ಬೆಂಗಳೂರು ; Ultraviolette ವೈಟ್ಫೀಲ್ಡ್ನಲ್ಲಿ 5ನೇ ಹೊಸ ಎಕ್ಸ್ಪೀರಿಯನ್ಸ್ ಸೆಂಟರ್ ಉದ್ಘಾಟನೆ ಮೂಲಕ ಬೆಂಗಳೂರಿನಲ್ಲಿ ತನ್ನ ಉಪಸ್ಥಿತಿಯನ್ನು ವಿಸ್ತರಿಸಿದೆ
• X-47 CROSSOVER ಮತ್ತು F77 ಮಾದರಿಗಳು ಈಗ ಬೆಂಗಳೂರಿನ ನಾಗರಭಾವಿ, ದೊಮ್ಮಲೂರು, ಯಲಹಂಕ, ಹೊಸೂರು ರಸ್ತೆ ಮತ್ತು ವೈಟ್‌ಫೀಲ್ಡ್‌ಗಳಲ್ಲಿ ಮಾರಾಟಕ್ಕೆ ಲಭ್ಯವಿವೆ.
• ವೈಟ್ ಫೀಲ್ಡ್ ನಲ್ಲಿ ‘UV Space Station’ ಉದ್ಘಾಟನೆಗೊಂಡಿದ್ದು, Ultraviolette ತನ್ನ ರಾಷ್ಟ್ರೀಯ ಉಪಸ್ಥಿತಿಯನ್ನು ವಿಸ್ತರಿಸಿದೆ. ಈ ಮೂಲಕ ದೇಶದಾದ್ಯಂತ ಒಟ್ಟು 35 ನಗರಗಳಲ್ಲಿ ಕಂಪನಿಯು ತನ್ನ ಹೆಜ್ಜೆಗುರುತನ್ನು ಬಲಪಡಿಸಿದೆ.
• ಗ್ರಾಹಕರಿಗೆ ಪೂರ್ಣ ಪ್ರಮಾಣದ ಸೌಲಭ್ಯ: ಈ ಕೇಂದ್ರವು ಗ್ರಾಹಕರ ಖರೀದಿಯಿಂದ ಹಿಡಿದು ನಂತರದ ಎಲ್ಲಾ ಅಗತ್ಯತೆಗಳನ್ನು ಪೂರೈಸುವ ಮೂಲಕ ಅದ್ಭುತ ಅನುಭವವನ್ನು ನೀಡುತ್ತದೆ.
• ವೈಯಕ್ತೀಕರಿಸಿದ ಟೆಸ್ಟ್ ರೈಡ್ ಮತ್ತು ಸೇವೆ: ಎಕ್ಸ್‌ಪೀರಿಯನ್ಸ್ ಸೆಂಟರ್ ನಲ್ಲಿ ಗ್ರಾಹಕರಿಗೆ ವಿಶೇಷ ಟೆಸ್ಟ್ ರೈಡ್ ಅವಕಾಶಗಳು, ವಿಶೇಷ ಸೇವಾ ನೆರವು ಮತ್ತು ಅಧಿಕೃತ ಬಿಡಿಭಾಗಗಳ ಸೌಲಭ್ಯ ದೊರೆಯಲಿದೆ.
ಬೆಂಗಳೂರು, 07 ಫೆಬ್ರವರಿ 2026 – ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ವಾಹನ ತಯಾರಿಕಾ ಸಂಸ್ಥೆ ಆಗಿರುವ Ultraviolette Automotive ಸಂಸ್ಥೆಯು ಇಂದು ಬೆಂಗಳೂರಿನ ವೈಲ್ಡ್ಫೀಲ್ಡ್ ನಲ್ಲಿ ಹೊಸ UV Space Station’ ‘ ಅನ್ನು ಉದ್ಘಾಟಿಸಿದೆ. ಇದು ಬೆಂಗಳೂರು ನಗರದಲ್ಲಿ ಕಂಪನಿಯ ಐದನೇ ಎಕ್ಸ್ಪೀರಿಯನ್ಸ್ ಸೆಂಟರ್ ಆಗಿದ್ದು, ದೇಶಾದ್ಯಂತ ತನ್ನ ಮಾರಾಟ ಮತ್ತು ಸೇವಾ ಜಾಲವನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.
ತನ್ನ ಹೊಸ ಉತ್ಪನ್ನಗಳಾದ X-47 Crossover ಮತ್ತು UV Crossfade carbon-fibre helmet ಬಿಡುಗಡೆ ಮಾಡಿದ ಮೈಲಿಗಲ್ಲುಗಳ ಬೆನ್ನಲ್ಲೇ ಈ ಜಾಲ ವಿಸ್ತರಣಾ ಕಾರ್ಯ ನಡೆದಿದ್ದು, ಇದು ಅತ್ಯುತ್ತಮ ಕಾರ್ಯಕ್ಷಮತೆಯ ಎಲೆಕ್ಟ್ರಿಕ್ ಸಾರಿಗೆ ಪರಿಸರ ವ್ಯವಸ್ಥೆಯನ್ನು ರೂಪಿಸುವ Ultravioletteನ ಗಮನವನ್ನು ಪ್ರತಿಬಿಂಬಿಸುತ್ತದೆ. ಈ ಹೊಸ ಎಕ್ಸ್ಪೀರಿಯನ್ಸ್ ಸೆಂಟರ್ ಸೇರ್ಪಡೆಯೊಂದಿಗೆ, ಕಂಪನಿಯು ತನ್ನ ಎಲೆಕ್ಟ್ರಿಕ್ ಮೋಟಾರ್ ಸೈಕಲ್‌ಗಳ ಲಭ್ಯತೆಯನ್ನು ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿಸಿದೆ ಮತ್ತು Ultravioletteನ ಎಂಜಿನಿಯರಿಂಗ್ ಹಾಗೂ ಆವಿಷ್ಕಾರ ಕೇಂದ್ರವಾಗಿ ಬೆಂಗಳೂರಿನ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ.
ಲಿಥಿಯಂ ವೀಲ್ಸ್ (M/s Lithium Wheels) ಸಂಸ್ಥೆಯ ಸಹಭಾಗಿತ್ವದಲ್ಲಿ ಸ್ಥಾಪಿಸಲಾದ ಈ ಹೊಸ UV Space Station’, ಗ್ರಾಹಕರಿಗೆ Ultravioletteನ X-47 Crossover ಮತ್ತು F77 ಮೋಟಾರ್ ಸೈಕಲ್ ಗಳನ್ನು ನೋಡುವ, ತಿಳಿಯುವ ಸಮಗ್ರ ಅವಕಾಶವನ್ನು ಒದಗಿಸುತ್ತದೆ. ಈ UV Space Station’ ಒಂದು ‘3ಎಸ್’ (3S) ಸೌಲಭ್ಯವಾಗಿದ್ದು, ಇದನ್ನು ಟೆಸ್ಟ್ ರೈಡ್ ಅನುಭವ, ಮಾರಾಟ, ಸೇವೆ ಮತ್ತು ವಿವಿಧ ಮೋಟಾರ್ ಸೈಕಲ್ ಪರಿಕರಗಳನ್ನು ಒಂದೇ ಸೂರಿನಡಿ ಲಭ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ.
ಈ ಎಕ್ಸ್ ಪೀರಿಯನ್ಸ್ ಸೆಂಟರ್ ಕಂಪನಿಯ ಅತ್ಯುತ್ತಮ ಕಾರ್ಯಕ್ಷಮತೆಯ ಮೋಟಾರ್ ಸೈಕಲ್‌ಗಳಾದ X-47 ಮತ್ತು F77 ಗಳನ್ನು ಪ್ರದರ್ಶಿಸಲಿದೆ. ಈ ಉತ್ಪನ್ನಗಳು 40.2 hp ಪವರ್ ಮತ್ತು 100 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಪವರ್ ಟ್ರೇನ್ ನೊಂದಿಗೆ ಅತ್ಯುತ್ತಮ ಎಲೆಕ್ಟ್ರಿಕ್ ಕಾರ್ಯಕ್ಷಮತೆಯನ್ನು ಹೊಂದಿದೆ. ಇವು ಕೇವಲ 2.8 ಸೆಕೆಂಡುಗಳಲ್ಲಿ 0 ರಿಂದ 60 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತವೆ. 10.3 kWh ಬ್ಯಾಟರಿಯನ್ನು ಹೊಂದಿರುವ ಈ ಮೋಟಾರ್ ಸೈಕಲ್, ಒಂದು ಬಾರಿ ಚಾರ್ಜ್ ಮಾಡಿದರೆ 323 ಕಿ.ಮೀ (IDC range) ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ Ultravioletteನ ಸಹ-ಸಂಸ್ಥಾಪಕ ಮತ್ತು ಸಿಇಓ ನಾರಾಯಣ್ ಸುಬ್ರಮಣಿಯಂ ಅವರು, “ಬೆಂಗಳೂರಿನಲ್ಲಿ ನಮ್ಮ ಐದನೇ Ultraviolette ಎಕ್ಸ್ಪೀರಿಯನ್ಸ್ ಸೆಂಟರ್ ಅನ್ನು ಪ್ರಾರಂಭಿಸಿರುವುದು ನಮ್ಮ ರಿಟೇಲ್ ಮತ್ತು ಸೇವಾ ಜಾಲವನ್ನು ವಿಸ್ತರಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಈ ಬೆಂಗಳೂರು ನಗರವು ನಮ್ಮ ಎಂಜಿನಿಯರಿಂಗ್, ಉತ್ಪನ್ನ ಅಭಿವೃದ್ಧಿ ಮತ್ತು ಆವಿಷ್ಕಾರದ ಬೆಳವಣಿಗೆ ಪ್ರಯಾಣದ ಕೇಂದ್ರಬಿಂದುವಾಗಿದ್ದು, ಈ ಹೊಸ ‘ಸ್ಪೇಸ್ ಸ್ಟೇಷನ್’ ನಮ್ಮ ಅತ್ಯಂತ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾದ ಬೆಂಗಳೂರಿನಲ್ಲಿ ಗ್ರಾಹಕರಿಗೆ ಉತ್ತಮವಾದ ಮತ್ತು ಉತ್ಕೃಷ್ಟವಾದ ಮಾಲೀಕತ್ವದ ಅನುಭವವನ್ನು ನೀಡುವ ನಮ್ಮ ಸಾಮರ್ಥ್ಯವನ್ನು ಬಲಪಡಿಸುತ್ತದೆ. ಅಲ್ಲದೆ, ಬೆಳೆಯುತ್ತಿರುವ ನಮ್ಮ ಉತ್ಪನ್ನಗಳ ಶ್ರೇಣಿಗೆ ಅಗತ್ಯವಿರುವ ವಿಸ್ತರಣೆಗೆ ಇದು ಬೆಂಬಲ ನೀಡುತ್ತದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಮಳಿಗೆಗಳನ್ನು ತೆರೆಯುವ ಮೂಲಕ, 2026ರ ವೇಳೆಗೆ ಭಾರತದಾದ್ಯಂತ 100 ಸಂಪರ್ಕ ಕೇಂದ್ರಗಳನ್ನು ಹೊಂದುವ ನಮ್ಮ ಗುರಿಯತ್ತ ನಾವು ವೇಗವಾಗಿ ಸಾಗುತ್ತೇವೆ. ಪ್ರತಿಯೊಂದು ಹೊಸ ಕೇಂದ್ರವು ಗ್ರಾಹಕರ ಜೊತೆಗಿನ ಒಡನಾಟವನ್ನು ಹೆಚ್ಚಿಸಲು, ಕಾರ್ಯವೈಖರಿಯನ್ನು ವಿಸ್ತರಿಸಲು ಮತ್ತು ದೇಶಾದ್ಯಂತ ಎಲೆಕ್ಟ್ರಿಕ್ ಸಾರಿಗೆ ಅಳವಡಿಕೆಯನ್ನು ವೇಗಗೊಳಿಸಲು ವಿನ್ಯಾಸಗೊಳಿಸಲಾಗಿದೆ” ಎಂದು ತಿಳಿಸಿದರು.”
Ultravioletteನ ಉತ್ಕೃಷ್ಟ ಎಂಜಿನಿಯರಿಂಗ್ ಮತ್ತು ಪ್ಲಾಟ್ ಫಾರ್ಮ್ ಆಧಾರಿತ ಆವಿಷ್ಕಾರದ ಮೇಲೆ ನಿರ್ಮಿಸಲಾದ X-47 Crossover, ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿರುವ ವಿಶ್ವದ ಮೊದಲ Radar-integrated ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಆಗಿದೆ. ಇದು ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಗಳ ವಿನ್ಯಾಸ ಮತ್ತು ಅನುಭವದ ರೀತಿಯಲ್ಲಿಯೇ ಒಂದು ಮಹತ್ವದ ಬದಲಾವಣೆಯನ್ನು ತಂದಿದೆ. ಈ ಮೋಟಾರ್ ಸೈಕಲ್ TFT display, three distinct ride modes, long-travel suspension and industry-first radial all-terrain tyres ಹೊಂದಿದ್ದು, ವಿವಿಧ ರೀತಿಯ ರಸ್ತೆಗಳಲ್ಲಿ ಸವಾರನಿಗೆ ಆತ್ಮವಿಶ್ವಾಸ, ಸ್ಥಿರತೆ ಮತ್ತು ನಿಯಂತ್ರಣವನ್ನು ನೀಡುತ್ತದೆ.
Ultravioletteನ UV Radar Intelligence ಮೂಲಕ ಸುಧಾರಿತ ಸುರಕ್ಷತೆ ಮತ್ತು ಬುದ್ಧಿವಂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದು 77 GHz rear radar ಮತ್ತು UV HyperSense Advanced Rider Assistance System ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಬ್ಲೈಂಡ್-ಸ್ಪಾಟ್ ಮಾನಿಟರಿಂಗ್ (blind-spot monitoring), ಲೇನ್ ಚೇಂಜ್ ಅಸಿಸ್ಟ್ (lane change assist), ಓವರ್ ಟೇಕ್ ಅಲರ್ಟ್ (overtake alerts) ಮತ್ತು ಹಿಂಬದಿಯಿಂದ ಡಿಕ್ಕಿಯ ಮುನ್ಸೂಚನೆ (rear collision warnings) ನೀಡುವ ಕಾರ್ಯಗಳನ್ನು ನಿರ್ವಹಿಸುತ್ತದೆ. X-47 ಮೋಟಾರ್ ಸೈಕಲ್ ವಿಶ್ವದ ಅತ್ಯಂತ ಶಕ್ತಿಶಾಲಿ ಏರ್-ಕೂಲ್ಡ್ ಆನ್ ಬೋರ್ಡ್ ಚಾರ್ಜರ್ ಅನ್ನು ಹೊಂದಿದೆ, ಇದನ್ನು Ultraviolette ಸಂಸ್ಥೆಯೇ ಸ್ವತಃ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ. ಇದರೊಂದಿಗೆ ಪ್ಯಾರಲಲ್ ಬೂಸ್ಟ್ ಚಾರ್ಜಿಂಗ್ ಮತ್ತು ಇಂಟಿಗ್ರೇಟೆಡ್ ಡ್ಯಾಶ್ ಕ್ಯಾಮ್ ವ್ಯವಸ್ಥೆಯೂ ಇದೆ. ಈ ಎಂಜಿನಿಯರಿಂಗ್ ಆಧಾರಿತ ವಿಧಾನವು ಆಟೋಮೊಬೈಲ್ ಉದ್ಯಮದಾದ್ಯಂತ ಮನ್ನಣೆ ಗಳಿಸಿದ್ದು, ‘EV ಮೋಟಾರ್‌ಸೈಕಲ್ ಆಫ್ ದಿ ಇಯರ್’ ನಂತಹ ಪ್ರಮುಖ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಇದು ಭಾರತದಿಂದ ಜಾಗತಿಕ ಮಟ್ಟದ ಎಲೆಕ್ಟ್ರಿಕ್ ಸಾರಿಗೆ ಉತ್ಪನ್ನಗಳನ್ನು ನಿರ್ಮಿಸುವ Ultraviolette ನ ಮಹತ್ವಾಕಾಂಕ್ಷೆಯನ್ನು ಮತ್ತಷ್ಟು ಬಲಪಡಿಸಿದೆ.
ವೈಟ್‌ಫೀಲ್ಡ್ ನಲ್ಲಿರುವ ‘UV Space Station’ ವಿಳಾಸ: ನಂ. 931 ಬಿ. ನಾರಾಯಣಪುರ ಗ್ರಾಮ, ಕೆ.ಆರ್. ಪುರಂ ಹೋಬಳಿ, ಬೆಂಗಳೂರು ಪೂರ್ವ ತಾಲೂಕು, ಪಿನ್ ಕೋಡ್ – 560016.
