4b7fc12f 6fa5 4343 b9ad f3e8b80d58bf

R R ನಗರ ಉಪಚುನಾವಣೆ – ʻ ಕೈʼ ಅಭ್ಯರ್ಥಿ ಕುಸುಮಾ ಅವರ ಜೊತೆ ಸ್ವಲ್ಪ ಹೊತ್ತು…!

POLATICAL STATE

ಕಾಂಗ್ರೆಸ್‌ ಪಕ್ಷ ಅಚ್ಚರಿ ಅಭ್ಯರ್ಥಿ ಕಣಕ್ಕೆ ಇಳಿಸುತ್ತೇವೆ ಎಂದು ಡಿ ಕೆ ರವಿ ಪತ್ನಿ ಕುಸುಮಾ ಹನುಮಂತರಾಯಪ್ಪ ಅವರಿಗೆ ಬಿ ಫಾರಂ ಕೊಟ್ಟಿದೆ, ವೃತ್ತಿಯಲ್ಲಿ ಉಪನ್ಯಾಸಕರಾದ ಇವರಿಗೆ ರಾಜಕೀಯಕ್ಕೆ ಬರಲು ಪ್ರೇರಣೆ ಏನು ಎಂಬ ಹಲವು ವಿಷಯಗಳನ್ನು ತಿಳಿಯಲು ಹೊರಟಾಗ ತಂದೆ ಹನುಮಂತರಾಯಪ್ಪ ಅವರ ಮನೆಯಲ್ಲಿ ಮಾತಿಗೆ ಸಿಕ್ಕರು ಕುಸುಮಾ….

2bc6675d 6c21 4837 aef5 a02ca0e72cd0
ಬಿ ಫಾರಂ ವಿತರಣೆ

೧ ಕಾಂಗ್ರಸ್‌  ಪಕ್ಷ ಆರ್‌ ಆರ್‌ ನಗರದಲ್ಲಿ ಅಚ್ಚರಿ ಅಭ್ಯರ್ಥಿ ಕಣಕ್ಕೆ ಇಳಿಸುತ್ತೇವೆ ಎಂದು ನಿಮ್ಮನ್ನು ಅಭ್ಯರ್ಥಿಮಾಡಿದೆ ಏನಂತೀರ..?

ನನಗೆ ಕಾಂಗ್ರೆಸ್‌ ಪಕ್ಷ ಆರ್‌ ಆರ್‌ ನಗರ ದ ಟಿಕೇಟ್‌ ಕೊಟ್ಟಿದ್ದಕ್ಕೆ ಪಕ್ಷದ ವರಿಷ್ಟರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಸೇರಿದಂತೆ ಎಲ್ಲಾ ನಾಯಕರಿಗೂ  ಕೃತಜ್ಙತೆ ಸಲ್ಲಿಸುತ್ತೇನೆ.

೨  ಉಪನ್ಯಾಸಕರಾಗಿದ್ದ ನಿಮಗೆ  ಚುನಾವಣಾ ರಾಜಕೀಯಕ್ಕೆ ಬರಬೇಕು ಅಂತ ಯಾಕೆ ಅನಿಸಿತು..?

ಉಪನ್ಯಾಸಕನಾಗಿದ್ದ ನನಗೆ ಕಾಲೇಜಿನಲ್ಲಿ ಮಕ್ಕಳು ನನ್ನ ಬಳಿ ಬಂದು ಸಮಸ್ಯೆ/ ಸಹಾಯ ಕೇಳಿದಾಗ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡಿ ಪರಿಹರಿಸಿ ಕೊಡುತ್ತಿದ್ದೆ ನಂತರ ಅವರು ಮುಖದಲ್ಲಿ ಕಾಣುತ್ತಿದ್ದ ಸಂತೋಷ ಕೃತಜ್ಞತಾ ಭಾವನೆ  ನನಗೆ ಹೆಚ್ಚು ಸಂತೋಷ ಕೊಡುತ್ತಿತ್ತು.

ರಾಜಕೀಯ ಅವಕಾಶ ಸಿಕ್ಕಿದರೆ ಇನ್ನು  ಹೆಚ್ಚು ಜನರಿಗೆ ಸಹಾಯ ಮಾಡಬಹುದು, ನನಗೆ ಆ ಸಾಮರ್ಥ್ಯ ಇದೆಯಲ್ಲ ಅನ್ನಿಸಿತು…. ಅದಕ್ಕೆ ರಾಜಕೀಯಕ್ಕೆ ಬಂದೆ. ನನಗೆ ಇಂದಿರಾಗಾಂಧಿ, ಸೋನಿಯಾ ಗಾಂಧಿ ಅವರು ಪ್ರೇರಣೆ.

೩ ನಿಮ್ಮ ಮೊದಲ  ಮತದಾರರ ಸಭೆಯ ಅನುಭವ ಹೇಗಿತ್ತು…?

ಯಶವಂತಪುರದಲ್ಲಿ ಮೊದಲ ಸಭೆ ಮಾಡಿದೆವು, ಜನರ ಪ್ರತಿಕ್ರಿಯೆ ನೋಡಿ ತುಂಬಾ ಸಂತೋಷ ಆಯ್ತು ಅವರು ನನ್ನನ್ನು. ಅರ್ಥ ಮಾಡಿಕೊಂಡಿರುವ ಆಯಾಮ ಕಂಡು ತುಂಬ ಖುಷಿ ಕೊಡುತು, ಅವರು ನನಗೆ ಬೆಂಬಲಿಸುತ್ತಾರೆ ಅನ್ನುವ ನಂಬಿಕೆ ಮೂಡಿತು.

9704777f 2d4d 4550 9dee 61cbc26afe7d
ಯಶವಂತಪುರ ದಲ್ಲಿ ಮೊದಲ ಸಭೆ

೪ ನಿಮ್ಮ ಪಕ್ಷದ ಸಾಧನೆ, ಬಿಜೆಪಿ ಸರ್ಕಾರದ ಮತ್ತು  ಹಿಂದಿನ ಶಾಸಕರ  ಯಾವ ವೈಪಲ್ಯಗಳನ್ನು ಜನರ ಮುಂದೆ ತೆಗೆದುಕೊಂಡು ಹೋಗುತ್ತೀರ…?

ಈ ಕ್ಷೇತ್ರದ ಸಂಸದರಾದ ಡಿ ಕೆ ಸುರೇಶ್‌ ಅವರು ಆರ್‌ ಆರ್‌ ನಗರಕ್ಕೆ ಕ್ವೇತ್ರ ಮಾಡಿರುವ ಕೆಲಸಗಳು, ಕಾಂಗ್ರೇಸ್‌ ಸರ್ಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ಬಂದ ಅನುದಾನ. ….

ಈ ಚುನಾವಣೆ ಯಾಕೆ ಬಂದಿದೆ ಎನ್ನುವುದು ಕ್ಷೇತ್ರದ ಜನರಿಗೆ ಗೊತ್ತಿದೆ, ಐದು ವರ್ಷಗಳ ಕಾಲ ನಮ್ಮ ಕಷ್ಟ, ನೋವು ನಲಿವು ಕೇಳುತ್ತಾರೆ ಅಂತ ನಂಬಿಕೆ ಇಟ್ಟು ಕೊಂಡು ಮತ ನೀಡಿದರು ಆದರೆ ಇಲ್ಲಿ ಹಾಗಿದ್ದು ಏನು..?  ಅದೇ ಜನಗಳನ್ನು ನೀವು ಬಿಟ್ಟು ಬೇರೆ ಪಕ್ಷಕ್ಕೆ ಹೋಗಿದ್ದೀರಿ.ಕ್ಷೇತ್ರದ ಜನರು ಎಲ್ಲಿ ಯಾರ ಬಳಿ ಹೋಗಬೇಕು ಯಾರ ಹತ್ತಿರ ಕಷ್ಡಗಳನ್ನು ಹೇಳಿಕೊಳ್ಳುತ್ತಾರೆ..?  ಸ್ಥಿರವಾಗಿ ಒಂದು ಪಕ್ಷದಲ್ಲಿ ನಿಲ್ಲದೆ ಇರುವವರು ಹೇಗೆ ಜನರ ಕಷ್ಟಗಳನ್ನು ನಿವಾರಣೆ ಮಾಡುತ್ತಾರೆ .ಇದೆಲ್ಲದಕ್ಕೂ ಉತ್ತರವಾಗಿ  ನನ್ನನ್ನು ನಂಬುವಂತೆ ಜನರಿಗೆ ಮನವಿ ಮಾಡುತ್ತೇನೆ. ರಾಜಕೀಯವಾಗಿ ಸೇವೆ ಮಾಡಲು ಬಂದಿದ್ದೇನೆ ಯಾವದೇ ರೀತಿ ವ್ಯಾಪಾರ- ವ್ಯವಹಾರ ಮಾಡಲು ಬಂದಿಲ್ಲ ಅದರ ಅವಶ್ಯಕತೆ ನನಗಿಲ್ಲ.

೫. ಆರ್‌ ಆರ್‌ ನಗರ ಕ್ಷೇತ್ರ ದೊಡ್ಡದು, ಹಲವಾರು ಸಮಸ್ಯೆಗಳಿವೆ ಅವುಗಳನ್ನು ನಿವಾರಿಸಲು ನಿಮ್ಮ ಪ್ಲಾನ್‌ ಏನು…?

ಈ ಕ್ಷೇತ್ರದಲ್ಲಿ ವಿಭಿನ್ನ ಸಮಸ್ಯೆಗಳಿವೆ, ಕುಡಿಯುವ ನೀರಿನ ಸಮಸ್ಯೆ, ಕಳಪೆ ಕಾಮಗಾರಿ, ನಡೆದಿದೆ, ಶಿಕ್ಷಣ ದ ಸಮಸ್ಯೆ,ರಸ್ತೆಗಳು ಸರಿಯಿಲ್ಲ  ಏರಿಯಾ ವಾರು ,ಇಲಾಖಾ ವಾರು ಅಧಿಕಾರಗಳ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇನೆ.

೬. ಮಹಿಳಾ ಪ್ರತಿನಿಧಿಯಾಗಿ ಮಹಿಳೆಯರ  ಸಮಸ್ಯೆಗೆ ಯಾವ ರೀತಿ ಸ್ಪಂದಿಸುತ್ತೀರ…?

ಇಡೀ ದೇಶದಲ್ಲಿ ಏನಾಗುತ್ತಿದೆ ಅಂತ ನೋಡುತ್ತಿದ್ದೇವೆ, ಮಹಿಳೆಯರ ಮೇಲೆ ದೈಹಿಕ ಅತ್ಯಾಚಾರ , ಮಾನಸಿಕ ಅತ್ಯಾಚಾರಕ್ಕಂತು ಲೆಕ್ಕನೇಯಿಲ್ಲ,ದಿನನಿತ್ಯ ಹೆಣ್ಣು ಮಕ್ಕಳ ಶೋಷಣೆ ಗಳು ನಿರಂತರವಾಗಿ ನಡೆಯುತ್ತಲೇ ಇದೆ, ಈ ಎಲ್ಲಾ ಸಮಸ್ಯೆಗಳನ್ನು ಧ್ವನಿ ಎತ್ತಲು ಅವಕಾಶ ಸಿಗಬೇಕು ನಾನು ಇಂತವರ ಧ್ವನಿ ಆಗುತ್ತಾನೆ..

೭. ಡಿ ಕೆ ರವಿ ತಾಯಿ, ನಿಮ್ಮ  ಅತ್ತೆ ಗೌರಮ್ಮ ಚುನಾವಣೆ ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಇದಕ್ಕೆ ಏನಂತೀರ…?

ಅವರು ದೊಡ್ಡವರಿದ್ದಾರೆ ಅವರಿಗೆ ಎಲ್ಲಾ ಹಕ್ಕು ಇದೆ. ನಾನು ಇನ್ನು ಚಿಕ್ಕವಳು ಅವರು ಏನೇ ಮಾತಾಡಿದರು ಅದನ್ನು ಆಶೀರ್ವಾದ ಅಂತ ತಿಳಿದು ಕೊಳ್ಳುತ್ತೇನೆ. ಅವರು ಆಶೀರ್ವಾದ ಮಾಡುತ್ತಲೆ ಇರಲಿ, ಮಾಡುತ್ತಲೆ ಇರುತ್ತಾರೆ ಅಂದುಕೊಂಡಿದ್ದೇನೆ.

  ವಿದ್ಯಾವಂತ ಹೆಣ್ಣು ಮಕ್ಕಳು ರಾಜಕೀಯಕ್ಕೆ ಬರಬೇಕು ಆಗಲೇ ದೇಶ ದ ಅಭಿವೃದ್ಧಿ ಸಾಧ್ಯ, ಮನೆಯಲ್ಲಿ ಕುಳಿತು ಆ ಕೆಲಸ ನಡೆಯುತ್ತಿಲ್ಲ ಈ ಕೆಲಸ ನಡಿತಿಲ್ಲಾ ಅಂದರೆ ಆಗಲ್ಲ ಹೆಚ್ಚು ಹೆಚ್ಚು ಯುವಕ ಯುವತಿಯರು ರಾಜಕೀಯಕ್ಕೆ ಬರಬೇಕು.

ವಿದ್ಯಾವಂತ ಯವತಿಯಾದ ನನಗೆ ಆರ್ ಆರ್ ನಗರ ಮತದಾರರು ಬೆಂಬಲಿಸುತ್ತಾರೆ ಎನ್ನುತ್ತಾ ಮಾತು ಮುಗಿಸಿದರು ಕುಸುಮ ಹನುಮಂತರಾಯಪ್ಪ, ನಂತರ ಸಪ್ತಸ್ವರ ತಂಡ All the best ಹೇಳಿ ಬಂದೆವು

ಕುಸುಮಾ ಅವರ ಮಾತು‌ ಇಲ್ಲಿದೆ ಕ್ಲಿಕ್‌ ಮಾಡಿ ಕೇಳಿ.…..

https://youtu.be/yAZ1Qu-yzhY