ರಾಜ್ಯಾದ್ಯಂತ ಸೆಪ್ಟೆಂಬರ್ 5 ರಿಂದ ‘ಪ್ರಜಾಸೇವೆ ಅಭಿಯಾನ’: ಸಾರ್ವಜನಿಕರ ಕುಂದುಕೊರತೆಗಳ ಶೀಘ್ರ ವಿಲೇವಾರಿಗೆ ಸರ್ಕಾರದ ಬೃಹತ್ ಯೋಜನೆ
ಬೆಂಗಳೂರು, ಸೆಪ್ಟೆಂಬರ್ 02, (ಕರ್ನಾಟಕ ವಾರ್ತೆ) : ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಅವುಗಳಿಗೆ ಸpoapಕಾಲದಲ್ಲಿ ಸೂಕ್ತ ಹಾಗೂ ತೃಪ್ತಿದಾಯಕ ಪರಿಹಾರ ನೀಡುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ‘ಪ್ರಜಾಸೇವೆ ಅಭಿಯಾನ’ ಸಭೆಗಳನ್ನು ಆಯೋಜಿಸಲು ಮಾರ್ಗಸೂಚಿಗಳನ್ನು ಹೊರಡಿಸಿದ್ದು, 2026 ನೇ ಸೆಪ್ಟೆಂಬರ್ 05 ರಿಂದ ಈ ಆಂದೋಲನ ಅಧಿಕೃತವಾಗಿ ಚಾಲನೆಗೊಳ್ಳಲಿದೆ.
ಪ್ರಜಾಸೇವೆ ಆಂದೋಲನ ಸಭೆಗಳ ಪ್ರಮುಖ ಮಾರ್ಗಸೂಚಿಗಳು ಹಾಗೂ ವೈಶಿಷ್ಟ್ಯಗಳು:
ಸಭೆಗಳ ಆಯೋಜನೆ ಮತ್ತು ದಿನಾಂಕ:
1ನೇ ಮತ್ತು 3ನೇ ಶನಿವಾರ: ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆ ಹಾಗೂ ಸ್ಥಳೀಯ ಶಾಸಕರ ಉಪಸ್ಥಿತಿಯಲ್ಲಿ ತಾಲ್ಲೂಕು ಮತ್ತು ಹೋಬಳಿ ಮಟ್ಟದ ಸಭೆಗಳು ನಡೆಯಲಿವೆ.
2ನೇ ಮತ್ತು 4ನೇ ಶನಿವಾರ: ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಮೊದಲು ಹೋಬಳಿ ಮಟ್ಟದಲ್ಲಿ ಹಾಗೂ ನಂತರ ಗ್ರಾಮ ಪಂಚಾಯತ್ ಕೇಂದ್ರಗಳಲ್ಲಿ ಸಭೆಗಳು ಜರುಗಲಿವೆ.
ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಅಧೀಕ್ಷಕರು / ಆಯುಕ್ತರು, ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳು ಹಾಗೂ ಉಪ ಸಂರಕ್ಣಾಧಿಕಾರಿಗಳು (ವನ್ಯಜೀವಿ ರವರು ಒಳಗೊಂಡಂತೆ) ಸೇರಿದಂತೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ತಾಲ್ಲೂಕು ಮಟ್ಟದ ಪ್ರಜಾಸೇವೆ ಆಂದೋಲನ ಸಭೆಗಳಲ್ಲಿ ಭಾಗವಹಿಸತಕ್ಕದ್ದು.
ಸಾರ್ವಜನಿಕರಿಗೆ ಮನೆ-ಮನೆ ಮಾಹಿತಿ: ಸಭೆ ನಡೆಯುವ 15 ದಿನಗಳ ಮುಂಚಿತವಾಗಿ ಅರ್ಜಿ ನಮೂನೆ ಹಾಗೂ ಅಗತ್ಯ ದಾಖಲೆಗಳ ಪಟ್ಟಿಯುಳ್ಳ ಲಕೋಟೆಯನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.
ವೇಳಾಪಟ್ಟಿ ಪ್ರಚಾರ: ಸಭೆಗಳ ವೇಳಾಪಟ್ಟಿಯನ್ನು ಒಂದು ತಿಂಗಳ ಮುಂಚಿತವಾಗಿಯೇ ಜಿಲ್ಲಾಧಿಕಾರಿಗಳು ಅಂತಿಮಗೊಳಿಸಿ ಸರ್ಕಾರಿ ಕಚೇರಿಗಳಲ್ಲಿ ಪ್ರದರ್ಶಿಸಿ ವ್ಯಾಪಕ ಪ್ರಚಾರ ಮಾಡಲಿದ್ದಾರೆ.
ಉಚಿತ ಸೇವೆಗಳು ಮತ್ತು ತಾಂತ್ರಿಕ ವ್ಯವಸ್ಥೆ:
ಗ್ರಾಮ ಒನ್ ಮತ್ತು ಕರ್ನಾಟಕ ಒನ್: ಪ್ರತಿ ಸಭಾ ಸ್ಥಳದಲ್ಲೂ ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳ ಮೂಲಕ ಸಾರ್ವಜನಿಕರಿಂದ ಉಚಿತವಾಗಿ ಅರ್ಜಿ/ದೂರುಗಳನ್ನು ಸ್ವೀಕರಿಸಲಾಗುವುದು.
ನೈಜ ಸಮಯದ (Realtime) ಅಪ್‌ಡೇಟ್: ಸ್ವೀಕರಿಸಿದ ಪ್ರತಿಯೊಂದು ಅರ್ಜಿಯನ್ನು https://ipgrs. karnataka.gov.in ಪೋರ್ಟಲ್‌ನಲ್ಲಿ ನೋಂದಾಯಿಸಿ, ರಸೀದಿ ನೀಡಲಾಗುತ್ತದೆ ಹಾಗೂ ನೈಜ ಸಮಯದ ಸ್ಥಿತಿಗತಿಯನ್ನು (Real-time tracking) ತಿಳಿಸಲಾಗುತ್ತದೆ.
ಪ್ರದರ್ಶನ ಮಳಿಗೆಗಳು (IEC): ವಿವಿಧ ಸರ್ಕಾರಿ ಇಲಾಖೆಗಳ ಯೋಜನೆಗಳು, ಸವಲತ್ತುಗಳ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡಲು ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲಾಗುತ್ತದೆ.
ದೂರುಗಳ ನಿರ್ವಹಣೆಗೆ ಎರಡು ಪ್ರತ್ಯೇಕ ಸರದಿ (Queues):
ಸರದಿ 1 (ಹೊಸ ದೂರುಗಳು): ಮೊದಲ ಬಾರಿಗೆ ದಾಖಲಿಸುತ್ತಿರುವ ಅರ್ಜಿಗಳು.
ಸರದಿ 2 (ಇತ್ಯರ್ಥವಾಗದ ದೂರುಗಳು): IPGRS ಪೋರ್ಟಲ್‌ನಲ್ಲಿ ದಾಖಲಾಗಿ 21 ದಿನಗಳ ಗರಿಷ್ಠ ಅವಧಿ ಮುಗಿದರೂ ಸೂಕ್ತ ಪರಿಹಾರ ಸಿಗದ ದೂರುಗಳು.
ಪ್ರತಿ ಬುಧವಾರ ಮೂರು-ಹಂತದ ಪರಿಶೀಲನಾ ಸಭೆ:
ಸ್ವೀಕೃತವಾದ ಅರ್ಜಿಗಳ ಪ್ರಗತಿಯನ್ನು ಪರಿಶೀಲಿಸಲು ಪ್ರತಿ ಬುಧವಾರ ಮೂರು ಹಂತಗಳಲ್ಲಿ ಸಭೆ ನಡೆಯಲಿದೆ.
ಬೆಳಿಗ್ಗೆ 9:00 – 11:00: ತಾಲ್ಲೂಕು ಮಟ್ಟದ ಪರಿಶೀಲನೆ (ತಹಶೀಲ್ದಾರ್ ಹಾಗೂ ಇಒ).
ಬೆಳಿಗ್ಗೆ 11:00 – ಮಧ್ಯಾಹ್ನ 1:00: ಉಪ ವಿಭಾಗ ಮಟ್ಟದ ಪರಿಶೀಲನೆ (ಸಹಾಯಕ ಆಯುಕ್ತರು – AC).
ಮಧ್ಯಾಹ್ನ 3:00 – ಸಂಜೆ 5:00: ಜಿಲ್ಲಾ ಮಟ್ಟದ ಪರಿಶೀಲನೆ (ಜಿಲ್ಲಾಧಿಕಾರಿಗಳು – DC).
ಈ ಸಭೆಗಳಿಗೆ ದೂರಿನ ಇತ್ಯರ್ಥದಿಂದ ತೃಪ್ತರಾಗದ ಸಾರ್ವಜನಿಕರು ಖುದ್ದು ಹಾಜರಾಗಿ ಅಧಿಕಾರಿಗಳ ಎದುರಲ್ಲೇ ನೇರವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು.
ಅಧಿಕಾರಿಗಳ ಕಡ್ಡಾಯ ಭೇಟಿ ಹಾಗೂ ರಾತ್ರಿ ವಾಸ್ತವ್ಯ:
ಜಿಲ್ಲಾಧಿಕಾರಿಗಳು, ಸಿಇಒ, ಎಸ್‌ಪಿ, ಡಿಎಫ್‌ಒ ಸೇರಿದಂತೆ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಸಭೆಗಳಲ್ಲಿ ಭಾಗವಹಿಸಬೇಕು.
ಪ್ರಜಾಸೇವೆ ಆಂದೋಲನ ನಡೆಯುವ ದಿನಗಳಲ್ಲಿ ಇಲಾಖೆಗಳು ಇನ್ಯಾವುದೇ ಸಭೆಗಳನ್ನು ನಿಗದಿಪಡಿಸುವಂತಿಲ್ಲ.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಪ್ರತಿ 15 ದಿನಗಳಿಗೊಮ್ಮೆ ಶುಕ್ರವಾರವೇ ಜಿಲ್ಲೆಗೆ ಭೇಟಿ ನೀಡಿ, ವಸತಿ ಶಾಲೆ/ವಿದ್ಯಾರ್ಥಿನಿಲಯಗಳಲ್ಲಿ ರಾತ್ರಿ ವಾಸ್ತವ್ಯ ಮಾಡಿ, ಮರುದಿನ ಶನಿವಾರ ನಡೆಯುವ ಪ್ರಜಾಸೇವೆ ಸಭೆಯಲ್ಲಿ ಭಾಗವಹಿಸುವುದು ಕಡ್ಡಾಯವಾಗಿದೆ.
ಕಾಲಮಿತಿಯೊಳಗೆ ಅರ್ಜಿ ವಿಲೇವಾರಿ ಮಾಡದ ಜಿಲ್ಲಾಧಿಕಾರಿಗಳನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಿಬ್ಬಂದಿಗೆ ಕಾಂಪೆನ್ಸೇಟರಿ ಸಿಎಲ್:
2ನೇ ಮತ್ತು 4ನೇ ಶನಿವಾರದ ರಜಾ ದಿನಗಳಲ್ಲಿ ಕಾರ್ಯನಿರ್ವಹಿಸುವ ಗ್ರೂಪ್ ‘ಸಿ’ ಮತ್ತು ಗ್ರೂಪ್ ‘ಡಿ’ ಸಿಬ್ಬಂದಿಗೆ ಜಿಲ್ಲಾಧಿಕಾರಿಗಳ ಹಂತದಲ್ಲಿ ಕಾಂಪೆನ್ಸೇಟರಿ ಸಿಎಲ್ (Compensatory CL) ಮಂಜೂರು ಮಾಡಲು ಅವಕಾಶ ನೀಡಲಾಗಿದೆ.
ಸಾರ್ವಜನಿಕರು ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಈ ‘ಪ್ರಜಾಸೇವೆ ಅಭಿಯಾನ’ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಸರ್ಕಾರದ ಯೋಜನೆಗಳು ಮತ್ತು ಸೇವೆಗಳ ಸೌಲಭ್ಯವನ್ನು ಪಡೆದುಕೊಳ್ಳಬೇಕಾಗಿ
