ಡಿ ಕೆ ಶಿವಕುಮಾರ್ ಮನೆಯಲ್ಲಿ ಸಿಕ್ಕಿತು 57 ಲಕ್ಷ : ಸಿಬಿಐ
ಬೆಂಗಳೂರು ಅ ೫ :- ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಿವಾಸ ಸೇರಿದಂತೆ 14 ಸ್ಥಳ ಗಳಲ್ಲಿ ಸಿಬಿಐ ಸೋಮವಾರ ಬೆಳಿಗ್ಗೆ ದಾಳಿ ನಡೆಸಿದೆ.
ಡಿ ಕೆ ಶಿವಕುಮಾರ್ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಅಕ್ರಮಾಗಿ 74.93( ಅಂದಾಜು) ಆಸ್ತಿ ಗಳಿಸಿದ್ದಾರೆ ಎಂಬ ದೂರು ಮಾರ್ಚ 2020 ದಾಖಲಾಗಿತ್ತು ಆಗ ಸಿಬಿಐ ಪ್ರಾರ್ಥಮಿಕ ತನಿಖೆ ನಡೆಸಿತ್ತು, ಇದಕ್ಕೆ ಪೂರಕವಾಗಿ ಇಂದು ಬೆಳ್ಳಿಗ್ಗೆ ಡಿ ಕೆ ಶಿವಕೂಮಾರ್ ಸದಾಶಿವನಗರ ನಿವಾಸ, ದೆಹಲಿ,ಮುಂಬೈ ಸೇರಿದಂತೆ 14 ಸ್ಥಳ ಗಳಲ್ಲಿ ದಾಳಿ ನಡೆಸಲಾಗಿದೆ.
ಸಿಬಿಐ: ದಾಳಿಯ ವೇಳೆ 57 ಲಕ್ಷ (ಅಂದಾಜು) ) ನಗದು ಮತ್ತು ಆಸ್ತಿ ದಾಖಲೆಗಳು, ಬ್ಯಾಂಕ್ ಸಂಬಂಧಿತ ಮಾಹಿತಿ, ಕಂಪ್ಯೂಟರ್ ಹಾರ್ಡ್ ಡಿಸ್ಕ್ ವಶಪಡಿಸಿ ಕೊಳ್ಳಲಾಗಿದೆ ಎಂದು ಸಿಬಿಐ ಹೇಳಿಕೆಯಲ್ಲಿ ತಿಳಿಸಿದ್ದು,ತನಿಖೆ ಮುಂದುವರೆಯುತ್ತಿದೆ ಎಂದಿದೆ.
ಸಿಬಿಐ ದಾಳಿಗೆ ಕಾಂಗ್ರಸ್ ವ್ಯಾಪಕ ವಲಯದಲ್ಲಿ ಖಂಡನೆ :
ಉಪ ಚುನಾವಣೆ ಹೊಸ್ತಿನಲ್ಲಿ ಕಾಂಗ್ರೆಸ್ ಅಧ್ಯಕ್ಷರ ಮನೆ ಮೇಲೆ ದಾಳಿ ನಡೆದಿರುವುದನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಖಂಡಿಸಿದ್ದಾರೆ.
ರಂದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್ ಮಾಡಿ, ಸಿಬಿಐ, ಇಡಿ ಮತ್ತು ಆದಾಯ ತೆರಿಗೆ ಇಲಾಖೆಗಳು ಬಿಜೆಪಿ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ. ಮೋದಿ ಮತ್ತು ಬಿ ಎಸ್ ಯಡಿಯೂರಪ್ಪನವರು ಸಿಬಿಐ ಅಧಿಕಾರಿಗಳನ್ನು ತಮ್ಮ ಕೈಗೊಂಬೆಗಳಂತೆ ಕುಣಿಸುತ್ತಿದ್ದಾರೆ ಎಂದಿದ್ದಾರೆ.
ಸಿಬಿಐ ದಾಳಿಗೆ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ :
ಮಾಧ್ಯಮ ಸ್ನೇಹಿತರು ಬೆಳಗ್ಗೆಯಿಂದ ಅನೇಕ ವಿಚಾರ ತಿಳಿಸಿದ್ದೀರಿ. ಕೆಲವು ಸತ್ಯವನ್ನೂ ಹೇಳಿದ್ದೀರಿ, ಸುಳ್ಳನ್ನು ಹೇಳಿದ್ದೀರಿ. ಅದನ್ನು ನಿಮಗೆ ಬಿಡುತ್ತೇನೆ. ನಿಮ್ಮ ಪರಿಶ್ರಮಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. 2017ರಲ್ಲಿ ಐಟಿ ದಾಳಿ ಆದಾಗ ಅವತ್ತೇ ಬಂಧನ ಆಗುತ್ತೆ ಅಂತಾ ಹೇಳಿದ್ದರು. 2018ರಲ್ಲಿ ಆರ್ಥಿಕ ಅಪರಾಧ ಪ್ರಕರಣ, 2019ರಲ್ಲಿ ಇಡಿ ಪ್ರಕರಣ ನ್ಯಾಯಾಲಯ ನನಗೆ ಜಾಮೀನು ನೀಡಿತು. ಆಗಲೂ ದೇಶದ್ದುದ್ದಗಲಕ್ಕೆ ಸೋನಿಯಾ ಗಾಂಧಿ ಅವರಿಂದ ಎಲ್ಲ ಪಕ್ಷದ ಮುಖಂಡರು, ಅನೇಕ ಸಂಘಟನೆಗಳು ಪ್ರತಿಭಟನೆ ಮಾಡಿ ಬೆಂಬಲ ನೀಡಿದರು. ನನಗೆ ಅನ್ಯಾಯ ಆಗಿದೆ ಎಂದು ಜನ ಅಭಿಮಾನದಿಂದ ಬಂದು ಪ್ರತಿಭಟನೆ ಮಾಡಿದರು.
ಪೊಲೀಸರು ಬೆದರಿಕೆ ಹಾಕಿದ್ದರೂ ಶಾಂತಿಯುತ ಪ್ರತಿಭಟನೆ ನಂತರ ಆಯುಕ್ತರು ಹಾಗೂ ಗೃಹಮಂತ್ರಿಗಳು ಶ್ಲಾಘಿಸಿದರು. ಎಲ್ಲ ಧರ್ಮದ ಹಿರಿಯರು ನನಗೆ ನನ್ನ ಕುಟುಂಬಕ್ಕೆ ಶಕ್ತಿ ನೀಡಿದ್ದಾರೆ.
ನಾನು ಮರಳಿ ಬಂದಾಗ ಪಕ್ಷ, ಜಾತಿ ಎಲ್ಲ ಮರೆತು ಸ್ವಾಗತ ಕೊಟ್ಟರು. ಜೈಲಿನಿಂದ ಬಂದವನಿಗೆ ಈ ಮೆರವಣಿಗೆ ಬೇಕಾ ಅಂತಾ ಕೇಳಿದ್ದರು. ಅವರು ಒಮ್ಮೆ ಯೋಚಿಸಬೇಕು ಪರಪ್ಪನ ಅಗ್ರಹಾರ ಜೈಲಿನಿಂದ ಬಂದವರು ಹೇಗೆ ಬಂದರು? ನಾನು ಅವರಂತೆ ವಿಕ್ಟರಿ ಯೋರಿಸಿ ಬರಲಿಲ್ಲ ಕೈಮುಗಿದು ಬಂದೆ.
ನಮ್ಮ ರಾಷ್ಟ್ರೀಯ ನಾಯಕರು ನನ್ನ ಮೇಲೆ ನಂಬಿಕೆ ಇಟ್ಟು ಅಧ್ಯಕ್ಷ ಜವಾಬ್ದಾರಿ ಕೊಟ್ಟಿದ್ದಾರೆ.
ಕಳೆದ ಏಳು ತಿಂಗಳಲ್ಲಿ ಕೊರೋನಾ ಸಮಸ್ಯೆಯಲ್ಲಿ ಜನ ಸಂಕಷ್ಟಕ್ಕೆ ಸಿಲುಕಿದಾಗ ನಾವು ಅವರಿಗೆ ನೆರವಾಗಿದ್ದೇವೆ. ಬಡವರು, ಕಾರ್ಮಿಕರು, ರೈತರು, ಜನ ಸಾಮಾನ್ಯರ ಜತೆ ಸರ್ಕಾರ ನಿಲ್ಲಲಿಲ್ಲ. ವಿರೋಧ ಪಕ್ಷವಾಗಿ ನಾವು ಅವರ ಪರ ನಿಂತೆವು. ಅವರ ಪರವಾಗಿ ನಾವು ಧ್ವನಿ ಎತ್ತಿದೆ.
ನಾನು ಒಂದು ಪಕ್ಷದ ಅಧ್ಯಕ್ಷನಾಗಿ ನನ್ನ ಕರ್ತವ್ಯ ಮಾಡಿದೆ.
ರೈತರ ಸಮಸ್ಯೆಗೆ ಸ್ಪಂದಿಸಿ ರೈತರ ಬೆಳೆಯನ್ನು ಅವರ ಹೊಲಕ್ಕೆ ಹೋಗಿ ಖರೀದಿಸಿದೆವು.
ಕೊರೋನಾ ವಿಚಾರದಲ್ಲಿ 300, 400 ಪಟ್ಟು ಭ್ರಷ್ಟಾಚಾರ ಮಾಡಲಾಗಿದೆ. ಈ ಬಗ್ಗೆ ಹೋರಾಟ ಮಾಡಿದೆವು. ವಿಧಾನಸೌಧದಲ್ಲಿ ನಮಗೆ ಮಾತನಾಡಲು ಅವಕಾಶ ನೀಡಲಿಲ್ಲ.
ನಾವು ಜನರ ನೋವಿಗೆ ಸ್ಪಂದಿಸದಿದ್ದರೆ, ಅವರ ಭಾವನೆಗೆ ಬೆಲೆ ಕೊಡದಿದ್ದರೆ ನಮ್ಮ ಕರ್ತವ್ಯ ನಿರ್ವಹಿಸಲು ವಿಫಲವಾದಂತೆ ಆಗುತ್ತದೆ.
ಇಂದು ದೇಶದಲ್ಲಿ ಅನೇಕ ಬೆಳವಣಿಗೆ ಆಗುತ್ತಿದೆ. ಹತ್ರಾಸ್ ನಲ್ಲಿ ದಲಿತ ಹೆಣ್ಣು ಮಗಳ ಮೇಲೆ ಅತ್ಯಾಚಾರ ನಡೆಯಿತು. ಆಕೆಗೆ ಸರ್ಕಾರ ನ್ಯಾಯ ಒಡಗಿಸಿಕೊಡಲು ಮುಂದಾಗಿದೆಯೇ?
ಚುನಾವಣೆ ಘೋಷಣೆಯಾದ ಮೇಲೆ, ನಾವು ಅನೇಕ ವಿಚಾರವಾಗಿ ಪ್ರತಿಭಟನೆಗೆ ಕರೆ ಕೊಟ್ಟ ಸಮಯದಲ್ಲಿ ನನ್ನ ಮನೆ ಮೇಲೆ ದಾಳಿ ಮಾಡಲಾಗಿದೆ. ಇಷ್ಟು ಆತುರ ಯಾಕೆ?
ಈ ಎಫ್ಐಆರ್, ಪ್ರಕರಣಗಳಿಗೆ ನಾವು ಹೆದರುವುದಿಲ್ಲ.
ಮುಖ್ಯಮಂತ್ರಿಗಳೇ 35 ವರ್ಷಗಳಲ್ಲಿ ನನ್ನ ಮೇಲೆ ಯಾವುದಾದರೂ ತನಿಖೆ ಆಗಿದೆಯಾ? ಕ್ರಿಮಿನಲ್ ಕೇಸ್? ಎಫ್ ಐಆರ್ ಆಗಿದೆಯಾ?
ನಾನು ಮಂತ್ರಿಯಾದ ಎಲ್ಲ ಇಲಾಖೆಗಳ ಫೈಲ್ ಜಾಲಾಡಿದ್ದೀರಾ. ಏನಾದರೂ ತಪ್ಪು ಕಾಣಿಸಿದೆಯಾ?
ಬೇರೆಯವರ ಬಂಡವಾಳವೂ ನನ್ನ ಬಳಿ ಇದೆ. ಆರ್ ಟಿಐ ಮೂಲಕ ಎಲ್ಲವನ್ನು ಸಂಗ್ರಹಿಸಿದ್ದೇನೆ. ಯಾವಾಗ ಅದನ್ನು ಬಹಿರಂಗ ಮಾಡಬೇಕೋ ಆಗ ಮಾಡುತ್ತೇನೆ.
ಬರೀ ಡಿ.ಕೆ ಶಿವಕುಮಾರ್ ಮಾತ್ರನಾ ನಿಮ್ಮ ಕಣ್ಣಿಗೆ ಕಾಣುತ್ತಿರುವುದು?
ನಾನು ನಂಬಿರುವ ಶಕ್ತಿ ದೇವರು ಅಜ್ಜಯ್ಯನವರು, ಜನ ನನ್ನ ಜತೆ ಇದ್ದಾರೆ.
ಡಿಕೆಶಿ : ನನ್ನ ಮನೆಯಲ್ಲಿ 1.87 ಲಕ್ಷ ಸಿಕ್ಕಿದೆ ಅಂತಾ ಪಂಚನಾಮ ಇದೆ. ಪಕ್ಕದ ಕಚೇರಿಯಲ್ಲಿ 2-3 ಲಕ್ಷ, ದೆಹಲಿಯಲ್ಲಿ 2-3 ಲಕ್ಷ ಸಿಕ್ಕಿದೆ. ಮಾಧ್ಯಮಗಳಲ್ಲಿ ಬಂದಂತೆ ಕೋಟಿಗಟ್ಟಲೆ ಹಣ ಸಿಕ್ಕಿಲ್ಲ. ನಮ್ಮ ಮನೆಯಲ್ಲಿ ಏನು ಸಿಕ್ಕಿದೆಯೋ ಅದನ್ನು ಹೇಳಿದ್ದೇನೆ. ಬೇರೆಯವರ ಮನೆಯಲ್ಲಿ ಏನು ಸಿಕ್ಕಿದೆ ಗೊತ್ತಿಲ್ಲ.
ನಾನು ಉದ್ಯಮಿ, ಶಿಕ್ಷಣದಾರ, ರಾಜಕಾರಣಿ. ನಾನು ತಪ್ಪು ಮಾಡಿದ್ದಾರೆ, ನನ್ನನ್ನು ನೇಣಿಗೆ ಹಾಕಲಿ. ಅವರು ಯಾವಾಗ ವಿಚಾರಣೆಗೆ ಕರೆಯುತ್ತಾರೋ ಹೋಗುತ್ತೇನೆ.