ಒತ್ತಡವನ್ನು ಅನುಭವಿಸುತ್ತಾರೆ. “ಈ ರೋಗಿಗಳು ಹೋಮಿಯೋಪತಿ ಚಿಕಿತ್ಸೆಗೆ ಬಹಳ ಚೆನ್ನಾಗಿ ಪ್ರತಿಕ್ರಿಯಿಸುತ್ತಾರೆ. ಪ್ರಮಾಣವನ್ನು ನಿರಂತರವಾಗಿ ಬದಲಾಯಿಸುವ ಬದಲು ಸ್ಥಿರತೆಯನ್ನು ತರಲು ಇದು ಸಹಾಯ ಮಾಡುವುದೇ ಇದಕ್ಕೆ ಕಾರಣ” ಎಂದು ಡಾ. ಬ್ಯಾನರ್ಜಿ ಹೇಳಿದರು.

ಭಾರತದಲ್ಲಿ ಕಂಡುಬರುವ ಸಾಮಾನ್ಯ ಆರೋಗ್ಯ ಸಮಸ್ಯೆಗಳಲ್ಲಿ ಹೈಪೋಥೈರಾಯ್ಡಿಸಮ್ ಕೂಡ ಒಂದು. ಸುಮಾರು 42 ದಶಲಕ್ಷ ಭಾರತೀಯರು ಹೈಪೋಥೈರಾಯ್ಡಿಸಮ್‌ನಿಂದ ಬಳಲುತ್ತಿದ್ದಾರೆ ಎಂದು ತಜ್ಞರು ಅಂದಾಜಿಸಿದ್ದಾರೆ. ಪ್ರತಿ ಹತ್ತು ಜನರಲ್ಲಿ ಒಬ್ಬರಿಗೆ ಈ ಸ್ಥಿತಿ ಇರಬಹುದು. 15 ರಿಂದ 49 ವಯೋಮಾನದ ಮಹಿಳೆಯರಲ್ಲಿ ಇದರ ಅಪಾಯ ಹೆಚ್ಚು. ಅಲ್ಲದೆ, ಕಳೆದ ಹತ್ತು ವರ್ಷಗಳಲ್ಲಿ ಥೈರಾಯ್ಡ್ ಸಮಸ್ಯೆಗಳಿಂದ ಬಳಲುತ್ತಿರುವ ಮಹಿಳೆಯರ ಸಂಖ್ಯೆ ಬಹುತೇಕ ದ್ವಿಗುಣಗೊಂಡಿದೆ ಎಂದು ಅಧ್ಯಯನಗಳು ಸೂಚಿಸುತ್ತವೆ.

“ಇತ್ತೀಚಿನ ವರ್ಷಗಳಲ್ಲಿ ಥೈರಾಯ್ಡ್ ಪರೀಕ್ಷೆಗಳು ಗಣನೀಯವಾಗಿ ವೃದ್ಧಿಸಿವೆ. ಪರೀಕ್ಷೆಗಳು ಅಗ್ಗವಾಗಿರುವುದು ಮತ್ತು ಹೆಚ್ಚು ವ್ಯಾಪಕವಾಗಿ ಲಭ್ಯವಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಸಮಸ್ಯೆ ಸೌಮ್ಯ ಹಾಗೂ ಅಲ್ಪಕಾಲಿಕವಾಗಿದ್ದು, ಜೀವನಶೈಲಿಯ ಬದಲಾವಣೆಗಳು ಮತ್ತು ನಿಯಮಿತ ಮೇಲ್ವಿಚಾರಣೆಯೊಂದಿಗೆ ನಿರ್ವಹಿಸಬಹುದಾದ ಸಂದರ್ಭಗಳಲ್ಲೂ ಹಲವು ರೋಗಿಗಳಿಗೆ ಥೈರಾಯ್ಡ್ ಔಷಧಿಗಳನ್ನು ನೀಡಲಾಗುತ್ತಿದೆ” ಎಂಬ ಅಂಶದ ಕುರಿತು ಡಾ. ಬ್ಯಾನರ್ಜಿ ಗಮನಸೆಳೆದರು.

ದಣಿವು, ತೂಕ ವೃದ್ಧಿಸುವುದು, ನಿದ್ರೆ ಬಾರದಿರುವುದು, ಋತುಚಕ್ರವು ಅನಿಯಮಿತವಾಗಿರುವುದು, ಅಥವಾ ಥಂಡಿಯನ್ನು ಅನುಭವಿಸುವುದು ಮುಂತಾದ ಸಾಮಾನ್ಯ ಸಮಸ್ಯೆಗಳನ್ನು ಥೈರಾಯ್ಡ್‌ನ ಲಕ್ಷಣಗಳೆಂದು ಆರೋಪಿಸಲಾಗುತ್ತದೆ. “ಕೆಲವೊಮ್ಮೆ, ಈ ಲಕ್ಷಣಗಳು ಗಂಭೀರ ಥೈರಾಯ್ಡ್ ಸಮಸ್ಯೆಗಿಂತ ಹೆಚ್ಚಾಗಿ ಜೀವನಶೈಲಿಯ ಕೆಟ್ಟ ಅಭ್ಯಾಸಗಳಿಗೆ ಸಂಬಂಧಿಸಿವೆ. ರಕ್ತ ಪರೀಕ್ಷೆಯಲ್ಲಿ ಕಂಡು ಬರುವ ಸಣ್ಣ ವ್ಯತ್ಯಯವನ್ನು ಸರಿಪಡಿಸುವುದರಿಂದ ನೈಜ ಸಮಸ್ಯೆಯು ಪರಿಹಾರವಾಗುವುದಿಲ್ಲ ” ಎಂದು ಅವರು ವಿವರಿಸಿದರು.

ಈ ಹಿಂದೆ, ಭಾರತದಲ್ಲಿ ಥೈರಾಯ್ಡ್ ಸಮಸ್ಯೆಗಳಿಗೆ ಅಯೋಡಿನ್ ಕೊರತೆಯೇ ಮುಖ್ಯ ಕಾರಣವೆಂದು ಪರಿಗಣಿಸಲಾಗಿತ್ತು. ಇದರ ನಿವಾರಣೆಗಾಗಿ ಅಯೋಡಿನ್ ಮಿಶ್ರಿತ ಉಪ್ಪನ್ನು ಹಲವು ದಶಕಗಳಿಂದ ವಿತರಿಸಲಾಗುತ್ತಿದೆ. ಈಗ ಅಯೋಡಿನ್ ಪ್ರಮಾಣ ಸಾಕಷ್ಟಿದ್ದರೂ, ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಥೈರಾಯ್ಡ್ ಗ್ರಂಥಿಯ ಮೇಲೆ ದಾಳಿ ಮಾಡುವ ಕಾರಣ ಆಟೋಇಮ್ಯೂನ್ ಥೈರಾಯ್ಡ್ ಪರಿಸ್ಥಿತಿಗಳಲ್ಲಿ, ವಿಶೇಷವಾಗಿ ಹಶಿಮೊಟೊ ಕಾಯಿಲೆಯಲ್ಲಿ ಹೆಚ್ಚಳವು ವೈದ್ಯರ ಗಮನಕ್ಕೆ ಬಂದಿದೆ.

“ಪ್ರತಿ ತಿಂಗಳು ಸುಮಾರು 1,000 ಥೈರಾಯ್ಡ್ ರೋಗಿಗಳಿಗೆ ನಾವು ಚಿಕಿತ್ಸೆ ನೀಡುತ್ತೇವೆ. ಈ ಪೈಕಿ ಹೆಚ್ಚಿನವರು ಆಟೋಇಮ್ಯೂನ್ ಥೈರಾಯ್ಡ್ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಥೈರಾಯ್ಡ್ ಪರೀಕ್ಷಾ ಮೌಲ್ಯಗಳು ಸ್ವಲ್ಪ ಅಸಹಜವಾಗಿದ್ದರೂ ಜೀವಿತಾವಧಿಯ ಔಷಧಿಗಳ ಅಗತ್ಯವಿರದ ಪರಿಸ್ಥಿತಿಗಳ ಬಗ್ಗೆ ಸಾರ್ವಜನಿಕರಲ್ಲಿ ಇನ್ನೂ ಸಾಕಷ್ಟು ಅರಿವು ಇಲ್ಲ” ಎಂದು ಡಾ. ಬ್ಯಾನರ್ಜಿ ಹೇಳಿದರು.

ಥೈರಾಯ್ಡ್ ಔಷಧಿಗಳನ್ನು ಬೇಗನೆ ಪ್ರಾರಂಭಿಸದಂತೆಯೂ ಅವರು ಎಚ್ಚರಿಕೆ ನೀಡಿದರು. “ಹಾರ್ಮೋನ್ ಬದಲಿ ಮಾತ್ರೆಗಳನ್ನು ಪ್ರಾರಂಭಿಸಿದ ಮೇಲೆ, ಥೈರಾಯ್ಡ್ ಗ್ರಂಥಿಯು ತನ್ನ ಕೆಲಸವನ್ನು ಕಡಿಮೆ ಮಾಡಬಹುದು. ಅನೇಕ ರೋಗಿಗಳು ಅಗತ್ಯವಿಲ್ಲದಿದ್ದರೂ ಈ ಔಷಧಿಗಳನ್ನು ಜೀವನಪರ್ಯಂತ ತೆಗೆದುಕೊಳ್ಳುತ್ತಾರೆ. ಅಂತಹ ರೋಗಿಗಳು ಔಷಧಗಳ ಮೇಲಿನ ತಮ್ಮ ಅವಲಂಬನೆಯನ್ನು ನಿಧಾನವಾಗಿ ಮತ್ತು ಸುರಕ್ಷಿತವಾಗಿ ಕಡಿಮೆ ಮಾಡಲು ಸಹಾಯ ಮಾಡುವುದು ನಮ್ಮ ಗುರಿಯಾಗಿದೆ, ”ಎಂದು ಅವರು ಹೇಳಿದರು.

“ಥೈರಾಯ್ಡ್ ಅಸ್ವಸ್ಥತೆಗಳು ಹೆಚ್ಚುತ್ತಿರುವ ಕಾರಣ, ಭಾರತದಲ್ಲಿ ಪರೀಕ್ಷೆ ಮತ್ತು ಚಿಕಿತ್ಸೆಯ ಕುರಿತು ಸ್ಪಷ್ಟ ಮಾರ್ಗಸೂಚಿಗಳ ಅಗತ್ಯವಿದೆ. ದೇಶದಲ್ಲಿ ಥೈರಾಯ್ಡ್ ಕಾಯಿಲೆಯ ಹೊರೆಯನ್ನು ತಗ್ಗಿಸಲು ಉತ್ತಮ ಅರಿವು ಮತ್ತು ಸಂವೇದನಾಶೀಲ ಚಿಕಿತ್ಸಾ ನಿರ್ಧಾರಗಳು ಪ್ರಮುಖವಾಗಿವೆ” ಎಂದು ಡಾ. ಬ್ಯಾನರ್ಜಿ ಸ್ಪಷ್ಟಪಡಿಸಿದರು.