ಬೆಂಗಳೂರು : – ಖಾಕಿ, ಖಾದಿ ಮತ್ತು ಖಾವಿಗಳು ಹೇಗೆ ಸಮಾಜದ ಅವ್ಯವಸ್ಥೆಗೆ ಕಾರಣ ಆಗ್ತಿವೆ.. ಇದರಿಂದ ನಮ್ಮ ಸಮಾಜ ಹತ್ರಾಸ್ ನಂತಹ ಘಟನೆಗಳು ನಡೆಯುತ್ತಿವೆ..ಇದನ್ನು ತಡೆಯಲು ಮೈಸೂರು ಬ್ಯಾಂಕ್ ವೃತ್ತದಲ್ಲಿ ವಿಶ್ವಭಾರತಿ ಮತ್ತು ಮಹಾನಾಯಕ ತಂಡಗಳು ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಇತ್ತೀಚೆಗೆ ಉತ್ತರಪ್ರದೇಶದ ಹತ್ರಾಸ್ ನಲ್ಲಿ ಮೊನೀಷಾಳ ಮೇಲೆ ಪ್ರೇಮಿ ಸೇರಿ ನಾಲ್ಕು ಜನ ಅಮಾನುಷವಾಗಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದರು..ಈ ಘಟನೆಯ ಪುಷ್ಠೀಕರಣ ಎಂಬಂತೆ ಉತ್ತರಪ್ರದೇಶ ಪೊಲೀಸರು ಆರೋಪಿಗಳಿಗೆ ಶಿಕ್ಷೆ ನೀಡುವ ಬದಲಿಗೆ ಸಾಕ್ಷ್ಯನಾಶಕ್ಕೆ ಮುಂದಾದರು..ಮೃತಳ ಶವ ನೀಡದೆ ಸುಟ್ಟು ಸಾಕ್ಷ್ಯನಾಶ ಮಾಡಿದ್ದರು..ಇದರಿಂದ ನೊಂದ ಕುಟುಂಬಕ್ಕೆ ನ್ಯಾಯ ಮರೀಚಿಕೆಯಾಗಿದೆ..ಈ ಅವ್ಯವಸ್ಥೆಯ ವಿರುದ್ಧ ಇಂದು ಸಂಜೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ವಿಶ್ವಭಾರತಿ ಕ್ರೀಡಾ & ಸಾಂಸ್ಕೃತಿಕ ಸಂಸ್ಥೆ ಮೇಣದ ಬತ್ತಿ ಹಚ್ಚಿ ಪ್ರತಿಭಟನೆ ನಡೆಸಿತು.. ಜೊತೆಗೆ ಖಾಕಿ, ಖಾದಿ ಮತ್ತು ಖಾವಿಯ ನಡೆ ಮೊನೀಷಾಳಿಗೆ ದುರಂತವನ್ನು ಸಮಾದಿ ಮಾಡಿದೆ..ಇದರಿಂದ ಮೂರು ವೇಷದಾರಿಗಳನ್ನು ಬೆಂಕಿಯ ಕಿಡಿ ಸುಡುವ ರೀತಿ ಅಣುಕು ಪ್ರದರ್ಶನದ ಪ್ರತಿಭಟನೆ ಆಕರ್ಷಕವಾಗಿತ್ತು..ಇದೇ ವೇಳೆ ಮಾತನಾಡಿದ ವಿಶ್ವಭಾರತಿ ತಂಡದವರು ನಮ್ಮ ಮನೆಯ ಹೆಣ್ಣು ಮಗಳಿಗೆ ಈ ಗತಿಯಾಗಿದ್ದರೆ ಸುಮ್ಮನಿರುತ್ತಿದ್ದರಾ… ಇನ್ನಾದರು ರಾಜ್ಯ ಮತ್ತು ಕೇಂದ್ರ ಸರ್ಕಾರ ಪ್ರತಿಯೊಬ್ಬ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆಯನ್ನ ಖಡ್ಡಾಯಗೊಳಿಸಿಬೇಕು..ಆಗಲಾದರು ಈ ಅತ್ಯಾಚಾರ ಪ್ರಕರಣ ಕಡಿಮೆಯಾದೀತು.