IMG 20201129 WA0002

ನಿಡಗಲ್ ನಲ್ಲಿ ಗಿರಿಜನ ಉತ್ಸವ ಆಚರಣೆ…..!

DISTRICT NEWS ತುಮಕೂರು

ನಿಡಗಲ್ ನಲ್ಲಿ ನಡೆದ ಗಿರಿಜನ ಉತ್ಸವ

ಪಾವಗಡ: –  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಶ್ರೀ ವಾಲ್ಮೀಕಿ ಆಶ್ರಮ, ಶ್ರೀ ಏಕಲವ್ಯ ಗಿರಿಜನ ಜಾನಪದ ಸಾಂಸ್ಕೃತಿಕ ಕಲಾ ಸಂಘದಡಿಯಲ್ಲಿ ಪಾವಗಡ ತಾಲ್ಲೂಕಿನ ನಿಡಗಲ್ ಗ್ರಾಮದಲ್ಲಿನ ವಾಲ್ಮೀಕಿ ಭವನದಲ್ಲಿಂದು ಗಿರಿಜನ ಉತ್ಸವ ನಡೆಯಿತು.

ಕಾರ್ಯಕ್ರಮದಲ್ಲಿ ಕೀಲುಕುದುರೆ, ಗಾರುಡಿ ಗೊಂಬೆ, ವೀರಗಾಸೆ ಸೇರಿದಂತೆ ಹಲವು ಕಲಾ ಪ್ರಕಾರಗಳು ಗ್ರಾಮದಲ್ಲಿ ಮೆರವಣಿಗೆ ನಡೆಸಿ ಗಮನ ಸೆಳೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗಿರಿಜನ ನೌಕರರ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ರವರು ನಿಡಗಲ್ ದುರ್ಗ ಒಂದು ಐತಿಹಾಸಿಕ ನೆಲೆಯುಳ್ಳ ಪ್ರದೇಶ.ಇಲ್ಲಿ ಅನೇಕ ಸಾಧು ಸಂತರು, ಅವಧೂತರು ,ಶಿವಶರಣರು ತಪೋಗೈದ ಪುಣ್ಯ ಭೂಮಿ ಇಲ್ಲಿ ಜನ್ಮಿಸಿರೋದು ನಮ್ಮ ಭಾಗ್ಯ ಎಂದು ತಿಳಿಸಿದರು. ಆಗಾಗಿ ಇಲ್ಲಿನ ದುರ್ಗದ ಇತಿಹಾಸ ರಕ್ಷಿಸಿ ಅಭಿವೃದ್ಧಿ ಪಡಿಸುವುದು ಪ್ರತಿಯೊಬ್ಬರ ಕರ್ತವ್ಯ ವಾಗಿದೆ ಎಂದರು.

ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಪಾಳೇಗಾರ್ ಲೋಕೇಶ್ ಮಾತನಾಡಿ ವಾಲ್ಮೀಕಿ ಆಶ್ರಮದ ನೇತೃತ್ವದಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತಿರುವ ಪರಿಣಾಮ ನಿಡಗಲ್ ದುರ್ಗದ ಗತ ವೈಭವವನ್ನು ಸಮಾಜಕ್ಕೆ ಸಾರುವ ಪ್ರಯತ್ನ ಆಗುತ್ತಿದೆ. ಈಗಾಗಲೇ ನಿಡಗಲ್ ದುರ್ಗದಲ್ಲಿ ಯಾತ್ರ ಸ್ಥಳ, ರಸ್ತೆ ಕಾಮಗಾರಿಗಳು ಸೇರಿದಂತೆ ಅನೇಕ ಪ್ರವಾಸಿಗರ ರಕ್ಷಣೆಯ ವ್ಯವಸ್ಥೆ ಮಾಡಲಾಗುತ್ತಿದೆ. ಸರ್ಕಾರ ಗಮನಹರಿಸಿ ಪ್ರವಾಸಿತಾಣವಾಗಿಸಬೇಕಿದೆ ಎಂದು ಒತ್ತಾಯಿಸಿದರು.

IMG 20201129 WA0001

ಜಾನಪದ,ರಂಗ ಗೀತೆಗಳನ್ನು ಕಲಾವಿದರು ಹಾಡಿ ಪ್ರೇಕ್ಷಕರನ್ನು ರಂಜಿಸಿದರು

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಾಳಮ್ಮ ಸುಬ್ಬರಾಯಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖಾಧಿಕಾರಿ ಸುರೇಶ್ ,ಡಿ.ಸಿ.ಸಿ ಬ್ಯಾಂಕ್ ಸೀನಪ್ಪ ಹಲವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ವಾಲ್ಮೀಕಿ ಆಶ್ರಮದ ಪೀಠಾಧ್ಯಕ್ಷರು ಶ್ರೀ ಸಂಜಯ್ ಕುಮಾರ್ ಸ್ವಾಮೀಜಿಗಳು, ಬೆಳ್ಳಿಬಟ್ಲು ಬಲರಾಮ್ ,ನಿವೃತ್ತ ಸೈನಿಕ ಅನಂತ್,ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್. ಎಸ್. ವಿ ಟೈಲರ್ ನಾರಾಯಣಪ್ಪ. ಜೆಡಿಎಸ್ ತಾಲ್ಲೂಕು ಮಹಿಳಾ ಅಧ್ಯಕ್ಷರಾದ ಅಂಬಿಕಾ ರಮೇಶ್. ತಾಲೂಕು ಪಂಚಾಯಿತಿ ಸದಸ್ಯ ನರಸಿಂಹಲು, ಸುಬ್ಬರಾಯಪ್ಪ. ಗೋವಿಂದಪ್ಪ. ಶಂಕರ್. ಚಿತ್ರದುರ್ಗ ಕಲಾವಿದರ ಸಂಘದ ಅಧ್ಯಕ್ಷರಾದ ಕರಿಯಣ್ಣ, ಪಾಲಯ್ಯ ಪಾಲಕ್ಷಿ, ಜಯಮ್ಮ,ತಿಪ್ಪೇಸ್ವಾಮಿ, ಶಿಕ್ಷಕರು ರಾಮಾಂಜನೇಯಲು, ಸಣ್ಣ ಓಬಯ್ಯ, ಶಿಕ್ಷಕರು ಗಂಗಯ್ಯ. ಹನುಮಂತನಹಳ್ಳಿ ಶಿವಯ್ಯ. ಶಿಕ್ಷಕರು ಗಂಗಾಧರ್, ಶೌಕತ್ ರಾಮಕೃಷ್ಣಪ್ಪ. ಓಬಯ್ಯ, ಶ್ರೀರಾಮಪ್ಪ. ಇನ್ನೂ ಮುಂತಾದವರು ಉಪಸ್ಥಿತರಿದ್ದರು

ವರದಿ: ನವೀನ್ ಕಿಲಾರ್ಲಹಳ್ಳಿ