1

ಚೀನಾದಿಂದ ವಿಶ್ವದ ಮೊದಲ 3ಡಿ ನ್ಯೂಸ್ ಆ್ಯಂಕರ್ ಅನಾವರಣ…!

National - ಕನ್ನಡ

ಬೀಜಿಂಗ್, ಮೇ 21 :  ಚೀನಾದ ರಾಷ್ಟ್ರೀಯ ಸುದ್ದಿ ಸಂಸ್ಥೆಯಾದ ಕ್ಸಿನ್ಹುವಾ  ಸುದ್ದಿ ಸಂಸ್ಥೆ 3D ಎಐ ನ್ಯೂಸ್ ಆಂಕರ್ ಸೃಷ್ಠಿಸಿದೆ. ಕೃತಕ ಬುದ್ಧಿ ವಂತಿಕೆಯನ್ನು ಆಧರಿಸಿ ಕಾರ್ಯನಿರ್ವಹಿಸುವ 3ಡಿ ನ್ಯೂಸ್ ಆಂಕರ್ ನ್ನು ಪ್ರಾರಂಭಿಸಿದೆ.

 ಈ 3ಡಿ ಆಂಕರ್ ಸಾಮಾನ್ಯ ಆಂಕರ್ ನಂತೆ ಓಡಾಡುತ್ತೆದೆ ಮತ್ತು ಸುದ್ದಿಗೆ ಅನುಗುಣವಾಗಿ ತನ್ನ ಹಾವ ಭಾವಗಳನ್ನೂ ಸಹ ತೊರುತ್ತದೆ. ಒಬ್ಭ ಪತ್ರಕರ್ತನ ರೂಪ ಹಾಗೂ ಹಾವ-ಭಾವಗಳನ್ನು ಕ್ಲೋನಿಂಗ್ ಮಾಡಿ, ತಂತ್ರಜ್ಙಾನದ ಸಹಾಯ ಬಳಸಿ  ಈ 3ಡಿ ಸುದ್ದಿ ನಿರೂಪಕಿಯನ್ನು ಸೃಷ್ಠಿಸಲಾಗಿದೆ.

ಸೊಗೌ ಎ ಐ ವೊಕೇಶನಲ್ ಅವತಾರ್ ತಂತ್ರಜ್ಞಾನ ಇತ್ತೀಚಿನ ಪೀಳಿಗೆಯನ್ನು ಒಳಗೊಂಡಿದೆ, ಇದು ಮಾನವರ ನೈಜ-ಜೀವನ ಅವತಾರಗಳನ್ನು ಸೂಚಿಸುವ 3 ಡಿ ಮಾಡೆಲಿಂಗ್ ಮತ್ತು ಅತ್ಯಾಧುನಿಕ  ಎಐ ತಂತ್ರಜ್ಞಾನಗಳನ್ನು ಬಳಸಿಕೊಂಡಿದೆ. ಇದಕ್ಕೆ ಮೊದಲು 2018 ರಲ್ಲಿ ಕ್ಸಿನ್ಹುವಾ ಕೃತಕ ಬುದ್ದಿಮತ್ತೆಯ ಆಂಕರ್ ಅನ್ನು ಸುದ್ದಿ ಜಗತ್ತಿಗೆ ಪರಿಚಯಿಸಿತ್ತು. ಆ ಸಮಯದಲ್ಲಿ ನಾಲ್ಕು 2ಡಿ ಸುದ್ದಿ ನಿರೂಪಕರನ್ನು ಸೃಷ್ಟಿಸಲಾಗಿತ್ತು.

3ಡಿ ಆಂಕರ್ ನ್ನು ಪರಿಚಯಿಸುವ ವಿಡಿಯೋವನ್ನು ತನ್ನ ಟಿಟ್ವರ್ ಖಾತೆಯಲ್ಲಿ ಪ್ರಕಟಿಸಿದೆ.

https://twitter.com/Sogou_Inc/status/1263385515862065152?s=20