ತೀವ್ರ ಕುತೂಹಲ ಕೆರಳಿಸಿದ್ದ ಶಿರಾ, R R ನಗರ ಉಪಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ
*ಮಾನ್ಯ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಆಯುಕ್ತರು,ಬಿಬಿಎಂಪಿ ಮತ್ತು ಮಾನ್ಯ ನಗರ ಪೊಲೀಸ್ ಆಯುಕ್ತರು ಚುನಾವಣೆ ಸಿದ್ದತೆ ಗಳ ಬಗ್ಗೆ ಮಾಹಿತಿ ನೀಡಿದರು.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಪಚುನಾವಣೆಗೆ ಸಂಬಂಧಿಸಿದಣಮತೆ ಇಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಕೊನೆಗೊಂಡಿದೆ
ಚುನಾಚಣೆಗೆ 48 ಗಂಟೆಗೆ ಮುನ್ನ ಬಹಿರಂಗ ಪ್ರಚಾರ ಮುಕ್ತಾಯವಾಗಬೇಕು. ಇಂದು ಸಂಜೆ 6 ಗಂಟೆಯಿಂದ ಜನ ರಾಜರಾಜೇಶ್ವರಿ ನಗರದ ಮತದಾರರು ಹೊರತುಪಡಿಸಿ ಬೇರೆ ಯಾರೂ ಆ ಕ್ಷೇತ್ರದಲ್ಲಿ ವಾಸ್ತವ್ಯ ಇರುವ ಹಾಗಿಲ್ಲ. ಬೇರೆ ಕಡೆಯಿಂದ ಪ್ರಚಾರಕ್ಕೆ ಬಂದಿರುವ ಮುಖಂಡರೂ ಸಹಿತ ಹೊರಗಿನ ಎಲ್ಲರೂ ಆ ಕ್ಷೇತ್ರ ಬಿಟ್ಟು ಹೊರಬರಬೇಕು. ಇಲ್ಲವಾದಲ್ಲಿ ಅವರ ಮೇಲೆ ಪ್ರಕರಣ ದಾಖಲಾಗಲಿದೆ ಎಂದು ಮಾನ್ಯ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಆಯುಕ್ತರು ರವರು ತಿಳಿಸಿದರು.
ಚುನಾವಣೆಗೆ ಹೆಚ್ಚುವರಿ ಸಿದ್ಧತೆಗಳನ್ನು ಮಾಡಲಾಗಿದ್ದು, ಈಗಾಗಲೇ ಇದ್ದ 27 ಎಫ್.ಎಸ್.ಟಿ ತಂಡಗಳ ಜೊತೆಗೆ ವಾರ್ಡ್ ಗಳಿಗೆ ಹೆಚ್ಚುವರಿ 9 ಫ್ಲೈಯಿಂಗ್ ಸ್ಕ್ಯಾಡ್, 36 ಮಾರ್ಷಲ್ಸ್ ಗಳ ನಿಯೋಜನೆ, ವೀಡಿಯೋ ವಿ.ವಿ.ಟಿ ಟೀಂಗೆ 5 ತಂಡ, 56 ಸೆಕ್ಟರ್ ಆಫೀಸರ್ಸ್, 9 ಅಬಕಾರಿ ಫ್ಲೈಯಿಂಗ್ ಸ್ಕ್ವಾಡ್, ಹೆಚ್ಚಿನ ವಾಹನ ತಪಾಸಣೆ, ಕಲ್ಯಾಣ ಮಂಟಪ ಮೊದಲಾದ ಕಡೆ ಹೆಚ್ಚು ಜನ ಸೇರದಂತೆ ನೋಡಿಕೊಳ್ಳಲಾಗುತ್ತದೆ. ಚುನಾವಣಾ ಆಯೋಗದ ಆದೇಶದಂತೆ ಪತ್ರಿಕಾ ಮತ್ತಿ ವಿದ್ಯುನ್ಮಾನ ಮಾಧ್ಯಮಗಳಲ್ಲಿ 3ನೇ ತಾರೀಖು ಬೆಳಗ್ಗೆ 6 ಗಂಟೆಯಿಂದ 7 ನೇ ತಾರೀಖಿನ ಸಂಕೆ 6.30 ಗಂಟೆವರೆಗೆ Exit Poll ಮತ್ತು Opinion Polls ಪ್ರಸಾರ ಮಾಡುವಹಾಗಿಲ್ಲ ಎಂದರು.
ನಾಳೆ ಬೆಳಗ್ಗೆ ಮಸ್ಟರಿಂಗ್ ಸೆಂಟರ್ ತೆರಯಲಿದ್ದೇವೆ. ಚುನಾವಣಾ ಸಿಬ್ಬಂದಿಗಳು ಜ್ಞಾನಾಕ್ಷಿ ವಿದ್ಯಾನಿಕೇತನದಲ್ಲಿ ಸೇರಲಿದ್ದಾರೆ. ಮತಯಂತ್ರಗಳನ್ನು ತೆಗೆದುಕೊಂಡು ಮಧ್ಯಾಹ್ನದ ವೇಳೆ ನಿರ್ದಿಷ್ಟ ಮತಗಟ್ಟೆಗೆ ಹೋಗಲಿದ್ದಾರೆ. ಬುಧವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದೆ. ಪ್ರತೀ ಮತಗಟ್ಟೆಗೆ ಒಬ್ಬೊಬ್ಬ ಆರೋಗ್ಯಾಧಿಕಾರಿ ನೇಮಕ ಮಾಡಲಾಗಿದ್ದು, ಮಾಸ್ಕ್ ಧರಿಸಿರಬೇಕು. ಸ್ಯಾನಿಟೈಸ್ ಮಾಡಲು, ಕೈ ಗ್ಲೌಸ್ ಕೊಡಲಾಗುವುದು ಎಂದರು. ಚುನಾವಣೆ ಸಿಬ್ಬಂದಿಗಳು, ಇ.ವಿ.ಎಮ್, ವಿವಿಪ್ಯಾಟ್ ಗಳ ರವಾನೆಗೆ 125 ಬಿಎಮ್ ಟಿಸಿ, 50 ಮಿನಿ ಬಸ್ ಗಳನ್ನು ನಿಯೋಜಿಸಲಾಗಿದೆ ಎಂದರು.
678 ಮತಗಟ್ಟೆಗಳಲ್ಲಿ 100 ಮೈಕ್ರೋ ಅಬ್ಸರ್ವರ್ ಗಳನ್ನು ನಿಯೋಜನೆ ಮಾಡಲಾಗಿದ್ದು, 40 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್, 50 ಕಡೆ ಸಿಸಿ ಕ್ಯಾಮೆರಾ ಹಾಗೂ 2 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
*ನಗರ ಪೊಲೀಸ್ ಆಯುಕ್ತರು ಕಮಲ್ ಪಂಥ್ ಮಾತನಾಡಿ, ಎಲ್ಲಿಯೂ ಹೆಚ್ಚಿನ ಸಮಸ್ಯೆ ಆಗದೆ ಚುನಾವಣಾ ಸಿದ್ಧತೆ ಮಾಡಲಾಗಿದೆ. ಪ್ರಚಾರದಲ್ಲಿ ಹೆಚ್ಚಿನ ತೊಡಕು ಬಂದಿಲ್ಲ. ಹೆಚ್ಚಿನ ಚಟುವಟಿಕೆ ಇತ್ತು ಹೀಗಾಗಿ ಪ್ರತೀ ದಿನ ಮೂವತ್ತು ತಂಡವನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಇವತ್ತು ಪ್ರಚಾರದ ಕೊನೇ ದಿನ ಇದೆ. ಓಟಿಂಗ್ ಡೇ ದಿನಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿದೆ. 82 ಕ್ರಿಟಿಕಲ್, 596 ಸಾನ್ಯ ಮತಗಟ್ಟೆಗಳಿಗೆ ವಿಶೇಷ ರೀತಿಯಲ್ಲಿ ಭದ್ರತೆ ನೀಡಲಾಗಿದೆ. ಒಟ್ಟು 2,563 ಮಂದಿ ಭದ್ರತಾ ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದರು.
ಚುನಾವಣೆ ಹಿನ್ನಲೆ ಇಂದು 5 ಗಂಟೆಯಿಂದ 3.11.2020 ರ ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯನಿಷೇಧಿಸಲಾಗಿದೆ. ಅಲ್ಲದೆ ಇಂದು 6 ಗಂಟೆಯಿಂದ 4ನೇ ತಾರೀಖಿನ ಸಂಜೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಆರ್.ಆರ್.ನಗರ ಸೂಕ್ಷ್ಮ ಪ್ರದೇಶ ಆಗಿರುವುದರಿಂದ 102 ಮೊಬೈಲ್ ಸ್ವ್ಯಾಡ್ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದ್ದಾರೆ. 32 ಹೊಯ್ಸಳ ಮೊಬೈಲ್ ಗಳನ್ನು ಬೇರೆಕಡೆಯಿಂದ ನೇಮಿಸಲಾಗಿದೆ. 91 ಚೀತಾ ತಂಡಗಳು ಸೇರಿ ಒಟ್ಟು 123 ಪೊಲೀಸರು ಕೂಡಾ ತಕ್ಷಣ ಸ್ಪಂದಿಸಲು ಸಿದ್ಧರಿರುತ್ತಾರೆ. ಭದ್ರತೆ, ಮೇಲ್ವಿಚಾರಣೆಗಾಗಿ ಒಟ್ಟು 3 ಡಿಸಿಪಿ, 8 ಎಸಿಪಿ ಎಲ್ಲ ಸೇರಿ 2,563 ಸಿಬ್ಬಂದಿಗಳಿರಲಿದ್ದಾರೆ. ಈಗಾಗಲೇ ರೂಟ್ ಮಾರ್ಚ್ ಮಾಡಿದ್ದಾರೆ. 19 ಕೆ.ಎಸ್ ಆರ್ ಪಿ ತಂಡಗಳನ್ನು, 20 ಸಿಎಆರ್ ತುಕಡಿಗಳನ್ನು ನೇಮಿಸಲಾಗಿದೆ. ಈಗಾಗಲೇ 306 ಶಸ್ತ್ರಾಸ್ತ್ರಗಳನ್ನು ವಶಪಡಿಸಲಾಗಿದೆ. ಇವತ್ತು ಆರು ಗಂಟೆಯಿಂದ ಚುನಾವಣೆಗೆ ಅಡ್ಡಿ ಮಾಡುವವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.