IMG 20260209 WA0004

ಪಾವಗಡ : ಹಿಂದೂ ಸಮಾಜದ ಪರಂಪರೆಯನ್ನು ಉಳಿಸಲು ಎಲ್ಲರೂ ಕೈ ಜೋಡಿಸಬೇಕು….!

DISTRICT NEWS ತುಮಕೂರು

 

ಹಿಂದೂ ಸಮಾಜದ ಪರಂಪರೆಯನ್ನು ಉಳಿಸಲು ಎಲ್ಲರೂ ಕೈ ಜೋಡಿಸಬೇಕು.

ಪಾವಗಡ. ವಿರಾಟ್ ಹಿಂದೂ ಸಮಾಜೋತ್ಸವವು ಜಾತಿ-ಪಂಥಗಳ ಭೇದವಿಲ್ಲದೆ ಹಿಂದೂ ಸಮಾಜವನ್ನು ಒಗ್ಗೂಡಿಸುವ, ಸಂಸ್ಕೃತಿಯ ಜಾಗೃತಿ ಮೂಡಿಸುವ ಭವ್ಯ ಕಾರ್ಯಕ್ರಮವಾಗಿದೆ.ಎಂದು ನಿಡಗಲ್ಲು ವಾಲ್ಮೀಕಿ ಆಶ್ರಮದ ಪೀಠ್ಯಾಧ್ಯಕ್ಷರಾದ ಶ್ರೀ ವಾಲ್ಮೀಕಿ ಸಂಜಯ್ ಕುಮಾರ್ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಕೆ.ಟಿ .ಹಳ್ಳಿ ಗ್ರಾಮದ ಶ್ರೀರಾಮ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಾವೆಲ್ಲ ಹಿಂದೂಗಳು ನಮ್ಮ ಸಂಪ್ರದಾಯಗಳಿಗೆ ಗೌರವ ನೀಡಿ.ನಮ್ಮ ಪರಂಪರೆಯನ್ನು ಉಳಿಸಬೇಕುಎಂದರು.
ಹಿಂದುಗಳೆಲ್ಲಾ ಒಂದಾಗಿ ಹಿಂದೂ ಸಮಾಜಕ್ಕೆ ಗೌರವ ಬರುವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ತಿಳಿಸಿದರು

ಕಾರ್ಯಕ್ರಮದ ಅಂಗವಾಗಿ ಪ್ರಮುಖ ರಾಜಭೀದಿಗಳಲ್ಲಿ ಭಾರತಮಾತೆ. ಮಹರ್ಷಿ ವಾಲ್ಮೀಕಿ. ಡಾ. ಬಿ.ಆರ್. ಅಂಬೇಡ್ಕರ್ ಶಿವಾಜಿ ಮಹಾರಾಜ್ ರವರ ಭಾವಚಿತ್ರಗಳನ್ನು ಪ್ರದರ್ಶಿಸಿ ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಿದರು.

ಕಾರ್ಯಕ್ರಮದಲ್ಲಿ ಶ್ರೀ ಚಿದಾನಂದ ಭಾರತಿ ಸ್ವಾಮಿಗಳು. ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ. ಗೋಪಾಲ್ ಕುಪ್ಪಂದ. ಮಧುಸೂದನ್. ಹೈಕೋರ್ಟ್ ವಕೀಲರಾದ ಜಯಸಿಂಹ. ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಶಿವಮ್ಮ. ಮುಖಂಡರಾದ ಲೋಕೇಶ್ ಪಾಳೇಗಾರ್. ಕಲಾವಿದ ನಾಗರಾಜ್. ವಿಶ್ವನಾಥ್ ಜಿ. ಲೋಕೇಶ್ ನಾಯಕ.ಮಂಜುನಾಥ್. ಮುಂತಾದವರಾದರು ಹಾಜರಿದ್ದರು