IMG 20201129 214113

ಪ್ರಧಾನಿ ಮೋದಿಯವರ ‘ಮನ್ ಕಿ ಬಾತ್….!

National - ಕನ್ನಡ

 

ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕಿ ಬಾತ್ 2.0’ – 18 ನೇ ಕಂತಿನ ಭಾಷಣದ ಕನ್ನಡ ಅವತರಣಿಕೆ

ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಮನದ ಮಾತಿನಆರಂಭದಲ್ಲಿಯೇ, ಇಂದು ನಾನು ನಿಮ್ಮೆಲ್ಲರೊಂದಿಗೆಒಂದು ಸಂತೋಷದ ಸುದ್ದಿಯನ್ನುಹಂಚಿಕೊಳ್ಳಬಯಸುತ್ತೇನೆ. ದೇವಿ ಅನ್ನಪೂರ್ಣೆಯಒಂದು ಪುರಾತನ ಪ್ರತಿಮೆ ಕೆನಡಾದಿಂದ ಭಾರತಕ್ಕೆ ಮರಳಿಬರುತ್ತಿದೆ ಎಂದು ಕೇಳಿ ಪ್ರತಿಯೊಬ್ಬ ಭಾರತೀಯನಿಗೆಹೆಮ್ಮೆಯೆನಿಸುತ್ತದೆ. ಈ ಮೂರ್ತಿಯನ್ನು ಸುಮಾರು 100ವರ್ಷಕ್ಕೂ ಹಿಂದೆ 1913 ರ ಆಸುಪಾಸು ವಾರಣಾಸಿಯಒಂದು ದೇವಾಲಯದಿಂದ ಕಳ್ಳತನ ಮಾಡಿ ದೇಶದಿಂದಹೊರಕ್ಕೆ ರವಾನಿಸಲಾಗಿತ್ತು. ಈ ಪುಣ್ಯ ಕಾರ್ಯವನ್ನುಯಶಸ್ವಿಗೊಳಿಸಲು ಕೈಜೋಡಿಸಿದ ಕೆನಡಾ ಸರ್ಕಾರ ಮತ್ತುಎಲ್ಲ ಜನರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಕಾಶಿಯೊಂದಿಗೆ ಮಾತೆ ಅನ್ನಪೂರ್ಣೆಯ ಸಂಬಂಧವಿಶೇಷವಾದದ್ದು. ಈಗ ಆ ಪ್ರತಿಮೆ ಮರಳಿಬರುತ್ತಿರುವುದು ನಮ್ಮೆಲ್ಲರಿಗೂ ನೆಮ್ಮದಿ ತಂದಿದೆ. ತಾಯಿಅನ್ನಪೂರ್ಣೆ ಪ್ರತಿಮೆಯಂತೆಯೇ ನಮ್ಮ ಪರಂಪರೆಯಅನೇಕ ಬಹುಮೂಲ್ಯ ಸಂಪತ್ತು ಅಂತಾರಾಷ್ಟ್ರೀಯಕಳ್ಳಸಾಗಣೆದಾರರ ಪಾಲಾಗುತ್ತಲೇ ಇದೆ. ಇಂಥಗುಂಪುಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇವನ್ನುಅತೀ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತವೆ. ಈಗಇವುಗಳ ಮೇಲೆ ಕಟ್ಟುನಿಟ್ಟು ಹೇರಲಾಗಿದೆ. ನಮ್ಮಬಹುಮೂಲ್ಯ ಸಂಪತ್ತನ್ನು ಮರಳಿ ತರಲು ಭಾರತ ತನ್ನಪ್ರಯತ್ನಗಳನ್ನು ಹೆಚ್ಚಿಸಿದೆ. ಇಂಥ ಪ್ರಯತ್ನಗಳ ಪರಿಣಾಮಕಳೆದ ಕೆಲವು ವರ್ಷಗಳಲ್ಲಿ ಭಾರತ ಹಲವಾರುಪ್ರತಿಮೆಗಳು ಮತ್ತು ಕಲಾಕೃತಿಗಳನ್ನು ಹಿಂದಕ್ಕೆಪಡೆಯುವಲ್ಲಿ ಯಶಸ್ವಿಯಾಗಿದೆ. ತಾಯಿ ಅನ್ನಪೂರ್ಣೆಯಪ್ರತಿಮೆಯನ್ನು ಹಿಂಪಡೆಯುವಿಕೆ ಜೊತೆಗೆ ಕೆಲ ದಿನಗಳಹಿಂದೆಯಷ್ಟೇ ವಿಶ್ವ ಪರಂಪರಾ ಸಪ್ತಾಹ ಆಚರಿಸಿರುವುದುಕಾಕತಾಳೀಯವೆನಿಸಿದೆ. ವಿಶ್ವ ಪರಂಪರಾ ಸಪ್ತಾಹ, ಸಂಸ್ಕೃತಿ ಪ್ರೀಯರಿಗೆ ಹಿಂದಿನ ಕಾಲಕ್ಕೆ ಹೋಗಲು ಮತ್ತುಅವುಗಳ ಐತಿಹಾಸಿಕ ಮಹತ್ವದ ಮಜಲುಗಳನ್ನುಅರಿಯಲು ಒಂದು ಉತ್ತಮ ಅವಕಾಶವನ್ನುಒದಗಿಸುತ್ತದೆ. ಕೊರೊನಾ ಸಾಂಕ್ರಾಮಿಕದಹೊರತಾಗಿಯೂ ಈ ಬಾರಿ ವಿಶಿಷ್ಟ ರೀತಿಯಲ್ಲಿ ಈಪರಂಪರಾ ಸಪ್ತಾಹ ಆಚರಿಸಿರುವುದನ್ನು ನಾವುಕಂಡಿದ್ದೇವೆ. ಸಂಕಷ್ಟದಲ್ಲಿ ಸಂಸ್ಕೃತಿ ಬಹಳಉಪಯೋಗಕ್ಕೆ ಬರುತ್ತದೆ. ಇದರಿಂದ ಮುಕ್ತಿ ಹೊಂದಲುಪ್ರಮುಖ ಪಾತ್ರ ವಹಿಸುತ್ತದೆ. ತಂತ್ರಜ್ಞಾನದಮಾಧ್ಯಮದಿಂದಲೂ ಸಂಸ್ಕೃತಿ ಒಂದು ಭಾವನಾತ್ಮಕಚೈತನ್ಯದಂತೆ ಕೆಲಸ ಮಾಡುತ್ತದೆ. ಇಂದು ದೇಶದಲ್ಲಿಎಷ್ಟೋ ವಸ್ತು ಸಂಗ್ರಹಾಲಯಗಳು ಮತ್ತುಗ್ರಂಥಾಲಯಗಳು ತಮ್ಮ ಸಂಗ್ರಹವನ್ನು ಸಂಪೂರ್ಣವಾಗಿಡಿಜಿಟಲೀಕರಣಗೊಳಿಸುವಲ್ಲಿ ಕೆಲಸ ಮಾಡುತ್ತಿವೆ. ದೆಹಲಿಯಲ್ಲಿ ನಮ್ಮ ರಾಷ್ಟ್ರೀಯ ಸಂಗ್ರಹಾಲಯ ಈನಿಟ್ಟಿನಲ್ಲಿ ಪ್ರಶಂಸನೀಯ ಪ್ರಯತ್ನಗಳನ್ನು ಮಾಡಿದೆ. ರಾಷ್ಟ್ರೀಯ ಸಂಗ್ರಹಾಲಯದ ಮೂಲಕ ಸುಮಾರು 10ವರ್ಚುವಲ್ ಗ್ಯಾಲರಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿಕಾರ್ಯನಿರ್ವಹಿಸುತ್ತಿದೆ – ತುಂಬಾಮಜವಾಗಿದೆಯಲ್ಲವೇ! ಈಗ ನೀವು ಮನೆಯಲ್ಲಿಯೇಕುಳಿತು ದೆಹಲಿಯ ರಾಷ್ಟ್ರೀಯ ಸಂಗ್ರಹಾಲಯದಗ್ಯಾಲರಿಗಳ ಪ್ರವಾಸ ಕೈಗೊಳ್ಳಬಹುದು. ಇಲ್ಲಿ ಒಂದೆಡೆಸಂಸ್ಕೃತಿಯ ಪರಂಪರೆಯನ್ನು ತಂತ್ರಜ್ಞಾನದಸಹಾಯದಿಂದ ಹೆಚ್ಚೆಚ್ಚು ಜನರಿಗೆ ತಲುಪಿಸುವುದು ಎಷ್ಟುಮುಖ್ಯವೋ ಅದೇ ರೀತಿ ಮತ್ತೊಂದೆಡೆ ಇಂತಹ ಅಮೂಲ್ಯವಸ್ತುಗಳ ಸಂರಕ್ಷಣೆಗೆ ತಂತ್ರಜ್ಞಾನದ ಬಳಕೆಯೂ ಅಷ್ಟೇಮಹತ್ವಪೂರ್ಣವಾಗಿದೆ. ಇತ್ತೀಚೆಗೆ ಒಂದು ಆಸಕ್ತಿಕರಪ್ರಾಜೆಕ್ಟ್ ಬಗ್ಗೆ ಓದುತ್ತಿದ್ದೆ. ನಾರ್ವೆಯ ಉತ್ತರದಲ್ಲಿ ಸ್ವಾಲ್ಬಾರ್ಡ್ ಎಂಬ ಹೆಸರಿನ ದ್ವೀಪವಿದೆ. ಈ ದ್ವೀಪದಲ್ಲಿಆರ್ಕ್ಟಿಕ್ ವರ್ಲ್ಡ್ ಆರ್ಕೈವ್ ಎಂಬ ಯೋಜನೆಯನ್ನುರೂಪಿಸಲಾಗಿದೆ. ಯಾವುದೇ ಪ್ರಾಕೃತಿಕ ಅಥವಾ ಮಾನವನಿರ್ಮಿತ ವಿಪತ್ತು ಯಾವುದೇ ಪ್ರಭಾವ ಬೀರದಂತೆ ಈಆರ್ಕೈವ್ ನಲ್ಲಿ ಅಮೂಲ್ಯ ಪರಂಪರಾ ದತ್ತಾಂಶವನ್ನುಸಂರಕ್ಷಿಸಲಾಗಿದೆ. ಅಜಂತಾ ಗುಹೆಗಳ ಪರಂಪರೆಯನ್ನುಡಿಜಿಟಲೀಕರಣಗೊಳಿಸಿ ಈ ಯೋಜನೆಯಲ್ಲಿಸೇರಿಸಲಾಗುತ್ತಿದೆ ಎಂದು ಇತ್ತೀಚೆಗೆ ಮಾಹಿತಿ ಲಭಿಸಿದೆ. ಇದರಲ್ಲಿ ಅಜಂತಾ ಗುಹೆಗಳ ಸಂಪೂರ್ಣ ನೋಟಲಭಿಸಲಿದೆ. ಇದರಲ್ಲಿ ಡಿಜಿಟಲೀಕರಣಗೊಳಿಸಿದ ಮತ್ತುಪುನರುಜ್ಜೀವ ನೀಡಲಾದ ವರ್ಣಚಿತ್ರಗಳ ಜೊತೆಗೆ ಇದಕ್ಕೆಸಂಬಂಧಿಸಿದ ದಾಖಲೆಗಳು ಮತ್ತು ಉಲ್ಲೇಖಗಳುಲಭ್ಯವಿವೆ. ಸ್ನೇಹಿತರೆ, ಮಹಾಮಾರಿ ಒಂದೆಡೆ ನಮ್ಮ ಕೆಲಸಮಾಡುವ ರೀತಿ ನೀತಿಗಳನ್ನು ಬದಲಾಯಿಸಿದ್ದರೆಮತ್ತೊಂದೆಡೆ ಪ್ರಕೃತಿಯನ್ನು ಹೊಸ ಬಗೆಯಲ್ಲಿಅನುಭವಿಸುವ ಅವಕಾಶವನ್ನೂ ನೀಡಿದೆ. ಪ್ರಕೃತಿಯನ್ನುನೋಡುವ ನಮ್ಮ ದೃಷ್ಟಿಕೋನ ಕೂಡ ಬದಲಾಗಿದೆ. ಈಗನಾವು ಚಳಿಗಾಲಕ್ಕೆ ಕಾಲಿಡುತ್ತಿದ್ದೇವೆ. ನಮಗೆ ಪ್ರಕೃತಿಯವಿಭಿನ್ನ ಬಣ್ಣಗಳು ನೋಡಲು ಸಿಗುತ್ತವೆ. ಕೆಲ ದಿನಗಳಿಂದಅಂತರ್ಜಾಲದಲ್ಲಿ ಚೆರ್ರಿ ಬ್ಲಾಸಮ್ ಗಳ ಚಿತ್ರಗಳು ವೈರಲ್ಆಗಿವೆ.  ನಾನು ಚೆರ್ರಿ ಬ್ಲಾಸಮ್ ಗಳ ಬಗ್ಗೆಮಾತನಾಡುತ್ತಿದ್ದೇನೆ ಎಂದಾದರೆ ಜಪಾನಿನ ಈ ಪ್ರಸಿದ್ಧಪ್ರತೀಕದ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ನೀವುಆಲೋಚಿಸುತ್ತಿರಬಹುದು. ಆದರೆ ಹಾಗಿಲ್ಲ –  ಇವುಜಪಾನ್ ನ ಚಿತ್ರಗಳಲ್ಲ. ಇವು ನಮ್ಮ ಮೇಘಾಲಯದಶಿಲ್ಲಾಂಗ್ ಚಿತ್ರಗಳಾಗಿವೆ. ಮೇಘಾಲಯದಸೌಂದರ್ಯವನ್ನು ಈ ಚೆರ್ರಿ ಬ್ಲಾಸಮ್ ಗಳು ಮತ್ತಷ್ಟುಹೆಚ್ಚಿಸಿವೆ.

ಸ್ನೇಹಿತರೆ, ಈ ತಿಂಗಳು 12 ನವೆಂಬರ್ ನಿಂದ ಡಾಕ್ಟರ್ಸಲೀಂ ಅಲಿ ಅವರ 125 ನೇ ಜಯಂತಿ ಸಮಾರಂಭಆರಂಭಗೊಂಡಿದೆ. ಡಾಕ್ಟರ್ ಸಲೀಂ ಅವರು ಪಕ್ಷಿಗಳವಿಶ್ವದಲ್ಲಿ ಪಕ್ಷಿವೀಕ್ಷಣೆ ಕುರಿತು ಗಮನಾರ್ಹ ಕೆಲಸಮಾಡಿದ್ದಾರೆ. ವಿಶ್ವದ ಪಕ್ಷಿವೀಕ್ಷಣೆ ಆಸಕ್ತರನ್ನುಭಾರತದೆಡೆಗೆ ಆಕರ್ಷಿಸುವ ಕೆಲಸವನ್ನೂ ಮಾಡಿದ್ದಾರೆ. ನಾನು ಎಂದಿನಿಂದಲೂ ಪಕ್ಷಿವೀಕ್ಷಣೆ ಆಸಕ್ತರಪ್ರಶಂಸಕನಾಗಿದ್ದೇನೆ. ಬಹಳ ಧೈರ್ಯದಿಂದ ಅವರುತಾಸುಗಟ್ಟಲೆ ಬೆಳಿಗ್ಗೆಯಿಂದ ಸಂಜೆವರೆಗೆ ಪಕ್ಷಿವೀಕ್ಷಣೆಮಾಡಬಲ್ಲರು, ಪ್ರಕೃತಿಯ ಅಮೂಲ್ಯ ದೃಶ್ಯಾವಳಿಗಳಆನಂದವನ್ನು ಅನುಭವಿಸಬಲ್ಲರು ಮತ್ತು ತಮ್ಮಜ್ಞಾನವನ್ನು ನಮ್ಮೆಲ್ಲರಿಗೂ ತಲುಪಿಸುತ್ತಿರುತ್ತಾರೆ. ಭಾರತದಲ್ಲೂ ಬಹಳಷ್ಟು ಪಕ್ಷಿವೀಕ್ಷಣೆ ಸಂಘಗಳುಸಕ್ರಿಯವಾಗಿವೆ. ನೀವೂ ಈ ವಿಷಯದಲ್ಲಿ ಆಸಕ್ತಿಬೆಳೆಸಿಕೊಳ್ಳಿ. ನನ್ನ ಓಡಾಟದ ಜೀವನದಲ್ಲಿ ನನಗೂ ಕೆಲದಿನಗಳ ಹಿಂದೆ ಕೆವಡಿಯಾದಲ್ಲಿ ಪಕ್ಷಿಗಳೊಂದಿಗೆ ಕಾಲಕಳೆಯುವ ಬಹಳ ಸ್ಮರಣೀಯ ಅವಕಾಶ ದೊರೆಯಿತು. ಪಕ್ಷಿಗಳೊಂದಿಗೆ ಕಳದೆ ಸಮಯ ನಿಮ್ಮನ್ನುಪ್ರಕೃತಿಯೊಂದಿಗೆ ಬೆರೆಸುತ್ತದೆ, ಪರಿಸರದ ಬಗ್ಗೆಯೂಪ್ರೇರಣೆಯನ್ನು ಜಾಗೃತಗೊಳಿಸುತ್ತದೆ.

ನನ್ನ ಪ್ರಿಯ ದೇಶವಾಸಿಗಳೇ, ಭಾರತದ ಸಂಸ್ಕೃತಿ ಮತ್ತುಶಾಸ್ತ್ರ ಎಂದೆಂದಿಗೂ ಸಂಪೂರ್ಣ ವಿಶ್ವಕ್ಕೆ ಆಕರ್ಷಣೆಯಕೇಂದ್ರವಾಗಿದೆ. ಹಲವಾರು ಜನರು ಇವುಗಳನ್ನುಅರಸುತ್ತಾ ಭಾರತಕ್ಕೆ ಬಂದಿದ್ದಾರೆ ಮತ್ತು ಎಂದೆಂದಿಗೂಇಲ್ಲಿಯವರೇ ಆಗಿ ಉಳಿದಿದ್ದಾರೆ. ಅದರಲ್ಲಿ ಕೆಲವರುತಮ್ಮ ದೇಶಗಳಿಗೆ ಮರಳಿ ಈ ಸಂಸ್ಕೃತಿಯಸಂವಹನಕಾರರಾಗಿದ್ದಾರೆ. ನನಗೆ “ಜೊನಾಸ್ ಮಸೆಟ್ಟಿ” ಅವರ ಕೆಲಸದ ಬಗ್ಗೆ ಅರಿಯುವ ಅವಕಾಶ ದೊರೆಯಿತು. ಇವರನ್ನು ‘ವಿಶ್ವನಾಥ’ ಎಂಬ ಹೆಸರಿನಿಂದಲೂಗುರುತಿಸಲಾಗುತ್ತದೆ. ಜೊನಾಸ್ ಬ್ರೆಜಿಲ್ ನಲ್ಲಿ ಜನರಿಗೆವೇದಾಂತ ಮತ್ತು ಭಗವದ್ಗೀತೆಯ ಪಾಠ ಮಾಡುತ್ತಾರೆ. ಅವರು ವಿಶ್ವವಿದ್ಯಾ ಎಂಬ ಹೆಸರಿನ ಸಂಸ್ಥೆಯಸಂಚಾಲಕರಾಗಿದ್ದಾರೆ. ಅದು ರಿಯೋ ಡಿ ಜನೈರೊದಿಂದಒಂದು ಗಂಟೆಯ ದೂರದಲ್ಲಿ ಪೆಟ್ರೊಪೋಲಿಸ್ ಬೆಟ್ಟದಮೇಲಿದೆ. ಜೊನಾಸ್ ಮೆಕ್ಯಾನಿಕಲ್ ಇಂಜೀನಿಯರಿಂಗ್ಓದಿ ಶೇರು ಮಾರುಕಟ್ಟೆಯಲ್ಲಿ ತನ್ನದೇ ಕಂಪನಿಯಲ್ಲಿಕೆಲಸ ಮಾಡಿದ ನಂತರ, ಅವರ ಧ್ಯಾನ ಭಾರತೀಯಸಂಸ್ಕೃತಿ ಮೇಲೆ ಅದರಲ್ಲೂ ವಿಶೇಷವಾಗಿವೇದಾಂತದೆಡೆಗೆ ಆಕರ್ಷಿತವಾಯಿತು. ಶೇರು ಪೇಟೆಯಿಂದಆಧ್ಯಾತ್ಮಿಕದೆಡೆಗೆ ನಿಜಕ್ಕೂ ಅವರ ಯಾತ್ರೆ ಬಹುಸುದೀರ್ಘವಾದದ್ದು.  ಜೊನಾಸ್ ಭಾರತದಲ್ಲಿ ವೇದಾಂತದರ್ಶನದ ಅಧ್ಯಯನ ಮಾಡಿದರು. 4 ವರ್ಷಗಳವರೆಗೆಅವರು ಕೊಯಂಬತ್ತೂರಿನ ಆರ್ಷ ವಿದ್ಯಾಗುರುಕುಲದಲ್ಲಿದ್ದರು. ಜೊನಾಸ್ ಅವರ ಮತ್ತೊಂದುವಿಶೇಷತೆಯಿದೆ. ಅವರು ತಮ್ಮ ಸಂದೇಶವನ್ನು ಪಸರಿಸಲುತಂತ್ರಜ್ಞಾನ ಬಳಸುತ್ತಿದ್ದಾರೆ. ಅವರು ನಿಯಮಿತವಾಗಿಆನ್ ಲೈನ್ ಕಾರ್ಯಕ್ರಮವನ್ನು ನೀಡುತ್ತಾರೆ. ಅವರುಪ್ರತಿದಿನ ಪಾಡ್ ಕಾಸ್ಟ್ ಮಾಡುತ್ತಾರೆ. ಕಳೆದ 7ವರ್ಷಗಳಲ್ಲಿ ಜೊನಾಸ್ ಅವರು ವೇದಾಂತದ ಬಗ್ಗೆ ತಮ್ಮಉಚಿತ ಮುಕ್ತ ಕೋರ್ಸ್ ಗಳ ಮೂಲಕ ಒಂದೂವರೆಲಕ್ಷಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದಾರೆ. ಜೊನಾಸ್ ಒಂದು ದೊಡ್ಡ ಕೆಲಸವನ್ನು ಮಾತ್ರ ಮಾಡುತ್ತಿಲ್ಲಜೊತೆಗೆ ಅದನ್ನು ಬಹು ದೊಡ್ಡ ಸಂಖ್ಯೆಯ ಜನರುಅರ್ಥೈಸಿಕೊಳ್ಳುವ ಭಾಷೆಯಲ್ಲಿ ಮಾಡುತ್ತಿದ್ದಾರೆ. ಜನರಿಗೆಕೊರೊನಾ ಮತ್ತು ಕ್ವಾರೆಂಟೈನ್ ನ ಈ ಸಮಯದಲ್ಲಿವೇದಾಂತ ಹೇಗೆ ಸಹಾಯಮಾಡಬಲ್ಲದು ಎಂಬುದರ ಬಗ್ಗೆಜನರಲ್ಲಿ ಸಾಕಷ್ಟು ಕುತೂಹಲವಿದೆ. ‘ಮನದ ಮಾತು’ ಮೂಲಕ ನಾನು ಜೊನಾಸ್ ಅವರನ್ನು ಅವರ ಪರಿಶ್ರಮಕ್ಕೆಅಭಿನಂದಿಸುತ್ತೇನೆ. ಮತ್ತು ಭವಿಷ್ಯದ ಪ್ರಯತ್ನಗಳಿಗೂಶುಭಹಾರೈಸುತ್ತೇನೆ.

ಸ್ನೇಹಿತರೆ, ಇದೇ ರೀತಿ , ಮತ್ತೊಂದು ಸುದ್ದಿಯ ಮೇಲೂನಿಮ್ಮ ಗಮನಹರಿದಿರಬಹುದು. ನ್ಯೂಜಿಲೆಂಡ್ ನಲ್ಲಿಅಲ್ಲಿಯ ಹೊಸದಾಗಿ ಆಯ್ಕೆಯಾದ ಎಂ ಪಿ ಡಾ|| ಗೌರವ್ ಶರ್ಮಾ ಅವರು ವಿಶ್ವದ ಪ್ರಾಚೀನ ಭಾಷೆಗಳಲ್ಲಿಒಂದಾದ ಸಂಸ್ಕೃತ ಭಾಷೆಯಲ್ಲಿ ಪ್ರಮಾಣವಚನಸ್ವೀಕರಿಸಿದರು. ಒಬ್ಬ ಭಾರತೀಯನಾಗಿ ಭಾರತೀಯಸಂಸ್ಕೃತಿಯ ಈ ಪ್ರಸಾರ ನಮಗೆಲ್ಲ ಹೆಮ್ಮೆ ತರುತ್ತದೆ. ‘ಮನದ ಮಾತು’ ಮೂಲಕ ನಾನು ಗೌರವ್ ಶರ್ಮಾ  ಅವರಿಗೆ ಶುಭಹಾರೈಸುತ್ತೇನೆ. ಅವರು ನ್ಯೂಜಿಲೆಂಡ್ಜನತೆಯ ಸೇವೆಯಲ್ಲಿ ಹೊಸ ಅನುಕೂಲಗಳನ್ನು ಕಲ್ಪಿಸಲಿಎಂಬುದು ನಮ್ಮೆಲ್ಲರಆಶಯವಾಗಿದೆ.

ನನ್ನ ಪ್ರಿಯ ದೇಶವಾಸಿಗಳೇ, ನಾಳೆ 30 ನವೆಂಬರ್ ನಂದುನಾವು ಶ್ರೀ ಗುರುನಾನಕ್ ದೇವ್ ಜಿ ಅವರ 551 ನೇಪ್ರಕಾಶ ಪರ್ವವನ್ನು ಆಚರಿಸಲಿದ್ದೇವೆ. ಸಂಪೂರ್ಣವಿಶ್ವದಲ್ಲಿ ಗುರುನಾನಕ್ ಜಿ ಅವರ ಪ್ರಭಾವ ಸ್ಪಷ್ಟವಾಗಿಕಾಣಿಸುತ್ತದೆ.

ವ್ಯಾಂಕೋವರ್ ನಿಂದ ವೆಲ್ಲಿಂಗ್ಟನ್ ವರೆಗೆ, ಸಿಂಗಾಪೂರ್ದಿಂದ ದಕ್ಷಿಣ ಆಫ್ರಿಕಾವರೆಗೆ ಅವರ ಸಂದೇಶ ಎಲ್ಲೆಡೆಕೇಳಿಬರುತ್ತದೆ. ಗುರುಗ್ರಂಥ ಸಾಹೀಬ್ ದಲ್ಲಿ ಹೀಗೆ ಹೇಳಿದೆ– “ಸೇವಕ ಕೊ ಸೇವಾ ಬನ ಆಯಿ” ಅಂದರೆ ಸೇವೆಮಾಡುವುದೇ ಸೇವಕನ ಕೆಲಸ. ಕಳೆದ ಕೆಲವು ವರ್ಷಗಳಲ್ಲಿಬಹಳಷ್ಟು ಮಹತ್ವದ ಘಟ್ಟಗಳು ಎದುರಾದವು ಮತ್ತುಒಬ್ಬ ಸೇವಕನಾಗಿ ನನಗೆ ಬಹಳಷ್ಟು ಕೆಲಸ ಮಾಡುವಅವಕಾಶ ದೊರೆಯಿತು. ಗುರು ಸಾಹೇಬರು ನಮ್ಮಿಂದಸೇವೆಯನ್ನು ಪಡೆದರು. ಗುರುನಾನಕ್ ದೇವ್ ಜಿ ಅವರ550 ನೇ ಪ್ರಕಾಶ ಪರ್ವ, ಶ್ರೀ ಗುರು ಗೋವಿಂದ್ ಸಿಂಗ್  ಅವರ 350 ನೇ  ಪ್ರಕಾಶ ಪರ್ವ, ಮುಂದಿನ ವರ್ಷ ಶ್ರೀಗುರು ತೇಗ್ ಬಹಾದ್ದೂರ್ ಅವರ 400 ನೇ ಪ್ರಕಾಶಪರ್ವವೂ ಇದೆ. ಗುರು ಸಾಹೇಬರ ವಿಶೇಷ ಕೃಪೆ ನನ್ನಮೇಲಿದೆ, ಅವರು ನನ್ನನ್ನು ತಮ್ಮ ಕಾರ್ಯಗಳಲ್ಲಿ ಬಹಳನಿಕಟವಾಗಿದ್ದು ಮಾಡಿಕೊಡುವಂತೆ ಮಾಡಿದ್ದಾರೆ ಎಂದುನನಗೆ ಭಾಸವಾಗುತ್ತದೆ.

ಸ್ನೇಹಿತರೆ, ನಿಮಗೆ ಕಛ್ ನಲ್ಲಿ ಲಖಪತ್ ಗುರುದ್ವಾರಸಾಹೀಬ್  ಎಂಬ ಒಂದು ಗುರುದ್ವಾರ ಇದೆಯೆಂದು ನಿಮಗೆಗೊತ್ತೆ? ಶ್ರೀ ಗುರುನಾನಕ್ ಜಿ ಅವರು ತಮ್ಮ ಬೇಸರದಸಮಯದಲ್ಲಿ ಲಖಪತ್ ಗುರುದ್ವಾರ ಸಾಹೀಬ್ ನಲ್ಲಿತಂಗಿದ್ದರು. 2001 ರ ಭೂಕಂಪದಲ್ಲಿ ಈ  ಗುರುದ್ವಾರಕ್ಕೂಹಾನಿಯಾಗಿತ್ತು. ಗುರು ಸಾಹೇಬರ ಕೃಪೆಯಿಂದಲೇ ಇದರಜೀರ್ಣೋದ್ಧಾರವನ್ನು ಖಚಿತಪಡಿಸಲು ನನ್ನಿಂದಸಾಧ್ಯವಾಯಿತು. ಗುರುದ್ವಾರ ದುರಸ್ಥಿಯನ್ನು ಮಾತ್ರಮಾಡುವುದಲ್ಲದೇ ಅದರ ಗೌರವ ಮತ್ತು ಭವ್ಯತೆಮರುಕಳಿಸುವಂತೆ ಮಾಡಲಾಯಿತು. ನಮ್ಮೆಲ್ಲರಿಗೂ ಗುರುಸಾಹೇಬರ ಆಶೀರ್ವಾದವೂ ದೊರೆಯಿತು. 2004 ರಲ್ಲಿಯುನೆಸ್ಕೋ ಏಷ್ಯಾ ಪೆಸಿಫಿಕ್ ಪಾರಂಪರಿಕ ಪ್ರಶಸ್ತಿಗಳಲ್ಲಿಲಖಪತ್ ಗುರುದ್ವಾರ ಸಂರಕ್ಷಣೆಯ ಪ್ರಯತ್ನಗಳಿಗಾಗಿಅವಾರ್ಡ್ ಆಫ್ ಡಿಸ್ಟಿಂಕ್ಷನ್ ಪ್ರಶಸ್ತಿ ನೀಡಲಾಯಿತು.  ಪ್ರಶಸ್ತಿಯನ್ನು ನೀಡಿದ ತೀರ್ಪುಗಾರರು ಜೀರ್ಣೋದ್ಧಾರಸಮಯದಲ್ಲಿ ಶಿಲ್ಪಕಲೆಯ ಸೂಕ್ಷ್ಮ ಅಂಶಗಳತ್ತ ಕೂಡಾಗಮನಹರಿಸಲಾಗಿದೆ ಎಂಬುದನ್ನು ಮನಗಂಡರು. ಗುರುದ್ವಾರದ ಪುನರ್ ನಿರ್ಮಾಣ ಕಾರ್ಯದಲ್ಲಿ ಸಿಖ್ಸಮುದಾಯದವರು ಸಕ್ರಿಯವಾಗಿ ಭಾಗವಹಿಸುವುದಲ್ಲದೆಅವರ ಮಾರ್ಗದರ್ಶನದಲ್ಲೇ ಈ ಕಾರ್ಯವನ್ನುಪೂರ್ತಿಗೊಳಿಸಲಾಯಿತು ಎಂಬುದನ್ನು ತೀರ್ಪುಗಾರರುಗಮನಿಸಿದರು. ನಾನು ಮುಖ್ಯಮಂತ್ರಿಯೂ ಆಗಿರಲಿಲ್ಲ, ಆಗಲೂ ನನಗೆ ಲಖಪತ್ ಗುರುದ್ವಾರಕ್ಕೆ ಹೋಗುವಅವಕಾಶ ಲಭಿಸಿತ್ತು. ನನಗೆ ಅಲ್ಲಿಗೆ ಹೋಗಿ ಅನಂತ ಶಕ್ತಿಲಭಿಸಿತ್ತು. ಗುರುದ್ವಾರಕ್ಕೆ ಹೋಗಿ ಎಲ್ಲರೂಧನ್ಯತಾಭಾವವನ್ನು ಹೊಂದುತ್ತಾರೆ. ಗುರು ಸಾಹೇಬರುನನ್ನಿಂದ ನಿರಂತರ ಸೇವೆ ಸ್ವೀಕರಿಸುತ್ತಿದ್ದಾರೆ ಎಂಬವಿಷಯಕ್ಕೆ ನಾನು ಬಹಳ ಕೃತಜ್ಞನಾಗಿದ್ದೇನೆ. ಕಳೆದ ವರ್ಷನವೆಂಬರ್ ನಲ್ಲಿ ಕರ್ತಾರ್ ಪುರ್ ಸಾಹೀಬ್ ಕಾರಿಡಾರ್ತೆರೆದದ್ದು ಬಹಳ ಐತಿಹಾಸಿಕವಾಗಿತ್ತು. ಈ ವಿಷಯವನ್ನುನಾನು ಜೀವನಪೂರ್ತಿ ನನ್ನ ಹೃದಯದಲ್ಲಿಜೋಪಾನವಾಗಿರಿಸುತ್ತೇನೆ.  ನಮಗೆ ಶ್ರೀ ದರ್ಬಾರ್ಸಾಹೇಬರ ಸೇವೆಗೆ ಮತ್ತೊಂದು ಅವಕಾಶದೊರೆತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ವಿದೇಶದಲ್ಲಿ ನೆಲೆಸಿರುವ ನಮ್ಮ ಸಿಖ್ ಸೋದರಸೋದರಿಯರು ಈಗ ದರ್ಬಾರ್ ಸಾಹೀಬ್ ಅವರ ಸೇವೆಗೆದೇಣಿಗೆ ನೀಡಲು ಈಗ ಮತ್ತಷ್ಟು ಸುಲಭವಾಗಿದೆ. ಈನಡೆಯಿಂದ ವಿಶ್ವಾದ್ಯಂತದ ಭಕ್ತಸಮೂಹ ದರ್ಬಾರ್ಸಾಹೇಬರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ಸ್ನೇಹಿತರೆ, ಲಂಗರ್ ಪರಂಪರೆಯನ್ನು ಆರಂಭಿಸಿದವರುಗುರುನಾನಕ್ ಜಿ ಅವರೇ ಆಗಿದ್ದಾರೆ ಮತ್ತು ಇಂದುವಿಶ್ವಾದ್ಯಂತ ಸಿಖ್ ಸಮುದಾಯದವರು ಕೊರೊನಾದ ಈಸಮಯದಲ್ಲಿ ಜನರಿಗೆ ಊಟ ಮಾಡಿಸುವಪರಂಪರೆಯನ್ನು ಹೇಗೆ ಮುಂದುವರೆಸಿದ್ದಾರೆ, ಮಾನವಜನಾಂಗದ ಸೇವೆಗೈದಿದ್ದಾರೆ ಎಂಬುದನ್ನು ನಾವುನೋಡಿದ್ದೇವೆ. ಈ ಪರಂಪರೆ ನಮಗೆಲ್ಲರಿಗೂ ಸದಾಪ್ರೇರಣಾತ್ಮಕ ಕೆಲಸ ಮಾಡುತ್ತದೆ. ನಾವೆಲ್ಲರೂಸೇವಕರಂತೆ ಕೆಲಸ ಮಾಡುತ್ತಲೇ ಇರೋಣ ಎಂಬುದುನನ್ನ ಇಚ್ಛೆಯಾಗಿದೆ. ಗುರು ಸಾಹೇಬರು ನನ್ನಿಂದ ಮತ್ತುದೇಶ ಬಾಂಧವರಿಂದ ಹೀಗೆ ಸೇವೆಯನ್ನು ಸ್ವೀಕರಿಸುತ್ತಿರಲಿ. ಮತ್ತೊಮ್ಮೆ ಗುರುನಾನಕ್ ಜಯಂತಿ ಸಂದರ್ಭದಲ್ಲಿ ನನ್ನಅನಂತ ಶುಭಾಷಯಗಳು.

ನನ್ನ ಪ್ರಿಯ ದೇಶವಾಸಿಗಳೇ, ಕಳೆದ ದಿನಗಳಲ್ಲಿದೇಶಾದ್ಯಂತದ ಹಲವಾರು ವಿಶ್ವ ವಿದ್ಯಾಲಯಗಳವಿದ್ಯಾರ್ಥಿಗಳೊಂದಿಗೆ ಸಂವಾದಕ್ಕೆ, ಅವರ ಶೈಕ್ಷಣಿಕಪಯಣದ ಮಹತ್ವಪೂರ್ಣ ಕಾರ್ಯಕ್ರಮಗಳಲ್ಲಿಭಾಗಿಯಾಗುವ ಅವಕಾಶ ದೊರೆಯಿತು. ತಂತ್ರಜ್ಞಾನಬಳಸಿ ನಾನು ಐಐಟಿ ಗುವಾಹಾಟಿ, ಐಐಟಿ ದೆಹಲಿ, ಗಾಂಧಿನಗರದ ದೀನ್ ದಯಾಳ್ ಪೆಟ್ರೋಲಿಯಂ ವಿಶ್ವವಿದ್ಯಾಲಯ, ದೆಹಲಿಯಯ ಜೆ ಎನ್ ಯು, ಮೈಸೂರುವಿಶ್ವ ವಿದ್ಯಾಲಯ ಮತ್ತು ಲಖನೌ ವಿಶ್ವ ವಿದ್ಯಾಲಯದವಿದ್ಯಾರ್ಥಿಗಳೊಂದಿಗೆ ಸಂಪರ್ಕ ಹೊಂದಲುಸಾಧ್ಯವಾಯಿತು. ದೇಶದ ಯುವಜನತೆಯೊಂದಿಗೆಇರುವುದು ಬಹಳ ಉತ್ಸಾಹ ಮತ್ತು ಚೈತನ್ಯತುಂಬುವಂಥದ್ದಾಗಿದೆ.  ವಿಶ್ವ ವಿದ್ಯಾಲಯದ ಪರಿಸರಒಂದು ರೀತಿಯಲ್ಲಿ ಪುಟ್ಟ ಭಾರತವಿದ್ದಂತೆ. ಒಂದೆಡೆ ಈಆವರಣದಲ್ಲಿ ಭಾರತದ ವೈವಿಧ್ಯತೆಯ ದರ್ಶನವಾದರೆಮತ್ತೊಂದೆಡೆ ನವ ಭಾರತಕ್ಕೆ ದೊಡ್ಡ ದೊಡ್ಡಬದಲಾವಣೆಗಳ ಒಲವು ಕಾಣಿಸುತ್ತದೆ. ಕೊರೊನಾಗಿಂತಮೊದಲು ಯಾವುದೇ ಸಂಸ್ಥೆಯ ಕಾರ್ಯಕ್ರಮದಲ್ಲಿವೈಯಕ್ತಿಕವಾಗಿ ಭಾಗವಹಿಸಿದಾಗ, ಸುತ್ತಮುತ್ತಲ ಶಾಲೆಗಳಬಡ ಮಕ್ಕಳಿಗೆ ಆ ಸಮಾರಂಭಕ್ಕೆ ಆಹ್ವಾನಿಸಿ ಎಂದುಆಗ್ರಹಿಸುತ್ತಿದ್ದೆ. ಆ ಮಕ್ಕಳು ಸಮಾರಂಭದಲ್ಲಿ ನನ್ನ ವಿಶೇಷಅತಿಥಿಗಳಾಗಿ ಆಗಮಿಸುತ್ತಿದ್ದರು. ಒಂದು ಪುಟ್ಟ ಮಗು ಆಭವ್ಯ ಸಮಾರಂಭದಲ್ಲಿ ಯುವಕರು ಡಾಕ್ಟರ್, ಇಂಜಿನೀಯರ್, ವಿಜ್ಞಾನಿಯಾಗುವುದನ್ನು ನೋಡಿದಾಗ, ಒಬ್ಬರು ಪದಕ ಸ್ವೀಕರಿಸುವುದನ್ನು ನೋಡಿದಾಗ ಅವನಲ್ಲಿಹೊಸ ಕನಸುಗಳು ಜಾಗೃತಗೊಳ್ಳುತ್ತವೆ! ನಾನುಮಾಡಬಲ್ಲೆ ಎಂಬ ಆತ್ಮವಿಶ್ವಾಸ ಹೆಚ್ಚುತ್ತದೆ. ಸಂಕಲ್ಪದಪ್ರೇರಣೆ ಲಭಿಸುತ್ತದೆ.

ಸ್ನೇಹಿತರೆ, ಇದರ ಹೊರತಾಗಿಯೂ ಮತ್ತೊಂದು ವಿಷಯಆ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಯಾರು, ಆಸಂಸ್ಥೆಗಳಿಗೆ ತನ್ನ  ಹಳೆಯ ವಿದ್ಯಾರ್ಥಿಗಳೊಂದಿಗೆನಿಯಮಿತ ಸಂಪರ್ಕದ ವ್ಯವಸ್ಥೆಯನ್ನು ಅದುಹೊಂದಿದೆಯೇ, ಅವರ ಹಳೆಯ ವಿದ್ಯಾರ್ಥಿಗಳ ಜಾಲಎಷ್ಟು ಸಕ್ರೀಯವಾಗಿದೆ ಎಂದು  ತಿಳಿದುಕೊಳ್ಳುವಲ್ಲಿ ನನಗೆಸದಾ ಆಸಕ್ತಿಯಿರುತ್ತದೆ.

ನನ್ನಯುವ ಮಿತ್ರರೇ, ನೀವು ಎಲ್ಲಿಯವರೆಗೆ ಒಂದುಸಂಸ್ಥೆಯಲ್ಲಿ ಓದುತ್ತೀರೋ ಅಲ್ಲಿಯವರೆಗೆ ನೀವು ಆಸಂಸ್ಥೆಯ ವಿದ್ಯಾರ್ಥಿಗಳಾಗಿರುತ್ತೀರಿ, ಆದರೆ, ಅಲ್ಲಿಯಅಲುಮಿನಿ ಆಗಿ ನೀವು ಜೀವನವಿಡಿ ಇರಬಹುದಾಗಿದೆ. ಶಾಲೆ ಕಾಲೇಜುಗಳಿಂದ ಹೊರಬಂದ ನಂತರ ಎರಡುವಿಷಯಗಳು ಎಂದಿಗೂ ಮುಗಿಯುವದಿಲ್ಲ- ಮೊದಲನೆಯದು, ನಿಮ್ಮ ಶಿಕ್ಷಣದ ಪ್ರಭಾವ ಮತ್ತುಎರಡನೆಯದು, ನಿಮ್ಮ ನಿಮ್ಮದೇ ಆದ ಸ್ಕೂಲು, ಕಾಲೇಜಿನೊಂದಿಗೆ ಸಂಬಂಧ. ನೀವು ಅಲುಮಿನಿ ಜೊತೆಯಾವಾಗ ಮಾತನಾಡುತ್ತೀರೋ, ಆಗ, ಸ್ಕೂಲು, ಕಾಲೇಜಿನ ದಿನಗಳ ತಮ್ಮ ನೆನಪುಗಳು, ಪುಸ್ತಕಗಳು, ಅಧ್ಯಯನಕ್ಕಿಂತ ಹೆಚ್ಚು ಕ್ಯಾಂಪಸ್ ನಲ್ಲಿ ಸಮಯ ಹೇಗೆಕಳೆದಿರಿ ಎಂಬುದು, ಗೆಳೆಯರೊಂದಿಗೆ ಕಳೆದ ಕ್ಷಣಗಳುಅದರಲ್ಲಿ ಅಡಗಿರುತ್ತವೆ. ಇವೇ ನೆನಪುಗಳೊಂದಿಗೆ ತಮ್ಮಸಂಸ್ಥೆಗೆ ಏನಾದರೊಂದು ಮಾಡಬೇಕೆನ್ನುವ ಭಾವನೆಹುಟ್ಟುತ್ತದೆ. ಎಲ್ಲಿ ನಿಮ್ಮ ವ್ಯಕ್ತಿತ್ವದ ವಿಕಾಸವಾಗಿದೆಯೋ, ಆ ಸ್ಥಳವನ್ನು ಒಂದಿಷ್ಟು ವಿಕಾಸ ಮಾಡುವುದರಿಂದ ಸಿಗುವಸಂತಸ ಮತ್ತೆಲ್ಲಿಂದ ಸಿಕ್ಕೀತು? ನಾನು ಅಂತಹ ಕೆಲವುಪ್ರಯತ್ನಗಳ ಬಗ್ಗೆ ಓದಿದ್ದೇನೆ, ಅಲ್ಲಿ ಪೂರ್ವವಿದ್ಯಾರ್ಥಿಗಳು ತಮ್ಮ ಹಳೆಯ ಸಂಸ್ಥೆಗಳಿಗೆ ತಾ ಮುಂದು-ನಾ ಮುಂದೆ ಎಂದು ಕೊಡುಗೆ ನೀಡಿದ್ದಾರೆ. ಇಂದುಅಲುಮಿನಿ ಇದಕ್ಕೆ ಸಂಬಂಧಿಸಿದಂತೆ ಬಹಳಸಕ್ರಿಯವಾಗಿವೆ. ಐಐಟಿ ವಿದ್ಯಾರ್ಥಿಗಳು ತಮ್ಮಸಂಸ್ಥೆಗಳಿಗೆ ಕಾನ್ಫರನ್ಸ ಸೆಂಟರ್‌ಗಳು, ಮ್ಯಾನೇಜ್‌ಮೆಂಟ್ಸೆಂಟರ್‌ಗಳು, ಇನ್ ಕ್ಯುಬೇಶನ್ ಸೆಂಟರ್‌ಗಳು ಹೀಗೆ  ವಿವಿಧ ವ್ಯವಸ್ಥೆಗಳನ್ನು ಸ್ವತ: ಮಾಡಿಸಿ ಕೊಟ್ಟಿದ್ದಾರೆ. ಈಎಲ್ಲ ಪ್ರಯತ್ನಗಳು ವರ್ತಮಾನದ ವಿದ್ಯಾರ್ಥಿಗಳಿಗೆಲರ್ನಿಂಗ್ ಎಕ್ಸಪೀರಿಯನ್ಸನ್ನು ಹೆಚ್ಚಿಸುತ್ತವೆ. ಐಐಟಿದಿಲ್ಲಿಯು ಒಂದು ಎಂಡೋಮೆಂಟ್ ಫಂಡನ್ನುಪ್ರಾರಂಭಿಸಿದೆ, ಇದೊಂದು ಉತ್ತಮ ವಿಚಾರವಾಗಿದೆ. ವಿಶ್ವದ ಹೆಸರಾಂತ ವಿಶ್ವವಿದ್ಯಾಲಯಗಳಲ್ಲಿ ಈ ತರಹದಎಂಡೋಮೆಂಟ್‌ಗಳನ್ನು ಮಾಡುವ ಸಂಸ್ಕೃತಿಯಿದೆ, ಅವುವಿದ್ಯಾರ್ಥಿಗಳಿಗೆ ಸಹಾಯ ಒದಗಿಸುತ್ತವೆ. ಭಾರತೀಯವಿಶ್ವವಿದ್ಯಾಲಯಗಳು ಈ ಸಂಸ್ಕೃತಿಯನ್ನು ತಮ್ಮ ಅಧೀನಸಂಸ್ಥೆಗಳೊಂದಿಗೆ ಬೆಳೆಸಿಕೊಳ್ಳಲುಸಮರ್ಥವಾಗಿವೆಯೆಂದು ನನಗನಿಸುತ್ತದೆ.

ಯಾವಾಗ ಸ್ವಲ್ಪ ಮರಳಿಸಬೇಕೆಂಬ ಮಾತುಬರುತ್ತದೆಯೋ ಯಾವುದೂ ಸಣ್ಣದು-ದೊಡ್ಡದೆಂದುಬರುವುದಿಲ್ಲ. ಸಣ್ಣಕಿಂತ ಸಣ್ಣ ಸಹಾಯವೂಪ್ರಮುಖವಾಗುತ್ತದೆ. ಪ್ರತಿಯೊಂದು ಪ್ರಯತ್ನವೂಮಹತ್ವಪೂರ್ಣವಾದುದಾಗುತ್ತದೆ. ಸಾಮಾನ್ಯವಾಗಿಪೂರ್ವ ವಿದ್ಯಾರ್ಥಿಗಳು ತಮ್ಮ ಸಂಸ್ಥೆಗಳಿಗೆ ತಂತ್ರಜ್ಞಾನಉನ್ನತೀಕರಣಕ್ಕಾಗಿ, ಕಟ್ಟಡ ನಿರ್ಮಿಸಲು, ಪ್ರಶಸ್ತಿಗಳುಮತ್ತು ವಿದ್ಯಾರ್ಥಿ ವೇತನಗಳನ್ನು ನೀಡಲು, ಕೌಶಲಾಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಾರಂಭಿಸಲುಬಹಳ ಪ್ರಮುಖ ಪಾತ್ರವಹಿಸುತ್ತವೆ. ಕೆಲವು ಸ್ಕೂಲುಗಳಹಳೇ ವಿದ್ಯಾರ್ಥಿಗಳ ಸಂಘಟನೆಗಳು ಮೆಂಟರ್‌ಶಿಪ್ಕಾರ್ಯಕ್ರಮ ಆರಂಭಿಸಿವೆ. ಇದರಲ್ಲಿಅವರು ಬೇರೆ-ಬೇರೆಬ್ಯಾಚ್‌ಗಳ ವಿದ್ಯಾರ್ಥಿಗಳನ್ನು ಗೈಡ್ ಮಾಡುತ್ತಾರೆ, ಅದರೊಂದಿಗೆನೇ ಶಿಕ್ಷಣದ ನಿರೀಕ್ಷೆಗಳ ಬಗ್ಗೆ ಚರ್ಚೆಮಾಡುತ್ತಾರೆ. ಹಲವಾರು ಸ್ಕೂಲುಗಳಲ್ಲಿ ಅದರಲ್ಲಿಯೂಬೋರ್ಡಿಂಗ್ ಸ್ಕೂಲುಗಳಲ್ಲಿ ಅಲುಮಿನಿ ಸಂಘಗಳುಬಹಳ ಸ್ಟ್ರಾಂಗ್ ಆಗಿವೆ. ಅವು ಆಟೋಟ ಸ್ಪರ್ಧೆ ಮತ್ತುಸಮುದಾಯ ಸೇವೆ ನಂತಹ ಚಟುವಟಿಕೆಗಳನ್ನುಆಯೋಜನೆ ಮಾಡುತ್ತವೆ. ನಾನು ಪೂರ್ವವಿದ್ಯಾರ್ಥಿಗಳಿಗೆ ಆಗ್ರಹಿಸುವುದೇನಂದರೆ, ಯಾವಸಂಸ್ಥೆಯಲ್ಲಿ ಅವರು ಓದಿರುತ್ತಾರೋ ಅವುಗಳೊಂದಿಗೆತಮ್ಮ ಸಂಬಂಧ ಗಟ್ಟಿಗೊಳಿಸಿಕೊಳ್ಳಿರಿ. ಅದು ಸ್ಕೂಲೇಆಗಿರಲಿ, ಕಾಲೇಜೇ ಆಗಿರಲಿ ಇಲ್ಲವೆ ವಿಶ್ವವಿದ್ಯಾಲಯವೇಆಗಿರಲಿ. ಸಂಸ್ಥೆಗಳಿಗೂ ನನ್ನ ಆಗ್ರಹ ಏನೆಂದರೆ ಅಲುಮಿನಿಎಂಗೇಜ್‌ಮೆಂಟ್ ಮಾಡಲು ಹೊಸ ಹೊಸ ವಿಧಾನಗಳಮೂಲಕ ಕೆಲಸ ಮಾಡಿರಿ. ಕ್ರಿಯೇಟಿವ್ಪ್ಲಾಟ್‌ಫಾರ್ಮಗಳನ್ನು ವಿಕಾಸಗೊಳಿಸಿ ಅದರಿಂದಅಲುಮಿನಿ ಸಕ್ರಿಯವಾಗಿ ತೊಡಗಿಸಿಕೊಳ್ಳಬಹುದಾಗಿದೆ. ಕೇವಲ ದೊಡ್ಡ ಕಾಲೇಜು, ವಿಶ್ವವಿದ್ಯಾಲಯಗಳಷ್ಟೇ ಅಲ್ಲ, ಹಳ್ಳಿಗಳ ಶಾಲೆಗಳು ಕೂಡ ಸಶಕ್ತ ಕ್ರೀಯಾಶೀಲಚಟುವಟಿಕೆಗಳಿಂದ ಕೂಡಿದ ಅಮೂಲ್ಯ ಜಾಲಹೊಂದಿದವುಗಳಾಗಿರಬೇಕು.

ನನ್ನ ಪ್ರೀತಿಯ ದೇಶವಾಸಿಗಳೇ, ೫ ನೇ ಡಿಸೆಂಬರ್‌ರಂದು  ಶ್ರೀ ಅರವಿಂದರ ಪುಣ್ಯತಿಥಿಯಿದೆ. ಶ್ರೀ ಅರವಿಂದರನ್ನುನಾವು ಓದಿದಷ್ಟು ಆಳವಾದ ಜ್ಞಾನ ನಮಗೆ ಸಿಗುತ್ತಲೇಹೋಗುತ್ತದೆ. ನನ್ನ ಯುವ ಮಿತ್ರರು ಶ್ರೀ ಅರವಿಂದರನ್ನುಎಷ್ಟು ತಿಳಿದುಕೊಳ್ಳುತ್ತಾರೋ ಅಷ್ಟೇ ತಮ್ಮನ್ನು ತಾವುಅರಿತುಕೊಳ್ಳುತ್ತಾರೆ. ಸ್ವತ: ಸಮೃದ್ಧರಾಗುತ್ತಾರೆ. ಜೀವನದಯಾವ ಭಾವ, ಅವಸ್ಥೆಯಲ್ಲಿ ತಾವು ಇದ್ದೀರೋ, ಯಾವಸಂಕಲ್ಪವನ್ನು ಸಿದ್ಧಗೊಳಿಸಲು ತಾವುಪ್ರಯತ್ನದಲ್ಲಿದ್ದೀರೋ ಅವುಗಳ ಮಧ್ಯೆ ತಾವುಯಾವಾಗಲೂ ಶ್ರೀ ಅರವಿಂದರು ನಿಮಗೆ ಹೊಸ ಪ್ರೇರಣೆನೀಡುತ್ತಿದ್ದಾರೆಂದೇ ಭಾವಿಸುವಿರಿ, ಒಂದು ಹೊಸ ಮಾರ್ಗತೋರಿಸಿತ್ತಿದ್ದಾರೆಂದು ಅರಿಯುವಿರಿ. ಉದಾಹರಣೆಗೆ, ಇಂದು ನಾವು ಯಾವ ‘ವೋಕಲ್ ಫಾರ್ ವೋಕಲ್’ ಈಅಭಿಯಾನದೊಂದಿಗೆ ಮುಂದೆ ಸಾಗುತ್ತಿದ್ದೇವೆಯೋ ಅಲ್ಲಿಶ್ರೀ ಅರವಿಂದರ ಸ್ವದೇಶೀ ದರ್ಶನ ನಮಗೆ ಮಾರ್ಗತೋರಿಸುತ್ತದೆ. ಬಂಗಾಳಿಯಲ್ಲಿ ಒಂದು ಬಹಳ ಪ್ರಭಾವಿಕವಿತೆಯಿದೆ.

ಛುಯಿಶುತೊ ಪಾಯಮಾಂತೋ ಆಶೇ ತುಂಗ ಹೋತೆ

ದಿಯ ಶಲಾಯಿ ಕಾಠೀ, ತಾವು ಆಶೇ ಪೋತೆ

ಪ್ರೊ ದೀಪ್ತಿ ಜಾಲಿತೆಖೆತೆ, ಶುತೆ, ಜೆತೆ

ಕಿಛುತೆ ಲೋಕ ನಾಯ ಶಾಧೀನ.

ಅಂದರೆ, ನಮ್ಮಲ್ಲೀಗ ಸೂಜಿಯಂದ ಹಿಡಿದುಬೆಂಕಿಪೊಟ್ಟಣದವರೆಗೂ ವಿದೇಶೀ ಹಡಗುಗಳಿಂದಬರುತ್ತವೆ. ಉಣ್ಣಲು, ಕುಡಿಯಲು, ಮಲಗಲು ಯಾವುದೇವಿಷಯ ತೆಗೆದುಕೊಳ್ಳಿ ಜನರು ಸ್ವತಂತ್ರರಾಗಿಲ್ಲ.

ಅವರು ಹೇಳುತ್ತಲೂ ಇದ್ದರು, ಸ್ವದೇಶಿಯ ಅರ್ಥಏನೆಂದರೆ, ನಮ್ಮ ಭಾರತೀಯ ಕೆಲಸಗಾರರಿಂದ, ಕುಶಲಕರ್ಮಿಗಳಿಂದ ನಿರ್ಮಿಸಿದ ವಸ್ತುಗಳಿಗೆ ಪ್ರಥಮಆದ್ಯತೆ ನೀಡಬೇಕು.  ಹಾಗಿದ್ದರೂ, ಶ್ರೀ ಅರವಿಂದರುವಿದೇಶಿಗರಿಂದ ಕಲಿಯಲು ಎಂದೂ ವಿರೋಧಿಸಲಿಲ್ಲ. ಎಲ್ಲಿಹೊಸತನವಿದೆಯೋ ಅಲ್ಲಿಂದ ನಾವು ಕಲಿಯೋಣ, ನಮ್ಮದೇಶಕ್ಕೆ ಒಳಿತಾಗುವುದಾದರೆ ಅದಕ್ಕೆ ನಾವುಸಹಕರಿಸೋಣ ಮತ್ತು ಪ್ರೋತ್ಸಾಹಿಸೋಣ. ಇದೇಆತ್ಮನಿರ್ಭರ ಭಾರತದಲ್ಲಿ ‘ವೋಕಲ್ ಫಾರ್ ಲೋಕಲ್’ ಮಂತ್ರದ ಭಾವನೆಯಾಗಿದೆ. ಮುಖ್ಯವಾಗಿ, ಸ್ವದೇಶಿತಮ್ಮದಾಗಿಸುವುದರೊಂದಿಗೆ ಅವರು ಏನನ್ನು ಹೇಳಿದರುಅದನ್ನು ಇಂದು ದೇಶದ ಪ್ರತಿಯೊಬ್ಬ ನಾಗರಿಕನುಓದಬೇಕಾಗಿದೆ. ಮಿತ್ರರೆ, ಇದೇ ರೀತಿ ಶಿಕ್ಷಣದ ಬಗ್ಗೆಯೂಶ್ರೀ ಅರವಿಂದರ ವಿಚಾರಗಳು ಬಹಳ ಸ್ಪಷ್ಟವಾಗಿದ್ದವು. ಅವರ ಪ್ರಕಾರ ಶಿಕ್ಷಣ, ಕೇವಲ ಪುಸ್ತಕದ ಜ್ಞಾನ, ಪದವಿಅಥವಾ ನೌಕರಿ ಪಡೆಯುವುದು ಮಾತ್ರಸೀಮಿತವಾಗಿರಲಿಲ್ಲ. ಅರವಿಂದರುಹೇಳುತ್ತಿದ್ದುದೇನಂದರೆ ನಮ್ಮ ರಾಷ್ಟ್ರೀಯ ಶಿಕ್ಷಣವು, ನಮ್ಮಯುವ ಪೀಳಿಗೆಯ ಮನಸ್ಸಿಗೆ ಮತ್ತು ಮೆದುಳಿಗೆ ತರಬೇತಿನೀಡುವಂತಾಗಬೇಕು. ಅಂದರೆ, ಮೆದುಳಿನಿಂದ ವೈಜ್ಞಾನಿಕವಿಕಾಸ ಮತ್ತು ಮನಸ್ಸಿನಿಂದ ಭಾರತೀಯ ಭಾವನೆಗಳೂಇರಬೇಕು. ಆಗಲೇ ಒಬ್ಬ ಯುವಕ ದೇಶದ ಒಳ್ಳೆಯನಾಗರಿಕನಾಗಬಲ್ಲ. ಶ್ರೀ ಅರವಿಂದರು ರಾಷ್ಟ್ರೀಯಶಿಕ್ಷಣವನ್ನು ಕುರಿತು ಏನು ಹೇಳಿದ್ದಾರೆ, ಏನನ್ನುಅಪೇಕ್ಷ್ಷಿಸಿದ್ದರೋ ಅದನ್ನು ಇಂದು ದೇಶವು ಹೊಸರಾಷ್ಟ್ರೀಯ ಶಿಕ್ಷಣ ನೀತಿಯಿಂದ ಪೂರ್ಣಗೊಳಿಸುತ್ತಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಭಾರತದಲ್ಲಿ ಕೃಷಿ ಮತ್ತುಅದಕ್ಕೆ ಸಂಬಂಧಿಸಿದವುಗಳೊಂದಿಗೆ ಹೊಸ ಆಯಾಮಸೇರಿಕೊಳ್ಳುತ್ತಿವೆ. ಇತ್ತೀಚಿನ ದಿನಗಳಲ್ಲಿ ಮಾಡಲಾದ ಕೃಷಿಸುಧಾರಣೆಗಳಲ್ಲಿ ರೈತರಿಗೆ ಹೊಸ ಸಾಧ್ಯತೆಗಳ ಬಾಗಿಲುತೆರೆದಿರಿಸಿದೆ. ಹಲವು ವರ್ಷಗಳಿಂದ ರೈತರಬೇಡಿಕೆಯೇನಿತ್ತು, ಅವರ ಬೇಡಿಕೆಗಳನ್ನುಪೂರ್ಣಗೊಳಿಸಲು ಒಂದಲ್ಲ ಒಂದು ಹಂತದಲ್ಲಿ ಎಲ್ಲರಾಜಕೀಯ ಪಕ್ಷಗಳು ಆಶ್ವಾಸನೆಯನ್ನು ನೀಡಿದ್ದವು, ಆಬೇಡಿಕೆಗಳು ಈಡೇರಿವೆ. ತುಂಬಾ ವಿಚಾರ-ವಿಮರ್ಶೆಯನಂತರ ಭಾರತದ ಸಂಸತ್ತು ಕೃಷಿ ಸುಧಾರಣೆಗಳಿಗೆ ಒಂದುಕಾನೂನಿನ ರೂಪ ನೀಡಿದೆ. ಈ ಸುಧಾರಣೆಗಳಿಂದ ಕೇವಲರೈತರ ಹಲವು ಬಂಧನಗಳಿಂದ ಮುಕ್ತವಾಗುವುದಲ್ಲದೆಅವರಿಗೆ ಹಲವು ಅಧಿಕಾರಗಳು ಲಭಿಸಿವೆ, ಹೊಸಅವಕಾಶಗಳು ಲಭಿಸಿವೆ. ಈ ಅಧಿಕಾರಗಳು ಬಹಳ ಕಡಿಮೆಸಮಯದಲ್ಲಿ ರೈತರ ಸಂಕಟಗಳನ್ನು ಕಡಿಮೆಗೊಳಿಸಲುಪ್ರಾರಂಭಿಸಿವೆ. ಮಹಾರಾಷ್ಟ್ರದ ಧುಳೆ ಜಿಲ್ಲೆಯ ರೈತಜಿತೆಂದ್ರ ಭೋಯಿ ಅವರು ಹೊಸ ಕೃಷಿ ಕಾನೂನುಗಳನ್ನುಹೇಗೆ ಉಪಯೋಗಿಸಿಕೊಂಡರು ಎಂಬುದನ್ನು ನೀವೂತಿಳಿದುಕೊಳ್ಳಬೇಕು. ಜಿತೇಂದ್ರ ಭೋಯಿ ಅವರುಮೆಕ್ಕೆಜೋಳ ಬೆಳೆದಿದ್ದರು. ಅದಕ್ಕೆ ಒಳ್ಳೆ ಬೆಲೆ ಸಿಗಲುವ್ಯಾಪಾರಿಗಳಿಗೆ ಮಾರಲು ಸಿದ್ಧರಾಗಿದ್ದರು. ಬೆಳೆಯ ಒಟ್ಟುಬೆಲೆ ಸುಮಾರು ಮೂರು ಲಕ್ಷ ಮೂವತ್ತೆರಡು ಸಾವಿರಎಂದು ನಿಗದಿಪಡಿಸಲಾಯಿತು. ಜಿತೇಂದ್ರ ಭೋಯಿಅವರಿಗೆ ಇದಕ್ಕೆ ಮುಂಗಡವಾಗಿ ಇಪ್ಪತ್ತೈದು ಸಾವಿರರೂಪಾಯಿ ನೀಡಲಾಗಿತ್ತು. ಉಳಿದ ಹಣವನ್ನು ಮುಂದಿನಹದಿನೈದು ದಿನಗಳ ಒಳಗೆ ನೀಡಲು ಮಾತಾಗಿತ್ತು. ಮುಂದೆವಿಪರೀತ ಪರಿಸ್ಥಿತಿ ನಿರ್ಮಾಣವಾದ ಕಾರಣ ಅವರಿಗೆ ಬಾಕಿಮೊತ್ತ ಬರಲಿಲ್ಲ. ರೈತರಿಂದ ಬೆಳೆದ ಬೆಳೆಯನ್ನುಖರೀದಿಸುವುದು ತಿಂಗಳುಗಟ್ಟಲೇ ಅವರಿಗೆ ಹಣ ಕೊಡದೇಇರುವುದು. ಹೀಗೆ ಸಾಮಾನ್ಯವಾಗಿ ಮೆಕ್ಕೆಜೋಳ ಬೆಳೆದರೈತರಿಗೆಲ್ಲ ಮಾಡುವ ಪರಂಪರೆ ಬೆಳೆದು ಬಂದಿತ್ತು. ಅದೇರೀತಿ ಜಿತೇಂದ್ರ ಅವರ ಪೇಮೆಂಟ್ ನಾಲ್ಕು ತಿಂಗಳವರೆಗೆಆಗಲೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಸೆಪ್ಟೆಂಬರ್‌ನಲ್ಲಿಜಾರಿಯಾದ ಕೃಷಿ ಕಾನೂನು ಅವರಿಗೆ ಸಹಾಯಕ್ಕೆಬಂದಿತು. ಈ ಕಾನೂನಿನ ಪ್ರಕಾರ ಬೆಳೆಯನ್ನುಖರೀದಿಸಿದವರು ಖರೀದಿ ಮಾಡಿದ ಮೂರುದಿನಗಳಲ್ಲಿಯೇ ಎಲ್ಲ ಪೇಮೆಂಟ್ ಮಾಡಬೇಕು. ಒಂದುವೇಳೆ ಪೇಮೆಂಟ್ ಆಗದೇ ಹೋದರೆ ರೈತನು ದೂರುನೀಡಬಹುದಾಗಿದೆ. ಕಾನೂನಿನಲ್ಲಿ ಇನ್ನೊಂದುಮಹತ್ವಪೂರ್ಣ ಮಾತಿದೆ, ಈ ಕಾನೂನಿನ ಅನುಸಾರ ಆಕ್ಷೇತ್ರದ ಎಸ್‌ಡಿಎಂ ನವರು ದೂರು ದಾಖಲಾದ ಒಂದುತಿಂಗಳೊಳಗಾಗಿ ಅದನ್ನು ಬಗೆಹರಿಸಬೇಕೆಂಬನಿಯಮವಿದೆ. ಈಗ, ಇಂತಹ ಒಂದು ಕಾನೂನು ನಮ್ಮರೈತ ಸಹೋದರರಿಗೆ  ದೊರಕಿರಬೇಕಾದರೆ ಅವರಸಮಸ್ಯೆಗೆ ಪರಿಹಾರ ದೊರಕಲೇಬೇಕು. ಅವರು ದೂರುನೀಡಿದಲ್ಲಿ ಅದರ ಫಲವಾಗಿ ಕೆಲವೇ ದಿನಗಳಲ್ಲಿ ಅವರಬಾಕಿ ಮೊತ್ತವನ್ನು ನೀಡಲಾಯಿತು. ಅಂದರೆ ಇಲ್ಲಿಕಾನೂನಿನ ಸರಿಯಾದ ಹಾಗೂ ಪೂರ್ತಿ ತಿಳುವಳಿಕೆ ಇಲ್ಲಿಜಿತೇಂದ್ರ ಅವರ ಶಕ್ತಿಯಾಯಿತು. ಕ್ಷೇತ್ರ ಯಾವುದೇ ಆಗಲಿಎಲ್ಲ ಬಗೆಯ ಭ್ರಮೆ ಮತ್ತು ಸುಳ್ಳು ಸುದ್ದಿಗಳಿಂದದೂರವಿದ್ದು, ಸರಿಯಾದ ತಿಳುವಳಿಕೆ ಪಡೆದು ಮುನ್ನಡೆದರೆಪ್ರತಿಯೊಬ್ಬ ವ್ಯಕ್ತಿಗೆ ಬಹಳ ಸಹಾಯಕವಾಗುತ್ತದೆ. ರೈತರಲ್ಲಿ ತಿಳುವಳಿಕೆ ಮೂಡಿಸಲು ಇಂತಹುದೇ ಒಂದುಕಾರ್ಯಕ್ರಮ ಮಾಡಲಾಗುತ್ತಿದೆ. ರಾಜಸ್ಥಾನದ ಬಾರಾಂಜಿಲ್ಲೆಯಲ್ಲಿ ಮೊಹಮ್ಮದ ಅಸ್ಲಮ ಅವರಿಂದನಡೆಯುತ್ತಿದೆ. ಇವರು ಒಂದು ರೈತರ ಉತ್ಪಾದಕ ಸಂಘದಸಿಈಓ ಕೂಡಾ ಆಗಿದ್ದಾರೆ. ಹೌದು, ತಾವು ಸರಿಯಾಗಿಕೇಳಿಸಿಕೊಂಡಿರಿ, ರೈತ ಉತ್ಪಾದನಾ ಸಂಘದ ಸಿಈಓ.  ದೊಡ್ಡ ದೊಡ್ಡ ಕಂಪನಿಗಳ ಸಿಈಓ ಗಳಿಗೆ ಇದನ್ನು ಕೇಳಿಖುಷಿಯಾಗಬಹುದು, ಇನ್ನು ಮುಂದೆ ದೇಶದದೂರದೂರುಗಳಲ್ಲಿ ವಾಸಿಸುವ ಕೆಲಸ ಮಾಡುವ ರೈತಸಂಘಗಳಲ್ಲಿಯೂ ಕೂಡಾ ಸಿಈಓ ಆಗುತ್ತಿದ್ದಾರೆಎಂಬುದನ್ನು ಕೇಳಿ ಸಂತೋಷವಾಗುತ್ತದೆ. ಅಲ್ಲದೆ, ಮಿತ್ರರೇ, ಮೊಹಮ್ಮದ ಅಸ್ಲಮ ಅವರು ತಮ್ಮ ಕ್ಷೇತ್ರದಹಲವವಾರು ರೈತರನ್ನು ಸೇರಿಸಿಕೊಂಡು ಒಂದು ವಾಟ್ಸಪ್ಗ್ರುಪ್ ಮಾಡಿಕೊಂಡಿದ್ದಾರೆ. ಈ ಗ್ರುಪ್‌ನಲ್ಲಿ ಅವರು ಪ್ರತಿದಿನ ಸಮೀಪದ ಯಾವ ಯಾವ ಮಾರುಕಟ್ಟೆಗಳಲ್ಲಿ  ಬೆಳೆಗಳ ದರದ ಬಗ್ಗೆ, ಯಾವ ದರದಲ್ಲಿ ಸಾಮಾನುಗಳನ್ನುಖರೀದಿಸುತ್ತಿದ್ದಾರೆ ಎಂಬ ಬಗ್ಗೆ ತಿಳುವಳಿಕೆಯನ್ನು ರೈತರಿಗೆನೀಡುತ್ತಾರೆ. ಸ್ವತ: ಎಫ್‌ಪಿಓ ಅವರೂ ರೈತರ ಬೆಳೆಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ. ಆದ್ದರಿಂದ ಅವರಪ್ರಯತ್ನದ ಫಲವಾಗಿ ಇಂದು ರೈತರಿಗೆ ನಿರ್ಣಯತೆಗೆದುಕೊಳ್ಳಲು ಸಹಾಯವಾಗುತ್ತಿದೆ.

ಸ್ನೇಹಿತರೆ, ಜಾಗರೂಕತೆಯಿದ್ದಲ್ಲಿ ಜೀವಂತಿಕೆಯಿದೆ. ಶ್ರೀವಿರೇಂದ್ರ ಯಾದವ್ ಅವರು ತಮ್ಮ ಜಾಗರೂಕತೆಯಿಂದಸಾವಿರಾರು ಜನರ ಜೀವನದ ಮೇಲೆ ಪ್ರಭಾವ ಬೀರಿದಒಬ್ಬ ಕೃಷಿ ಉದ್ಯಮಿ. ವಿರೇಂದ್ರ ಯಾದವ್ ಅವರು ಹಿಂದೆಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದರು. 2 ವರ್ಷಗಳ ಹಿಂದೆಅವರು ಭಾರತಕ್ಕೆ ಬಂದಿದ್ದಾರೆ ಮತ್ತು ಈಗ ಹರಿಯಾಣದಕೈಥಲ್ ನಲ್ಲಿ ಇದ್ದಾರೆ. ಇತರರಂತೆ ಕೃಷಿಯಲ್ಲಿ ಕೃಷಿ ತ್ಯಾಜ್ಯಅವರಿಗೆ ಒಂದು ದೊಡ್ಡ ಸಮಸ್ಯೆಯಾಗಿತ್ತು. ಇದಕ್ಕೆಪರಿಹಾರ ಹುಡುಕುವ ಕೆಲಸ ವ್ಯಾಪಕವಾಗಿ ನಡೆದಿದೆ. ಆದರೆ, ಇಂದು ಮನದ ಮಾತಿನಲ್ಲಿ ನಾನು ವಿರೇಂದ್ರ ಜಿಅವರ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸುತ್ತಿದ್ದೇನೆ ಏಕೆಂದರೆಅವರ ಪ್ರಯತ್ನ ವಿಭಿನ್ನವಾಗಿದೆ. ಒಂದು ಹೊಸಮಾರ್ಗವನ್ನು ತೋರಿಸುತ್ತಿದೆ. ತ್ಯಾಜ್ಯ ಸಮಸ್ಯೆಯಪರಿಹಾರಕ್ಕೆ ವಿರೇಂದ್ರ ಅ಻ವರು ಒಣ ಹುಲ್ಲಿನಮೂಟೆಯನ್ನು ಕಟ್ಟುವಂಥ ಸ್ಟ್ರಾ ಬೇಲರ್ ಯಂತ್ರವನ್ನುಖರೀದಿಸಿದರು. ಇದಕ್ಕಾಗಿ ಅವರಿಗೆ ಕೃಷಿ ಇಲಾಖೆಯಿಂದಆರ್ಥಿಕ ಸಹಾಯವೂ ಲಭಿಸಿತು. ಈ ಯಂತ್ರದಿಂದಅವರು ಒಣ ಹುಲ್ಲಿನ ಬ್ಲಾಕ್ ಗಳನ್ನುತಯಾರಿಸಲಾರಂಭಿಸಿದರು. ಬ್ಲಾಕ್ ಗಳನ್ನು ತಯಾರಿಸಿದನಂತರ ಆ ತ್ಯಾಜ್ಯವನ್ನು ಪೇಪರ್ ಮಿಲ್ ಗಳು ಮತ್ತುಆಗ್ರೊ ಎನರ್ಜಿ ಘಟಕಗಳಿಗೆ ಮಾರಾಟ ಮಾಡಿದರು. ವಿರೇಂದ್ರ ಻ಅವರು ತ್ಯಾಜ್ಯದಿಂದ ಕೇವಲ 2 ವರ್ಷಗಳಲ್ಲಿಒಂದೂವರೆ ಕೋಟಿಗಿಂತ ಹೆಚ್ಚು ವ್ಯಾಪಾರ ಮಾಡಿದ್ದಾರೆಎಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು. ಅದರಲ್ಲೂ ಸುಮಾರು 50 ಲಕ್ಷದಷ್ಟು ಲಾಭಗಳಿಸಿದ್ದಾರೆ. ಯಾರ ಹೊಲಗಳಿಂದ ತ್ಯಾಜ್ಯವನ್ನು ಸಂಗ್ರಹಿಸುತ್ತಾರೋ ಆರೈತರಿಗೂ ಇದರ ಲಾಭವಾಗುತ್ತಿದೆ. ನಾವು ಕಸದಿಂದ ರಸಎಂಬುದನ್ನು ಬಹಳ ಕೇಳಿದ್ದೇವೆ. ಆದರೆ ತ್ಯಾಜ್ಯಕ್ಕೆಪರಿಹಾರ ಒದಗಿಸಿ ಹಣ ಮತ್ತು ಪುಣ್ಯ ಎರಡನ್ನೂಗಳಿಸುವ ಒಂದು ಉತ್ತಮ ಉದಾಹರಣೆ ಇದಾಗಿದೆ. ನನ್ನಯುವಜನತೆಯೇ, ವಿಶೇಷವಾಗಿ ಕೃಷಿ ಅಧ್ಯಯನಮಾಡುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ – ನಿಮ್ಮಸುತ್ತಮುತ್ತ ಗ್ರಾಮಗಳಲ್ಲಿರುವ ರೈತರಿಗೆ ಆಧುನಿಕ ಕೃಷಿಬಗ್ಗೆ ಮತ್ತು ಪ್ರಸಕ್ತ ಕೃಷಿ ಸುಧಾರಣೆ ಬಗ್ಗೆ ಖಂಡಿತ ತಿಳಿಸಿಎಂದು ಆಗ್ರಹಿಸುತ್ತೇನೆ. ಹೀಗೆ ಮಾಡುವ ಮೂಲಕ ನೀವುದೇಶದಲ್ಲಾಗುತ್ತಿರುವ ಬಹುದೊಡ್ಡ ಬದಲಾವಣೆಯಭಾಗವಾಗುತ್ತೀರಿ.

ನನ್ನ ಪ್ರಿಯ ದೇಶಬಾಂಧವರೆ,

‘ಮನದ ಮಾತು’ ನಲ್ಲಿ ನಾವು ಬೇರೆ ಬೇರೆ, ವಿಭಿನ್ನವಿಷಯಗಳ ಕುರಿತು ನಾವು ಚರ್ಚಿಸುತ್ತೇವೆ. ಆದರೆ ನಾವುಸಂತೋಷದಿಂದ ಸ್ಮರಿಸಿಕೊಳ್ಳಲು ಬಯಸದ ಇಂಥಒಂದು ವಿಷಯಕ್ಕೆ ಒಂದು ವರ್ಷ ತುಂಬುತ್ತಿದೆ. ವಿಶ್ವಕ್ಕೆಕೊರೊನಾದ ಮೊದಲ ಸೋಂಕಿನ ಪ್ರಕರಣದ ಬಗ್ಗೆ ತಿಳಿದುಸುಮಾರು ಒಂದು ವರ್ಷವಾಗುತ್ತಿದೆ. ಅಂದಿನಿಂದಇಲ್ಲಿವರೆಗೆ ಸಂಪೂರ್ಣ ವಿಶ್ವ ಻ಅನೇಕ ಏರಿಳಿತಗಳನ್ನುಕಂಡಿದೆ. ಲಾಕ್ ಡೌನ್ ನಿಂದ ಹೊರಬಂದು ಈಗ ಲಸಿಕೆಬಗ್ಗೆ ಚರ್ಚೆಯಾಗುತ್ತಿದೆ. ಆದರೆ ಕೊರೊನಾ ಕುರಿತುಯಾವುದೇ ಬಗೆಯ ನಿರ್ಲಕ್ಷ ಈಗಲೂ ಅಪಾಯಕಾರಿ.  ಕೊರೊನಾ ವಿರುದ್ಧದ ನಮ್ಮ ಸಮರವನ್ನು ಈಗಲೂಧೃಡವಾಗಿ ಮುಂದುವರಿಸಬೇಕಿದೆ.

ಸ್ನೇಹಿತರೆ, ಕೆಲ ದಿನಗಳ ನಂತರ ಡಿಸೆಂಬರ್ 6 ಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುಣ್ಯತಿಥಿಯಿದೆ. ಅಂದುಬಾಬಾ ಸಾಹೇಬ್ ಅವರಿಗೆ ಶೃದ್ಧಾಂಜಲಿ ಅರ್ಪಿಸುವುದುರಜೊತೆಗೆ, ದೇಶದ ಬಗೆಗಿನ ನಮ್ಮ ಸಂಕಲ್ಪಗಳನ್ನು ಹಾಗೂಸಂವಿಧಾನ ಒಬ್ಬ ನಾಗರಿಕನಾಗಿ ನಮಗೆ ನೀಡಿದಕರ್ತವ್ಯಗಳನ್ನು ನಿಭಾಯಿಸುವುದನ್ನುಪುನರುಚ್ಛರಿಸಬೇಕಿದೆ. ದೇಶದ ಹೆಚ್ಚಿನ ಭಾಗದಲ್ಲಿ ಚಳಿಹೆಚ್ಚುತ್ತಿದೆ. ಬಹಳಷ್ಟು ಸ್ಥಳಗಳಲ್ಲಿ ಹಿಮ ಬೀಳುತ್ತಿದೆ. ಈಋತುವಿನಲ್ಲಿ ನಮಗೆ ಕುಟುಂಬದ ಮಕ್ಕಳು ಮತ್ತುಹಿರಿಯರ, ರೋಗಿಗಳ ಬಗ್ಗೆ ವಿಶೇಷ ಗಮನಹರಿಸಬೇಕಿದೆ. ಸ್ವತಃ ಕೂಡಾ ಎಚ್ಚರವಹಿಸಬೇಕು. ಜನರುನೆರೆಹೊರೆಯಲ್ಲಿ ಅವಶ್ಯಕತೆಯಿರುವವರ ಬಗ್ಗೆಯೂಚಿಂತಿಸುವುದನ್ನು ಕಂಡು, ಬೆಚ್ಚನೆಯ ಬಟ್ಟೆಗಳನ್ನು ನೀಡಿಅವರಿಗೆ ಸಹಾಯ ಮಾಡುವುದನ್ನು ಕಂಡು ನನಗೆಸಂತೋಷವಾಗುತ್ತದೆ. ನಿಸ್ಸಹಾಯಕ ಜಾನುವ಻ರುಗಳಿಗೂಚಳಿ ಬಹಳ ಕಷ್ಟಗಳನ್ನು ತಂದೊಡ್ಡುತ್ತದೆ. ಅವುಗಳಸಹಾಯಕ್ಕೂ ಬಹಳಷ್ಟು ಜನ ಮುಂದೆ ಬರುತ್ತಾರೆ. ನಮ್ಮಯುವಜನತೆ ಇಂಥ ಕೆಲಸಗಳಲ್ಲಿ ಬಹಳ ಹುರುಪಿನಿಂದಸಕ್ರೀಯವಾಗಿ ಪಾಲ್ಗೊಳ್ಳುತ್ತಾರೆ. ಸ್ನೇಹಿತರೆ ಮುಂದಿನ‘ಮನದ ಮಾತಿನಲ್ಲಿ’ ನಾವು ಭೇಟಿಯಾದಾಗ 2020 ರ ಈವರ್ಷ ಮುಕ್ತಾಯದ ಹಂತದಲ್ಲಿರುತ್ತದೆ. ಹೊಸಆಶಯಗಳು, ಹೊಸ ವಿಶ್ವಾಸದೊಂದಿಗೆ ನಾವು ಮುಂದೆಸಾಗೋಣ. ಏನೇ ಸಲಹೆಗಳಿದ್ದರೆ, ಹೊಸ ವಿಚಾರಗಳಿದ್ದರೆಖಂಡಿತ ನನಗೆ ತಲುಪಿಸುತ್ತಲೇ ಇರಿ. ನಿಮ್ಮೆಲ್ಲರಿಗೂಅನಂತ ಶುಭಹಾರೈಕೆಗಳು. ನೀವೆಲ್ಲರೂಆರೋಗ್ಯದಿಂದಿರಿ, ದೇಶಕ್ಕಾಗಿ ಸೇವೆ ಸಲ್ಲಿಸಿ. ಅನಂತ಻ನಂತ ಧನ್ಯವಾದಗಳು.

***

(Release ID: 1676937) Visitor Counter : 14

Read this release in: Punjabi Telugu Engli