images

Grama Panchayat Elections : ʻ ಗ್ರಾಮ ಸಮರ ʼ ಕ್ಕೆ ದಿನಾಂಕ ಪ್ರಕಟ : ಡಿ 22 ಮತ್ತು 27 ಕ್ಕೆ ಮತದಾನ

STATE POLATICAL

Grama Panchayat Elections: ಕರ್ನಾಟಕ ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಪ್ರಕಟಿಸಿದ ಚುನಾವಣಾ ಆಯೋಗ; ಡಿ. 22 ಮತ್ತು 27ಕ್ಕೆ ಮತದಾನ

ಬೆಂಗಳೂರು :- ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯಿತಿ ಚುನಾವಣಾ  ದಿನಾಂಕ ವನ್ನು ಇಂದು ಪ್ರಕಟಿಸಿದೆ. ಕೊರೋನಾ  ಕಾರಣದಿಂದ ಮುಂದೂಡಲ್ಪಟ್ಟಿದ್ದ ಗ್ರಾಮ ಪಂಚಾಯತಿ ಚುನಾವಣೆಗೆ ಇಂದು ದಿನಾಂಕ ಘೋಷಣೆಯಾಗಿದೆ. ರಾಜ್ಯ ಚುನಾವಣಾ ಆಯೋಗವು ಇಂದು ಸುದ್ದಿಗೋಷ್ಠಿ ನಡೆಸಿ ಗ್ರಾ.ಪಂ.ಚುನಾವಣೆ ನಡೆಯುವ ದಿನಾಂಕವನ್ನು ಘೋಷಿಸಿದೆ.  ಕೊರೋನಾ  ಪಾಸಿಟಿವ್ ಇರುವ ರೋಗಿಗಳಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿಯ ನೆರವಿನೊಂದಿಗೆ  ಮತದಾನ ಮಾಡಲು   ಮತದಾನ ಅವಧಿಯ ಕೊನೆಯ ಒಂದು ಗಂಟೆ ಅವಕಾಶ ನೀಡಲಾಗುತ್ತದೆ ಎಂದಿದೆ ಆಯೋಗ.

ಮೊದಲ ಹಂತದ ಮತದಾನ ಡಿಸೆಂಬರ್ 22ರಂದು, ಎರಡನೇ ಹಂತದ ಮತದಾನ ಡಿ.27ರಂದು ನಡೆಯಲಿದೆ.  ರಾಜ್ಯದ 30 ಜಿಲ್ಲೆಗಳ ಗ್ರಾಮ ಪಂಚಾಯತಿಗೆ ಚುನಾವಣೆ ನಡೆಯಲಿದ್ದು,  ಪ್ರತಿ ಜಿಲ್ಲೆಯ ಶೇಕಡ 5೦ ತಾಲ್ಲೂಕುಗಳಲ್ಲಿ  ಮೊದಲ ಹಂತ ಉಳಿದ ತಾಲ್ಲೂಕು ಎರಡನೆ ಹಂತ ದಲ್ಲಿ ಚುನಾವಣೆ ನಡೆಯಲಿದೆ

ಮೊದಲ ಹಂತದಲ್ಲಿ 113 ತಾಲ್ಲೂಕು, ಎರಡನೆ ಹಂತದಲ್ಲಿ 113 ತಾಲ್ಲೂಕುಗಳ  5762 ಗ್ರಾಮ ಪಂಚಾಯತಿಗೆ ಚುನಾವಣೆ ನಡೆಯಲಿದೆ.  92,121 ಸದಸ್ಯರ ಆಯ್ಕೆಗೆ ಮತದಾನ ನಡೆಯಲಿದೆ.

ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆ ತನಕ ಮತದಾನ ಮಾಡಲು ಕಾಲಾವಕಾಶ ನೀಡಲಾಗಿದೆ. ಆಯಾ ತಾಲೂಕು ಕೇಂದ್ರಗಳಲ್ಲಿ ಡಿಸೆಂಬರ್ 30ರಂದು ಎರಡು ಹಂತದ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯುಕ್ತರು ತಿಳಿಸಿದ್ದಾರೆ.

ಮೊದಲ ಹಂತ

7/12/2020 –   ಅಧಿಸೂಚನೆ ಪ್ರಕಟಣೆ ಮತ್ತು ನಾಮಪತ್ರ ಸಲ್ಲಿಕೆ ಆರಂಭ

11/12/2020 –  ನಾಮಪತ್ರ ಸಲ್ಲಿಕೆ ಕೊನೆಯ ದಿನಾಂಕ

12/12/2020 – ನಾಮಪತ್ರ ಪರಿಶೀಲನೆ

14/12/ 2020 – ನಾಮಪತ್ರ ಹಿಂಪಡೆಯಲು ಕೊನೆಯ ದಿನ

22/12/2020 – ಚುನಾವಣೆ

30/12/2020 – ಮತ ಎಣಿಕೆ

————————————-

ಎರಡನೆ ಹಂತ

11/12/2020 – ಅಧಿಸೂಚನೆ ಪ್ರಕಟಣೆ ಮತ್ತು ನಾಮಪತ್ರ ಸಲ್ಲಿಕೆ ಆರಂಭ

16/12/2020 —  ನಾಮಪತ್ರ ಸಲ್ಲಿಕೆ ಕೊನೆಯ ದಿನಾಂಕ

17,12/2020 – ನಾಮಪತ್ರ ಪರಿಶೀಲನೆ

19/12/2020 – ನಾಮಪತ್ರ ಹಿಂಪಡೆಯಲು ಕೊನೆಯ ದಿನ

27/12/2020 – ಚುನಾವಣೆ

30/12/2020 – ಮತ ಎಣಿಕೆ